ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ

ಕೋವಿಡ್ ನಂತರದ ಸನ್ನಿವೇಶದಲ್ಲಿ ಆರ್ಥಿಕತೆ, ವ್ಯಾಪಾರ, ವೈಜ್ಞಾನಿಕ ಸಂಶೋಧನೆ ಮತ್ತು ಇತರ ಕ್ಷೇತ್ರಗಳಲ್ಲಿ ಪ್ರಮುಖ ಬೆಳವಣಿಗೆಗಳು ಹೊರಹೊಮ್ಮುವ ನಿರೀಕ್ಷೆ: ಡಾ. ಜಿತೇಂದ್ರ ಸಿಂಗ್

Posted On: 11 MAY 2020 8:14PM by PIB Bengaluru

ಕೋವಿಡ್ ನಂತರದ ಸನ್ನಿವೇಶದಲ್ಲಿ ಆರ್ಥಿಕತೆ, ವ್ಯಾಪಾರ, ವೈಜ್ಞಾನಿಕ ಸಂಶೋಧನೆ ಮತ್ತು ಇತರ ಕ್ಷೇತ್ರಗಳಲ್ಲಿ ಪ್ರಮುಖ ಬೆಳವಣಿಗೆಗಳು ಹೊರಹೊಮ್ಮುವ ನಿರೀಕ್ಷೆ: ಡಾ. ಜಿತೇಂದ್ರ ಸಿಂಗ್

ಅಸ್ಸೋಚಾಮ್ ಆಯೋಜಿಸಿದ್ದ ಇಂಡೋ-ಬಾಂಗ್ಲಾದೇಶದ ವರ್ಚುವಲ್ ಕಾನ್ಫರೆನ್ಸ್ನಲ್ಲಿ ಡಾ. ಸಿಂಗ್ ಭಾಷಣ ಮಾಡಿದರು

 

ಕೋವಿಡ್ ಸಮಯದ ನಂತರದ ಆರ್ಥಿಕ, ವ್ಯಾಪಾರ, ವೈಜ್ಞಾನಿಕ ಸಂಶೋಧನೆ ಮತ್ತು ಹಲವಾರು ವೈವಿಧ್ಯಮಯ ಕ್ಷೇತ್ರಗಳಲ್ಲಿ ಹೊಸ ಪ್ರಗತಿ ಸಾಧಿಸುವ ಸಾಮರ್ಥ್ಯವನ್ನು ಹೊಂದಿರುವ ಹೊಸ ಮಾದರಿಗಳು ಹೊರಹೊಮ್ಮಲಿವೆ ಎಂದು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ (ಡಿಒಎನ್ ಆರ್), ಕೇಂದ್ರ ರಾಜ್ಯ ಸಚಿವರಾದ (ಸ್ವತಂತ್ರ ನಿರ್ವಹಣೆ), ಡಾ.ಜಿತೇಂದ್ರ ಸಿಂಗ್ ಇಲ್ಲಿ ಹೇಳಿದರು.

ಅಸ್ಸೋಚಾಮ್ (ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ) ಆಯೋಜಿಸಿದ್ದ ಇಂಡೋ-ಬಾಂಗ್ಲಾದೇಶದ ವರ್ಚುವಲ್ ಕಾನ್ಫರೆನ್ಸ್ಅನ್ನು ಉದ್ದೇಶಿಸಿ ಮಾತನಾಡುತ್ತಾ ಡಾ. ಜಿತೇಂದ್ರ ಸಿಂಗ್ ಅವರು, ಕಳೆದ ಆರು ವರ್ಷಗಳಲ್ಲಿ, ಈಶಾನ್ಯ ಪ್ರದೇಶವು ಹಿಂದಿನ ಹಲವಾರು ಲೋಪಗಳನ್ನು ಸರಿಪಡಿಸಿದೆ ಏಕೆಂದರೆ ಮೊದಲ ಬಾರಿಗೆ ಪ್ರದೇಶವು ದೇಶದ ಇತರ ಪ್ರದೇಶಗಳಿಗೆ ಸಮನಾಗಿ ಗಮನ ಕೊಡಲಾಯಿತು. ಇದು ಜನರಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದಲ್ಲದೆ, ಭಾರತದ ಇತರ ಭಾಗಗಳೊಂದಿಗೆ ಮತ್ತು ಪೂರ್ವ ಗಡಿಗಳಲ್ಲಿರುವ ದೇಶಗಳೊಂದಿಗೆ ವಿವಿಧ ಹಂತಗಳಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿತು. ಅಧಿವೇಶನದಲ್ಲಿ ಬಾಂಗ್ಲಾದೇಶದ ವಾಣಿಜ್ಯ ಸಚಿವರಾದ ಟಿಪ್ಪು ಮುನ್ಶಿ, ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮತ್ತು ಬಾಂಗ್ಲಾದೇಶದ ಹೈಕಮಿಷನರ್ ಗಂಗೂಲಿ ದಾಸ್ ಭಾಗವಹಿಸಿದ್ದರು.

ಬಾಂಗ್ಲಾದೇಶಕ್ಕೆ ಸಂಬಂಧಿಸಿದಂತೆ, ಡಾ.ಜಿತೇಂದ್ರ ಸಿಂಗ್ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನೆರವೇರಿಸಲಾದ ಗಡಿ ವಿನಿಮಯಕ್ಕಾಗಿ ಇಂಡೋ-ಬಾಂಗ್ಲಾದೇಶ ಒಪ್ಪಂದವು ವ್ಯವಹಾರದ ಸುಲಭತೆ, ಸಾರಿಗೆಯ ಸುಲಭತೆ ಮತ್ತು ಪ್ರಯಾಣದ ಸುಲಭತೆಗಾಗಿ ಇದ್ದ ಅಡೆತಡೆಗಳನ್ನು ತೆರವುಗೊಳಿಸಿದೆ. ಮೊದಲು ಇವುಗಳು ಬಹಳ ಕಠಿಣ ಕಾರ್ಯಗಳಾಗಿದ್ದವು. ಅವರು ಗಮನಿಸಿದಂತೆ, ಇದನ್ನು ನಾಲ್ಕೈದು ದಶಕಗಳ ಹಿಂದೆಯೇ ಮಾಡಬೇಕಾಗಿತ್ತು, ಅಂದರೆ ಬಾಂಗ್ಲಾದೇಶದ ಉದಯದ ಸಮಯದಲ್ಲಿಯೇ, ಆದರೆ ಬಹುಶಃ ಇದು ಹಿಂದಿನ ಸರ್ಕಾರಗಳ ಆದ್ಯತೆಯಾಗಿರಲಿಲ್ಲ.

ಉಭಯ ದೇಶಗಳ ನಡುವಿನ ಸಾಂಪ್ರದಾಯಿಕವಾಗಿ ಸ್ನೇಹಪರ ಸಂಬಂಧಗಳ ಬಗ್ಗೆ ಉಲ್ಲೇಖಿಸಿದ ಡಾ.ಜಿತೇಂದ್ರ ಸಿಂಗ್, ಇತರ ಹಲವು ದೇಶಗಳಿಗಿಂತ ಬಾಂಗ್ಲಾದೇಶದೊಂದಿಗೆ ವ್ಯವಹಾರ ಮಾಡುವುದು ತುಂಬಾ ಸುಲಭ. ಇದಲ್ಲದೆ, ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ವ್ಯವಹಾರವನ್ನು ಹೆಚ್ಚಿಸಲು ಈಶಾನ್ಯ ಪ್ರದೇಶವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದರು.

ಮುಂದೆ ಬರುವ ಸನ್ನಿವೇಶದಲ್ಲಿ, ಈಶಾನ್ಯದ ಬಿದಿರು ಭಾರತಕ್ಕೆ ಮಾತ್ರವಲ್ಲದೆ ಇಡೀ ಉಪಖಂಡಕ್ಕೂ, ವಿಶೇಷವಾಗಿ ಪೂರ್ವ ರಾಷ್ಟ್ರವಾದ ಬಾಂಗ್ಲಾದೇಶದ ವ್ಯಾಪಾರದ ಪ್ರಮುಖ ಅಂಶವಾಗಲಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು. ಉಭಯ ದೇಶಗಳ ನಡುವಿನ ಜನಪ್ರಿಯ ವ್ಯಾಪಾರಕ್ಕಾಗಿ ಉತ್ತೇಜಿಸಬಹುದಾದ ಹಲವಾರು ವಸ್ತುಗಳನ್ನು ಅವರು ಉಲ್ಲೇಖಿಸಿದರು. ಉದಾಹರಣೆಗೆ, ರಫ್ತಿಗಾಗಿ ಸಿಮೆಂಟ್, ಕಲ್ಲಿದ್ದಲು, ಶುಂಠಿ, ಸಿಟ್ರಸ್ ಹಣ್ಣು, ಇತ್ಯಾದಿ, ಆಮದಿಗಾಗಿ ಪ್ಲಾಸ್ಟಿಕ್, ಪಿವಿಸಿ ಕೊಳವೆಗಳು ಸೇರಿವೆ ಎಂದು ಅವರು ಹೇಳಿದರು.

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದಿಂದ ಎಲ್ಲ ರೀತಿಯ ಬೆಂಬಲವನ್ನು ನೀಡುವುದಾಗಿ ಹೇಳಿದ ಡಾ. ಜಿತೇಂದ್ರ ಸಿಂಗ್ ಅವರು ಅಸ್ಸೋಚಮ್ನಂತಹ ವಾಣಿಜ್ಯ ಮತ್ತು ವ್ಯಾಪಾರ ಸಂಸ್ಥೆಗಳು ಮುಂದೆ ಬಂದು ಪರಸ್ಪರ ಲಾಭ ತರುವ ಹೊಸ ಕೈಗಾರಿಕೆಗಳ ಉತ್ತೇಜನಕ್ಕಾಗಿ ಪಿಪಿಪಿ (ಸಾರ್ವಜನಿಕ ಖಾಸಗಿ ಭಾಗವಹಿಸುವಿಕೆ) ಮಾದರಿಯನ್ನು ಸುಗಮಗೊಳಿಸುವಂತೆ ಕರೆ ನೀಡಿದರು.

ಸರ್ಕಾರವು ಸಕ್ರಿಯ ಪಾತ್ರ ವಹಿಸಬಹುದಾದರೂ, ಸಂಪನ್ಮೂಲ ಮತ್ತು ಬಂಡವಾಳದ ಅಂತರವನ್ನು ತುಂಬಲು ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಗಳು ಮುಂದೆ ಬರಬಹುದು ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು.

ಅಸ್ಸೋಚಮ್ ವಿನೀತ್ ಅಗರ್ವಾಲ್ ಮತ್ತು ದೀಪಕ್ ಸೂದ್ ಕೂಡ ಸಂದರ್ಭದಲ್ಲಿ ಮಾತನಾಡಿದರು.

***



(Release ID: 1623170) Visitor Counter : 189