ರಕ್ಷಣಾ ಸಚಿವಾಲಯ
ಸಂಕಷ್ಟದಲ್ಲಿದ್ದ ಭಾರತೀಯರು ಮಾಲ್ಡವೀಸ್ ನಿಂದ ಭಾರತೀಯ ನೌಕಾಪಡೆಯ ಯುದ್ಧ ಹಡಗು ಐಎನ್ಎಸ್ ಜಲಶ್ವಾ ಮೂಲಕ ಕೊಚ್ಚಿಗೆ ಆಗಮನ
Posted On:
10 MAY 2020 8:49PM by PIB Bengaluru
ಸಂಕಷ್ಟದಲ್ಲಿದ್ದ ಭಾರತೀಯರು ಮಾಲ್ಡವೀಸ್ ನಿಂದ ಭಾರತೀಯ ನೌಕಾಪಡೆಯ ಯುದ್ಧ ಹಡಗು ಐಎನ್ಎಸ್ ಜಲಶ್ವಾ ಮೂಲಕ ಕೊಚ್ಚಿಗೆ ಆಗಮನ
“ಸಮುದ್ರ ಸೇತು ಕಾರ್ಯಾಚರಣೆ” ಭಾಗವಾಗಿ ಮಹಿಳೆಯರು, ವೃದ್ಧರು ಮತ್ತು ಮಕ್ಕಳೂ ಸೇರಿದಂತೆ ಮಾಲ್ಡವೀಸ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 698 ಭಾರತೀಯರನ್ನು ಹೊತ್ತ ಐಎನ್ಎಸ್ ಜಲಶ್ವಾ ಹಡಗು ಮೇ 10ರಂದು ಬೆಳಗ್ಗೆ ಸುಮಾರು 10 ಗಂಟೆ ಸಮಯಕ್ಕೆ ಕೊಚ್ಚಿ ಬಂದರಿಗೆ ಬಂದಿಳಿಯಿತು. ಎಲ್ಲ ತಪಾಸಣೆ ಮತ್ತು ನಿಗದಿತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೇ 8ರಂದು ಸಂಜೆ ಹಡಗು ಮಾಲ್ಡವೀಸ್ ನಿಂದ ಹೊರಟಿತ್ತು. ಕನಿಷ್ಠ ಸಾಮಾಜಿಕ ಸಂಪರ್ಕ ಸೇರಿದಂತೆ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪ್ರಯಾಣದ ವೇಳೆ ವೃದ್ಧರು, ಗರ್ಭಿಣಿಯರು ಮತ್ತು ಮಕ್ಕಳ ಭದ್ರತೆಗೆ ವಿಶೇಷ ಕಾಳಜಿ ವಹಿಸಲಾಗಿತ್ತು. ಎಲ್ಲ ಪ್ರಯಾಣಿಕರನ್ನು ವೈಯಕ್ತಿಕ ರಕ್ಷಣಾ ಕವಚ ಧರಿಸಿದ್ದ ಭಾರತೀಯ ನೌಕಾಪಡೆ ಸಿಬ್ಬಂದಿ ನಿರ್ವಹಿಸಿದರು. ಭಾರತ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಮತ್ತು ನಿಗದಿತ ಕಾರ್ಯಾನುಷ್ಠಾನ ಮಾನದಂಡ(ಎಸ್ಒಪಿ) ಅನುಸರಿಸಿ, ಅವರ ಸ್ಥಳಾಂತರ ಪ್ರಕ್ರಿಯೆ ಕೈಗೊಳ್ಳಲಾಯಿತು.
ಪ್ರಯಾಣಿಕರನ್ನು ಹೊತ್ತೊಯ್ದ ಹಡಗು ನಿಲ್ಲಿಸಲಾದ ಕೊಚ್ಚಿ ಪೋರ್ಟ್ ಟ್ರಸ್ಟ್ ನ ಟರ್ಮಿನಲ್ ನಲ್ಲಿ ಇದ್ದ ನೌಕಾ ಮತ್ತು ನಾಗರಿಕ ಆಡಳಿತ ಸಿಬ್ಬಂದಿ ಅಧಿಕಾರಿಗಳು ಬರಮಾಡಿಕೊಂಡರು. ಕ್ರೂಸ್ ಟರ್ಮಿನಲ್ ನಲ್ಲಿ ಕೋವಿಡ್ ತಪಾಸಣೆ ಮತ್ತು ವಲಸೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ವ್ಯಾಪಕ ವ್ಯವಸ್ಥೆಗಳನ್ನು ಕಲ್ಪಿಸಿತ್ತು. ಸೀಮಾಸುಂಕ, ವಲಸೆ, ಪೊಲೀಸ್, ಆರೋಗ್ಯ ಇಲಾಖೆ, ಬಿಎಸ್ಎನ್ಎಲ್ ಮತ್ತು ಜಿಲ್ಲಾಡಳಿತ ವೈದ್ಯಕೀಯ ಶಿಷ್ಟಾಚಾರಕ್ಕೆ ಅನುಗುಣವಾಗಿ ಟರ್ಮಿನಲ್ ನಲ್ಲಿ ಗಾಜಿನ ಕೌಂಟರ್ ಗಳನ್ನು ಸ್ಥಾಪಿಸಿತ್ತು. ಅಲ್ಲದೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮತ(ಸಿಐಎಎಲ್) ಮೂಲಕ ಪ್ರಯಾಣಿಕರ ಸರಕು ಸಾಗಾಣೆಗೆ ಟ್ರಾಲಿಗಳನ್ನು ಒದಗಿಸಲಾಗಿತ್ತು. ಪರಿಣಾಮಕಾರಿ ರೀತಿಯಲ್ಲಿ ಎಲ್ಲ ಆರೋಗ್ಯ ಮತ್ತು ವೈದ್ಯಕೀಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಐಎನ್ಎಸ್ ಜಲಶ್ವಾ, ವಿಶಾಖಪಟ್ಟಣಂನಲ್ಲಿ ನೆಲೆಯೂರಿದ್ದು, ಇದೇ ರೀತಿಯ ಯಾವುದೇ ಭಾರತೀಯ ಪ್ರಜೆಗಳಿಗೆ ಪ್ರಮುಖ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ(ಎಚ್ಎಡಿಆರ್) ಗಳನ್ನು ಒದಗಿಸುವ ಭಾರತೀಯ ನೌಕಾಪಡೆಯ ಪ್ರಯತ್ನಗಳಲ್ಲಿ ಇದು ಮುಂಚೂಣಿಯಲ್ಲಿರಲಿದೆ. ಈ ಹಡಗನ್ನು ಸೇನಾ ಪಡೆಗಳನ್ನು ಕರೆದೊಯ್ಯಲು ಮತ್ತು ಅದರೊಳಗೆ ಸ್ಥಳಾಂತರ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಭಾರತೀಯ ನೌಕಾಪಡೆಯ ತರಬೇತಿ ಹೊಂದಿದ ವೈದ್ಯಕೀಯ ತಂಡವಿದ್ದು, ಅದು ವಿಶೇಷವಾಗಿ ಪ್ರಸ್ತುತ ನಡೆಯುತ್ತಿರುವ ಕಾರ್ಯಾಚರಣೆಯನ್ನು ನೋಡಿಕೊಳ್ಳಲಿದೆ.
ಇಂದು ಮುಕ್ತಾಯವಾದ ಈ ಸ್ಥಳಾಂತರ ಪ್ರಕ್ರಿಯೆ ಕಾರ್ಯಾಚರಣೆಯ ಭಾಗವಾಗಿದೆ ಅದರ ಮುಂದುವರಿದ ಭಾಗವಾಗಿ ಮತ್ತೊಂದು ಹಡಗು ಕೊಚ್ಚಿಯಲ್ಲಿ ನೆಲೆಸಿದ್ದ ಐಎನ್ಎಸ್ ಮಗರ್ ಇಂದು ಮಾಲೆಯಿಂದ 202 ಭಾರತೀಯ ಪ್ರಜೆಗಳನ್ನು ಹೊತ್ತು ಬರುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಾಲ್ಡವೀಸ್ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರುವ ಭಾರತ ಸರ್ಕಾರದ ವಂದೇ ಭಾರತ್ ಮಿಷನ್ ಯೋಜನೆಯ ಭಾಗವಾಗಿದೆ.


***
(Release ID: 1622830)
Visitor Counter : 220