ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಫೀಚರ್ ಫೋನ್ ಮತ್ತು ಸ್ಥಿರ ದೂರವಾಣಿಗಳನ್ನು ಹೊಂದಿರುವ ನಾಗರಿಕರ ಆವಶ್ಯಕತೆಗೆ ಸ್ಪಂದಿಸಲು ಆರೋಗ್ಯ ಸೇತು ಐ.ವಿ.ಆರ್.ಎಸ್. ಸೇವೆ ಜಾರಿ

Posted On: 06 MAY 2020 4:13PM by PIB Bengaluru

ಫೀಚರ್ ಫೋನ್ ಮತ್ತು ಸ್ಥಿರ ದೂರವಾಣಿಗಳನ್ನು ಹೊಂದಿರುವ ನಾಗರಿಕರ ಆವಶ್ಯಕತೆಗೆ ಸ್ಪಂದಿಸಲು ಆರೋಗ್ಯ ಸೇತು .ವಿ.ಆರ್.ಎಸ್. ಸೇವೆ ಜಾರಿ

 

ಕೋವಿಡ್-19 ವಿರುದ್ದದ ಹೋರಾಟದಲ್ಲಿ ಭಾರತ ಸರಕಾರವು ಹಲವಾರು ಪ್ರತಿಬಂಧಕ ಕ್ರಮಗಳನ್ನು ರೂಪಿಸಿದ್ದು, ಅವುಗಳನ್ನು ದೇಶಾದ್ಯಂತ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಹಕಾರದೊಂದಿಗೆ ಜಾರಿಗೆ ತರಲಾಗುತ್ತಿದೆ. ಪ್ರಮುಖ ಮುಂಜಾಗರೂಕತಾ ಕ್ರಮವಾಗಿ ಮೊದಲು ಆರೋಗ್ಯ ಸೇತು ಅಪ್ಲಿಕೇಶನನ್ನು ಆರಂಭಿಸಿದೆ.

ಆರೋಗ್ಯ ಸೇತು ಮೊಬೈಲ್ ಆಪ್ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಭಿವೃದ್ದಿಪಡಿಸಿದ ತಂತ್ರಜ್ಞಾನವಾಗಿದೆ. ಇದು ಜನತೆಗೆ ಅವರಿಗೆ ಕೊರೊನಾ ವೈರಸ್ ಸೋಂಕು ತಗಲುವ ಸಾಧ್ಯತೆಯ/ ಅಪಾಯದ ಬಗ್ಗೆ ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ಇತರರೊಂದಿಗೆ ಅವರ ಸಂವಾದ ಆಧರಿಸಿ , ಆಧುನಿಕ ಬ್ಲ್ಯು ಟೂತ್ ತಂತ್ರಜ್ಞಾನ ಬಳಸಿ , ಕೃತಕ ಬುದ್ದಿಮತ್ತೆ ಬಳಸಿ , ಲೆಕ್ಕಾಚಾರಗಳನ್ನು ಗಣಿಸಿ ಅದು ಮೌಲ್ಯಮಾಪನ ಮಾಡುತ್ತದೆ. ಎಲ್ಲಾ ನಾಗರಿಕರಿಗೂ ಆಪ್ ನ್ನು ಅವರ ಮೊಬೈಲ್ ಗಳಿಗೆ ಡೌನ್ ಲೋಡ್ ಮಾಡಲು ಮನವಿ ಮಾಡಲಾಗಿದೆ. ಬಳಕೆದಾರರಿಗೆ ಅವರು ಯಾರಾದರೊಬ್ಬ ಪಾಸಿಟಿವ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯ ಜೊತೆ ಹೋದರೆ ಅಥವಾ ಹಾದಿಯಲ್ಲಿ ಅಡ್ಡ ಬಂದರೆ ಆಗ ಆಪ್ ಬಳಕೆದಾರರಿಗೆ ಮಾಹಿತಿ ಒದಗಿಸುತ್ತದೆ.

ಆರೋಗ್ಯ ಸೇತು ಆಪ್ ಅಳವಡಿಸಿಕೊಂಡ ಬಳಕೆದಾರನಿಗೆ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವಂತೆ ಕೋರಲಾಗುತ್ತದೆ. ಒಂದು ವೇಳೆ ಯಾವುದಾದರೂ ಉತ್ತರಗಳು ಕೋವಿಡ್ -19 ಸೋಂಕಿನ ಲಕ್ಷಣಗಳನ್ನು ಒಳಗೊಂಡಿದ್ದರೆ ,ಆಗ ಮಾಹಿತಿಯನ್ನು ಸರಕಾರದ ಸರ್ವರಿಗೆ ಕಳುಹಿಸಲಾಗುತ್ತದೆ. ದತ್ತಾಂಶಗಳು ಸರಕಾರಕ್ಕೆ ಸಕಾಲದಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಅಗತ್ಯವಿದ್ದರೆ ಐಸೋಲೇಶನ್ ಪ್ರಕ್ರಿಯೆಗಳನ್ನು ಆರಂಭಿಸಲು ಸಹಾಯ ಮಾಡುತ್ತವೆ ಮತ್ತು ಯಾವುದೇ ಪಾಸಿಟಿವ್ ವ್ಯಕ್ತಿಯ ಹತ್ತಿರ ಬಂದರೆ ಕೂಡಲೇ ಅದು ಎಚ್ಚರಿಕೆ ಸಂದೇಶ ನೀಡುತ್ತದೆ. ಆಪ್ ಗೂಗಲ್ ಪ್ಲೆ (ಆಂಡ್ರಾಯಿಡ್ ಫೋನ್ ಗಳಿಗಾದರೆ ) ಮತ್ತು ..ಎಸ್. ಆಪ್ ಸ್ಟೋರ್ ಗಳಲ್ಲಿ ( ಫೋನುಗಳಿಗಾದರೆ ) ಲಭ್ಯವಿದೆ. ಅದು 11 ಭಾಷೆಗಳಲ್ಲಿ , 10 ಭಾರತೀಯ ಭಾಷೆಗಳು ಮತ್ತು ಇಂಗ್ಲೀಷಿನಲ್ಲಿ ಲಭ್ಯವಿದೆ.

ಹಳೆಯ (ಫೀಚರ್) ಫೋನ್ ಮತ್ತು ಸ್ಥಿರ ದೂರವಾಣಿಗಳನ್ನೂ ಆರೋಗ್ಯ ಸೇತು ರಕ್ಷಣಾ ವ್ಯಾಪ್ತಿಗೆ ತರಲು ಆರೋಗ್ಯ ಸೇತು ಇಂಟರ್ ಆಕ್ಟಿವ್ ಧ್ವನಿ ಪ್ರತಿಕ್ರಿಯಾ ವ್ಯವಸ್ಥೆಯನ್ನು” (.ವಿ.ಆರ್.ಎಸ್. ) ಅನುಷ್ಟಾನಿಸಲಾಗಿದೆ. ಉಚಿತ ಸೇವೆಯಲ್ಲಿ ನಾಗರಿಕರಿಗೆ 1921 ನಂಬರಿಗೆ ಮಿಸ್ಡ್ ಕಾಲ್ ನೀಡುವಂತೆ ಕೇಳಲಾಗುತ್ತದೆ ಮತ್ತು ಅವರ ಆರೋಗ್ಯದ ಬಗ್ಗೆ ವಿವರಗಳನ್ನು ನೀಡುವಂತೆ ಕೋರಿ ಮರು ಕರೆ ಮಾಡಲಾಗುತ್ತದೆ.

ಕೇಳುವ ಪ್ರಶ್ನೆಗಳು ಆರೋಗ್ಯ ಸೇತು ಆಪ್ ನೊಂದಿಗೆ ಸಮ್ಮಿಳಿತಗೊಂಡಿರುತ್ತವೆ , ಮತ್ತು ನೀಡಿದ ಉತ್ತರ/ ಪ್ರತಿಕ್ರಿಯೆ ಗಳ ಆಧಾರದಲ್ಲಿ ನಾಗರಿಕರಿಗೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿವರಗಳ ಎಸ್.ಎಂ.ಎಸ್. ಬರುತ್ತದೆ. ಮತ್ತು ಅವರು ಮುಂದುವರೆದಂತೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತದೆ.

ಸೇವೆಯನ್ನು 11 ಪ್ರಾದೇಶಿಕ ಭಾಷೆಗಳಲ್ಲಿ ಅನುಷ್ಟಾನಿಸಲಾಗಿದೆ ಮತ್ತು ಅದು ಮೊಬೈಲ್ ಆಪ್ಲಿಕೇಶನ್ನಿನ ಮಾದರಿಯಲ್ಲಿಯೇ ಇದೆ. ನಾಗರಿಕರು ನೀಡುವ ಮಾಹಿತಿಯನ್ನು ಆರೋಗ್ಯ ಸೇತು ದತ್ತಾಂಶ ಮೂಲದ ಭಾಗವಾಗಿಸಲಾಗುತ್ತದೆ ಮತ್ತು ಮಾಹಿತಿಯನ್ನು ಸಂಸ್ಕರಿಸಿ ನಾಗರಿಕರಿಗೆ ಅವರ ಆರೋಗ್ಯ ಹಾಗು ಸುರಕ್ಷೆಯನ್ನು ಖಾತ್ರಿಪಡಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಒಳಗೊಂಡ ಸಂದೇಶವನ್ನು ಕಳುಹಿಸಲಾಗುತ್ತದೆ.

ಕೋವಿಡ್-19 ಕ್ಕೆ ಸಂಬಂಧಿಸಿದ ತಾಂತ್ರಿಕ ವಿಷಯಗಳು, ಮಾರ್ಗದರ್ಶಿಗಳು ಮತ್ತು ಸಲಹಾಸೂಚಿಗಳು ಸಹಿತ ಎಲ್ಲಾ ಅಧಿಕೃತ ಮತ್ತು ಸಕಾಲಿಕಗೊಳಿಸಿದ ಮಾಹಿತಿಗಾಗಿ ಭೇಟಿ ನೀಡಿ : https://www.mohfw.gov.in/.

ಕೋವಿಡ್-19 ಕ್ಕೆ ಸಂಬಂಧಿಸಿದ ತಾಂತ್ರಿಕ ವಿಚಾರಗಳನ್ನು technicalquery.covid19[at]gov[dot]in ವಿಳಾಸಕ್ಕೆ, ಮತ್ತು ಇತರ ವಿವರಗಳಿಗಾಗಿ ncov2019[at]gov[dot]in ವಿಳಾಸಕ್ಕೆ -ಮೈಲ್ ಮಾಡಬಹುದು ಮತ್ತು ಟ್ವೀಟ್ ಗಳ ಮೂಲಕ @CovidIndiaSeva ಸಂಪರ್ಕಿಸಬಹುದು.

ಕೋವಿಡ್-19 ಕ್ಕೆ ಸಂಬಂಧಿಸಿದ ಯಾವುದೇ ವಿಚಾರಣೆಗೆ/ ವಿವರಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯ ವಾಣಿ ಸಂಖ್ಯೆ: +91-11-23978046 ಅಥವಾ 1075 (ಉಚಿತ). ಗಳಿಗೆ ಕರೆ ಮಾಡಬಹುದು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ -19 ಕ್ಕೆ ಸಂಬಂಧಿಸಿ ಸ್ಥಾಪಿಸಿರುವ ಸಹಾಯವಾಣಿಗಳ ಪಟ್ಟಿಯನ್ನು ವಿಳಾಸಗಳಲ್ಲಿ ನೋಡಬಹುದು: https://www.mohfw.gov.in/pdf/coronvavirushelplinenumber.pdf .

***(Release ID: 1621727) Visitor Counter : 234