ರಕ್ಷಣಾ ಸಚಿವಾಲಯ

ಐಎನ್ಎಂಎಎಸ್ (ಪರಮಾಣು ಔಷಧ ಮತ್ತು ಪೂರಕ ವಿಜ್ಞಾನಗಳ ಸಂಸ್ಥೆ)ಯ ಪ್ರಮಾಣಪತ್ರ ಪಡೆದ ಭಾರತೀಯ ನೌಕಾಪಡೆಯ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ)

Posted On: 07 MAY 2020 7:39PM by PIB Bengaluru

ಐಎನ್ಎಂಎಎಸ್ (ಪರಮಾಣು ಔಷಧ ಮತ್ತು ಪೂರಕ ವಿಜ್ಞಾನಗಳ ಸಂಸ್ಥೆ) ಪ್ರಮಾಣಪತ್ರ ಪಡೆದ ಭಾರತೀಯ ನೌಕಾಪಡೆಯ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ)

 

ಭಾರತೀಯ ನೌಕಾಪಡೆ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ವನ್ನು ಪಿಪಿಇ ಪರೀಕ್ಷಿಸಿ ಪ್ರಮಾಣೀಕರಣ ಮಾಡುವ ಜವಾಬ್ದಾರಿ ಹೊತ್ತಿರವ ಡಿಆರ್.ಡಿ.. ಸಂಸ್ಥೆಯಾದ ದೆಹಲಿಯ .ಎನ್.ಎಂ..ಎಸ್. (ಪರಮಾಣು ಔಷಧ ಮತ್ತು ಪೂರಕ ವಿಜ್ಞಾನ ಸಂಸ್ಥೆ) ಪರೀಕ್ಷಿಸಿದ್ದು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ, ಕೋವಿಡ್ ಪರಿಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿ ಬಳಸಲು ಪ್ರಮಾಣೀಕಿರಿಸಿದೆ.

ಪ್ರಸಕ್ತ ಕೋವಿಡ್ -19 ಸಾಂಕ್ರಾಮಿಕದ ವೇಳೆ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ)ಗಳ ಕೊರತೆ ಆರೋಗ್ಯ ಕಾರ್ಯಕರ್ತರಿಗೆ ಗಂಭೀರ ಕಾಳಜಿಯ ವಿಷಯವಾಗಿದೆ, ಏಕೆಂದರೆ ಇದು ಅವರ ಯೋಗಕ್ಷೇಮದ ಜೊತೆಗೆ ಸುರಕ್ಷತೆ ಮತ್ತು ಆತ್ಮಸ್ಥೈರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂಥದ್ದಾಗಿದೆ.

ಪಿಪಿಇ ಪರೀಕ್ಷೆಯಲ್ಲಿ ಕಟ್ಟುನಿಟ್ಟಾದ ಮಾನದಂಡಗಳನ್ನು ಪೂರೈಸುವ ಅಗತ್ಯವಿದೆ ಮತ್ತು ಅದರ ಮಾನದಂಡಗಳನ್ನು ಐಸಿಎಂಆರ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರೂಪಿಸುತ್ತದೆ.

ಭಾರತೀಯ ನೌಕಾಪಡೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಮಹತ್ವದ ಸಂಪನ್ಮೂಲ ಲಭ್ಯತೆಯ ಸವಾಲಿಗೆ ಅಣಿಯಾಗಿ ನಿಂತಿದೆ. ನಾವಿನ್ಯತೆ ಕೋಶ, ನೌಕಾ ವೈದ್ಯಕೀಯ ಸಂಸ್ಥೆ, ಮುಂಬೈ ಮತ್ತು ನೌಕಾ ಡಾಕ್ ಯಾರ್ಡ್ ಮುಂಬೈ ಪಿಪಿಇ ತಯಾರಿಕೆಯ ಸಹಯೋಗ ವಹಿಸಿವೆ. ಪಿಪಿಇಯನ್ನು ಡಿಆರ್.ಡಿ.. ಸಂಸ್ಥೆಯ ಪಿಪಿಇ ಪರೀಕ್ಷೆ ಮತ್ತು ಪ್ರಮಾಣೀಕರಣ ಹೊಣೆ ಹೊತ್ತಿರುವ ದೆಹಲಿಯ ಐಎನ್ಎಂಎಎಸ್ (ಪರಮಾಣು ಔಷಧ ಮತ್ತು ಪೂರಕ ವಿಜ್ಞಾನ ಸಂಸ್ಥೆ) ಪರೀಕ್ಷಿಸಿದೆ.

ಪಿಪಿಇ 6/6 ಸಂಶ್ಲೇಷಿತ ರಕ್ತ ನುಗ್ಗುವ ಪ್ರತಿರೋಧ ಒತ್ತಡದ ಪರೀಕ್ಷೆಯಲ್ಲಿ ಸಾಗಿ ಬಂದಿದೆ. (ಐಎಸ್ಒ 16603 ಮಾನದಂಡದ ಪ್ರಕಾರ ಭಾರತ ಸರ್ಕಾರದ ಕನಿಷ್ಠ 3/6 ಮತ್ತು ಅದಕ್ಕಿಂತ ಹೆಚ್ಚಿನ ಮಟ್ಟವನ್ನು ಕಡ್ಡಾಯಗೊಳಿಸುತ್ತದೆ) ಮತ್ತು ಆದ್ದರಿಂದ ಸಾಮೂಹಿಕ ಉತ್ಪಾದನೆ ಮತ್ತು ಕೋವಿಡ್ ಚಿಕಿತ್ಸೆಯ ಸಂದರ್ಭಗಳಲ್ಲಿ ಬಳಸಬಹುದು ಎಂದು ಪ್ರಮಾಣೀಕರಿಸಲಾಗಿದೆ.

ಪಿಪಿಇಯ ಅತ್ಯುತ್ತಮ ಲಕ್ಷಣಗಳು ಅದರ ಸರಳತೆ, ನಾವಿನ್ಯ ಮತ್ತು ಕಡಿಮೆ ದರ ವಿನ್ಯಾಸ; ಆದ್ದರಿಂದ ಇದನ್ನು ಮೂಲ ನಿಲುವಂಗಿ ಉತ್ಪಾದನಾ ಸೌಲಭ್ಯಗಳಿಂದ ಮಾಡಬಹುದು. ಬಳಸಿದ ಬಟ್ಟೆಯ ನವೀನ ಆಯ್ಕೆಗೆ ಪಿಪಿಇ ಗಮನಾರ್ಹವಾಗಿದೆ, ಇದು ಪಿಪಿಇಗೆ ಅದರ 'ಉಸಿರಾಡುವಿಕೆ' ಮತ್ತು ರೋಗಾಣು ಪ್ರತಿರೋಧವನ್ನು ನೀಡುತ್ತದೆ ಮತ್ತು ಇದು ಬಳಕೆದಾರರಿಗೆ ಆರಾಮದಾಯಕ ಮತ್ತು ಸುರಕ್ಷಿತವಾಗಿದೆ.

ಪಿಪಿಇಯ ದರ ವಾಣಿಜ್ಯಾತ್ಮಕವಾಗಿ ದೊರಕುವುದಿಕ್ಕಿಂತ ಗಣನೀಯವಾಗಿ ಕಡಿಮೆ ಇದೆ.

***(Release ID: 1622046) Visitor Counter : 196