ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಕೇಂದ್ರ ಎಚ್.ಆರ್.ಡಿ ಸಚಿವರ ಸಲಹೆಯನ್ವಯ, 9 ನೇ ತರಗತಿ ಮತ್ತು 11 ನೇ ತರಗತಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಆಧಾರಿತ ಪರೀಕ್ಷೆ ಬರೆಯಲು ಅವಕಾಶ ಒದಗಿಸಿದ ಸಿ.ಬಿ.ಎಸ್.ಇ.
Posted On:
14 MAY 2020 7:32PM by PIB Bengaluru
ಕೇಂದ್ರ ಎಚ್.ಆರ್.ಡಿ ಸಚಿವರ ಸಲಹೆಯನ್ವಯ, 9 ನೇ ತರಗತಿ ಮತ್ತು 11 ನೇ ತರಗತಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಆಧಾರಿತ ಪರೀಕ್ಷೆ ಬರೆಯಲು ಅವಕಾಶ ಒದಗಿಸಿದ ಸಿ.ಬಿ.ಎಸ್.ಇ.
ಕೋವಿಡ್ -19 ರಿಂದುಂಟಾಗಿರುವ ಅಭೂತಪೂರ್ವ ಪರಿಸ್ಥಿತಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು 9 ನೇ ತರಗತಿಯಲ್ಲಿ ಮತ್ತು 11 ನೇ ತರಗತಿಯಲ್ಲಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಆನ್ ಲೈನ್ / ಆಫ್ ಲೈನ್ ಪರೀಕ್ಷೆಗಳನ್ನು ಬರೆಯಲು ಅವಕಾಶ ಮಾಡಿಕೊಡುವಂತೆ ಸಿ.ಬಿ.ಎಸ್.ಇ. ಗೆ ಸಲಹೆ ಮಾಡಿದ್ದರು. , ಈ ನಿಟ್ಟಿನಲ್ಲಿ ಸಿ.ಬಿ.ಎಸ್.ಇ. ಯು ಅಧಿಸೂಚನೆ ಹೊರಡಿಸಿದೆ.
Dr Ramesh Pokhriyal Nishank✔@DrRPNishank
In view of the unprecedented circumstances of Covid-19, I have advised all CBSE schools to provide an opportunity to all students, who have failed in 9th and 11th to take online/offline tests. #IndiaFightsCoronaVirus
730
4:31 PM - May 14, 2020
Twitter Ads info and privacy
140 people are talking about this
ಸಿ.ಬಿ.ಎಸ್.ಇ.ಯ ಅಧಿಸೂಚನೆಯಲ್ಲಿ ಕೋವಿಡ್ -19 ರಿಂದಾಗಿ ಇಡೀಯ ದೇಶವೇ ಸವಾಲಿನ ಸಮಯವನ್ನು ಎದುರಿಸುತ್ತಿದೆ ಎಂದು ಬರೆಯಲಾಗಿದೆ. ಇದೊಂದು ಅಭೂತಪೂರ್ವ ಸ್ಥಿತಿಯಾಗಿದೆ. ಮಕ್ಕಳು ಮನೆಯಲ್ಲಿಯೇ ಬಂಧಿಯಾಗಿರುವಂತಾಗಿದೆ. ಅವರ ಶಾಲೆಗಳು ಮುಚ್ಚಲ್ಪಟ್ಟಿವೆ . ಅವರು ಮಾನಸಿಕ ಒತ್ತಡ ಮತ್ತು ಆತಂಕಗಳನ್ನು ಅನುಭವಿಸುತ್ತಿದ್ದಾರೆ. ಅವರ ಪೋಷಕರು ಸಂಬಳದ ಬಗ್ಗೆ , ಕುಟುಂಬದ ಆರೋಗ್ಯ ಮತ್ತು ಇತರ ವಿಷಯಗಳ ಬಗ್ಗೆ ಚಿಂತಿತರಾಗಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಾಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿರದಿದ್ದರೆ ಅವರು ಇನ್ನಷ್ಟು ಉದ್ವಿಗ್ನರಾಗಬಹುದು. ಇಂತಹ ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಸಿ.ಬಿ.ಎಸ್.ಇ. ಯು ಸತತವಾಗಿ ಪಡೆದುಕೊಳ್ಳುತ್ತಿದೆ. ಇಂತಹ ಕಠಿಣ ಸಮಯದಲ್ಲಿ ನಾವೆಲ್ಲರೂ ವಿದ್ಯಾರ್ಥಿಗಳನ್ನು ಆ ಒತ್ತಡದಿಂದ ಬಿಡುಗಡೆ ಮಾಡಲು ಜಂಟಿ ಪ್ರಯತ್ನಗಳನ್ನು ಮಾಡಬೇಕು ಮತ್ತು ಅವರ ಆತಂಕ/ ಉದ್ವಿಗ್ನತೆಯನ್ನು ನಿವಾರಿಸಲು ಸಹಾಯ ಮಾಡಬೇಕು.
ಪೋಷಕರು ಮತ್ತು ವಿದ್ಯಾರ್ಥಿಗಳ ಕೋರಿಕೆಯ ಹಿನ್ನೆಲೆಯಲ್ಲಿ ಸಿ.ಬಿ.ಎಸ್.ಇ. ಯು ಒಂದು ಬಾರಿಯ ಕ್ರಮವಾಗಿ , ಇಂತಹ ಅಸಾಧಾರಣ ಪರಿಸ್ಥಿತಿಯಲ್ಲಿ 9 ನೇ ಮತ್ತು 11 ನೇ ತರಗತಿಯ ಎಲ್ಲಾ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಶಾಲಾ ಆಧಾರಿತ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯುವುದಕ್ಕಾಗಿ ಅವಕಾಶ ಮಾಡಿಕೊಡಲು ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ಅವರ ಪರೀಕ್ಷೆಗಳು ಪೂರ್ಣಗೊಂಡಿವೆಯೇ ಮತ್ತು ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆಯೇ, ಅಥವಾ ಅವರ ಪರೀಕ್ಷೆಗಳು ಪೂರ್ಣಗೊಂಡಿಲ್ಲವೇ ಎಂಬುದನ್ನೆಲ್ಲ ಪರಿಗಣಿಸದೆ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಒದಗಿಸಲಾಗುತ್ತದೆ. ಈ ಸೌಲಭ್ಯವನ್ನು ವಿಷಯಗಳ ಸಂಖ್ಯೆ ಮತ್ತು ಪ್ರಯತ್ನಗಳ ಸಂಖ್ಯೆಯನ್ನು ಅನುಲಕ್ಷಿಸದೆಯೇ ಒದಗಿಸಲಾಗುತ್ತದೆ.
ಇಂತಹ ವಿದ್ಯಾರ್ಥಿಗಳಿಗೆ ಶಾಲೆಗಳು ಪರಿಹಾರ ಬೋಧನೆ ಒದಗಿಸಿ ಆನ್ ಲೈನ್ / ಆಫ್ ಲೈನ್ / ನವೀನ ಪರೀಕ್ಷೆಗಳನ್ನು ನಡೆಸಬಹುದು ಮತ್ತು ಉತ್ತೀರ್ಣತೆಯನ್ನು ಈ ಪರೀಕ್ಷೆಯ ಆಧಾರದಲ್ಲಿ ನಿರ್ಧರಿಸಬಹುದು. ಈ ಪರೀಕ್ಷೆಯನ್ನು ವಿದ್ಯಾರ್ಥಿಯು ಅನುತ್ತೀರ್ಣನಾದ ಎಲ್ಲಾ ವಿಷಯಗಳಲ್ಲಿಯೂ ತೆಗೆದುಕೊಳ್ಳಬಹುದು. ಪರೀಕ್ಷೆ ನಡೆಸುವುದಕ್ಕೆ ಮೊದಲು, ಶಾಲೆಗಳು ವಿದ್ಯಾರ್ಥಿಗಳಿಗೆ ಸಿದ್ದತೆ ಮಾಡಿಕೊಳ್ಳುವುದಕ್ಕೆ ಸಾಕಷ್ಟು ಸಮಯ ನೀಡಬೇಕು. ಆದುದರಿಂದ ಸಿ.ಬಿ.ಎಸ್.ಇ. ಗೆ ಸಂಯೋಜನೆಗೊಂಡಿರುವ ಎಲ್ಲಾ ಶಾಲೆಗಳೂ 9 ನೇ ಮತ್ತು 11 ನೇ ತರಗತಿಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅವರು ಅನುತ್ತೀರ್ಣರಾದ ಎಲ್ಲಾ ವಿಷಯಗಳಲ್ಲು ಪರೀಕ್ಷೆ ಬರೆಯುವ ಅವಕಾಶವನ್ನು ಕೊಡಲಿವೆ. ಈ ಅಧಿಸೂಚನೆಗೆ ಮೊದಲು ಇಂತಹ ಅವಕಾಶವನ್ನು ಒದಗಿಸಿದ್ದರೂ ಕೂಡಾ ಈ ಅವಕಾಶವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಒದಗಿಸಬೇಕು ಎಂದು ಪುನರುಚ್ಚರಿಸಲಾಗಿದೆ.
ಕೋವಿಡ್ -19 ರಿಂದುಂಟಾಗಿರುವ ಅಭೂತಪೂರ್ವ ಪರಿಸ್ಥಿತಿಯಲ್ಲಿ ಒಂದು ಬಾರಿ ಮಾತ್ರ ಈ ವರ್ಷ ಈ ಅವಕಾಶವನ್ನು ಒದಗಿಸಲಾಗಿದೆ. ಈ ಪ್ರಯೋಜನ ಒಂದು ಬಾರಿ ಮಾತ್ರವೇ ಆಗಿರುತ್ತದೆ ಮತ್ತು ಭವಿಷ್ಯದಲ್ಲಿ ಇದನ್ನು ವಿಸ್ತರಿಸಲಾಗುವುದಿಲ್ಲ.
***
(Release ID: 1624013)
Visitor Counter : 270