ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಸ್ಥಳೀಯ ಉತ್ಪಾದನೆಗಳ ಆಸರೆಗೆ ಮುಂದಾದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ

Posted On: 13 MAY 2020 6:50PM by PIB Bengaluru

ಸ್ಥಳೀಯ ಉತ್ಪಾದನೆಗಳ ಆಸರೆಗೆ ಮುಂದಾದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ

 

ಸ್ಥಳೀಯರಿಗೆ ಸ್ವರವಾಗಲು ಮತ್ತು ಅದನ್ನು ಜಾಗತಿಕವಾಗಿ ಸಮೃದ್ಧಗೊಳಿಸುವ ಪ್ರಯತ್ನಗಳನ್ನು ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕರೆ ನೀಡಿದ ಹಿನ್ನಲೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆ.ವಿ.ಐ.ಸಿ.) ಗ್ರಾಮೀಣ ಅವಕಾಶಗಳನ್ನು ಸದುಪಯೋಗ ಮಾಡಬಯಸಿದೆ. ನಾವು ಸಾದ್ಯವಾದಷ್ಟು ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕೆಂದು ಪ್ರಧಾನಮಂತ್ರಿಯವರು ಮಾಡಿದ ಮನವಿಯ ನಂತರ, ಕೆ.ವಿ.ಐ.ಸಿ. ಪ್ರಮುಖ ಕಾರ್ಯಕ್ರಮ ಪಿ.ಎಂ.ಇ.ಜಿ.ಪಿ. ಅಡಿಯಲ್ಲಿ ನೂತನ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪಿ.ಎಂ.ಇ.ಜಿ.ಪಿ. ಅಡಿಯಲ್ಲಿ ಅರ್ಜಿಗಳನ್ನು ಸೂಕ್ಷ್ಮವಾಗಿ, ತ್ವರಿತವಾಗಿ ಪರಿಶೀಲಿಸಬೇಕು, ಮತ್ತು 26 ದಿನಗಳಲ್ಲಿ ಹಣವನ್ನು ವಿತರಿಸಲು ಬ್ಯಾಂಕುಗಳಿಗೆ ರವಾನಿಸಬೇಕು ಎಂದು ಕೆ.ವಿ.ಐ.ಸಿ. ಅಧ್ಯಕ್ಷ ಶ್ರೀ ವಿನೈ ಕುಮಾರ್ ಸಕ್ಸೇನಾ ಅವರು ಇಂದು ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಈ ಕಾಲಮಿತಿಯನ್ನು, ಮುಂದಿನ ದಿನಗಳಲ್ಲಿ 15 ದಿನಗಳಿಗೆ ಇಳಿಸುವಂತೆ ಕೂಡಾ ಅವರು ಸೂಚನೆ ನೀಡಿದರು. ಪ್ರಸ್ತಾವನೆಗಳನ್ನು ನೀಡುವ ಅರ್ಜಿದಾರರಿಗೆ ಸೂಕ್ತ ಮಾರ್ಗದರ್ಶನ ಮತ್ತು ಅವರನ್ನು ಕಾರ್ಯಯೋಜನೆಯಲ್ಲಿ ಹಿಡಿದಿಡಲು ಹಾಗೂ ಸಾಲವನ್ನು ಮಂಜೂರು ಮಾಡುವವರೆಗೆ ಅವರಿಗೆ ಆರ್ಥಿಕ ಸಹಾಯ ಮಾಡಲು, ಅನುಷ್ಠಾನಗೊಳಿಸುವ ಏಜೆನ್ಸಿಗಳಿಗೆ ಅವರು ತಿಳಿಸಿದ್ದಾರೆ. ಸಾಲಗಳ ಆರಂಭಿಕ ಮಂಜೂರಾತಿಗಾಗಿ ಎಲ್ಲಾ ಏಜೆನ್ಸಿಗಳು ಬ್ಯಾಂಕುಗಳೊಂದಿಗೆ ವ್ಯವಹರಿಸಬೇಕಾಗುತ್ತದೆ.

ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಮುಂಬೈನ ಕೆ.ವಿ.ಐ.ಸಿ.ಯಲ್ಲಿರುವ ಪರವೀಕ್ಷಣಾ ಕೇಂದ್ರ ಪ್ರತಿದಿನವೂ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅದು ಪ್ರತಿ ಹದಿನೈದು ದಿನಗಳಿಗೊಮ್ಮೆ ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ಈ ಕುರಿತು ಮಾಹಿತಿ ನೀಡುತ್ತದೆ. ನಂತರ, ಪ್ರಗತಿಯ ವರದಿಯನ್ನು, ಕೆ.ವಿ.ಐ.ಸಿ.ಯ ಸಿ.ಇ.ಒ ಮತ್ತು ಅಧ್ಯಕ್ಷರ ಪರಿಶೀಲನೆಗೆ ನೀಡಲಾಗುತ್ತದೆ.

ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಪ್ರಧಾನಮಂತ್ರಿ ಮಾಡಿದ ಮನವಿಯ ಹಿನ್ನೆಲೆಯಲ್ಲಿ ಪರಿಷ್ಕೃತ ಮಾರ್ಗಸೂಚಿಗಳು ಬಂದಿವೆ ಎಂದು ಶ್ರೀ ಸಕ್ಸೇನಾ ಹೇಳಿದರು.ಪ್ರಧಾನಮಂತ್ರಿ ಅವರು ಹೇಳಿದಂತೆ,‘ ಸ್ವಾವಲಂಬನೆ ಮಂತ್ರ ನಮ್ಮ ಪಿ.ಎಂ.ಇ.ಜಿ.ಪಿ. ಅಡಿಯಲ್ಲಿ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ, ಸ್ಥಳೀಯ ಉತ್ಪಾದನೆಯ ಬೆಳವಣಿಗೆಯನ್ನು ಇನ್ನಷ್ಟು ವೇಗಗೊಳಿಸುತ್ತದೆ. ಇದು ಅಲ್ಪಾವಧಿಯೊಳಗೆ ಗರಿಷ್ಠ ಉದ್ಯೋಗ ಸೃಷ್ಟಿಯನ್ನು ಖಚಿತಪಡಿಸುತ್ತದೆ, ಖಾದಿ ಮತ್ತು ಗ್ರಾಮೋದ್ಯಮಗಳನ್ನು ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಪರಿವರ್ತಿಸುವುದು, ಇತರ ಸ್ಥಳೀಯ ಕೈಗಾರಿಕೆಗಳು ಮತ್ತು ಉದ್ಯಮಗಳಿಗೆ ಒಂದು ಅಧ್ಯಯನ ವಿಷಯವಾಗಲಿದೆ, ಹಾಗೂ ಈ ನಿಟ್ಟಿನಲ್ಲಿ ನೋಡಲ್ ಏಜೆನ್ಸಿಯಾಗಿ, ಪಿ.ಎಂ.ಇ.ಜಿ.ಪಿ. ಅಡಿಯಲ್ಲಿ ಮುಂಬರುವ ಯೋಜನೆಗಳನ್ನು ಕೈ ಹಿಡಿಯಲು ಕೆ.ವಿ.ಐ.ಸಿ. ಬದ್ಧವಾಗಿದೆ" ಎಂದು ಶ್ರೀ ಸಕ್ಸೇನಾ ಹೇಳಿದರು.

ದೇಶದಲ್ಲಿ ಚಾಲ್ತಿಯಲ್ಲಿರುವ ಕೋವಿಡ್ -19 ಪರಿಸ್ಥಿತಿಯಿಂದಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು, ಎನ್-95 ಮುಖಕವಚಗಳು, ವೆಂಟಿಲೇಟರ್‌ಗಳು ಅಥವಾ ಅದರ ಪರಿಕರಗಳ ತಯಾರಿಕೆಗೆ ಸಂಬಂಧಿಸಿದ ತಲಾ ಕನಿಷ್ಠ ಒಂದು ಘಟಕ, ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್‌ಗಳು, ಸ್ಯಾನಿಟೈಜರ್‌ಗಳು / ಲಿಕ್ವಿಡ್ ಹ್ಯಾಂಡ್ ವಾಶ್, ಥರ್ಮಲ್ ಸ್ಕ್ಯಾನರ್, ಅಗರಬತ್ತಿ ಮತ್ತು ಸಾಬೂನು ತಯಾರಿ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ .

ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಪರಿಶೀಲನೆಯ ಸಮಯದಲ್ಲಿ ಅರ್ಜಿದಾರರು ತಮ್ಮ ಸ್ಕೋರ್ ಕಾರ್ಡ್‌ನಲ್ಲಿ 100 ರಲ್ಲಿ ಕನಿಷ್ಠ 60 ಅಂಕ ಪಡೆದಿರುವುದನ್ನು ಅನುಷ್ಠಾನಗೊಳಿಸುವ ಏಜೆನ್ಸಿಗಳು ಖಚಿತಪಡಿಸಿಕೊಳ್ಳಬೇಕು. ಅಂತೆಯೇ, ಬ್ಯಾಂಕ್ ಮಟ್ಟದಲ್ಲಿ ನಿರಾಕರಣೆಗಳನ್ನು ಕಡಿಮೆ ಮಾಡಲು ಮೂಲ ಸೌಕರ್ಯಗಳಾದ ಕಚ್ಚಾ ವಸ್ತುಗಳ ಲಭ್ಯತೆ, ಮಾನವಶಕ್ತಿ, ಸಾರಿಗೆ ಮತ್ತು ವಿದ್ಯುತ್ ಪ್ರವೇಶದಂತಹ ತಾಂತ್ರಿಕ ಕಾರ್ಯಸಾಧ್ಯತೆಯನ್ನು ಸ್ವತಃ ಪರಿಶೀಲಿಸಬೇಕು.

ಅಂತೆಯೇ, ಅನುಷ್ಠಾನಗೊಳಿಸುವ ಏಜೆನ್ಸಿಗಳು, ಮಾರುಕಟ್ಟೆ ಅಧ್ಯಯನಗಳು, ಉದ್ದೇಶಿತ ಉತ್ಪನ್ನದ ಬೇಡಿಕೆಯ ಮೌಲ್ಯಮಾಪನಗಳು, ಸುತ್ತಮುತ್ತಲಿನ ಯೋಜನೆಗಳು ಮತ್ತು ಮಾರುಕಟ್ಟೆ ಕಾರ್ಯತಂತ್ರಗಳನ್ನೂ ಸಹ ಸಂಸ್ಥೆ ಪರಿಶೀಲಿಸುತ್ತದೆ. ನೆಲೆಯಲ್ಲಿ ನಿರಾಕರಣೆಯನ್ನು ತಪ್ಪಿಸಲು, ಪ್ರಸ್ತಾಪವು ಪ್ರಾರಂಭದಲ್ಲಿ ಆಯ್ದ ಬ್ಯಾಂಕಿನ ವ್ಯಾಪ್ತಿಗೆ ಬರುತ್ತದೆ, ಹಾಗೂ ಈ ಕಾರ್ಯವ್ಯವಸ್ಥೆಗಳನ್ನು ಏಜೆನ್ಸಿಗಳು ಖಚಿತಪಡಿಸುತ್ತವೆ.

***



(Release ID: 1623704) Visitor Counter : 310