ಪ್ರಧಾನ ಮಂತ್ರಿಯವರ ಕಛೇರಿ

ಇಟಲಿಯ ಪ್ರಧಾನಿ ಶ್ರೀ ಗೈಸೆಪೆ ಕಾಂಟೆ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ

Posted On: 08 MAY 2020 8:44PM by PIB Bengaluru

ಇಟಲಿಯ ಪ್ರಧಾನಿ ಶ್ರೀ ಗೈಸೆಪೆ ಕಾಂಟೆ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಲಿಯ ಪ್ರಧಾನಿ ಶ್ರೀ  ಗೈಸೆಪೆ ಕಾಂಟೆ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಇಟಲಿಯಲ್ಲಿ ಆಗಿರುವ ಪ್ರಾಣಹಾನಿಯ ಬಗ್ಗೆ ಪ್ರಧಾನಿಯವರು ಸಂತಾಪ ಸೂಚಿಸಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಇಟಲಿಯ ನಾಗರಿಕರು ತೋರಿದ ಧೈರ್ಯವನ್ನು ಅವರು ಶ್ಲಾಘಿಸಿದರು.

ಸಾಂಕ್ರಾಮಿಕ ರೋಗದಿಂದ ಉಂಟಾಗುವ ಆರೋಗ್ಯ ಮತ್ತು ಆರ್ಥಿಕ ಪರಿಣಾಮವನ್ನು ತಮ್ಮದೇ ದೇಶಗಳಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಪರಿಹರಿಸಲು ಅಗತ್ಯವಾದ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಅವರು ಪರಸ್ಪರ ಒಗ್ಗಟ್ಟನ್ನು ವ್ಯಕ್ತಪಡಿಸಿದರು ಮತ್ತು ಆಯಾ ದೆಶಗಳಲ್ಲಿ ಸಿಲುಕಿರುವ  ತಮ್ಮ ನಾಗರಿಕರಿಗೆ ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದರು. ಇಟಲಿಗೆ ಅಗತ್ಯ ಔಷಧಿಗಳು ಮತ್ತು ಇತರ ವಸ್ತುಗಳನ್ನು ಒದಗಿಸುವಲ್ಲಿ ಭಾರತದ ಅನಿಯಂತ್ರಿತ ಬೆಂಬಲದ ಭರವಸೆಯನ್ನು ಪ್ರಧಾನಿಯವರು ಶ್ರೀ ಕಾಂಟೆಗೆ ನೀಡಿದರು.

ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಭಾರತ ಮತ್ತು ಇಟಲಿಯ ನಡುವೆ ಸಕ್ರಿಯ ಸಮಾಲೋಚನೆ ಮತ್ತು ಸಹಕಾರವನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿದರು.

ಸೂಕ್ತ ಸಮಯದಲ್ಲಿ ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಇಟಲಿ ಪ್ರಧಾನ ಮಂತ್ರಿಯವರು ಪ್ರಧಾನಿಯವರಿಗೆ  ಆಹ್ವಾನ ನೀಡಿದರು.

***



(Release ID: 1622470) Visitor Counter : 273