ಪ್ರವಾಸೋದ್ಯಮ ಸಚಿವಾಲಯ
"ಗೋವಾ-ಕ್ರೂಸಿಬಲ್ ಆಫ್ ಕಲ್ಚರ್" ಶೀರ್ಷಿಕೆಯಲ್ಲಿ 'ದೇಖೋ ಅಪ್ನಾ ದೇಶ್’ ಸರಣಿಯ 16 ನೇ ವೆಬ್‌ನಾರ್ ಆಯೋಜನೆ
Posted On:
08 MAY 2020 3:39PM by PIB Bengaluru
"ಗೋವಾ-ಕ್ರೂಸಿಬಲ್ ಆಫ್ ಕಲ್ಚರ್" ಶೀರ್ಷಿಕೆಯಲ್ಲಿ 'ದೇಖೋ ಅಪ್ನಾ ದೇಶ್’ ಸರಣಿಯ 16 ನೇ ವೆಬ್‌ನಾರ್ ಆಯೋಜನೆ
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ, 'ದೇಖೋ ಅಪ್ನಾ ದೇಶ್” ( ಡೆಖೋ ಅಪ್ನಾ ದೇಶ್) ಸರಣಿಯ 16ನೇ ವೆಬ್ನಾರ್ “ಗೋವಾ-ಕ್ರೂಸಿಬಲ್ ಆಫ್ ಕಲ್ಚರ್” ಶೀರ್ಷಿಕೆಯೊಂದಿಗೆ, ಮೇ7, 2020 ರಂದು ಜರುಗಿತು. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ 'ಗೋವಾ' ನೀಡುವ ತನ್ನ 'ಕಡಿಮೆ ತಿಳಿದಿರುವ' ಪ್ರದೇಶಗಳನ್ನು ಅಥವಾ 'ಅಜ್ಞಾತ' ಪ್ರಯಾಣದ ಪ್ರವಾಸಾನುಭವಗಳನ್ನು ಈ ಮೂಲಕ ಪ್ರಸ್ತುತಪಡಿಸಿತು. ಗೋವಾದಲ್ಲಿ ತಾವು ಕಂಡುಹಿಡಿಯಲು ಕಾಯುತ್ತಿರುವ ವಿವಿಧ ಸ್ಥಳಗಳ ಅಪರಿಚಿತ ಸೌಂದರ್ಯದೊಂದಿಗೆ ಭಾಗವಹಿಸಿದವರು ಮುಖಾಮುಖಿಯಾಗಿ ಸ್ವಾನುಭವ ಮೂಲಕ ಸಂತೋಷಪಟ್ಟರು
ಫೆಸ್ಟಿವಲ್ ಕ್ಯುರೇಟರ್, ಬರಹಗಾರ, ಛಾಯಾಗ್ರಾಹಕ ಶ್ರೀ ವಿವೇಕ್ ಮೆನೆಜೆಸ್ ಅವರು ಪ್ರಸ್ತುತಪಡಿಸಿದ ಈ ವೆಬ್‌ನಾರ್, ಗೋವಾದ ಶ್ರೀಮಂತಿಕೆಯನ್ನು ಪ್ರದರ್ಶಿಸಿತು. ಇದು ಪ್ರಸಿದ್ಧ ಕಡಲತೀರಗಳು ಮತ್ತು ನಗರದ ರಾತ್ರಿ ಜೀವನಗಳನ್ನು ಮೀರಿದ ಶತಮಾನಗಳ ಆಳವಾದ ಸಾಂಸ್ಕೃತಿಕ ವಿನಿಮಯ ಮತ್ತು ಸೃಜನಶೀಲತೆಯ ಮೂಲಕ ಬಹಳ ಚೆನ್ನಾಗಿ ವಿಸ್ತಾರವಾಗಿ ಪ್ರಸ್ತುತಿಗೊಂಡಿದೆ
ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗೋವಾ ಕಲೆ, ಸಾಹಿತ್ಯೋತ್ಸವ, ಸೆರೆಂಡಿಪಿಟಿ ಕಲಾ ಉತ್ಸವ, ಸ್ಥಳೀಯ ಉತ್ಸವಗಳು, ಸಂಗೀತ, ಆಹಾರ, ವಾಸ್ತುಶಿಲ್ಪ ಮತ್ತು ಚಿತ್ರಕಲೆ ಮುಂತಾದವಗಳು ಈ ಪ್ರಸ್ತುತಿಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾಣಿಸಿಕೊಂಡಿವೆ.
ಇಂದಿನ ಈ ಸರಣಿಯ ಪ್ರಯಾಣವು ದೃಶ್ಯವೀಕ್ಷಣೆಗಿಂತ ಹೆಚ್ಚಾಗಿದೆ; ಇದು ಹೊಸ ಅನುಭವಗಳ ಬಗ್ಗೆ ಮತ್ತು ಒಬ್ಬರು ಭೇಟಿ ನೀಡುವ ಪ್ರತಿಯೊಂದು ಸ್ಥಳದ ಜನರು ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವುದು. ಸ್ಥಳೀಯರ ಜೊತೆ ಅವರ ಮನೆಯಲ್ಲಿಯೇ ಇರುವುದು, ಸ್ಥಳೀಯ ಕಲೆ ಕಲಿಯುವುದು, ಊಟ/ಆಹಾರ ಸವಿಯುವುದು, ಅಡುಗೆ ಮಾಡುವುದು, ಸಮುದಾಯದೊಂದಿಗೆ ಹಾಗೂ ಸ್ವಯಂಸೇವಕರು ಬೆರೆಯುವುದು, ಈ ರೀತಿಯ ಕೆಲವು ವಿಶೇಷ ಚಟುವಟಿಕೆಗಳು ಬಹಳಕಾಲ ನಮ್ಮ ನೆನಪಿನಲ್ಲಿ ಉಳಿಯುತ್ತವೆ.
ವೆಬ್ನಾರ್ ಕಾರ್ಯಕ್ರಮವನ್ನು ಸಮಾರೋಪ ಮಾಡುತ್ತಾ ಹೆಚ್ಚುವರಿ ಡೈರೆಕ್ಟರ್ ಜನರಲ್ ಶ್ರೀಮತಿ ರೂಪಿಂದರ್ ಬ್ರಾರ್ ಅವರು " ಸಮುದಾಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡುವ ‘ಸಾಮಾಜಿಕ-ಸಾಂಸ್ಕೃತಿಕ ಸುಸ್ಥಿರತೆ’ ಮತ್ತು ಪ್ರವಾಸೋದ್ಯಮ ಹಾಗೂ ಪ್ರವಾಸಿಗರ ಕಡೆಗೆ ಸಕಾರಾತ್ಮಕತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ “ಸುಸ್ಥಿರ ಹಾಗೂ ಆಹ್ಲಾದಕರ ಪ್ರಯಾಣದ” ಮಹತ್ವಗಳನ್ನು ವಿವರಿಸಿದರು
ಈ ಮಹತ್ವದ ವೆಬ್‌ನಾರ್‌ಗಳ ಎಲ್ಲಾ ಸೆಷನ್‌ಗಳು ಈಗ https://www.youtube.com/channel/UCbzIbBmMvtvH7d6Zo_ZEHDA/ ನಲ್ಲಿ ಲಭ್ಯ. ಮತ್ತು ಪ್ರವಾಸೋದ್ಯಮ ಸಚಿವಾಲಯದ ವೆಬ್‌ಸೈಟ್‌ಗಳಾದ incredibleindia.org ಮತ್ತು tourism.gov.in ಗಳಲ್ಲಿ ಲಭ್ಯವಿದೆ.
ಸರಣಿಯ ಮುಂದಿನ ವೆಬ್‌ನಾರ್ 'ಎಕ್ಸ್‌ಪ್ಲೋರಿಂಗ್ ರಿವರ್ ನಿಲಾ' ಮೇ 9, 2020 ರಂದು ಬೆಳಿಗ್ಗೆ 11.00ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು https://bit.ly/RiverNila ನಲ್ಲಿ ನೋಂದಾಯಿಸಿಕೊಳ್ಳಬಹುದು
***
(Release ID: 1622339)
Visitor Counter : 172