ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆ 12.05.2020 ರಿಂದ ಪರಿಚಯಿಸಲಾಗುವ ವಿಶೇಷ ರೈಲುಗಳಲ್ಲಿ ವಿವಿಧ ವರ್ಗಗಳಿಗೆ ಸೀಮಿತ ಕಾಯ್ದಿರಿಸುವಿಕೆ ಟಿಕೆಟ್ ಗಳ ಪಟ್ಟಿಯನ್ನು ನೀಡಲು ಪ್ರಾರಂಭಿಸಲಿದೆ

Posted On: 14 MAY 2020 4:40PM by PIB Bengaluru

ಭಾರತೀಯ ರೈಲ್ವೆ 12.05.2020 ರಿಂದ ಪರಿಚಯಿಸಲಾಗುವ ವಿಶೇಷ ರೈಲುಗಳಲ್ಲಿ ವಿವಿಧ ವರ್ಗಗಳಿಗೆ

ಸೀಮಿತ ಕಾಯ್ದಿರಿಸುವಿಕೆ ಟಿಕೆಟ್ ಗಳ ಪಟ್ಟಿಯನ್ನು ನೀಡಲು ಪ್ರಾರಂಭಿಸಲಿದೆ

ಈ ವಿಶೇಷ ರೈಲುಗಳಲ್ಲಿ ಆರ್ ಎ ಸಿ ಸೌಲಭ್ಯವಿರುವುದಿಲ್ಲ

22 ಮೇ, 2020 ರಿಂದ ಆರಂಭವಾಗುವ ರೈಲುಗಳಿಗೆ ಅಂದರೆ 15 ಮೇ  2020 ರಿಂದ ಬುಕಿಂಗ್ ಆಗುವ ರೈಲುಗಳಿಗೆ ಈ ಬದಲಾವಣೆ ಅನ್ವಯ
 

12.05.2020 ರಿಂದ ಪುನರಾರಂಭವಾಗುವ ರೈಲುಗಳಲ್ಲಿ ಯಾವುದೇ ಆರ್ ಎ ಸಿ (ರದ್ದತಿ ವಿರುದ್ಧ ಮೀಸಲಾತಿ) ಇರಬಾರದು ಎಂದು ಭಾರತೀಯ ರೈಲ್ವೆ ನಿರ್ಧರಿಸಿದೆ. ಇದಲ್ಲದೆ ಕೆಳಗೆ ನಿಗದಿಪಡಿಸಲಾದ ಗರಿಷ್ಟ ಮಿತಿಗಳಿಗೆ ಒಳಪಟ್ಟು ಕಾಯ್ದಿರಿಸುವ ಪಟ್ಟಿಯ ಟಿಕೆಟ್ ಗಳನ್ನು ವಿತರಿಸಲಾಗುವುದು ಎಂದು ನಿರ್ಧರಿಸಲಾಗಿದೆ.

ವರ್ಗ

ಗರಿಷ್ಟ ಕಾಯ್ದಿರಿಸುವ ಪಟ್ಟಿಯ ಮಿತಿ 

1 ಎಸಿ

20

ಎಕ್ಸೆಕ್ಯುಟಿವ್ ವರ್ಗ್

20

2 ಎಸಿ

50

3 ಎಸಿ

100

ಎಸಿ  ಚೇರ್ ಕಾರ್

100

(ಚೇರ್ ಕಾರ್  ವರ್ಗ ಹೊಂದಿರುವ ಯಾವುದೇ ರೈಲನ್ನು ಭವಿಷ್ಯದಲ್ಲಿ ಪರಿಚಯಿಸಿದರೆ ಮಾತ್ರ ಅನ್ವಯಿಸುತ್ತದೆ)

ಸ್ಲೀಪರ್

200

(ಭವಿಷ್ಯದಲ್ಲಿ ಸ್ಲೀಪರ್ ವರ್ಗ ಹೊಂದಿರುವ ಯಾವುದೇ ರೈಲನ್ನು ಪರಿಚಯಿಸಿದರೆ ಮಾತ್ರ ಅನ್ವಯಿಸುತ್ತದೆ)

 

2.05.2020 ರಿಂದ ಪುನರಾರಂಭವಾಗುವ ವಿಶೇಷ ರೈಲುಗಳಿಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೇ ಕೈಗೊಂಡಂತಹ ಕೆಲವು ಇತರ ನಿರ್ಧಾರಗಳು ಕೆಳಗಿನಂತಿವೆ:

  • ಕಾಯ್ದಿರಿಸುವಿಕೆ ಪಟ್ಟಿಗೆ ಸಂಬಂಧಿಸಿದಂತೆ ಇತರ ನಿಯಮಗಳು ಅನ್ವಯವಾಗುತ್ತವೆ.
  • ಯಾವುದೇ ತತ್ಕಾಲ್/ಪ್ರಿಮಿಯಂ ತತ್ಕಾಲ್ ಕೋಟಾಗಳನ್ನು ವ್ಯಾಖ್ಯಾನಿಸಲಾಗುವುದಿಲ್ಲ
  • ಹಿರಿಯ ನಾಗರಿಕರ ಕೋಟಾ, ಮಹಿಳಾ ಕೋಟಾ, ದಿವ್ಯಾಂಗರ (ಹೆಚ್ ಪಿ) ಗಾಗಿ ಮೀಸಲಿಟ್ಟ ಕೋಟಾವನ್ನು ಪ್ರಸ್ತುತ ಸೂಚನೆಗಳ ಪ್ರಕಾರ  ವ್ಯಾಖ್ಯಾನಿಸಲಾಗುವುದು
  • ಮರುಪಾವತಿ ನಿಯಮಗಳು, ಅಂದರೆ ರೈಲು ನಿರ್ಗಮಿಸುವ 24 ಗಂಟೆಗಳೊಳಗೆ ಟಿಕೆಟ್ ರದ್ದು ಮಾಡಿದರೆ ಒಟ್ಟು ದರದ 50% ರಷ್ಟು ಶುಲ್ಕ ಮರುಪಾವತಿ ಮತ್ತು ರೈಲು ನಿರ್ಗಮಿಸುವ 24 ಗಂಟೆಗಳೊಳಗೆ ಶೂನ್ಯ ಮರುಪಾವತಿಯನ್ನು ಸ್ಥಗಿತಗೊಳಿಸಲಾಗುವುದು ಮತ್ತು ಅಸ್ತಿತ್ವದಲ್ಲಿರುವ ಮರುಪಾವತಿ ನಿಯಮಗಳು ಅಂದರೆ ರೈಲು ರದ್ದತಿ ಮತ್ತು ಮರುಪಾವತಿ ನಿಯಮ 2015 ನ್ನು ಅನ್ವಯಿಸಲಾಗುವುದು
  • ಮೇಲಿನ ಬದಲಾವಣೆಗಳನ್ನು 22 ಮೇ, 2020 ಪ್ರಾರಂಭವಾಗುವ ರೈಲುಗಳು ಅಂದರೆ 15 ಮೇ, 2020 ಪ್ರಾರಂಭವಾಗುವ ಬುಕಿಂಗ್ ಗಳಿಗೆ ಅನ್ವಯವಾಗುತ್ತದೆ.

***



(Release ID: 1623959) Visitor Counter : 222