ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಎಂ.ಎಸ್.ಎಂ.ಇ. , ಗ್ರಾಮ ಮತ್ತು ಗುಡಿ ಕೈಗಾರಿಕಾ ವಲಯಗಳಿಗೆ ಪ್ರಧಾನ ಮಂತ್ರಿ ಅವರ ಆರ್ಥಿಕ ಪ್ಯಾಕೇಜಿಗೆ ಗಡ್ಕರಿ ಸ್ವಾಗತ
Posted On:
12 MAY 2020 9:50PM by PIB Bengaluru
ಎಂ.ಎಸ್.ಎಂ.ಇ. , ಗ್ರಾಮ ಮತ್ತು ಗುಡಿ ಕೈಗಾರಿಕಾ ವಲಯಗಳಿಗೆ ಪ್ರಧಾನ ಮಂತ್ರಿ ಅವರ ಆರ್ಥಿಕ ಪ್ಯಾಕೇಜಿಗೆ ಗಡ್ಕರಿ ಸ್ವಾಗತ; ಇದರಿಂದ ಈ ವಲಯ ಹೊಸ ಎತ್ತರಕ್ಕೆ ಏರಲಿದೆ ಎಂದು ಬಣ್ಣನೆ
ಕೇಂದ್ರ ಎಂ.ಎಸ್.ಎಂ.ಇ. ಗಳು ಮತ್ತು ರಸ್ತೆ ಸಾರಿಗೆ ಹಾಗು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಪ್ರಧಾನ ಮಂತ್ರಿ ಅವರು ಇಂದು ಸಂಜೆ ಘೋಷಣೆ 20 ಲಕ್ಷ ಕೋಟಿ ರೂಪಾಯಿ ಮೊತ್ತದ ಪರಿಹಾರ ಪ್ಯಾಕೇಜನ್ನು ಸ್ವಾಗತಿಸಿದ್ದಾರೆ. ಈ ಚಾರಿತ್ರಿಕ ಪ್ಯಾಕೇಜಿನ ಮೂಲಕ ಪ್ರಧಾನ ಮಂತ್ರಿ ಅವರು ಎಂ.ಎಸ್.ಎಂ.ಇ., ಗ್ರಾಮ ಮತ್ತು ಗುಡಿ ಕೈಗಾರಿಕಾ ಕ್ಷೇತ್ರದ ನಿರೀಕ್ಷೆ ಮತ್ತು ಆಶೋತ್ತರಗಳನ್ನು ಈಡೇರಿಸಿದ್ದಾರೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಸಾಕಷ್ಟು ಸಂಪನ್ಮೂಲ, ಉತ್ತಮ ತಂತ್ರಜ್ಞಾನ ಮತ್ತು ಕಚ್ಚಾ ಸಾಮಗ್ರಿಗಳಿಂದಾಗಿ ಭಾರತವು ಶೀಘ್ರದಲ್ಲಿಯೇ ಎಲ್ಲಾ ವಲಯಗಳಲ್ಲಿಯೂ ಸ್ವಾವಲಂಬನೆ ಸಾಧಿಸಲಿದೆ ಎಂದೂ ಶ್ರೀ ಗಡ್ಕರಿ ಹೇಳಿದರು. ಜಾಗತಿಕ ಆರ್ಥಿಕತೆಯಲ್ಲಿ ಪ್ರಧಾನ ಮಂತ್ರಿ ಅವರು ಭಾರತವನ್ನು ಸೂಪರ್ ಆರ್ಥಿಕ ಶಕ್ತಿಯಾಗುವಂತೆ ಮುನ್ನೋಟ ರೂಪಿಸಿದ್ದಾರೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿರುವ ಆರ್ಥಿಕ ಹಿಂಜರಿತವನ್ನು ಅಪರೋಕ್ಷವಾದ ಆಶೀರ್ವಾದ ಎಂದು ಬಣ್ಣಿಸಿರುವ ಸಚಿವರು ನಾವು ಧನಾತ್ಮಕವಾಗಿ ಚಿಂತಿಸಬೇಕು ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಆತ್ಮ ವಿಶ್ವಾಸ ಗಳಿಸಿಕೊಳ್ಳುವತ್ತ ಮುನ್ನುಗ್ಗಬೇಕು ಎಂದರು.
ಪ್ರಧಾನ ಮಂತ್ರಿ ಅವರ ಈ ವರ್ತನೆಯನ್ನು ದೇಶ ಬಹಳ ಧೀರ್ಘ ಕಾಲ ನೆನಪಿಟ್ಟುಕೊಳ್ಳುತ್ತದೆ ಎಂದು ಹೇಳಿರುವ ಸಚಿವರು 11 ಕೋಟಿ ಜನರಿಗೆ ಉದ್ಯೋಗ ಕೊಡುವ ಮತ್ತು ಜಿ.ಡಿ.ಪಿ.ಗೆ ಸುಮಾರು 29 ಶೇಕಡಾ ಕೊಡುಗೆ ನೀಡುವ ಈ ಕ್ಷೇತ್ರಕ್ಕೆ ಪ್ರಧಾನ ಮಂತ್ರಿ ಅವರ ಬೆಂಬಲವನ್ನು ಈ ವಲಯದ ಎಲ್ಲಾ ಭಾಗೀದಾರರು ಎಂದೂ ಮರೆಯಲಾರರು ಎಂದಿದ್ದಾರೆ. ಎಂ.ಎಸ್.ಎಂ.ಇ. , ಗ್ರಾಮ, ಮತ್ತು ಗುಡಿ ಕೈಗಾರಿಕಾ ವಲಯ ಈ ಪ್ಯಾಕೇಜಿನ ಬೆಂಬಲದೊಂದಿಗೆ ಹೊಸ ಎತ್ತರಕ್ಕೆ ಬೆಳೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
***
(Release ID: 1623453)
Visitor Counter : 260