ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ತಂತ್ರಜ್ಞಾನ ಕೇಂದ್ರಗಳಿಂದ ರಿಯಲ್ ಟೈಮ್ ಕ್ವಾಂಟಿಟೇಟಿವ್ ಮೈಕ್ರೊ ಪಿಸಿಆರ್ ವ್ಯವಸ್ಥೆಯ ಪ್ರಮುಖ ಭಾಗಗಳ ತಯಾರಿಕೆ
Posted On:
11 MAY 2020 6:13PM by PIB Bengaluru
ತಂತ್ರಜ್ಞಾನ ಕೇಂದ್ರಗಳಿಂದ ರಿಯಲ್ ಟೈಮ್ ಕ್ವಾಂಟಿಟೇಟಿವ್ ಮೈಕ್ರೊ ಪಿಸಿಆರ್ ವ್ಯವಸ್ಥೆಯ ಪ್ರಮುಖ ಭಾಗಗಳ ತಯಾರಿಕೆ
ಕೇವಲ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಕೋವಿಡ್–19 ಪರೀಕ್ಷೆಯ ಫಲಿತಾಂಶ
ಎಂಎಸ್‌ಎಂಇ ಸಚಿವಾಲಯದ ಭುವನೇಶ್ವರ, ಜಮಶೆದ್ ಪುರ್ ಮತ್ತು ಕೋಲ್ಕತ್ತದಲ್ಲಿನ ತಂತ್ರಜ್ಞಾನ ಕೇಂದ್ರಗಳು ಈಗ ರೀಯಲ್ ಟೈಮ್ ಕ್ವಾಂಟಿಟೇಟಿವ್ ಮೈಕ್ರೊ ಪಿಸಿಆರ್ ವ್ಯವಸ್ಥೆಯ ಪ್ರಮುಖ ಭಾಗಗಳನ್ನು ತಯಾರಿಸುತ್ತಿವೆ. ವಿಶಾಖಪಟ್ಟಣದ ಎಂಎಂಟಿಝ್‌ಗೆ ಇವುಗಳನ್ನು ತಯಾರಿಸಲಾಗುತ್ತಿದೆ. ಈ ಯಂತ್ರ ಕೇವಲ ಒಂದು ಗಂಟೆಯ ಅವಧಿ ಒಳಗೆ ಕೋವಿಡ್–19 ಪರೀಕ್ಷೆಯ ಫಲಿತಾಂಶವನ್ನು ಹೇಳುತ್ತದೆ.(ಸಾಮಾನ್ಯವಾಗಿ ಕೈಗೊಳ್ಳುವ ಪರೀಕ್ಷೆಯ ಫಲಿತಾಂಶ ಪಡೆಯಲು 24 ಗಂಟೆಗಳು ಬೇಕಾಗುತ್ತದೆ). ಈ ಯಂತ್ರದ ವಿನ್ಯಾಸವನ್ನು ಖಾಸಗಿ ಎಂಎಸ್‌ಎಂಇ ಉದ್ಯಮ ರೂಪಿಸಿದೆ. ಈ ಯಂತ್ರವು ಅಚ್ಚುಕಟ್ಟಾಗಿದ್ದು, ಯಾವುದೇ ಸ್ಥಳಕ್ಕೆ ಮತ್ತು ಯಾವುದೇ ಸಮಯದಲ್ಲಿ ಕೊಂಡೊಯ್ಯಬಹುದಾಗಿದೆ. 600 ಪರೀಕ್ಷಾ ಯಂತ್ರಗಳಿಗೆ ಬಿಡಿ ಭಾಗಗಳನ್ನು ಪೂರೈಸಲು ತಂತ್ರಜ್ಞಾನ ಕೇಂದ್ರದಲ್ಲಿನ ತಂಡಗಳು ಎರಡು ಅಥವಾ ಮೂರು ಪಾಳಿಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. 150 ಪರೀಕ್ಷಾ ಯಂತ್ರಗಳ ಬಿಡಿ ಭಾಗಗಳನ್ನು ಈಗಾಗಲೇ ಎಎಂಟಿಝ್‌ಗೆ ಪೂರೈಸಲಾಗಿದೆ. ಐದು ಮೈಕ್ರಾನ್ ಹೊಂದಿರುವ ಸ್ಟೈನ್‌ಲೆಸ್ ಸ್ಟೀಲ್ ಭಾಗಗಳನ್ನು ಸಹ ತಯಾರಿಸಲಾಗುತ್ತಿದೆ. ಇವುಗಳನ್ನು ವಿಶ್ವದಲ್ಲೇ ಅತ್ಯಂತ ಅತ್ಯುತ್ತಮ ಯಂತ್ರಗಳ ಮೂಲಕ ತಯಾರಿಸಲಾಗುತ್ತಿದೆ.
ಕೋರೊನಾ ಪರೀಕ್ಷಾ ಉಪಕರಣದಿಂದ ಕೈಗೆಟಕುವ ದರದಲ್ಲಿ ಪರೀಕ್ಷೆಯನ್ನು ಕೈಗೊಳ್ಳಬಹುದಾಗಿದೆ. ಭುವನೇಶ್ವರ, ಜಮಶೇಡಪುರ ಮತ್ತು ಕೋಲ್ಕತ್ತದಲ್ಲಿರುವ ಎಂಎಸ್‌ಎಂಇ ಸಚಿವಾಲಯದ ತಂತ್ರಜ್ಞಾನ ಕೇಂದ್ರಗಳ ಬೆಂಬಲ ಮತ್ತು ಸಹಯೋಗದಿಂದ ಯಂತ್ರಗಳನ್ನು ತಯಾರಿಸಲು ಸಾಧ್ಯವಾಯಿತು.
ಪ್ರತಿ ವರ್ಷ ಎರಡು ಲಕ್ಷ ಯುವಕರಿಗೆ ಮತ್ತು ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುವಲ್ಲಿ ಎಂಎಸ್‌ಎಂಇ ಸ್ಥಾಪಿಸಿರುವ ತಂತ್ರಜ್ಞಾನ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವಿನ್ಯಾಸ ಮತ್ತು ಉಪಕರಣಗಳ ತಯಾರಿಕೆ, ನಿಖರವಾದ ಬಿಡಿಭಾಗಗಳು, ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ತಯಾರಿಸುವುದು, ಫೋರ್ಜಿಂಗ್ ಮತ್ತು ಫೌಂಡ್ರಿ, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಅಳತೆಯ ಉಪಕರಣಗಳು, ಗ್ಲಾಸುಗಳು, ಪಾದರಕ್ಷೆಗಳ ಮತ್ತು ಕ್ರೀಡಾ ಸರಕಗಳನ್ನು ತಯಾರಿಸಲು ಈ 18 ತಂತ್ರಜ್ಞಾನ ಕೇಂದ್ರಗಳು ಅತ್ಯಾಧುನಿಕ ತಂತ್ರಜ್ಞಾನದ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿವೆ. ಇವುಗಳಲ್ಲಿನ ಕೆಲವು ತಂತ್ರಜ್ಞಾನ ಕೇಂದ್ರಗಳು, ವಿನ್ಯಾಸ, ಅಭಿವೃದ್ಧಿ ಮತ್ತು ಎಂಎಸ್‌ಎಂಇಗಳಿಗೆ ಉಪಕರಣಗಳು, ಬಿಡಿಭಾಗಗಳನ್ನು ತಯಾರಿಸಲು ಮಾರ್ಗದರ್ಶನ ಬೆಂಬಲ ನೀಡುವ ಜತೆಗೆ ಇತರ ಪ್ರಮುಖ ವಲಯಗಳಾದ ರಕ್ಷಣೆ ಮತ್ತು ವೈಮಾಂತರಿಕ್ಷದ (ಏರೋಸ್ಪೇಸ್) ಸಂಶೋಧನೆ ಮತ್ತು ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸುತ್ತದೆ.
ತಂತ್ರಜ್ಞಾಣ ಕೇಂದ್ರಗಳು ಪ್ರಸ್ತುತ ಕೋವಿಡ್–19 ಬಿಕ್ಕಟ್ಟಿನ ಸಂದರ್ಭದಲ್ಲೂ ಕ್ರಿಯಾಶೀಲವಾಗಿವೆ. ವೈದ್ಯಕೀಯ ಉಪಕರಣಗಳು, ಪಿಪಿಇ, ಮಾಸ್ಕ್, ಸ್ಯಾನಿಟೈಸರ್‌ಗಳು ಮುಂತಾದ ಅಗತ್ಯ ವಸ್ತಗಳ ತಯಾರಿಕೆಯಲ್ಲಿ ತೊಡಗಿವೆ.
ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರಗಳ ಉದ್ದೇಶಗಳು:
- ದೀರ್ಘಾವಧಿ ಮತ್ತು ಅಲ್ಪಾವಧಿಯ ತರಬೇತಿಯನ್ನು ಟೂಲ್ ಮತ್ತು ಡೈ ಮೇಕಿಂಗ್ ಕುರಿತು ಯುವಕರಿಗೆ ನೀಡುವುದು. ಅತ್ಯಾಧುನಿಕ ತಂತ್ರಜ್ಞಾನವನ್ನು (ಎಂಜಿನಿಯರಿಂಗ್ ವಿಭಾಗದ ಇತರ ವಿಷಯಗಳ ಬಗ್ಗೆ ಮಾಹಿತಿ ಒದಗಿಸುವುದು) ಪರಿಚಯಿಸುವುದು. ಇದು ಹೊಸದಾಗಿ ಮತ್ತು ಈ ಕ್ಷೇತ್ರದಲ್ಲಿ ಈಗಾಗಲೇ ಇರುವ ತಂತ್ರಜ್ಞರಿಗೂ ಪರಿಚಯಿಸುವುದು.
- ಟೂಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿರುವ ಎಂಎಸ್‌ಎಂಇ ಘಟಕಗಳಿಗೆ ಕನ್ಸಲ್ಟನ್ಸಿ ಸೇವೆಗಳನ್ನು ಒದಗಿಸುವುದು. ಎಂಎಸ್‌ಎಂಇ ಘಟಕಗಳ ಉತ್ಪಾದನೆಯನ್ನು ಸುಧಾರಿಸುವುದು ಈ ಸೇವೆಯ ಉದ್ದೇಶವಾಗಿದೆ.
- ನಿಖರವಾದ ಯಾಂತ್ರಿಕತೆಯಲ್ಲಿ ಅಥವಾ ಹೀಟ್ ಟ್ರೀಟ್‌ಮೆಂಟ್ ಮತ್ತು ಇತರ ತಾಂತ್ರಿಕ ಎಂಜಿನಿಯರಿಂಗ್‌ಗೆ ಸಾಮಾನ್ಯ ಸೌಲಭ್ಯ ಸೇವೆ ಒದಗಿಸುವುದು. ಮೌಲ್ಡ್‌ಗಳು, ಟೂಲ್‌ಗಳು, ಡಯ್ಸ್‌ಗಳು, ಜಿಗ್‌ಗಳು, ಫಿಕ್ಸ್ಚರ್‌ಗಳು ಸೇರಿದಂತೆ ವಿವಿಧ ವಸ್ತುಗಳ ತಯಾರಿಕೆಗೆ ವಿನ್ಯಾಸ ಮತ್ತು ತಯಾರಿಸುವ ಮಾರ್ಗದರ್ಶನ ನೀಡುವುದಾಗಿದೆ.
***
(Release ID: 1623196)
Visitor Counter : 233