ಆಯುಷ್

ಕೋವಿಡ್-19 ಕ್ಕಾಗಿ ಆಯುಷ್ ಸಹಕಾರದೊಂದಿಗೆ ಆಂತರಿಕ ಶಿಸ್ತಿನ ಅಧ್ಯಯನಗಳ ಔಪಚಾರಿಕ ಆರಂಭ  

Posted On: 06 MAY 2020 6:22PM by PIB Bengaluru

ಕೋವಿಡ್-19 ಕ್ಕಾಗಿ ಆಯುಷ್ ಸಹಕಾರದೊಂದಿಗೆ ಆಂತರಿಕ ಶಿಸ್ತಿನ ಅಧ್ಯಯನಗಳ ಔಪಚಾರಿಕ ಆರಂಭ  

 

ಕೋವಿಡ್ – 19 ಬಿಕ್ಕಟ್ಟಿಗೆ ಸಂಬಂಧಿಸಿದಂತೆ 3 ಆಯುಷ್ ಆಧಾರಿತ ಅಧ್ಯಯನಗಳನ್ನು ಆಯುಷ್ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್  ಮತ್ತು ಆರೋಗ್ಯ ಸಚಿವರಾದ ಶ್ರೀ ಹರ್ಷ್ ವರ್ಧನ್ ಜಂಟಿಯಾಗಿ ನಾಳೆ ನವದೆಹಲಿಯಲ್ಲಿ ಆರಂಭಿಸಲಿದ್ದಾರೆ.

ಆಯುಷ್ ವ್ಯವಸ್ಥೆಗಳ ಚಿಕಿತ್ಸಕ ಅಧ್ಯಯನಗಳ ಮೂಲಕ (ಪ್ರೊಫಿಲ್ಯಾಕ್ಟಿಕ್ ಆಂಡ್ ಆಡ್ ಆನ್ ಇಂಟರ್ವೆನ್ಶನ್ಸ್) ಮೂಲಕ ದೇಶದಲ್ಲಿನ ಕೋವಿಡ್ – 19 ಸಾಂಕ್ರಾಮಿಕ ಬಿಕ್ಕಟ್ಟನ್ನು ಪರಿಹರಿಸಲು ಆಯುಷ್ ಸಚಿವಾಲಯವು ಉಪಕ್ರಮಗಳನ್ನು ಕೈಗೊಂಡಿದೆ. ಹೆಚ್ಚಿನ ಜನಸಂಖ್ಯೆ ಇರುವ ಪ್ರದೇಶಗಳಲ್ಲಿನ ಅಪಾಯದ ಕುರಿತು ರೋಗ ನಿರೋಧಕ  ಆಯುಷ್ ಆಧಾರಿತ ರೋಗನಿರೋಧಕ ಬಳಕೆಗಳ ಕುರಿತು ಸಹ ಸಚಿವಾಲಯವು ಅಧ್ಯಯನ ನಡೆಸುತ್ತಿದೆ ಮತ್ತು ಕೋವಿಡ್ – 19 ತಡೆಗಟ್ಟುವ ಆಯುಷ್ ಕ್ರಮಗಳು ಮತ್ತು ಪರಿಣಾಮಗಳ ಕುರಿತು ಸಚಿವಾಲಯವು ಅಧ್ಯಯನದಲ್ಲಿ ತೊಡಗಿದೆ.

ಈ ಉಪಕ್ರಮದ ಕಾರ್ಯತಂತ್ರ ರೂಪಿಸಲು ಮತ್ತು ಅಭಿವೃದ್ಧಿ ಪಡಿಸಲು ಆಯುಷ್ ಸಚಿವಾಲಯವು ವಿಶ್ವವಿದ್ಯಾಲಯದ ಅನುದಾನ ಆಯೋಗ ಯುಜಿಸಿಯ ಉಪಾಧ್ಯಕ್ಷರಾದ ಡಾ ಭೂಷಣ್ ಪಟವರ್ಧನ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ತಂಡವನ್ನು ಆಂತರಿಕ ಶಿಸ್ತಿನ ಆಯುಷ್ ಸಂಶೋಧನೆ ಮತ್ತು ಅಭಿವೃದ್ಧಿಯ ಟಾಸ್ಕ್ ಫೋರ್ಸ್ ಸ್ಥಾಪಿಸಿದೆ.

07 ಮೇ , 2020 ರಂದು ಈ ಕೆಳಕಂಡ ಅಧ್ಯಯನಗಳ ವಿದ್ಯುಕ್ತ ಆರಂಭವಾಗುವುದು :

  1. ರೋಗ ನಿರೋಧಕದಂತೆ ಮತ್ತು ಕೋವಿಡ್ 19 ರ ಪ್ರಮಾಣೀಕೃತ ಆರೈಕೆಗೆ ಆಯುರ್ವೇದ ಬಳಕೆಯ ಮೂಲಕ ಚಿಕಿತ್ಸಕ ಸಂಶೋಧನೆ ಅಧ್ಯಯನ  : ಐಸಿಎಂಆರ್ ನ ತಾಂತ್ರಿಕ ಬೆಂಬಲದೊಂದಿಗೆ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನೆ ಮಂಡಳಿ (ಸಿ ಎಸ್ ಐ ಆರ್) ಮುಖಾಂತರ ಆಯುಷ್ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂ ಒ ಹೆಚ್ ಎಫ್ ಡಬ್ಲ್ಯೂ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳು ಒಗ್ಗೂಡಿ ಚಿಕಿತ್ಸಕ ಅಧ್ಯಯನ ಉಪಕ್ರಮವನ್ನು ಕೈಗೊಂಡಿವೆ.

ರೋಗ ನಿರೋಧಕತೆ ಅಧ್ಯಯನಕ್ಕಾಗಿ ಆಂತರಿಕ ಶಿಸ್ತಿನ ಆಯುಷ್ ಸಂಶೋಧನೆ ಮತ್ತು ಅಭಿವೃದ್ಧಿಯ ಟಾಸ್ಕ್ ಫೋರ್ಸ್ ಚಿಕಿತ್ಸಕ ಸಂಶೋಧನಾ ಶಿಷ್ಟಾಚಾರಗಳನ್ನು ರೂಪಿಸಿದೆ ಮತ್ತು ಕೋವಿಡ್ – 19 ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚುವರಿ ನಾಲ್ಕು ವಿಭಿನ್ನ ಬಳಕೆಗಳ ಅಂದರೆ ಅಶ್ವಗಂಧ, ಯಶ್ಷಿಮಧು, ಗುಡುಚಿ ಮತ್ತು    ಪಿಪ್ಪಲಿ ಹಾಗೂ ಗಿಡಮೂಲಿಕೆಗಳ ಮಿಶ್ರಣ (ಆಯುಷ್ 64) ಅಧ್ಯಯನಕ್ಕಾಗಿ ದೇಶಾದ್ಯಂತದ ವಿಬಿನ್ನ ಸಂಸ್ಥೆಗಳ ಪ್ರಖ್ಯಾತ ತಜ್ಞರ ಸಂಪೂರ್ಣ ವಿಮರ್ಶೆ ಮತ್ತು ಪ್ರಕ್ರಿಯೆಯ ಮೂಲಕ ಕೈಗೊಳ್ಳಲಾಗುತ್ತಿದೆ.

    1. ಕೋವಿಡ್ – 19 ಬಿಕ್ಕಟ್ಟಿನ ಸಮಯದಲ್ಲಿ ಹೆಚ್ಚಿನ ಅಪಾಯ ಎದುರಿಸುತ್ತಿರುವ ವ್ಯಕ್ತಿಗಳಲ್ಲಿ ಸಾರ್ಸ್ ಕೋವ್ – 2 ವಿರುದ್ಧ ರೋಗ ನಿರೋಧಕತೆಗೆ ಅಶ್ವಗಂಧ : ಆರೋಗ್ಯ ರಕ್ಷಣೆ ಒದಗಿಸುವವರಲ್ಲಿ ಹೈಡ್ರಾಕ್ಸಿಕ್ಲೊರೊಕ್ವಿನ್ ನೊಂದಿಗೆ ಹೋಲಿಕೆ ಮತ್ತು
    2.  ಆರಂಭಿಕ ಮತ್ತು ಮಧ್ಯ ಹಂತದ ಕೋವಿಡ್ – 19 ಚಿಕಿತ್ಸೆಗಾಗಿ ‘ಆರೋಗ್ಯ ಗುಣಮಟ್ಟ ಕಾಯ್ದುಕೊಳ್ಳಲು ಆಯುರ್ವೇದ ಸೂತ್ರೀಕರಣ ಬೀರುವ ಪರಿಣಾಮ : ಒಂದು ಯಾದೃಚ್ಛಿಕ, ಮುಕ್ತ ಲೇಬಲ್, ಸಾಮಾನಾಂತರ ದಕ್ಷತೆ, ಸಕ್ರೀಯ ನಿಯಂತ್ರಣ, ಬಹುಕೇಂದ್ರೀಯ ಪರಿಶೋಧನಾತ್ಮಕ ಔಷದಧಿ ಪ್ರಯೋಗ     
  1. ಆಯುಷ್ ಆಧಾರಿತ ರೋಗ ನಿರೋಧಕ ಬಳಕೆಗಳ ಪ್ರಭಾವದ ಕುರಿತು  ಜನಸಂಖ್ಯೆ ಆಧಾರಿತ ಅಧ್ಯಯನ : ಹೆಚ್ಚಿನ  ಜನಸಂಖ್ಯೆ ಇರುವ ಅಪಾಯಕಾರಿ  ಕೋವಿಡ್ – 19 ಸೋಂಕನ್ನು ತಡೆಗಟ್ಟಲು ಆಯುರ್ವೇದ ಬಳಕೆಯ ಪ್ರಭಾವವನ್ನು ಅಧ್ಯಯನ ಮಾಡಲು ಜನಸಂಖ್ಯೆ ಆಧಾರಿತ ಅಧ್ಯಯನವನ್ನು ಆಯುಷ್ ಸಚಿವಾಲಯ ಆರಂಭಿಸುತ್ತಿದೆ. ಆಯುಷ್ ಬಳಕೆಯಿಂದ ಕೋವಿಡ್ – 19 ನ್ನು ತಡೆಗಟ್ಟಬಹುದಾದ ಸಾಮರ್ಥ್ಯದ ಮೌಲ್ಯಮಾಪನ ಮತ್ತು ಹೆಚ್ಚು ಅಪಾಯಕಾರಿಯಾದ ಜನನಿಬಿಡ ಪ್ರದೇಶಗಳಲ್ಲಿ ಜೀವನ ಗುಣಮಟ್ಟ ಸುಧಾರಣೆಯನ್ನು ನಿರ್ಣಯಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ. ಆಯುಷ್ ಸಚಿವಾಲಯ ಮತ್ತು ರಾಷ್ಟ್ರೀಯ ಸಂಸ್ಥೆಗಳಡಿಯಲ್ಲಿ ನಾಲ್ಕು ಸಂಶೋಧನಾ ಮಂಡಳಿಗಳು ದೇಶಾದ್ಯಂತದ 25 ರಾಜ್ಯಗಳಲ್ಲಿ ಮತ್ತು ಸುಮಾರು 5 ಲಕ್ಷ ಜನಸಂಖ್ಯೆ ಹೊಂದಿರುವ ಹಲವು ರಾಜ್ಯ ಸರ್ಕಾರಗಳ ಮೂಲಕ  ಈ ಅಧ್ಯಯನವನ್ನು ನಡೆಸಲಾಗುವುದು.

ವೈಜ್ಞಾನಿಕ ಸಾಕ್ಷ್ಯಗಳ ಮೂಲಕ ಕೋವಿಡ್ – 19 ರಂತಹ ಸಾಂಕ್ರಾಮಿಕ ರೋಗ ಹರಡುವಿಕೆ ಸಂದರ್ಭದಲ್ಲಿ ಆಯುಷ್ ಬಳಕೆಯಿಂದ ಸಮರ್ಥವಂತವಾಗಿ ಇದನ್ನು ಹೇಗೆ ತಡೆಗಟ್ಟಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ಅಧ್ಯಯನ ಒಂದು ಹೊಸ ಮಾರ್ಗದ ಉದಯಕ್ಕೆ ನಾಂದಿ ಹಾಡಲಿದೆ.

  1. ಕೋವಿಡ್ – 19 ತಡೆಗಟ್ಟುವಲ್ಲಿ ಆಯುಷ್ ಸಲಹೆಗಳ ಪಾತ್ರ ಮತ್ತು ಅದರ ಬಳಕೆಯ ಪ್ರಭಾವದ ಮೌಲ್ಯಮಾಪನಕ್ಕಾಗಿ ಆಯುಷ್ ಸಂಜೀವಿನಿ ಅಪ್ಲಿಕೇಶನ್ ಆಧಾರಿತ ಅಧ್ಯಯನ : 5 ದಶಲಕ್ಷ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬೃಹತ್ ಜನಸಂಖ್ಯಾ ದತ್ತಾಂಶನ್ನು ಉತ್ಪಾದಿಸಲು ಆಯುಷ್ ಸಚಿವಾಲಯ ಆಯುಷ್ ಸಂಜೀವಿನಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಜನಸಂಖ್ಯೆಯಲ್ಲಿ ಆಯುಷ್ ಬಳಕೆಯ ಸಾಮರ್ಥ್ಯ ಮತ್ತು ಕ್ರಮಗಳ ಸ್ವೀಕಾರ ಹಾಗೂ ಬಳಕೆಯ ದತ್ತಾಂಶ ಮತ್ತು ಕೋವಿಡ್ – 19 ತಡೆಗಟ್ಟುವಲ್ಲಿ ಅದರ ಪ್ರಭಾವದ ಬಗ್ಗೆ ದತ್ತಾಂಶ ಉತ್ಪಾದಿಸುವುದು ಇದರ ಪ್ರಮುಖ ನಿರೀಕ್ಷಿತ ಫಲಿತಾಂಶಲ್ಲಿ ಸೇರಿದೆ.     

***


(Release ID: 1621730) Visitor Counter : 234