ರಕ್ಷಣಾ ಸಚಿವಾಲಯ

ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವುದಕ್ಕಾಗಿ  ಆಪರೇಶನ್ ಸಮುದ್ರ ಸೇತು ಐ.ಎನ್.ಎಸ್. ಮಗರ್ ಮಾಲೆಗೆ ಆಗಮನ

Posted On: 10 MAY 2020 6:26PM by PIB Bengaluru

ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವುದಕ್ಕಾಗಿ  ಆಪರೇಶನ್ ಸಮುದ್ರ ಸೇತು .ಎನ್.ಎಸ್. ಮಗರ್ ಮಾಲೆಗೆ ಆಗಮನ

 

ಮಾಲ್ದೀವ್ಸ್ ನಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಮತ್ತು ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತರುವುದನ್ನು ಖಾತ್ರಿಪಡಿಸಲು ಭಾರತೀಯ ನೌಕಾದಳದ ಆಪರೇಶನ್ ಸಮುದ್ರ ಸೇತು ಕಾರ್ಯಾಚರಣೆಯ ಎರಡನೆ ನೌಕಾ ಹಡಗು .ಎನ್.ಎಸ್. ಮಗರ್ 2020 ಮೇ 10 ರಂದು ಬೆಳಿಗ್ಗೆ ಮಾಲೆ ಬಂದರಿಗೆ ಆಗಮಿಸಿತು. .ಎನ್.ಎಸ್. ಮಗರ್ ,ಮಾಲ್ದೀವ್ಸ್ ಗೆ ಹೊರಡುವ ಮೊದಲು ಬಂದರಿನಲ್ಲಿ ತಂಗುವ ಕಾರ್ಯಾಚರಣೆಗಾಗಿ ಎಲ್.ಎಸ್.ಟಿ.(ಎಲ್) ವಿನ್ಯಾಸಿತಗೊಳಿಸಲಾಗಿದ್ದು, ಅದರ ಮೂಲ ನೆಲೆಯಾದ ಕೊಚ್ಚಿಯಲ್ಲಿ ಎಲ್ಲಾ ಅವಶ್ಯ ಸಾರಿಗೆ, ವೈದ್ಯಕೀಯ ಮತ್ತು ಆಡಳಿತಾತ್ಮಕ ಸಿದ್ದತೆಗಳನ್ನು ನಾಗರಿಕರನ್ನು ಯಾವುದೇ ತೊಂದರೆಗಳಾಗದ ರೀತಿಯಲ್ಲಿ ಕರೆತರುವುದಕ್ಕಾಗಿ ಮಾಡಿಕೊಂಡಿತ್ತು.

ಹಡಗು ಸಾಮಾಜಿಕ ಅಂತರ ಕಾಪಾಡುವ ನಿಯಮವೂ ಸಹಿತ ಕೋವಿಡ್ -19 ಕ್ಕೆ ಸಂಬಂಧಿಸಿದ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡು ಸುಮಾರು 200 ನಾಗರಿಕರನ್ನು ಸ್ಥಳಾಂತರಿಸಲಿದೆ. ಸ್ಥಳಾಂತರಗೊಳ್ಳುವವರಿಗಾಗಿ ಹಡಗಿನಲ್ಲಿ ಪ್ರತ್ಯೇಕ ವಿಭಾಗವನ್ನು ಅವಶ್ಯಕ ಸೌಲಭ್ಯಗಳಾದ ಆಹಾರ ಮತ್ತು ವಾಶ್ ರೂಂಗಳೊಂದಿಗೆ ರೂಪಿಸಲಾಗಿದೆ. ಮಹಿಳೆಯರಿಗೆ ,ಮಕ್ಕಳಿಗೆ, ಶಿಶುಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಮೆಸ್ ಕೂಡಾ ಒದಗಿಸಲಾಗಿದೆ. ಭೋಜನ ಸಭಾಂಗಣ ಮತ್ತು ಸ್ನಾನದ ಕೋಣೆಗಳಂತಹ ಎಲ್ಲರೂ ಸೇರುವ ಸ್ಥಳಗಳಲ್ಲಿ ಹೆಚ್ಚುವರಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಅಲ್ಲಿ ಜನ ಸೇರುವುದನ್ನು ತಡೆಯಲು ಸ್ಥಳಾಂತರಗೊಳ್ಳುವವರನ್ನು ಗುಂಪುಗಳಾಗಿ ವಿಭಜಿಸಲಾಗಿದೆ.

ಇದರ ಜೊತೆಯಲ್ಲಿಯೇ, ಮಾಲ್ದೀವ್ಸ್ ನಿಂದ ಸ್ಥಳಾಂತರಗೊಂಡವರನ್ನು ಹೊತ್ತ .ಎನ್.ಎಸ್. ಜಲಾಶ್ವ ಇಂದು ಬೆಳಿಗ್ಗೆ ಕೊಚ್ಚಿ ಬಂದರನ್ನು ತಲುಪಿದೆ. ಇದರಲ್ಲಿ 698 ಭಾರತೀಯ ನಾಗರಿಕರು ದೇಶಕ್ಕೆ ಮರಳಿದ್ದಾರೆ.

***



(Release ID: 1622827) Visitor Counter : 166