ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸಚಿವರ ತಂಡದಿಂದ ಕೋವಿಡ್ -19 ಪ್ರಸಕ್ತ, ಪರಿಸ್ಥಿತಿ , ಸಿದ್ಧತಾ ಸ್ಥಿತಿ ಮತ್ತು ನಿರ್ವಹಣೆಗಾಗಿ ಕ್ರಮಗಳ ಪರಾಮರ್ಶೆ

Posted On: 05 MAY 2020 5:05PM by PIB Bengaluru

ಸಚಿವರ ತಂಡದಿಂದ ಕೋವಿಡ್ -19 ಪ್ರಸಕ್ತ, ಪರಿಸ್ಥಿತಿ , ಸಿದ್ಧತಾ ಸ್ಥಿತಿ ಮತ್ತು ನಿರ್ವಹಣೆಗಾಗಿ ಕ್ರಮಗಳ ಪರಾಮರ್ಶೆ

ಕೋವಿಡ್ -19 ನಿಯಂತ್ರಣ ವ್ಯೂಹದಲ್ಲಿ ತಂತ್ರಜ್ಞಾನ ಬಳಕೆ ಅವಿಭಾಜ್ಯ ಅಂಗ ಎಂಬುದನ್ನು ಒತ್ತಿ ಹೇಳಿದ ಡಾ. ಹರ್ಷವರ್ಧನ್

 

ಕೋವಿಡ್ -19 ಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಚಿವರ ಗುಂಪಿನ (ಜಿ..ಎಂ.) 14 ನೇ ಸಭೆ ಇಂದು ನಿರ್ಮಾಣ ಭವನದಲ್ಲಿ ನಡೆಯಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆ ವಹಿಸಿದ್ದರು. ನಾಗರಿಕ ವಿಮಾನ ಯಾನ ಸಚಿವರಾದ ಶ್ರೀ ಹರ್ದೀಪ್ ಎಸ್. ಪುರಿ, ವಿದೇಶಾಂಗ ವ್ಯವಹಾರ ಸಚಿವರಾದ ಡಾ. ಎಸ್. ಜೈಶಂಕರ್ , ಗೃಹ ಖಾತೆ ಸಹಾಯಕ ಸಚಿವ ಶ್ರೀ ನಿತ್ಯಾನಂದ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಶ್ರೀ ಅಶ್ವಿನಿ ಕುಮಾರ್ ಚೌಬೆ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಶ್ರೀ ಬಿಪಿನ್ ರಾವತ್, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ ಪಾಲ್ಗೊಂಡಿದ್ದರು.

ಸಚಿವರ ತಂಡಕ್ಕೆ (ಜಿ..ಎಂ.) ಜಾಗತಿಕವಾಗಿ ಮತ್ತು ನಮ್ಮ ದೇಶದೊಳಗೆ ಕೋವಿಡ್ -19 ಪ್ರಕರಣಗಳ ಸ್ಥಿತಿ ಗತಿಯ ಬಗ್ಗೆ ವಿವರಗಳನ್ನು ಒದಗಿಸಲಾಯಿತು. ಕೋವಿಡ್ -19 ನಿರ್ವಹಣೆ, ಪ್ರತಿಬಂಧಕ ಕ್ರಮಗಳ ಕುರಿತು ವಿವರವಾಗಿ ಜಿ..ಎಂ. ಚರ್ಚಿಸಿತು. ಜೊತೆಗೆ ಕೇಂದ್ರ ಮತ್ತು ವಿವಿಧ ರಾಜ್ಯಗಳು ಕೈಗೊಂಡ ಕ್ರಮಗಳನ್ನೂ ಅವಲೋಕಿಸಿತು. ದೇಶದ ಎಲ್ಲಾ ಜಿಲ್ಲೆಗಳನ್ನು ಕೆಂಪು ವಲಯ (130 ಜಿಲ್ಲೆಗಳು) ಕಿತ್ತಳೆ ವಲಯ (284 ಜಿಲ್ಲೆಗಳು) ಮತ್ತು ಹಸಿರು ವಲಯ ( 319 ಜಿಲ್ಲೆಗಳು) ಗಳೆಂದು ಮೂರು ವಲಯಗಳಾಗಿ ವಿಭಜಿಸಿರುವ ಬಗ್ಗೆಯೂ ಜಿ..ಎಂ. ಗೆ ತಿಳಿಸಲಾಯಿತು. ಕಳೆದ 21 ದಿನಗಳಲ್ಲಿ ಯಾವುದೇ ಪ್ರಕರಣ ಕಂಡು ಬಾರದೇ ಇದ್ದರೆ ಜಿಲ್ಲೆಗಳನ್ನು ಹಸಿರು ವಲಯಕ್ಕೆ ಸೇರಿಸಲಾಗುತ್ತದೆ. ಇದನ್ನು ಅನುಸರಿಸುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ ಮತ್ತು ಜಿಲ್ಲೆಗಳ ವರ್ಗೀಕರಣದ ಆಧಾರದಲ್ಲಿ ಕೋವಿಡ್ -19 ವಿರುದ್ದದ ಹೋರಾಟಕ್ಕಾಗಿ ತುರ್ತು ಯೋಜನೆಯನ್ನು ಬಲಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಕೋವಿಡ್ -19 ಕ್ಕಾಗಿಯೇ ಮೀಸಲಾದ ಆಸ್ಪತ್ರೆಗಳ ರಚನೆ, ವೈದ್ಯಕೀಯ ಸಂಸ್ಥೆಗಳನ್ನು ಸಾಕಷ್ಟು ಸಂಖ್ಯೆಯ ಪಿ.ಪಿ..ಗಳು, ವೆಂಟಿಲೇಟರುಗಳು ಮತ್ತು ಇತರ ಅವಶ್ಯಕ ಸಲಕರಣೆಗಳು ಇತ್ಯಾದಿಗಳೊಂದಿಗೆ ಸಜ್ಜುಗೊಳಿಸುವುದು ಸಹಿತ ಇದಕ್ಕಾಗಿ ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸಿ ರಾಜ್ಯಗಳ ಸಾಮರ್ಥ್ಯ ಬಲಪಡಿಸುವಿಕೆ ಸಂಬಂಧಿ ಹಲವಾರು ಇತರ ಕ್ರಮಗಳ ಬಗ್ಗೆಯೂ ವಿವರವಾಗಿ ಚರ್ಚಿಸಲಾಯಿತು.

ಈಗಿರುವ ಸ್ಥಿತಿಯಲ್ಲಿ ಸಾವಿನ ಪ್ರಮಾಣ ಸುಮಾರು 3.2 % ಇದ್ದು ಗುಣಮುಖರಾಗುವ ಪ್ರಮಾಣ 25 % ಗೂ ಅಧಿಕ ಇರುವ ಬಗ್ಗೆ ಜಿ..ಎಂ.ಗೆ ವಿವರಣೆ ನೀಡಲಾಯಿತು. ಇದು ದೇಶದಲ್ಲಿ ಲಾಕ್ ಡೌನ್ ಮತ್ತು ಗುಚ್ಚ ನಿರ್ವಹಣೆ ಹಾಗು ನಿಯಂತ್ರಣ ತಂತ್ರದ ಧನಾತ್ಮಕ ಪರಿಣಾಮ ಎಂಬುದಾಗಿ ಪರಿಗಣಿಸಬಹುದೆಂದು ತಿಳಿಸಲಾಯಿತು. ಸೂಚನೆಗಳು, ಮೂಲ ಕಾರಣಗಳು ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಕಂಟೈನ್ ಮೆಂಟ್ ವಲಯ ನಿರ್ವಹಿಸಬೇಕಾದ ವಿಧಾನದ ಬಗ್ಗೆ ಭಾರತ ಸರಕಾರದ ವಿವಿಧ ಶಿಫಾರಸುಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಜೊತೆ ಈಗಾಗಲೇ ಹಂಚಿಕೊಳ್ಳಲಾಗಿದೆ. ಉತ್ತಮ ಮತ್ತು ಸಮರ್ಪಕ ಕೋವಿಡ್ -19 ನಿಭಾವಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚನೆಗಳನ್ನು ನೀಡಿದೆ.

ನೊವೆಲ್ ಕೊರೊನಾವೈರಸ್ ಸ್ಟ್ರೈನ್ ಗಳ ತಳಿ ಸಂಯೋಜನೆಯನ್ನು ದೇಶದ ವಿವಿಧ ಭಾಗಗಳಲ್ಲಿಯ ರೋಗಿಗಳಿಂದ ಪಡೆದು ಮಾಡುತ್ತಿರುವ ಬಗ್ಗೆ ಸಚಿವರ ತಂಡಕ್ಕೆ ತಿಳಿಸಲಾಯಿತು.

ಅವಶ್ಯಕ ವೈದ್ಯಕೀಯ ಸಲಕರಣೆಗಳಾದ ಪಿ.ಪಿ.. ಗಳು, ಮುಖಗವಸುಗಳು, ವೆಂಟಿಲೇಟರುಗಳು ಇತ್ಯಾದಿಗಳನ್ನು ಖಾತ್ರಿಪಡಿಸುವ ಜವಾಬ್ದಾರಿ ಹೊಂದಿರುವ ಅಧಿಕಾರಯುಕ್ತ ಗುಂಪು -3 ಜಿ..ಎಂ. ಗೆ ಪಿ.ಪಿ..ಗಳು, ಮುಖಗವಸುಗಳು, ವೆಂಟಿಲೇಟರುಗಳು, ಔಷಧಿಗಳು ಮತ್ತು ಇತರ ಅವಶ್ಯ ಸಲಕರಣೆಗಳು ಅಗತ್ಯ ಪ್ರಮಾಣದಲ್ಲಿ ಲಭ್ಯ ಇರುವ ಬಗ್ಗೆ ಮಾಹಿತಿ ನೀಡಿತು. ದೇಶೀಯ ಉತ್ಪಾದಕರ ಉತ್ಪಾದನಾ ಸಾಮರ್ಥ್ಯ ದಿನಕ್ಕೆ ಸುಮಾರು 2.5 ಲಕ್ಷ ಪಿ.ಪಿ.. ಗಳಿಗೆ ತಲುಪಿರುವ ಬಗ್ಗೆ ಮತ್ತು ದಿನಕ್ಕೆ 2 ಲಕ್ಷದಷ್ಟು ಎನ್ 95 ಮಾಸ್ಕ್ ಗಳನ್ನು ಉತ್ಪಾದನೆ ಮಾಡುತ್ತಿರುವ ಬಗ್ಗೆ ಜಿ..ಎಂ.ಗೆ ತಿಳಿಸಲಾಯಿತು ಹಾಗು ಸದ್ಯೋಭವಿಷ್ಯದಲ್ಲಿ ದೇಶದ ಆವಶ್ಯಕತೆಯನ್ನು ಪೂರೈಸಲು ಇದು ಸಾಕಾಗಬಹುದು ಎಂಬುದನ್ನೂ ಮನವರಿಕೆ ಮಾಡಲಾಯಿತು. ಇದರ ಜೊತೆಗೆ ದೇಶೀಯ ತಯಾರಕರಿಂದ ವೆಂಟಿಲೇಟರುಗಳ ಉತ್ಪಾದನೆ ಕೂಡಾ ಆರಂಭವಾಗಿದ್ದು, ಪೂರೈಕೆ ಆದೇಶಗಳನ್ನು ನೀಡಲಾಗಿದೆ. ಪಿ.ಪಿ.. ಗಳು, ಮುಖಗವಸುಗಳು ಮತ್ತು ವೆಂಟಿಲೇಟರುಗಳ ಗುಣಮಟ್ಟ ಕಾಪಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕದ ಸಿಲಿಂಡರುಗಳನ್ನೂ ಖರೀದಿ ಮಾಡಲಾಗಿದೆ ಎಂದೂ ವಿವರಗಳನ್ನು ಒದಗಿಸಲಾಯಿತು. ಪಿ.ಪಿ..ಗಳು, ಮುಖಗವಸುಗಳು, ವೆಂಟಿಲೇಟರುಗಳು ಇತ್ಯಾದಿಗಳ ಗುಣ ಮಟ್ಟ ನಿಯಂತ್ರಣವನ್ನು ಖಾತ್ರಿಪಡಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ಜಿ..ಎಂ. ಪ್ರಮುಖವಾಗಿ ಪ್ರಸ್ತಾಪಿಸಿತು. ನಿಗದಿ ಮಾಡಿದ ಗುಣ ಮಟ್ಟ ಅನುಸರಣೆಯನ್ನು ಖಾತ್ರಿಪಡಿಸುವುದಕ್ಕಾಗಿ ಆಗಾಗ ಬ್ಯಾಚ್ ಮಾದರಿಗಳ ತಪಾಸಣೆ ಮಾಡಬೇಕಾದ ಬಗ್ಗೆಯೂ ಜಿ..ಎಂ. ಒತ್ತಿ ಹೇಳಿತು.

ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ ಅವರು ಜಾಗತಿಕ ಸಾಂಕ್ರಾಮಿಕದ ನಿಯಂತ್ರಣಕ್ಕೆ ಇದುವರೆಗೆ ಕೈಗೊಂಡ ಕ್ರಮಗಳಿಂದ ಆಗಿರುವ ಪರಿಣಾಮಗಳ ಮತ್ತು ವ್ಯೂಹಾತ್ಮಕ ವಿಷಯಗಳ ಬಗ್ಗೆ ಮೇಲುಸ್ತುವಾರಿ ನಡೆಸಿ ನಿಗಾ ಇಡಲಾಗುತ್ತಿದೆ ಎಂದು ಸಚಿವರ ತಂಡಕ್ಕೆ ತಿಳಿಸಿದರು. ಲಾಕ್ ಡೌನ್ ಅವಧಿಯಲ್ಲಿ ವಿವಿಧ ಹಂತಗಳಲ್ಲಿ ಭಾಗೀದಾರರ ಜೊತೆ ಸಮಾಲೋಚನೆ, ವಿವಿಧ ಸಚಿವಾಲಯಗಳು ಮತ್ತು ಅಧಿಕಾರದತ್ತ ಗುಂಪುಗಳ ಜೊತೆ ಚರ್ಚಿಸಿಯೇ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಯಿತು ಎಂದೂ ಅವರು ಸಚಿವರ ತಂಡಕ್ಕೆ ಮನವರಿಕೆ ಮಾಡಿದರು.

ಕೋವಿಡ್ -19 ವಿರುದ್ದ ಹೋರಾಟಕ್ಕಾಗಿ ರೂಪಿಸಲಾದ ತಂತ್ರಜ್ಞಾನ ಪರಿಹಾರಗಳು ಮತ್ತು ದತ್ತಾಂಶ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಯುಕ್ತ ಗುಂಪು -9 ಅಧ್ಯಕ್ಷರಾದ ಮತ್ತು ಕಾರ್ಯದರ್ಶಿ ( ಎಂ...ಟಿ. ವೈ.) ಶ್ರೀ ಅಜಯ್ ಸಾಹುನಿ ಪ್ರದರ್ಶಿಕೆ ಮೂಲಕ ವಿವರಗಳನ್ನು ಒದಗಿಸಿದರು. ಆರೋಗ್ಯ ಸೇತು ಅಪ್ಲಿಕೇಶನ್ನಿಗೆ ಸಂಬಂಧಿಸಿದ ಸಾಧನೆ, ಪರಿಣಾಮ ಮತ್ತು ಪ್ರಯೋಜನವನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. 2020 ಮೇ 4 ರವರೆಗೆ ಸುಮಾರು 9 ಕೋಟಿ ಬಳಕೆದಾರರು ಇದನ್ನು ಬಳಸಿದ್ದರೆಂದು ತಿಳಿಸಲಾಯಿತು. ಅಪ್ಲಿಕೇಶನ್ ಮೂಲಕ ಜನರಿಗೆ ಆವರ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗಿದೆ ಮತ್ತು ಇದು ಕೋವಿಡ್ -19 ಲಕ್ಷಣಗಳೊಂದಿಗೆ ಬಳಲುತ್ತಿದ್ದರೆ ಅವರನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ. ಸ್ಥಿರ ದೂರವಾಣಿ ಅಥವಾ ಹಳೆಯ ಮೊಬೈಲ್ ಸೆಟ್ ಹೊಂದಿರುವ ಜನರನ್ನು ತಲುಪಲು ಸ್ಥಳೀಯ ಭಾಷೆಗಳಲ್ಲಿ ಇಂಟರ್ ಆಕ್ಟಿವ್ ವೊಯಿಸ್ ರೆಸ್ಪಾನ್ಸ್ ವ್ಯವಸ್ಥೆಯನ್ನು (.ವಿ.ಆರ್.ಎಸ್.) ಉತ್ತಮ ಫಲಿತಾಂಶಕ್ಕಾಗಿ ಜಾರಿಗೆ ತರಲಾಗಿದೆ ಎಂದೂ ಜಿ..ಎಂ.ಗೆ ತಿಳಿಸಲಾಯಿತು. ಸಚಿವಾಲಯಗಳು ಮತ್ತು ಅಧಿಕಾರದತ್ತ ಗುಂಪುಗಳು ಮಾಡಿರುವ ಕೆಲಸದ ಬಗ್ಗೆ ಜಿ..ಎಂ. ತೃಪ್ತಿ ವ್ಯಕ್ತಪಡಿಸಿತು

ಕೋವಿಡ್ -19 ನಿಯಂತ್ರಣ ತಂತ್ರದಲ್ಲಿ ತಂತ್ರಜ್ಞಾನ ಬಳಕೆ ಅವಿಭಾಜ್ಯ ಅಂಗವಾಗಿದ್ದು ಮತ್ತು ಅದು ಕೋವಿಡ್ -19 ನಿರ್ವಹಣೆಗೆ ರಾಜ್ಯಗಳಿಗೆ ಹೆಚ್ಚು ಸಮರ್ಪಕ ರೀತಿಯಲ್ಲಿ ಸಹಾಯ ಮಾಡುತ್ತಿದೆ ಎಂದು ಡಾ. ಹರ್ಷವರ್ಧನ್ ಹೇಳಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜಿನಡಿಯಲ್ಲಿ (ಪಿ.ಎಂ.ಜಿ.ಕೆ.ಪಿ.) 2020 ಮೇ 4 ರವರೆಗೆ ಕೆಳಗಿನ ಪ್ರಗತಿ ದಾಖಲಾಗಿರುವ ಬಗ್ಗೆ ಜಿ..ಎಂ. ಗೆ ಮಾಹಿತಿ ನೀಡಲಾಯಿತು.

  • ಪ್ರಧಾನ ಮಂತ್ರಿ ಗರೀಬ ಕಲ್ಯಾಣ ಯೋಜನಾ ಅಡಿಯಲ್ಲಿ 29.38 ಲಕ್ಷ ಎಂ.ಟಿ. ಯಷ್ಟು ಪಡಿತರವನ್ನು 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 58.77 ಕೋಟಿ ಫಲಾನುಭವಿಗಳಿಗೆ ಮೊದಲ ತಿಂಗಳಲ್ಲಿ (ಏಪ್ರಿಲ್) ವಿತರಣೆ ಮಾಡಲಾಗಿದೆ. 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗೆ ಪಡಿತರವಾಗಿ ಎರಡನೆ ತಿಂಗಳಲ್ಲಿ (ಮೇ) 11.63 ಕೋಟಿ ಫಲಾನುಭವಿಗಳಿಗೆ 5.82 ಲಕ್ಷ ಎಂ.ಟಿ ಯಷ್ಟನ್ನು ವಿತರಿಸಲಾಗಿದೆ. ಇದುವರೆಗೆ ಒಟ್ಟಾಗಿ 66.08 ಲಕ್ಷ ಎಂ.ಟಿ.ಯಷ್ಟು ಆಹಾರಧಾನ್ಯಗಳನ್ನು 36 ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳು ಭಾರತೀಯ ಆಹಾರ ನಿಗಮದಿಂದ ಎತ್ತುವಳಿ ಮಾಡಿವೆ.
  • ಉಜ್ವಲ (ಪಿ.ಎಂ.ಯು.ವೈ.) ಫಲಾನುಭವಿಗಳಿಗೆ 6868.74 ಕೋ.ರೂ. ಮೊತ್ತವನ್ನು ವರ್ಗಾಯಿಸಲಾಗಿದೆ. 4.98 ಕೋಟಿ ಪಿ.ಎಂ.ಯು.ವೈ. ಸಿಲಿಂಡರುಗಳನ್ನು ಬುಕ್ ಮಾಡಲಾಗಿದೆ ಮತ್ತು 4.72 ಕೋಟಿ ಸಿಲಿಂಡರುಗಳನ್ನು 2020 ಏಪ್ರಿಲ್ ಮೇ ತಿಂಗಳಲ್ಲಿ ಪೂರೈಕೆ ಮಾಡಲಾಗಿದೆ.
  • 8.18 ಕೋಟಿ ಫಲಾನುಭವಿಗಳಿಗೆ (ರೈತರಿಗೆ ) ತಲಾ 2000 ರೂಪಾಯಿಗಳಂತೆ ನೀಡಲು 20-21ರಲ್ಲಿ ಹಣಕಾಸು ಮಂಜೂರಾತಿ ಒದಗಿಸಲಾಗಿದೆ. ಮತ್ತು 20-21 ರಲ್ಲಿ ರೈತರಿಗೆ . 16,364 ಕೋ.ರೂ.ಗಳನ್ನು ಡಿ.ಬಿ.ಟಿ. ನಗದು ವರ್ಗಾವಣೆ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.
  • ಹಿರಿಯ ನಾಗರಿಕರು, ವಿಧವೆಯರು, ಮತ್ತು ದಿವ್ಯಾಂಗರನ್ನು ಬೆಂಬಲಿಸಲು ಫಲಾನುಭವಿಯೊಬ್ಬರಿಗೆ ತಲಾ 500 ರೂ,.ಗಳಂತೆ ಎಲ್ಲಾ 2.812 ಕೋಟಿ ಅರ್ಹ ಫಲಾನುಭವಿಗಳ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗಿದ್ದು, ಒಟ್ಟು ಮೊತ್ತ 1405 ಕೋ.ರೂ.ಗಳಷ್ಟಾಗಿದೆ. ಮುಂದಿನ ಕಂತಿನ 500 ರೂಪಾಯಿ ಎರಡನೇ ಪಾಕ್ಷಿಕದಲ್ಲಿ ಜಮೆಯಾಗಲಿದೆ.
  • ಇಂದಿನವರೆಗೆ . 20.05 ಕೋಟಿ ಮಹಿಳಾ ಪ್ರಧಾನ ಮಂತ್ರಿ ಜನ ಧನ ಯೋಜನೆಯ ಖಾತೆಗಳಿಗೆ ತಲಾ 500 ರೂ.ಗಳಂತೆ ಪಿ.ಎಂ.ಜಿ.ಕೆ.ಪಿ. ಅಡಿಯಲ್ಲಿ ನಗದು ವರ್ಗಾವಣೆ ಮಾಡಲಾಗುತ್ತಿದೆ.
  • 9.27 ಲಕ್ಷ .ಪಿ.ಎಫ್.. ಸದಸ್ಯರು ಒಟ್ಟು 2895 ಕೋ.ರೂ. ಮೊತ್ತದ ಆನ್ ಲೈನ್ ಹಿಂಪಡೆಯುವಿಕೆ ಸವಲತ್ತು ಪಡೆದುಕೊಂಡಿದ್ದಾರೆ.

ಶ್ರೀಮತಿ ಪ್ರೀತಿ ಸೂದನ್, ಕಾರ್ಯದರ್ಶಿ (ಎಚ್.ಎಫ್.ಡಬ್ಲ್ಯು.) , ಶ್ರೀ ರಾಜೇಶ್ ಭೂಷಣ .ಎಸ್.ಡಿ./ ಕಾರ್ಯದರ್ಶಿ (ಎಚ್.ಎಫ್,ಡಬ್ಲ್ಯು. ) , ಶ್ರೀ ವರ್ಧನ ಶ್ರಿಂಗಾಲ, ಕಾರ್ಯದರ್ಶಿ (ವಿದೇಶ ವ್ಯವಹಾರ), ಶ್ರೀ ರವಿ ಕಪೂರ್ , ಕಾರ್ಯದರ್ಶಿ (ಜವಳಿ) ಶ್ರೀ ಪ್ರದೀಪ ಸಿಂಗ್ ಖರೋಲಾ , ಕಾರ್ಯದರ್ಶಿ, ನಾಗರಿಕ ವಾಯುಯಾನ ಶ್ರೀ ಪಿ.ಡಿ. ವಘೇಲಾ, ಕಾರ್ಯದರ್ಶಿ (ಔಷಧಿ ತಯಾರಿಕೆ ) . ಶ್ರೀ ಅನೂಪ ವಾಧ್ವಾನ್ , ಕಾರ್ಯದರ್ಶಿ (ವಾಣಿಜ್ಯ ) ಶ್ರೀ ಅಂಶು ಪ್ರಕಾಶ್, ಕಾರ್ಯದರ್ಶಿ (ದೂರಸಂಪರ್ಕ) ಪ್ರೊ. ಬಲರಾಂ ಭಾರ್ಗವ, ಡಿ.ಜಿ.-.ಸಿ.ಎಂ.ಆರ್., ಶ್ರೀ ಅನಿಲ್ ಮಲಿಕ್ , ಹೆಚ್ಚುವರಿ ಕಾರ್ಯದರ್ಶಿ (ಎಂ.ಎಚ್..) ಡಾ. ನೀತಾ ವರ್ಮಾ, ಡಿ.ಜಿ. ಎನ್..ಸಿ. , ಲೆಫ್ಟಿನೆಂಟ್ ಜನರಲ್ ಅನೂಪ ಬ್ಯಾನರ್ಜಿ, ಡಿ.ಜಿ.-.ಎಫ್.ಎಂ.ಎಸ್. , ಡಾ. ರಾಜೀವ ಗಾರ್ಗ್ ಡಿ.ಜಿ.ಎಚ್.ಎಸ್., ಶ್ರೀ ಲಾವ್ ಅಗರ್ವಾಲ್ , ಜೆ.ಎಸ್. ( ಎಂ..ಎಚ್.ಎಫ್.ಡಬ್ಲ್ಯು.) ಅವರೊಂದಿಗೆ ಫಾರ್ಮಾ ಸಚಿವಾಲಯದ , . ಮತ್ತು ಬಿ. , ಜವಳಿ, ಎನ್..ಸಿ., ಡಿ.ಜಿ.ಸಿ.. ಗಳ ಅಧಿಕಾರಿಗಳು ಹಾಜರಿದ್ದರು.

ಕೋವಿಡ್ -19 ಸಂಬಂಧಿತ ತಾಂತ್ರಿಕ ವಿಷಯಗಳು, ಮಾರ್ಗದರ್ಶಿಗಳು,ಮತ್ತು ಸಲಹಾ ಸೂಚಿಗಳು ಸಂಬಂದಿಸಿ ಸಮಗ್ರ ಅಧಿಕೃತ ಮತ್ತು ಸಕಾಲಿಕ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ಕೊಡಿ: https://www.mohfw.gov.in/.

ಕೋವಿಡ್ -19 ಸಂಬಂಧಿತ ತಾಂತ್ರಿಕ ವಿಷಯಗಳನ್ನು technicalquery.covid19[at]gov[dot]in ವಿಳಾಸಕ್ಕೆ -ಮೈಲ್ ಮಾಡಬಹುದು, ಇತರ ವಿವರಗಳನ್ನು ncov2019[at]gov[dot]in ವಿಳಾಸದಲ್ಲಿ ಮತ್ತು @CovidIndiaSeva ರಲ್ಲಿ ಟ್ವೀಟ್ ಮಾಡಬಹುದು.

ಕೋವಿಡ್ -19 ಸಂಬಂಧಿಸಿ ಪ್ರಶ್ನೆಗಳಿದ್ದರೆ ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ :- 91-11-23978046 ಅಥವಾ 1075 (ಉಚಿತ) ಗಳನ್ನು ಸಂಪರ್ಕಿಸಬಹುದು. ಕೋವಿಡ್ -19 ಕ್ಕೆ ಸಂಬಂಧಿಸಿದಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆಗಳು https://www.mohfw.gov.in/pdf/coronvavirushelplinenumber.pdf . ರಲ್ಲಿ ಲಭ್ಯವಿವೆ.

***



(Release ID: 1622327) Visitor Counter : 189