ಜವಳಿ ಸಚಿವಾಲಯ

ಎಂಟು ಅನುಮೋದಿತ ಪ್ರಯೋಲಾಯಗಳಲ್ಲಿ ಕೊವಿಡ್-19 ರಕ್ಷಣೆಗಾಗಿ ಅವಶ್ಯಕವಿರುವ ಪಿಪಿಇ ಕವರ್ ಆಲ್ ಗಳ ಪರೀಕ್ಷೆ

Posted On: 08 MAY 2020 8:03PM by PIB Bengaluru

ಎಂಟು ಅನುಮೋದಿತ ಪ್ರಯೋಲಾಯಗಳಲ್ಲಿ ಕೊವಿಡ್-19 ರಕ್ಷಣೆಗಾಗಿ ಅವಶ್ಯಕವಿರುವ ಪಿಪಿಇ ಕವರ್ ಆಲ್ ಗಳ ಪರೀಕ್ಷೆ;

ಎಲ್ಲಾ ಪ್ರಯೋಗಾಲಯಗಳು ಎನ್ ಎ ಬಿ ಎಲ್ ನಿಂದ ಮಾನ್ಯತೆ ಪಡೆದಿವೆ

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ತಾಂತ್ರಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ; ಪಿಪಿಇ ಕವರ್ ಆಲ್ ಗಳ ಪ್ರತಿಯೊಂದು ಮೂಲ ಮಾದರಿಯ ಮಾದರಿಗಾಗಿ ವಿಶಿಷ್ಟ ಪ್ರಮಾಣೀಕರಣ ಕೋಡ್ (ಯುಸಿಸಿ) ನೀಡುವ ವಿವರವಾದ ಕಾರ್ಯವಿಧಾನವನ್ನು ಜವಳಿ ಸಚಿವಾಲಯ ಹೊರಡಿಸಿದೆ

ಎಲ್ಲಾ ಯುಸಿಸಿ ಪ್ರಮಾಣ ಪತ್ರಗಳ ವಿವರಗಳು ಡಿ ಆರ್ ಡಿ ಒ, ಒ ಎಫ್ ಬಿ ಮತ್ತು ಸಿಟ್ರಾ ಅಧಿಕೃತ ವೆಬ್ ಸೈಟ್ ಗಳಲ್ಲಿ ಲಭ್ಯವಿವೆ
 

ಕೊವಿಡ್-19 ರಿಂದ ರಕ್ಷಣೆಗಾಗಿ ಅವಶ್ಯಕವಿರುವ ಪಿಪಿಇ ಕವರ್ ಆಲ್ ಗಳನ್ನು ಪರೀಕ್ಷಿಸಲು ಎಂಟು ಪ್ರಯೋಲಾಯಗಳಿಗೆ ಅನುಮೋದನೆ ನೀಡಲಾಗಿದೆ. ಅವು –

  1. ದಕ್ಷಿಣ ಭಾರತ ಜವಳಿ ಸಂಶೋಧನಾ ಸಂಘ (ಸಿಟ್ರಾ), ಕೊಯಂಬತ್ತೂರ್, ತಮಿಳುನಾಡು
  2. ಡಿ ಆರ್ ಡಿ ಒ – ಐ ಎನ್ ಎಂ ಎ ಎಸ್, ನವದೆಹಲಿ
  3. ಭಾರಿ ವಾಹನ ಉತ್ಪಾದನಾ ಕಾರ್ಖಾನೆ, ಆವಡಿ, ಚೆನ್ನೈ
  4. ಲಘು ಶಸ್ತ್ರಾಸ್ತ್ರ ಕಾರ್ಖಾನೆ, ಕಾನ್ಪೂರ್, ಉತ್ತರ ಪ್ರದೇಶ
  5. ಯುದ್ಧೋಪಕರಣಗಳ ಕಾರ್ಖಾನೆ, ಕಾನ್ಪೂರ್, ಉತ್ತರ ಪ್ರದೇಶ
  6. ಯುದ್ಧೋಪಕರಣಗಳ ಕಾರ್ಖಾನೆ, ಮುರಾದ್ ನಗರ್, ಉತ್ತರ ಪ್ರದೇಶ
  7. ಯುದ್ಧೋಪಕರಣಗಳ ಕಾರ್ಖಾನೆ, ಅಂಬರ್ ನಾಥ್, ಮಹಾರಾಷ್ಟ್ರ
  8. ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಇಶಾಪೊರ್, ಪಶ್ಚಿಮ ಬಂಗಾಳ

ಈ ಎಲ್ಲಾ ಪ್ರಯೋಗಾಲಯಗಳಿಗೆ ಎನ್ ಎ ಬಿ ಎಲ್ ಮಾನ್ಯತೆ ನೀಡಿದೆ

ಮಾರ್ಚ್ 2, 2020 ರಂದು, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ತಾಂತ್ರಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಏಪ್ರಿಲ್ 6, 2020 ರಂದು, ಜವಳಿ ಸಚಿವಾಲಯ ಪಿಪಿಇ ಕವರ್ ಆಲ್ ಗಳ ಉತ್ಪಾದಕರಿಗೆ ಮಂಜೂರಾತಿ ನೀಡಿದ ಪ್ರತಿ ಮೂಲ ಮಾದರಿಗಾಗಿ ವಿಶಿಷ್ಟ ಪ್ರಮಾಣೀಕರಣ ಕೋಡ್ (ಯುಸಿಸಿ) ನೀಡುವ ವಿವರವಾದ ಕಾರ್ಯವಿಧಾನವನ್ನು ಜವಳಿ ಸಚಿವಾಲಯ ಹೊರಡಿಸಿದೆ. ಈ ಕಾರ್ಯವಿಧಾನಗಳನ್ನು 22 ಏಪ್ರಿಲ್ 2020 ರಂದು, ಜವಳಿ ಸಚಿವಾಲಯ ಮತ್ತಷ್ಟು ತರ್ಕಬದ್ಧಗೊಳಿಸಿದೆ.

ವಿಶಿಷ್ಟ ಪ್ರಮಾಣೀಕರಣ ಕೋಡ್ (ಯುಸಿಸಿ) ತಯಾರಕರು ಸಲ್ಲಿಸಿದ ಪ್ರತಿ ಮೂಲಮಾದರಿಯ ಮಾದರಿಯನ್ನು ಸೂಚಿಸುತ್ತದೆ ಮತ್ತು ತಯಾರಿಸಿದ ಪ್ರತಿ ಕವರ್ ಆಲ್ ನ ಮೇಲೆ, ತಯಾರಕರ ಹೆಸರು, ಉತ್ಪಾದನಾ ದಿನಾಂಕ, ಮತ್ತು ಕೊಳ್ಳುವವರ ಹೆಸರನ್ನು ಅಚ್ಚು ಹಾಕುವ ಮೂಲಕ ಸ್ಪಷ್ಟಪಡಿಸಬೇಕಾಗುತ್ತದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧೀನದಲ್ಲಿರುವ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಬಂಧಿತ ಸಂಸ್ಥೆಗಳ ಸಂಗ್ರಹಣಾ ಸಂಸ್ಥೆಯಾದ ಮೆಸ್ಸರ್ಸ್ ಹೆಚ್ ಎಲ್ ಎಲ್ ಲೈಫ್ ಕೇರ್ ನಿಯಮಿತ, ಸಂಗ್ರಹಣೆಗೆ ಸಂಬಂಧಿಸಿದ ವಿಧಾನವನ್ನು ಸಂಪೂರ್ಣ ಜಾರಿಗೆ ತರಲಿದೆ.

ತಯಾರಕರು ತಾವು ಸಲ್ಲಿಸಿದ ಮಾದರಿಯೊಂದಿಗೆ ಒಂದು ಅಫಿಡೆವಿಟ್ ಅನ್ನು ಸಲ್ಲಿಸುವ ಅಗತ್ಯವಿದೆ, ಅದರಲ್ಲಿ ಅವರ ಉತ್ಪಾದನಾ ಘಟಕ, ಜಿ ಎಸ್ ಟಿ ಐ ಎನ್ ಸಂಖ್ಯೆ, ಸಂಸ್ಥೆಯ ನೋಂದಣಿ ಸಂಖ್ಯೆ, ಉದ್ಯೋಗ್ ಆಧಾರ್ ಸಂಖ್ಯೆ ಅಥವಾ ಡಿಐಸಿ ನೋಂದಣಿ ಸಂಖ್ಯೆ ಮತ್ತು ಇತರ ನೋಂದಣಿ ವಿವರಗಳನ್ನು ತಿಳಿಸಬೇಕಾಗುತ್ತದೆ. ಅವರು ಜವಳಿ ತಯಾರಕರು ಮತ್ತು ಮಾರಾಟಗಾರರಲ್ಲ ಎಂದೂ ಅವರು ಘೋಷಿಸಬೇಕಾಗುತ್ತದೆ. ಅಫಿಡೆವಿಟ್ ಯುಸಿಸಿ ಪ್ರಮಾಣ ಪತ್ರದ ಒಂದು ಭಾಗವಾಗಿದೆ.

ಎಲ್ಲಾ ಯುಸಿಸಿ ಪ್ರಮಾಣ ಪತ್ರಗಳ ವಿವರಗಳು ಡಿ ಆರ್ ಡಿ ಒ, ಒ ಎಫ್ ಬಿ ಮತ್ತು ಸಿಟ್ರಾ ಅಧಿಕೃತ ವೆಬ್ ಸೈಟ್ ಗಳಲ್ಲಿ ಸಾರ್ವಜನಿಕ ಪರಿಶೀಲನೆಗಾಗಿ ಲಭ್ಯವಿದೆ.

***



(Release ID: 1622410) Visitor Counter : 145