ಹಣಕಾಸು ಸಚಿವಾಲಯ

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 6ರ ಅಡಿ ನಿವಾಸಿ ಕುರಿತಂತೆ ಸ್ಪಷ್ಟನೆ

Posted On: 09 MAY 2020 10:39AM by PIB Bengaluru

ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 6 ಅಡಿ ನಿವಾಸಿ ಕುರಿತಂತೆ ಸ್ಪಷ್ಟನೆ

 

ಆದಾಯ ತೆರಿಗೆ ಕಾಯ್ದೆ 1961(ಇನ್ನು ಮುಂದೆ ಕಾಯ್ದೆ ಎಂದು ಬಳಕೆ) ಸೆಕ್ಷನ್ 6 ಅಡಿಯಲ್ಲಿ ವ್ಯಕ್ತಿಯ ನಿವಾಸ ಕುರಿತ ಅಂಶವಾಗಿದೆ. ಇದರಲ್ಲಿ ವ್ಯಕ್ತಿಯ ಸ್ಥಿತಿಗತಿ ಆತ ಭಾರತೀಯ ನಿವಾಸಿಯಾಗಿದ್ದಾರೆಯೇ ಅಥವಾ ಅನಿವಾಸಿಯರೇ ಅಥವಾ ಸಾಮಾನ್ಯ ನಿವಾಸಿಯೇ, ಅವಲಂಬಿತರೇ ಎಂಬುದು, ಅದರಲ್ಲಿ ವ್ಯಕ್ತಿ ವರ್ಷದಲ್ಲಿ ಭಾರತದಲ್ಲಿ ಎಷ್ಟು ದಿನಗಳ ಅವಧಿ ಇರುತ್ತಾರೆ ಎಂಬುದು ಅವಲಂಬಿಸಿರುತ್ತದೆ.

ಕುರಿತಂತೆ ಹಲವು ಮನವಿಗಳನ್ನು ಸ್ವೀಕರಿಸಲಾಗಿತ್ತು. ಹಿಂದಿನ ವರ್ಷ 2019-20ರಲ್ಲಿ ಹಲವಾರು ವ್ಯಕ್ತಿಗಳು ಭಾರತಕ್ಕೆ ಭೇಟಿ ನೀಡಿದ್ದರು. ಅವರು ನಿಗದಿತ ಅವಧಿಗೆ ಭೇಟಿ ನೀಡಿ, ಹಿಂದಿನ ವರ್ಷ ಮುಕ್ತಾಯವಾಗುವ ಮುನ್ನವೇ ತೆರಳಿ, ಅವರು ಇಲ್ಲಿನ ವಾಸಿಗಳಾಗುವ ಸ್ಥಾನ ತಪ್ಪಿಸಿಕೊಳ್ಳುತ್ತಿದ್ದರು ಅಥವಾ ಭಾರತದ ಸಾಮಾನ್ಯ ನಿವಾಸಿಯಾಗುವುದನ್ನೂ ಸಹ ತಪ್ಪಿಸಿಕೊಳ್ಳಲಿದ್ದರು. ಆದರೆ ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ಮತ್ತು ಮಾರಕ ಕೊರೊನಾ ಸೋಂಕು(ಕೋವಿಡ್-19) ಹರಡುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿರುವುದರಿಂದ ಅವರು ಭಾರತದಲ್ಲೇ ತಮ್ಮ ವಾಸ್ತವ್ಯವನ್ನು ಮುಂದುವರಿಸಬೇಕಾಗಿ ಬಂದಿದೆ. ಇದರಿಂದಾಗಿ ಅವರು ಸ್ವತಃ ಇಷ್ಟವಿಲ್ಲದಿದ್ದರೂ ಮತ್ತು ಯಾವುದೇ ಉದ್ದೇಶವಿಲ್ಲದಿದ್ದರೂ ಅವರು ಭಾರತೀಯ ವಾಸಿಗಳಾಗಿ ಮುಂದುವರಿಯುವಂತಾಗಿದೆ.

ಅಂತಹ ಪ್ರಕರಣಗಳಲ್ಲಿ ನೈಜ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ಸಿಬಿಡಿಟಿ ನಿರ್ಧಾರ ಕೈಗೊಂಡು ಸುತ್ತೋಲೆ ಸಂಖ್ಯೆ 11 ಮೇ 8, 2020ರಂದು, ಹಿಂದಿನ ವರ್ಷ 2019-20 ಅವಧಿಯಲ್ಲಿ ಕಾಯ್ದೆಯ ಸೆಕ್ಷನ್ 6ರಂತೆ ನಿವಾಸಿಯ ಸ್ಥಾನಮಾನ ನಿರ್ಧರಿಸುವ ಉದ್ದೇಶವನ್ನು ವ್ಯಕ್ತಿಗಳಿಗೆ ಸಂಬಂಧಿಸಿದಂತೆ 2020 ಮಾರ್ಚ್ 22ಕ್ಕೆ ಮುನ್ನ ಭಾರತಕ್ಕೆ ಭೇಟಿ ನೀಡಿದ ವ್ಯಕ್ತಿಗಳಿಗೆ ಸಂಬಂಧಿಸಿದಂತೆ.

  • 2020 ಮಾರ್ಚ್ 31ರೊಳಗೆ ಅಥವಾ ಆನಂತರ ವ್ಯಕ್ತಿ ಭಾರತವನ್ನು ತೊರೆಯಲಾಗದಿದ್ದರೆ, 2020 ಮಾರ್ಚ್ 22ರಿಂದ 2020 ಮಾರ್ಚ್ 31 ವರೆಗೆ ಭಾರತದಲ್ಲೇ ವಾಸ್ತವ್ಯ ಹೂಡಿದ್ದರೆ ಅದನ್ನು ಲೆಕ್ಕಕ್ಕೆ ಪರಿಗಣಿಸುವಂತಿಲ್ಲ ಅಥವಾ
  • ಮಾರಕ ಕೊರೊನಾ(ಕೋವಿಡ್-19) ಸೋಂಕಿನ ಹಿನ್ನೆಲೆಯಲ್ಲಿ ವ್ಯಕ್ತಿ ಭಾರತದಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದರೆ ಅಥವಾ 2020 ಮಾರ್ಚ್ 1 ನಂತರ ವ್ಯಕ್ತಿ ನಿರ್ಗಮನ ವಿಮಾನದಲ್ಲಿ ಪ್ರಯಾಣಿಸಿದ್ದರೆ ಅಥವಾ 2020 ಮಾರ್ಚ್ 31ರೊಳಗೆ ಅಥವಾ ಆತ ಭಾರತವನ್ನು ತೊರೆಯಲಾಗದಿದ್ದರೆ ಅಥವಾ 2020 ಮಾರ್ಚ್ 31ಕ್ಕೆ ಮುನ್ನ ತಮ್ಮ ನಿರ್ಗಮನ ದಿನಕ್ಕಿಂತ ಮುಂಚೆ ಕ್ವಾರಂಟೈನ್ ಅವಧಿ ಆರಂಭವಾಗಿದ್ದರೆ ಅಥವಾ 2020 ಮಾರ್ಚ್ 31, ಪ್ರಕರಣಗಳನ್ನಾಧರಿಸಿ ಅವಧಿಯನ್ನು ಲೆಕ್ಕಕ್ಕೆ ಪರಿಗಣಿಸುವಂತಿಲ್ಲ.
  • ವ್ಯಕ್ತಿ ನಿರ್ಗಮನ ವಿಮಾನದಲ್ಲಿ ಪ್ರಯಾಣಿಸಿದ್ದರೆ, ಅಥವಾ 2020 ಮಾರ್ಚ್ 31ಕ್ಕೆ ಮುನ್ನ ಆಗಮಿಸಿದ್ದರೆ 2020 ಮಾರ್ಚ್ 22ರಿಂದ ಭಾರತದಲ್ಲೇ ವಾಸ್ತವ್ಯ ಹೂಡಿದ್ದರೆ, ಆತನ ನಿರ್ಗಮನ ದಿನಾಂಕವನ್ನು ಲೆಕ್ಕಕ್ಕೆ ಪರಿಗಣಿಸುವಂತಿಲ್ಲ.

ಅಲ್ಲದೆ ಲಾಕ್ ಡೌನ್ ಅವಧಿ 2020-21ನೇ ಹಣಕಾಸು ವರ್ಷದಲ್ಲೂ ಮುಂದುವರಿದಿದೆ ಮತ್ತು ಯಾವಾಗ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಆರಂಭವಾಗುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಹಾಗಾಗಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ವ್ಯಕ್ತಿಗಳು ಇಲ್ಲಿ ಹೂಡಿರುವ ಅವಧಿಯನ್ನು ಹೊರತುಪಡಿಸಿ, ಅವರ ಹಿಂದಿನ ವರ್ಷ 2020-21 ನಿವಾಸ ಸ್ಥಾನಮಾನದ ಕುರಿತು ನಿರ್ಧರಿಸಲಾಗುವುದು. ಕುರಿತು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ಆದೇಶಿಸಲಾಗುವುದು.

***



(Release ID: 1622487) Visitor Counter : 236