ನೀತಿ ಆಯೋಗ

ಕೋವಿಡ್-19 ವಿರುದ್ಧದ ಭಾರತದ ಹೋರಾಟದಲ್ಲಿ ಉನ್ನತಾಧಿಕಾರ ಸಮಿತಿ 6 ನಿಂದ ಸಿಎಸ್ಒಗಳು/ ಎನ್ ಜಿಒಗಳು/ ಉದ್ಯಮ/ ಬೌದ್ಧಿಕ ಸಂಸ್ಥೆಗಳ ಬಳಕೆ

Posted On: 04 MAY 2020 4:56PM by PIB Bengaluru

ಕೋವಿಡ್-19 ವಿರುದ್ಧದ ಭಾರತದ ಹೋರಾಟದಲ್ಲಿ ಉನ್ನತಾಧಿಕಾರ ಸಮಿತಿ 6 ನಿಂದ ಸಿಎಸ್ಒಗಳು/ ಎನ್ ಜಿಒಗಳು/ ಉದ್ಯಮ/ ಬೌದ್ಧಿಕ ಸಂಸ್ಥೆಗಳ ಬಳಕೆ

 

  1. ಕೋವಿಡ್-19 ಜಾಗತಿಕ ಸಾಂಕ್ರಾಮಿಕ ನಮ್ಮ ದೇಶದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶ ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಿದ್ದು, ಅದಕ್ಕಾಗಿ ಭಾರತ ಸರ್ಕಾರ ಉನ್ನತಾಧಿಕಾರ ಸಮಿತಿ (ಇಜಿ 6) ಅನ್ನು ರಚಿಸಿದೆ. ನೀತಿ ಆಯೋಗದ ಸಿಇಒ, ಅಧ್ಯಕ್ಷರಾಗಿರುವ ಸಮಿತಿ, ನಾಗರಿಕ ಸೇವಾ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಅಭಿವೃದ್ಧಿ ಪಾಲುದಾರರು, ಉದ್ಯಮ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆ ಭಾರತ ಸರ್ಕಾರದಿಂದ ಸಮನ್ವಯತೆ ಸಾಧಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದೆ.

ನೀತಿ ಆಯೋಗದ ಸಿಇಒ ಶ್ರೀ ಅಮಿತಾಬ್ ಕಾಂತ್ ಅವರು ಅಧ್ಯಕ್ಷರಾಗಿರುವ ಉನ್ನತಾಧಿಕಾರ ಸಮಿತಿಯಲ್ಲಿ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ(ಪಿಎಸ್ಎ) ಡಾ. ವಿಜಯ್ ರಾಘವನ್, ಕಮಲ್ ಕಿಶೋರ್(ಸದಸ್ಯರು, ಎಂಡಿಎಂಎ); ಸಂದೀಪ್ ಮೋಹನ್ ಭಟ್ನಾಗರ್(ಸದಸ್ಯರು, ಸಿಬಿಐಸಿ); ಅನಿಲ್ ಮಲಿಕ್(ಎಎಸ್, ಎಂಎಚ್ಎ); ವಿಕ್ರಮ್ ದೊರೈಸ್ವಾಮಿ(ಎಎಸ್, ಎಂಇಎ); ಪಿ. ಹರೀಶ್(ಎಎಸ್, ಎಂಇಎ); ಗೋಪಾಲ್ ಬಾಗ್ಲೈ (ಜೆಎಸ್, ಪಿಎಂಒ); ಐಶ್ವರ್ಯ ಸಿಂಗ್(ಡಿಎಸ್, ಪಿಎಂಒ); ಟೀನಾ ಸೋನಿ(ಡಿಎಸ್ ಸಂಪುಟ ಸಚಿವಾಲಯ); ಮತ್ತು ಇಜಿ 6 ಕಾರ್ಯಸೇವೆಗೆ ಸಂಯುಕ್ತ ಸಾಮ್ದಾರ್(ಸಲಹೆಗಾರರು, ಎಸ್ ಡಿಜಿ, ನೀತಿ ಆಯೋಗ) ಇವರುಗಳಿದ್ದಾರೆ. ಸಮಿತಿ ಸುಮಾರು 15 ಸಭೆಗಳಲ್ಲಿ ಸಿಎಸ್ಒ, ಎನ್ ಜಿಒಗಳು, ಅಭಿವೃದ್ಧಿ ಪಾಲುದಾರರು, ಯುಎನ್ ಸಂಸ್ಥೆಗಳು, ಉದ್ಯಮ ಒಕ್ಕೂಟಗಳ ಜೊತೆ ಸಕ್ರಿಯವಾಗಿ ಸಮಾಲೋಚನೆಯಲ್ಲಿ ತೊಡಗಿದೆ.

  1. ಸಿಎಸ್ಒಗಳು, ಎನ್ ಜಿಒಗಳು ಮತ್ತು ಅಭಿವೃದ್ಧಿ ಪಾಲುದಾರರು; ಅಕ್ಷರಶಃ ಇಡೀ ಸಮಾಜ ಒಳಗೊಂಡ ವಿಧಾನ

ಇಜಿ 6 ಸಮಿತಿ, ಸುಮಾರು 92,000 ಸಿಎಸ್ಒಗಳು/ಎನ್ ಜಿಒಗಳ ಸಂಪರ್ಕಜಾಲ ಹೊಂದುವಲ್ಲಿ ಯಶಸ್ವಿಯಾಗಿವೆ ಅವುಗಳ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಸಾಮಾಜಿಕ ವಲಯಗಳಾದ ಪೌಷ್ಠಿಕಾಂಶ, ಆರೋಗ್ಯ, ನೈರ್ಮಲೀಕರಣ, ಶಿಕ್ಷಣ ಮತ್ತು ಸಮುದಾಯವನ್ನು ತಲುಪುವ ನೈಪುಣ್ಯತೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಮಿತಿ ಸುಮಾರು 92,000 ಎನ್ ಜಿಒಗಳು/ಸಿಎಸ್ಒಗಳನ್ನು ಒಟ್ಟುಗೂಡಿಸಿ, ಅವುಗಳಿಗೆ ಹಾಟ್ ಸ್ಪಾಟ್ ಗಳನ್ನು ಗುರುತಿಸಲು ಮತ್ತು ಸ್ವಯಂಸೇವಕರನ್ನು ನಿಯೋಜನೆಗೊಳಿಸಲು, ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ನಿರಾಶ್ರಿತರಿಗೆ ಹಾಗೂ ನಗರದ ಬಡ ಕುಟುಂಬಗಳಿಗೆ ಸೇರಿದಂತೆ ಸೂಕ್ಷ್ಮ ವರ್ಗದವರಿಗೆ ಅಗತ್ಯ ಸೇವೆಗಳನ್ನು ಒದಗಿಸಲು, ಸೋಂಕು ಹರಡದಂತೆ ಜಾಗೃತಿ ಮೂಡಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಐಸೋಲೇಶನ್ ಬಗ್ಗೆ ಅರಿವು ಮೂಡಿಸುವ ಕೆಲಸದಲ್ಲಿ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳಿಗೆ ಸಹಾಯ ನೀಡಲು ಮನವಿ ಮಾಡಿದೆ.

. ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಎನ್ ಜಿಒಗಳ ಜೊತೆ ಸಮನ್ವಯ ನಡೆಸಲು ರಾಜ್ಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಮನವಿ ಮಾಡಲಾಗಿದೆ ಮತ್ತು ಅವರ ಜಾಲ ಮತ್ತು ಸಂಪನ್ಮೂಲವನ್ನು ಬಳಸಿಕೊಳ್ಳುವುದಲ್ಲದೆ, ಅವರ ಸಮಸ್ಯೆಗಳನ್ನು ನಿವಾರಿಸುವಂತೆ ಸೂಚಿಸಲಾಗಿದೆ. ಬಹುತೇಕ ಎಲ್ಲ ರಾಜ್ಯಗಳು ಎನ್ ಜಿಒ/ಸಿಎಸ್ಒಗಳ ಜೊತೆ ಸಮನ್ವಯಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿವೆ.

ಬಿ. ಎನ್ ಜಿಒಗಳು ಮತ್ತು ಸಿಎಸ್ಒಗಳ ಸೇವೆಯನ್ನು ಬಳಸಿಕೊಳ್ಳುವಂತೆ ಎಲ್ಲ ಜಿಲ್ಲಾಡಳಿತಗಳಿಗೆ ಸೂಚಿಸುವಂತೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದೆ; ಪ್ರತಿಯೊಂದು ಜಿಲ್ಲೆಗೂ ನೋಡಲ್ ಎನ್ ಜಿಒ ನೇಮಿಸಬೇಕು ಅಥವಾ ಹಲವು ಜಿಲ್ಲೆಗಳಿಗೆ ಓರ್ವ ಜಿಲ್ಲಾ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಮತ್ತು ಯಾವುದೇ ಕ್ಷೇತ್ರ ಮತ್ತು ವಲಯಗಳಲ್ಲಿ ಕೆಲಸ ಎರಡೆರಡು ಬಾರಿ ಆಗುವುದನ್ನು ತಡೆಯಲು ಗುರುತಿಸಬೇಕು.

ಸಿ. ಎಫ್ ಸಿಐ ಗೋದಾಮುಗಳಿಂದ ಸಬ್ಸಿಡಿ ದರದಲ್ಲಿ ಪ್ರತಿ ಕೆಜಿಗೆ 22 ರೂ./ 21 ರೂ.ನಂತೆ ಅಕ್ಕಿ ಮತ್ತು ಗೋಧಿಯನ್ನು ಭಾರೀ ಪ್ರಮಾಣದಲ್ಲಿ ಎತ್ತುವಳಿ ಮಾಡಿ, ಅದನ್ನು ವಿತರಿಸಲು ಎಲ್ಲ ಎನ್ ಜಿಒಗಳಿಗೆ ಸೂಚಿಸಲಾಗಿದೆ. ಮೂಲಕ ದೇಶದ ಯಾವೊಬ್ಬರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು.

ಡಿ. ಅಕ್ಷಯಪಾತ್ರ, ರಾಮಕೃಷ್ಣ ಮಿಷನ್, ಟಾಟಾ ಟ್ರಸ್ಟ್, ಪಿರಾಮಲ್ ಫೌಂಡೇಶನ್, ಪಿರಾಮಲ್ ಸ್ವಾಸ್ಥ್ಯ, ಬಿಲ್ ಅಂಡ್ ಮಿಲಿಂದಾ ಫೌಂಡೇಶನ್, ಆಕ್ಷನ್ ಏಡ್, ಇಂಟರ್ ನ್ಯಾಷನಲ್ ರೆಡ್ ಕ್ರಾಸ್ ಸೆಂಟರ್ (ಐಸಿಆರ್ ಸಿ), ಪ್ರಧಾನ್, ಪ್ರಯಾಸ್, ಹೆಲ್ಪ್-ಏಜ್ ಇಂಡಿಯಾ, ಸೇವಾ, ಸುಲಭ್ ಅಂತಾರಾಷ್ಟ್ರೀಯ, ಚಾರಿಟೀಸ್ ಏಡ್ ಫೌಂಡೇಶನ್ ಆಫ್ ಇಂಡಿಯಾ, ಗುಡಿಯಾ ಮಠ್, ಬಚ್ಪನ್ ಬಚಾವೋ ಆಂದೋಲನ, ದಿ ಸಾಲ್ವೇಶನ್ ಆರ್ಮಿ (ಮುಕ್ತಿ ಪಡೆ), ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್ ಆಫ್ ಇಂಡಿಯಾ ಮತ್ತು ಹಲವು ಸಂಘಟನೆಗಳು ಶ್ಲಾಘನೀಯ ಕೆಲಸವನ್ನು ಮಾಡುತ್ತಿವೆ.

. ಕೋವಿಡ್-19 ಹರಡುವುದರ ವಿರುದ್ಧ ಹೋರಾಡಲು ದೇಶದಲ್ಲಿ ಸಕಾಲದಲ್ಲಿ ಕ್ರಮಗಳನ್ನು ಕೈಗೊಳ್ಳಲು 700 ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳ ಸಹಾಯದಿಂದ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್ ಜಿಒ ಮತ್ತು ಸಿಎಸ್ಒಗಳ ಜೊತೆ ಸಮನ್ವಯ ಮತ್ತು ನಿಗಾ ಕೆಲಸವನ್ನು ಇಜಿ 6 ಸಮಿತಿ ಮಾಡುತ್ತಿದೆ. 92000 ಎನ್ ಜಿಒಗಳನ್ನು ಒಟ್ಟುಗೂಡಿಸಿರುವುದರ ಪರಿಣಾಮ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಸಿಎಸ್ಒಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆಯೋ ಅಂತಹ ಕಡೆ ಗಮನಾರ್ಹ ಫಲಿತಾಂಶ ಕಾಣಬಹುದಾಗಿದೆ.

· ನಗರ ಪ್ರದೇಶಗಳಲ್ಲಿ ದುಡಿಯುತ್ತಿರುವ ನಿರಾಶ್ರಿತರು ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಒದಗಿಸಲು ಸಮುದಾಯ ಅಡುಗೆ ಕೋಣೆಗಳನ್ನು ಸ್ಥಾಪಿಸಲು ಸ್ಥಳೀಯ ಆಡಳಿತಕ್ಕೆ ಸಹಾಯ ಮತ್ತು ಬೆಂಬಲ ನೀಡುವುದು.

· ಸೋಂಕು ನಿಯಂತ್ರಣ, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಐಸೋಲೇಶನ್ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದರ ಕುರಿತು ಜಾಗೃತಿಯನ್ನು ಮೂಡಿಸುವುದು.

· ನಿರಾಶ್ರಿತರು, ದಿನಗೂಲಿ ನೌಕರರು ಮತ್ತು ನಗರ ಪ್ರದೇಶದ ಬಡ ಕುಟುಂಬಗಳಿಗೆ ವಸತಿ ಒದಗಿಸುವ ಸರ್ಕಾರದ ಪ್ರಯತ್ನಗಳಿಗೆ ಬೆಂಬಲ ನೀಡುವುದು.

· ಸಮುದಾಯ ಕಾರ್ಯಕರ್ತರು ಮತ್ತು ಸ್ವಯಂ ಸೇವಕರಿಗೆ ವೈಯಕ್ತಿಕ ರಕ್ಷಣಾ ಉಪಕರಣ-ಪಿಪಿಇ ಮತ್ತು ಸ್ಯಾನಿಟೈಸರ್, ಸಾಬೂನು, ಮಾಸ್ಕ್ ಮತ್ತು ಗ್ಲೌಸ್ ಮತ್ತಿತರ ರಕ್ಷಣಾ ಉಪಕರಣಗಳ ವಿತರಣೆಗೆ ನೆರವು ವಿಸ್ತರಿಸುವುದು.

· ಆರೋಗ್ಯ ಶಿಬಿರಗಳನ್ನು ನಡೆಸಲು ಸರ್ಕಾರಕ್ಕೆ ಬೆಂಬಲ ನೀಡುವುದು.

· ಹಾಟ್ ಸ್ಪಾಟ್ ಗಳನ್ನು ಗುರುತಿಸಲು ಮತ್ತು ಸ್ವಯಂಸೇವಕರನ್ನು ನಿಯೋಜಿಸಲು ಹಾಗೂ ವೃದ್ಧರು, ವಿಶೇಷ ಚೇತನರು, ಮಕ್ಕಳು, ಮಂಗಳಮುಖಿಯರು ಮತ್ತು ಇತರೆ ದುರ್ಬಲ ವರ್ಗದವರಿಗೆ ಆರೈಕೆ ಸೇವೆಗಳನ್ನು ಒದಗಿಸಲು ನೆರವು ನೀಡುವುದು. ಸ್ಥಳೀಯ ಪತ್ರಿಕೆಗಳಿಗೆ ನಾನಾ ಬಗೆಯ ಸಂವಹನ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವುದು, ಮೂಲಕ ಕೋವಿಡ್-19 ಸಮುದಾಯ ಮಟ್ಟದಲ್ಲಿ ಹರಡುವುದನ್ನು ತಡೆಯಲು ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಳ್ಳಲು ಪಾಲುದಾರರಿಗೆ ನೆರವಾಗುವುದು.

· ನಗರಗಳ ದುಡಿಯುವ ಜಾಗಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ಸಾಮೂಹಿಕ ವಲಸೆಯನ್ನು ತಡೆಯಲು ಅವರಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಗಮನಹರಿಸುವುದು. ಎನ್ ಜಿಒಗಳು, ಜಿಲ್ಲಾಡಳಿತಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಮತ್ತು ಸಮನ್ವಯದಿಂದ ಕೆಲಸ ಮಾಡುತ್ತಿದ್ದು, ಮೂಲಕ ಆರೈಕೆ, ಕ್ವಾರಂಟೈನ್ ಮತ್ತು ಚಿಕಿತ್ಸಾ ಕ್ರಮಗಳು ಜೊತೆ ಜೊತೆಯಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ.

· ಮುಂದಿನ ಹಂತದಲ್ಲಿ ಗುಂಪು ನಾಗರಿಕ ಸೇವಾ ಸಂಘಟನೆಗಳು/ಎನ್ ಜಿಒಗಳೊಂದಿಗೆ ಕೋವಿಡ್-19 ಕುರಿತಂತೆ ಇರುವ ತಪ್ಪು ಕಲ್ಪನೆಗಳ ವಿರುದ್ಧ ಅಭಿಯಾನ ಕೈಗೊಳ್ಳಲಿದೆ ಮತ್ತು ವೃದ್ಧರು ಮತ್ತು ಹಿರಿಯ ನಾಗರಿಕರ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಲಿದೆ.

3. ಆಶೋತ್ತರ ಜಿಲ್ಲೆಗಳ ಕಾರ್ಯಕ್ರಮ, ಸ್ಥಳೀಯವಾಗಿ ಒಗ್ಗೂಡಿಸಿದ ಪರಿಹಾರಗಳು

ನೀತಿ ಆಯೋಗದ ಆಶೋತ್ತರ ಜಿಲ್ಲಾ ಕಾರ್ಯಕ್ರಮದಿಂದಾಗಿ ದೇಶದ 112 ಹಿಂದುಳಿದ (ಆಶೋತ್ತರ ಜಿಲ್ಲೆಗಳ) ಕೋಟ್ಯಂತರ ಜನರ ಬದುಕಿನಲ್ಲಿ ಗಮನಾರ್ಹ ಯಶಸ್ಸು ಕಾಣಲಾಗಿದೆ. ಸದ್ಯಕ್ಕೆ 112 ಜಿಲ್ಲೆಗಳಲ್ಲಿ 610 ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಪ್ರಮಾಣ ಶೇ.2ಕ್ಕಿಂತಲೂ ಕಡಿಮೆ. ಆರು ಜಿಲ್ಲೆಗಳಲ್ಲಿ ಮೊದಲ ಪ್ರಕರಣದ ಬೆಳಕಿಗೆ ಬಂದಿದ್ದು ಏಪ್ರಿಲ್ 21 ನಂತರ ಪ್ರಮುಖ ಹಾಟ್ ಸ್ಪಾಟ್ ಗಳಲ್ಲಿ ಬಾರಾಮುಲ್ಲಾ(62), ನೂಹ್(57), ರಾಂಚಿ(55), ವೈಎಸ್ಆರ್(55), ಕುಪ್ವಾರ(47) ಮತ್ತು ಜೈಸಲ್ಮೇರ್(34) ಪ್ರಕರಣಗಳು ದೃಢಪಟ್ಟಿವೆ.

. ನೀತಿ ಆಯೋಗ, ಜಿಲ್ಲೆಗಳಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ ಮತ್ತು ಪರೀಕ್ಷಾ ಕಿಟ್, ಪಿಪಿಇ ಮತ್ತು ಮಾಸ್ಕ್ ಇತ್ಯಾದಿ ಅಗತ್ಯತೆಗಳನ್ನು ಕ್ರಿಯಾಶೀಲವಾಗಿ ಒದಗಿಸಲು ಸಂಬಂಧಿಸಿದ ಉನ್ನತಾಧಿಕಾರ ಸಮಿತಿಗಳಿಗೆ ಪೂರೈಕೆ ಮಾಡಲು ಸೂಚನೆ ನೀಡಿದೆ.

ಬಿ. ಆಶೋತ್ತರ ಅಭಿವೃದ್ಧಿ ಕಾರ್ಯಕ್ರಮದ ಒಂದು ಮೂಲ ಮಾರ್ಗದರ್ಶಿ ತತ್ವ ಎಂದರೆ ಸಹಭಾಗಿತ್ವ ಮತ್ತು ಪಾಲುದಾರಿಕೆಯಿಂದಾಗಿ ಜಿಲ್ಲಾಡಳಿತಗಳು ಐಸೋಲೇಶನ್ ಕ್ಯಾಂಪ್ ಗಳ ನಿರ್ವಹಣೆ, ಕಂಟ್ರೋಲ್ ರೂಂಗಳ ಸ್ಥಾಪನೆ, ಮನೆ ಬಾಗಿಲಿಗೆ ಆಹಾರ ಒದಗಿಸುವುದು, ಬೇಯಿಸಿದ ಆಹಾರ ವಿತರಣೆ, ಮನೆಯಲ್ಲೇ ತಯಾರಿಸಲಾದ ಮಾಸ್ಕ್, ಸ್ಯಾನಿಟೈಸರ್ ಮತ್ತು ಮರುಬಳಕೆ ಮಾಡಬಹುದಾದ ವೈಯಕ್ತಿಕ ರಕ್ಷಣಾ ಉಪಕರಣಗಳ ಉತ್ಪಾದನೆಗೆ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಲಾಕ್ ಡೌನ್ ಅವಧಿಯಲ್ಲಿ ಅವರುಗಳ ಸುಸ್ಥಿರ ಜೀವನೋಪಾಯಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಸ್ಮಾನಾಬಾದ್ ಒಂದು ಜಿಲ್ಲೆಯಲ್ಲಿ ಸಿಎಸ್ಆರ್ ನಿಧಿ ಬಳಸಿಕೊಂಡು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಸಿ.ಸುರಕ್ಷಿತ್ ದಾದಾ-ದಾದಿ ಮತ್ತು ನಾನಾ-ನಾನಿ ಅಭಿಯಾನಕಾರ್ಯಕ್ರಮವನ್ನು ಪಿರಾಮಿಲ್ ಫೌಂಡೇಶನ್ ಆರಂಭಿಸಿದ್ದು, 25 ಜಿಲ್ಲೆಗಳಲ್ಲಿ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ ಕ್ರಮಗಳು, ಅಗತ್ಯ ನಡವಳಿಕೆ ಬದಲಾವಣೆ ಮತ್ತು ಆಹಾರ, ಪಡಿತರ, ವೈದ್ಯಕೀಯ ಮತ್ತಿತರ ವಿತರಣಾ ಸಮಸ್ಯೆಗಳ ಮೂಲಕ ನೆರವಾಗುವ ಉದ್ದೇಶವನ್ನು ಹೊಂದಲಾಗಿದೆ.

ಡಿ. ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಶನ್ ನೀತಿ ಆಯೋಗದ ಸಹಭಾಗಿತ್ವದಲ್ಲಿ ಮತ್ತು ಇತರೆ ಅಭಿವೃದ್ಧಿ ಪಾಲುದಾರರ ಜೊತೆಗೂಡಿ, ಸಾರ್ವಜನಿಕರಿಗೆ ಉತ್ತಮ ಸಂದೇಶ ನೀಡುವ ಬಂಡಾರವನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಮಾಸ್ಕ್ ಗಳನ್ನು ಧರಿಸುವುದು, ಶುಚಿತ್ವ ಕ್ರಮಗಳು, ಸಾಮಾಜಿಕ ಅಂತರ, ಮುಂಚೂಣಿ ಕಾರ್ಯಕರ್ತರಿಗೆ ಉತ್ತೇಜನ ನೀಡುವುದು ಸೇರಿದಂತೆ ಹಲವು ಕ್ರಮಗಳ ಬಗ್ಗೆ ಸ್ಥಳೀಯ ಭಾಷೆಗಳಲ್ಲಿ ಗುಣಮಟ್ಟದ ಪಠ್ಯವನ್ನು ಒದಗಿಸಲಾಗಿದೆ. ಆಶೋತ್ತರ ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾಧಿಕಾರಿಗಳಿಗೆ ವೆಬ್ ಸೈಟ್ (indiafightscovid.com) ನಲ್ಲಿರುವ ಸಂಪನ್ಮೂಲವನ್ನು ಪರಿಶೀಲಿಸಿ, ಸೂಕ್ತ ರೀತಿಯಲ್ಲಿ ತಮ್ಮ ಸಂವಹನ ಕಾರ್ಯತಂತ್ರ ಬಲವರ್ಧನೆಗೆ ಬಳಸಿಕೊಳ್ಳಲು ಸೂಚಿಸಲಾಗಿದೆ.

4. ಅಂತಾರಾಷ್ಟ್ರೀಯ ಸಂಘಟನೆಗಳು,ಸ್ಥಳೀಯ ಪ್ರಯತ್ನಗಳಿಗೆ ಜಾಗತಿಕ ಸಂಪರ್ಕಜಾಲ ಬಳಕೆ

ಇಜಿ 6 ಸಮಿತಿ, ಹಲವು ವಿಶ್ವಸಂಸ್ಥೆಯ ಸಂಘಟನೆಗಳನ್ನು ಒಟ್ಟುಗೂಡಿಸಿದೆ ಮತ್ತು ಅವುಗಳಿಗೆ ಹಲವು ರಾಜ್ಯಗಳ ಸಮನ್ವಯದೊಂದಿಗೆ ಹಾಗೂ ಹಲವು ಸಚಿವಾಲಯಗಳ ಮೂಲಕ ಭಾರತದಲ್ಲಿನ ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ಫಾರ್ ಇಂಡಿಯಾ ಮತ್ತು ಡಬ್ಲ್ಯೂಎಚ್ಒ, ಯುನಿಸೆಫ್, ಯುಎನ್ಎಫ್ ಪಿಎ, ಯುಎನ್ ಡಿಪಿ, ಐಎಲ್ಒ, ಯುಎನ್ ವುಮೆನ್, ಯುಎನ್ ಹ್ಯಾಬಿಟೇಟ್, ಎಫ್ಎಒ, ವಿಶ್ವಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಗಳ ಭಾರತದ ಮುಖ್ಯಸ್ಥರ ಸಮಗ್ರ ಸಹಭಾಗಿತ್ವದೊಂದಿಗೆ ಕಾಲಕಾಲಕ್ಕೆ ಕ್ರಿಯಾಯೋಜನೆಗಳನ್ನು ರೂಪಿಸಲು ಪೂರಕ ನೆರವು ನೀಡಲಾಗುತ್ತಿದೆ. ಭಾರತದಲ್ಲಿನ ವಿಶ್ವಸಂಸ್ಥೆಯ ಕಚೇರಿ ಜಂಟಿ ಪ್ರತಿಸ್ಪಂದನಾ ಯೋಜನೆ(ಜೆಆರ್ ಪಿ)ಅನ್ನು ಸಿದ್ಧಪಡಿಸಿದ್ದು, ಅದನ್ನು ಇಜಿ 6 ಸಮಿತಿಗೆ ಸಲ್ಲಿಸಲಾಗಿದೆ. ಅದರಲ್ಲಿ ಮುಂಜಾಗ್ರತೆ, ಚಿಕಿತ್ಸೆ ಮತ್ತು ಅವಶ್ಯಕ ವಸ್ತುಗಳ ಪೂರೈಕೆ ಅತ್ಯಂತ ಪ್ರಮುಖ ಅಂಶಗಳಿವೆ.

  1.  

. 15,300 ತರಬೇತುದಾರರಿಗೆ ಕೌಶಲ್ಯವೃದ್ಧಿ, 3951 ನಿಗಾ/ಆರೋಗ್ಯ ಕಾರ್ಯಕರ್ತರಿಗೆ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಡಿ ತರಬೇತಿ, ಸೋಂಕು ನಿಯಂತ್ರಣ, 890 ಆಸ್ಪತ್ರೆಗಳಿಗೆ ನಿರ್ವಹಣೆ ತರಬೇತಿ, ಪರೀಕ್ಷೆಗಳನ್ನು ನಡೆಸಲು ಐಸಿಎಂಆರ್ ಗೆ ಬೆಂಬಲ, ಅಪಾಯ ಸಂವಹನ ಬಲವರ್ಧನೆ ಮತ್ತು ಆರೋಗ್ಯ ರಕ್ಷಣಾ ಕಾರ್ಯಕರ್ತರ ಸಾಮರ್ಥ್ಯವೃದ್ಧಿಗೆ ಸಮುದಾಯ ಬಳಕೆ, 2 ಲಕ್ಷ ಪಿಪಿಇಗಳು ಮತ್ತು 4 ಲಕ್ಷ ಎನ್95 ಮಾಸ್ಕ್ ಗಳ ಖರೀದಿಗೆ ಡಬ್ಲ್ಯೂಎಚ್ಒ ಮತ್ತು ಯುನಿಸೆಫ್ ಕ್ರಮಗಳನ್ನು ಕೈಗೊಂಡಿವೆ.

ಬಿ. 25 ರಾಜ್ಯಗಳಿಗೆ ವೆಂಟಿಲೇಟರ್ ಗಳು(ಪ್ರಸ್ತುತ ಮನವಿ ಮೇರೆಗೆ ಆರಂಭಿಕವಾಗಿ 1000 ಉಪಕರಣಗಳು, ಆದರೆ ಭವಿಷ್ಯದ ಬೇಡಿಕೆ ಆಧರಿಸಿ, ಇನ್ನೂ ಹೆಚ್ಚಿನ ಉಪಕರಣಗಳು) ಸೇರಿ ಅವಶ್ಯಕ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಯುಎನ್ ಡಿಪಿ ನಿರತವಾಗಿದೆ. ಅಲ್ಲದೆ ಇಜಿ 6 ರಿಂದ ಯುನಿಸೆಫ್ ಕಡೆಯಿಂದ 10,000 ವೆಂಟಿಲೇಟರ್ ಮತ್ತು 10 ಮಿಲಿಯನ್ ಪಿಪಿಇ ಕಿಟ್ ಗಳ ಬೇಡಿಕೆ ನಿರೀಕ್ಷಿಸಲಾಗುತ್ತಿದೆ.

ಸಿ. ಸಮಿತಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸುಮಾರು 40,000 ಸ್ವಯಂಸೇವಕರ ಜೊತೆ ಸುಮಾರು 500 ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಅದು 33 ಕಡೆ ಐಸೋಲೇಶನ್/ಕ್ವಾರಂಟೈನ್ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದೆ. ಸುಮಾರು 5.50 ಕೋಟಿ ಮೌಲ್ಯದ ವೆಂಟಿಲೇಟರ್, ಮಾಸ್ಕ್, ಪಿಪಿಇ ಮತ್ತು ಪರೀಕ್ಷಾ ಕಿಟ್ ಗಳನ್ನು ದೇಣಿಗೆ ನೀಡಲು ಸಹಕಾರ ನೀಡಿದೆ ಮತ್ತು 500 ಜಿಲ್ಲೆಗಳಾದ್ಯಂತ ವ್ಯಾಪಕ ಪರಿಹಾರ ಮತ್ತು ನೆರವು ಕಾರ್ಯವನ್ನು ಕೈಗೊಂಡಿದೆ.

5.ಉದ್ಯಮ ಮತ್ತು ನವೋದ್ಯಮಗಳ ಸೇರ್ಪಡೆ: ಸಾರ್ವಜನಿಕ ಒಳಿತಿಗಾಗಿ ಖಾಸಗಿ ವಲಯದ ಮಧ್ಯಪ್ರವೇಶ

ಉನ್ನತಾಧಿಕಾರ ಸಮಿತಿ 6 ಹಾಗೂ ನೀತಿ ಆಯೋಗ ಕೋವಿಡ್-19 ನಿರ್ವಹಣಾ ಕ್ರಮಗಳನ್ನು ಚುರುಕುಗೊಳಿಸಲು ಮತ್ತು ನೆರವು ನೀಡಲು ಖಾಸಗಿ ವಲಯದ ಸಾಮರ್ಥ್ಯ ಬಳಕೆಗೆ ಸಮನ್ವಯ ಸಹಭಾಗಿತ್ವದ ಕಾರ್ಯನಿರ್ವಹಿಸುತ್ತಿದೆ. ಅವುಗಳಲ್ಲಿ ಆರೋಗ್ಯ ರಕ್ಷಣಾ ನಿಗಾ ಮತ್ತು ಪತ್ತೆ ವಲಯದಲ್ಲಿ ಪ್ರತಿಸ್ಪಂದನಾ ವ್ಯವಸ್ಥೆಗಳನ್ನು ಸೃಷ್ಟಿಸುವುದು, ಆರೋಗ್ಯವಲ್ಲದ ಉದ್ಯಮ ಆಧಾರಿತ ಉಪಾಯಗಳು, ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸುವುದು. ಉದ್ಯಮ ಮತ್ತು ಆರ್ಥಿಕತೆಯ ನಾನಾ ವಲಯಗಳು ಎದುರಿಸುತ್ತಿರುವ ಹಲವು ಸವಾಲುಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಅದು ಖಾಸಗಿ ವಲಯ ಮತ್ತು ನವೋದ್ಯಮಗಳ ಜೊತೆ ಅಂತರ ವಲಯ ಸಮಾಲೋಚನೆಗಳನ್ನು ಆರಂಭಿಸಿದ್ದು, ಸಹಭಾಗಿತ್ವ ಮತ್ತು ಸಮನ್ವಯದ ಪ್ರತಿಸ್ಪಂದನಾ ಕ್ರಿಯೆಗಳನ್ನು ಕೈಗೊಳ್ಳುವ ಜೊತೆಗೆ ಎಂಎಸ್ಎಂಇ, ಪ್ರವಾಸೋದ್ಯಮ, ವೈಮಾನಿಕ, ರಫ್ತು ಮತ್ತು ಉತ್ಪಾದನೆ ಹಾಗೂ ಸೇವಾ ವಲಯ ಸೇರಿದಂತೆ ಎಲ್ಲ ವಲಯಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ, ಸಲಹೆಗಳನ್ನು ನೀಡಲಾಗುತ್ತಿದೆ.

). ಖಾಸಗಿ ಆರೋಗ್ಯ ರಕ್ಷಣಾ ವಲಯದ ಪಾತ್ರ: ಬಿಕ್ಕಟ್ಟನ್ನು ಎದುರಿಸಲು ಸರ್ಕಾರದ ಜೊತೆ ಖಾಸಗಿ ಆರೋಗ್ಯ ರಕ್ಷಣಾ ವಲಯ ಕೂಡ ಗಂಭೀರ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಅದು ಒತ್ತಡದ ಸಂದರ್ಭಗಳಲ್ಲಿಯೂ ಸಹ ತನ್ನ ಸಹಾಯವನ್ನು ಒದಗಿಸುತ್ತಿದೆ. ಉತ್ಪಾದನಾ ಘಟಕಗಳು ಮುಂದೆ ಬರುತ್ತಿವೆ ಮತ್ತು ಅವರ ಘಟಕ, ಯಂತ್ರೋಪಕರಣ ಮತ್ತು ಕೌಶಲ್ಯಹೊಂದಿದ ಮಾನವ ಸಂಪನ್ಮೂಲವನ್ನು ಸಾಮೂಹಿಕ ಉತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಉದಾಹರಣೆ ಸಿಐಐ, ಆಟೋಮೊಬೈಲ್, ಯಂತ್ರೋಪಕರಣ ಮತ್ತು ರಕ್ಷಣಾ ವಲಯದ ಉನ್ನತ ಗುಣಮಟ್ಟದ ಉತ್ಪಾದನಾ ಕಂಪನಿಗಳ ಸಹಯೋಗದೊಂದಿಗೆ ಸಾಮೂಹಿಕವಾಗಿ ಭಾರೀ ಪ್ರಮಾಣದಲ್ಲಿ ವೆಂಟಿಲೇಟರ್ ಗಳ ಉತ್ಪಾದನೆಯಲ್ಲಿ ತೊಡಗಿದೆ. ಇದರಿಂದ ವೆಂಟಿಲೇಟರ್ ಗಳ ಉತ್ಪಾದನಾ ಸಾಮರ್ಥ್ಯ ವೃದ್ಧಿಯಾಗುತ್ತಿದ್ದು, ವೆಂಟಿಲೇಟರ್ ಗಳ ಆಮದು ತಗ್ಗಲಿದೆ. ಭಾರತದ ಉತ್ಪಾದನಾ ಕಂಪನಿಗಳಾದ ಟಾಟಾ, ಮಹಿಂದ್ರಾ ಮತ್ತು ಮಹಿಂದ್ರಾ, ಭಾರತ್ ಫೋರ್ಜ್, ಮಾರುತಿ ಸುಜುಕಿ, ಅಶೋಕ್ ಲೈಲ್ಯಾಂಡ್, ಹಿರೋ ಮೊಟೊಕಾರ್ಪ್, ಗೋದ್ರೇಜ್ & ಬೊಯೊಸಿ, ಸುಂದರಂ ಫಾಸ್ಟೆನರ್ಸ್, ವಾಲ್ಚಾಂದ್ ನಗರ್, ಗ್ರಾಸಿಮ್, ಹುಂಡಾಯೈ, ವೋಕ್ಸ್ ವ್ಯಾಗನ್, ಕಮಿನ್ಸ್ ಇತ್ಯಾದಿ. ಇವು ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್ ಗಳ ಉತ್ಪಾದನೆಗೆ ಮುಂದಾಗಿದ್ದು, ಹಲವು ಕಂಪನಿಗಳು ಈಗಾಗಲೇ ಉತ್ಪಾದನೆಯನ್ನು ಆರಂಭಿಸಿವೆ.

ಬಿ) ಪರಿಹಾರ ಮತ್ತು ಪುನರ್ವಸತಿ ಕಾರ್ಯದಲ್ಲಿ ಆರೋಗ್ಯ ಕ್ಷೇತ್ರದವರನ್ನು ಹೊರತುಪಡಿಸಿ ಇತರೆಯವರ ನೆರವು : ಇಜಿ6, ಸಿಐಐ-ಎಫ್ಐಸಿಸಿಐ, ನಾಸ್ಕಾಮ್ ಮತ್ತಿತರ ಔದ್ಯಮಿಕ ಒಕ್ಕೂಟಗಳನ್ನು ತೊಡಗಿಸಿಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಮೂಲಕ ರಾಜ್ಯಗಳು ಮತ್ತು ಸ್ಥಳೀಯ ಮಟ್ಟದಲ್ಲಿ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ನಡೆಸಿ, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ನೆರವಾಗುತ್ತಿದೆ.

I)ಸಿಐಐ-

  1.  
  2.  
  • i. ಪ್ರತಿ ಸ್ಪಂದನಾ ಉಪಕ್ರಮದಿಂದಾಗಿ 28 ರಾಜ್ಯಗಳ 50 ಲಕ್ಷ ಮಂದಿಗೆ ಅನುಕೂಲ.
  • ii. 13 ಮಾಸ್ಕ್, 7.5 ಲಕ್ಷ ಗ್ಲೌಸ್, 20,880 ಪಿಪಿಇ ಮತ್ತು 26.8 ಲಕ್ಷ ಸ್ಯಾನಿಟೈಸರ್/ಸೋಪು ಸೇರಿದಂತೆ 47 ಲಕ್ಷ ಶುಚಿತ್ವ ಸಾಮಗ್ರಿಗಳನ್ನು ಸೂಕ್ಷ್ಮ ವರ್ಗದ ಜನರು, ಪೊಲೀಸರು ಮತ್ತು ವೈದ್ಯಕೀಯ ಕಾರ್ಯಕರ್ತರಿಗೆ ವಿತರಣೆ.
  • iii. ನೌಕರರು, ಕಾರ್ಮಿಕರು, ವಲಸೆ ಕಾರ್ಮಿಕರು, ವಿಶೇಷಚೇತನರು, ಮಧ್ಯಮ ರೈತರು, ವೃದ್ಧರು, ಮಕ್ಕಳು, ಮಹಿಳಾ ಕೂಲಿಕಾರರು ಮತ್ತು ಆದಿವಾಸಿ ಬುಡಕಟ್ಟು ಜನರು ಸೇರಿದಂತೆ ಸುಮಾರು 20 ಲಕ್ಷ ಮಂದಿಗೆ ಆಹಾರ ಬೆಂಬಲ ನೀಡಲಾಗಿದೆ. ಅಗತ್ಯವಿರುವವರಿಗೆ 11.75 ಲಕ್ಷ ಬೇಯಿಸಿದ ಆಹಾರ ಮತ್ತು 12.5 ಲಕ್ಷ ಆಹಾರ ಕಿಟ್ ಮತ್ತು 1,650 ಮಿಲಿಯನ್ ಟನ್ ಆಹಾರಧಾನ್ಯಗಳನ್ನು ವಿತರಣೆ, ಹಲವು ರಾಜ್ಯಗಳಲ್ಲಿ ಸಮುದಾಯ ಅಡುಗೆ ಕೋಣೆಗಳ ಸ್ಥಾಪನೆ.
  • iv. ಫೌಂಡೇಶನ್ ಪಂಜಾಬ್ ಮತ್ತು ಹರಿಯಾಣದ ಆರು ಜಿಲ್ಲೆಗಳ 150 ಗ್ರಾಮಗಳಲ್ಲಿ ಹಲವು ಪರಿಹಾರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಸುಮಾರು 8,000 ಕೃಷಿ ಕೂಲಿಕಾರರು ಮತ್ತು ಮಧ್ಯಮ ರೈತ ಕುಟುಂಬಗಳಿಗೆ ಪಡಿತರ ಮತ್ತು ಶುಚಿತ್ವ ಕಿಟ್ ಗಳ ವಿತರಣೆಯೂ ಸೇರಿದೆ.
  • v. ವುಮೆನ್ ಎಕ್ಸ್ಂಪ್ಲರ್ ನೆಟ್ ವರ್ಕ್ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ದುರ್ಬಲ ಸಮುದಾಯದ ಸುಮಾರು 7,400 ಕುಟುಂಬಗಳಿಗೆ ಆಹಾರ ಕಿಟ್ ಗಳ ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ.

II) ಎಫ್ಐಸಿಸಿಐ:

  1.  
  2.  
  • vi. 3.23 ಕೋಟಿ ಸಿದ್ಧಪಡಿಸಲಾದ ಊಟ ಮತ್ತು 1,50,000 ಕಿಲೋ ಒಣ ಪಡಿತರ ಧಾನ್ಯಗಳನ್ನು ವಿತರಿಸಲಾಗಿದೆ.
  • vii. , ಸಿದ್ಧಪಡಿಸಿದ ಆಹಾರ, ಒಣ ಆಹಾರಧಾನ್ಯ, ಪಿಪಿಇ, ಸ್ಯಾನಿಟೈಸರ್, ವೈದ್ಯಕೀಯ ಉಪಕರಣ ಮತ್ತು ಪೂರೈಕೆ ಹಾಗೂ ವೈದ್ಯಕೀಯ ಸೌಕರ್ಯಗಳೂ ಸೇರಿ ಕೋವಿಡ್-19ಗೆ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಒಟ್ಟು 3009.56 ಕೋಟಿ ರೂ. ವ್ಯಯ ಮಾಡಲಾಗಿದೆ.
  • viii. ಕೇರ್ಸ್ ನಿಧಿಗೆ 5123.5 ಕೋಟಿ ರೂ. ದೇಣಿಗೆ ನೀಡಲಾಗಿದೆ.
  • ix. 58,57,500 ಮಾಸ್ಕ್ ಗಳು, 7,86,725 ಲೀಟರ್ ಸ್ಯಾನಿಟೈಸರ್, 25 ಲಕ್ಷ ಪಿಪಿಇ, 10,025 ವೆಂಟಿಲೇಟರ್ ಮತ್ತು 25,000 ಪರೀಕ್ಷಾ ಕಿಟ್ ಗಳನ್ನು ವಿತರಿಸಲಾಗಿದೆ.
  • x. 7 ಜನರಿಗೆ ನೀರಿನ ಎಟಿಎಂ ಸೌಕರ್ಯ ಕಲ್ಪಿಸಲಾಗಿದೆ.

III). ನಾಸ್ಕಮ್:

  1.  
  2.  
  • xi. 15 ಜನರಿಗೆ ಸಿದ್ಧಪಡಿಸಲಾದ ಊಟ, ಒಣ ಆಹಾರಧಾನ್ಯ ಮತ್ತು ಸುಮಾರು 5 ಲಕ್ಷ ಕುಟುಂಬಗಳಿಗೆ ಸ್ಯಾನಿಟೇಶನ್ ಕಿಟ್ ಗಳನ್ನು, 2.4 ಲಕ್ಷ ಮಾಸ್ಕ್ ಮತ್ತು ಗ್ಲೌಸ್, 3.5 ಲಕ್ಷ ಸೋಪು ಮತ್ತು ಸ್ಯಾನಿಟೈಸರ್ ಮತ್ತು 2,50,000 ಪಿಪಿಇ ಕಿಟ್ ಗಳನ್ನು ವಿತರಿಸಲಾಗಿದೆ.
  • xii. ಪರೀಕ್ಷಾ ವಿಧಾನದಡಿ ಸುಮಾರು 6500 ಮಾದರಿಗಳನ್ನು ಪರೀಕ್ಷಿಸಲಾಗಿದೆ.
  • xiii. 10,000ಕ್ಕೂ ಅಧಿಕ ಮಕ್ಕಳಿಗೆ ಆನ್ ಲೈನ್ ನಿರಂತರ ಕಲಿಕಾ ಸೌಕರ್ಯಕ್ಕಾಗಿ ಪ್ರಾಯೋಜಕತ್ವ ವಹಿಸಿಕೊಳ್ಳಲಾಗಿದೆ.
  • xiv. -19 ಕುರಿತ ಸಂಶೋಧನೆಗೆ 4.2 ಕೋಟಿ ರೂ. ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಸಿ) ನವೋದ್ಯಮಗಳು ಮತ್ತು ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳು, ಭಾರತೀಯ ಮಿತವ್ಯಯಗಳ ಬಳಕೆ:

ಕೋವಿಡ್-19 ಸಾಂಕ್ರಾಮಿಕ ತಂದೊಡ್ಡಿರುವ ಸವಾಲುಗಳಿಗೆ ದೇಶಾದ್ಯಂತ ಎಲ್ಲ ಉದ್ಯಮಿಗಳು ಮತ್ತು ಆವಿಷ್ಕಾರಿಗಳು ಅತ್ಯಂತ ಕ್ಷಿಪ್ರವಾಗಿ ಸ್ಪಂದಿಸಿರುವುದನ್ನು ಗುರುತಿಸಿರುವ ಇಜಿ 6 ಮತ್ತು ನೀತಿ ಆಯೋಗ, ಭಾರತೀಯ ನವೋದ್ಯಮಗಳು, ಅಮೆರಿಕದಲ್ಲಿನ ಭಾರತೀಯರ ನವೋದ್ಯಮಗಳು ಮತ್ತು ಇತರೆ ದೇಶಗಳೊಂದಿಗೆ ನಿರಂತರವಾಗಿ ಸಮಾಲೋಚನೆಯಲ್ಲಿ ತೊಡಗಿದ್ದು, ಆಮೂಲಕ ಹೊಸ ಆವಿಷ್ಕಾರ, ಕಡಿಮೆ ವೆಚ್ಚದ ವಿನ್ಯಾಸಗಳು ಮತ್ತು ಅಪ್ಲಿಕೇಶನ್ ಗಳ ಅಭಿವೃದ್ಧಿ, ಬೃಹತ್ ಉದ್ಯಮ ವೇದಿಕೆಗಳ ಜೊತೆ ಸಂಯೋಜನೆ ಮಾಡುವ ಕೆಲಸ ಮಾಡಿದೆ.

  • I. ವಾರಗಳಲ್ಲಿ ವಿಶ್ವ ವಿದ್ಯಾಲಯಗಳಿಂದ ಪ್ರೋತ್ಸಾಹಿಸಲ್ಪಟ್ಟಿದ್ದರಿಂದ ಹುಟ್ಟಿಕೊಂಡ ಹಲವು ನವೋದ್ಯಮಗಳು ಹೊಸ ಹೊಸ ಅನ್ವೇಷಣೆಗಳಲ್ಲಿ ತೊಡಗಿವೆ. ಅವುಗಳ ಉದಾಹರಣೆ ಎಂದರೆ ಸಾರ್ವಜನಿಕ ಸ್ಥಳಗಳು ಮತ್ತು ಕಚೇರಿಗಳ ಪ್ರವೇಶದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಸಿಂಪಡಿಸಲು ರೋಬೋಟ್ ಗಳ ಅಭಿವೃದ್ಧಿ, ಸೋಂಕಿನ ಬಗ್ಗೆ ಸಾರ್ವಜನಿಕ ಆರೋಗ್ಯ ಸಂದೇಶಗಳನ್ನು ರವಾನಿಸುವುದು, ಆಸ್ಪತ್ರೆಗಳ ಐಸೋಲೇಶನ್ ವಾರ್ಡ್ ಗಳಿಗೆ ಔಷಧ ಮತ್ತು ಆಹಾರ ಕೊಂಡೊಯ್ಯುವ ನವೋದ್ಯಮಗಳು ಕೆಲಸ ಮಾಡಿವೆ, ವೈದ್ಯರೊಂದಿಗೆ ಆನ್ ಲೈನ್ ಮೂಲಕ ಸಮಾಲೋಚನೆ ನಡೆಸಲು ಮತ್ತು ಮನೆಗಳಲ್ಲಿಯೇ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ನೆರವಾಗುವಂತೆ ಆಪ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಐಐಟಿ ಕಾನ್ಪುರ ಮತ್ತು ಐಐಟಿ ಹೈದ್ರಾಬಾದ್ ನಿಂದ ಉತ್ತೇಜಿಸಲ್ಪಟ್ಟ ನವೋದ್ಯಮಗಳು ಅತಿ ಕಡಿಮೆ ವೆಚ್ಚದ ಸುಲಭವಾಗಿ ಬಳಸಬಹುದಾದ ಮತ್ತು ಮಡಿಚಿಡಬಹುದಾದ ಹಾಗೂ ಗ್ರಾಮೀಣ ಪ್ರದೇಶಗಳಿಗೆ ನಿಯೋಜಿಸಬಹುದಾದ ವೆಂಟಿಲೇಟರ್ ಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿವೆ. ಕೆಲವು ರಾಜ್ಯಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಕುರಿತು ನಿಗಾವಹಿಸಲು ದ್ರೋಣ್ ಗಳನ್ನು ಬಳಕೆ ಮಾಡಲಾಗುತ್ತಿದೆ.
  • II. -19 ಎದುರಿಸಲು ವಿಶ್ವ ವಿದ್ಯಾಲಯಗಳು, ಕೈಗಾರಿಕೆಗಳು, ನವೋದ್ಯಮಗಳು ಮತ್ತು ಸರ್ಕಾರದ ಸಮಗ್ರ ಪ್ರಯತ್ನಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೈಗಾರಿಕಾ ಸಂಸ್ಥೆಗಳು, ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಉದಾಹರಣೆಗೆ ಸಿಐಐ, ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಐಐಟಿ ಕಾನ್ಪುರ, ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಎಸ್ ಸಿ ಬೆಂಗಳೂರು, ಇಡಿಸಿ ಪುಣೆ ಇವುಗಳ ನವೋದ್ಯಮಗಳು ವೆಂಟಿಲೇಟರ್ ಗಳ 28 ನಾವಿನ್ಯ ವಿನ್ಯಾಸ ಮತ್ತು ಪರಿಹಾರವನ್ನು ಈಗಾಗಲೇ ಸ್ವೀಕರಿಸಲಾಗಿದೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಿಐಐ ತಾನೇ ಆನ್ ಲೈನ್ ಕೋವಿಡ್-19 ಗಂಭೀರ ಸ್ವರೂಪದ ಅತ್ಯವಶ್ಯಕ ವಸ್ತುಗಳನ್ನು ಅಭಿವೃದ್ಧಿಪಡಿಸಿದೆ. ಅದರಲ್ಲಿ ಬೇಡಿಕೆ ಮತ್ತು ಪೂರೈಕೆ ನಡುವೆ ಸಂಪರ್ಕ ಕಲ್ಪಿಸುವ ವೇದಿಕೆಯಾಗಿದ್ದು, ಅದು ಉತ್ಪಾದಕರು ಮತ್ತು ಪೂರೈಕೆದಾರರ ನಡುವೆ ಹೊಂದಾಣಿಕೆ ಮಾಡಿಕೊಡಲಿದೆ.

III) ವೆಂಟಿಲೇಟರ್ ಪರಿಹಾರಗಳು:

  1.  

. ಆಗ್ವ : ಕಡಿಮೆ ವೆಚ್ಚದ ವೆಂಟಿಲೇಟರ್ ಅನ್ನು ನವೋದ್ಯಮ ಅಭಿವೃದ್ಧಿಪಡಿಸಿದ್ದು, ಇದನ್ನು ಎಲ್ಲೆಂದರಲ್ಲಿ ಸುಲಭವಾಗಿ ಸಾಗಿಸಬಹುದಾಗಿದೆ ಮತ್ತು ಅದನ್ನು ಆಂಬುಲೆನ್ಸ್ ಗಳಲ್ಲಿ ಕಾರ್ಯಾಚರಣೆಗೊಳಿಸಬಹುದಾಗಿದ್ದು, ಸಣ್ಣ ಹೊಟೇಲ್ ಕೋಣೆಗಳೂ ಸೇರಿದಂತೆ ಕೋವಿಡ್ ವಾರ್ಡ್ ಗಳಲ್ಲಿ ಬಳಸಬಹುದು. ಚಿಕ್ಕದಾಗಿರುವ ಕಡಿಮೆ ವಿದ್ಯುತ್ ಬಳಸುವ ಮತ್ತು ಆಪರೇಟರ್ ಗಳಿಗೆ ಕನಿಷ್ಠ ತರಬೇತಿ ಅಗತ್ಯ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿದೆ. ನವೋದ್ಯಮಕ್ಕೆ ಪ್ರಸ್ತುತ ಪ್ರತಿ ತಿಂಗಳು ಸುಮಾರು 20,000 ಘಟಕಗಳನ್ನು ಸಿದ್ಧಪಡಿಸುವ ಸಾಮರ್ಥ್ಯವಿದ್ದು ಮತ್ತು ಇದು ವೆಂಟಿಲೇಟರ್ ಉತ್ಪಾದನೆಯ ಪ್ರಮುಖ ಕಂಪನಿಯಾಗಿದೆ.

ಬಿ. ಜೈವಿಕ ವಿನ್ಯಾಸ: ರೋಬೋಟಿಕ್ ಉತ್ಪನ್ನ ರೆಸ್ಪಿರ್ ಏಡ್ ಅಭಿವೃದ್ಧಿಪಡಿಸಲಾಗಿದ್ದು, ಇದು ಮಾನವರು ನಿರ್ವಹಿಸುವ ವೆಂಟಿಲೇಟರ್ ಗಳನ್ನು ಯಾಂತ್ರಿಕೃತವಾಗಿ ನಿರ್ವಹಿಸಬಹುದು. ಉತ್ಪನ್ನದಲ್ಲಿ ಎರಡು ರೋಬೋಟಿಕ್ ವಿಭಾಗಗಳಿದ್ದು, ಜೊತೆಗೆ ಧ್ವನಿ ನಿಯಂತ್ರಣ ವ್ಯವಸ್ಥೆಯೂ ಇದೆ. ಇದನ್ನು ರೋಗಿಗೆ ಇಂಟಿಬ್ಯೂಟ್ (ಕೊಳವೆ ಚಿಕಿತ್ಸೆ) ಮಾಡಲು ಮತ್ತು ಶಾಂತಗೊಳಿಸಲು ಯಾವುದೇ ವ್ಯಕ್ತಿ ಬಳಸಬಹುದು. ಪ್ರಸ್ತುತ ಪ್ರತಿ ತಿಂಗಳು ಸುಮಾರು 2,000 ರೆಸ್ಪಿರ್ ಏಡ್ ಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ.

ಸಿ. ಕಾನಾತ್: ಉತ್ಪನ್ನ ಕನಿಷ್ಠ ವೆಂಟಿಲೇಟರ್ ರೀತಿಯಲ್ಲಿ ಕಾರ್ಯನಿರ್ವಹಿಸಬಹುದಾಗಿದ್ದು, ಇದನ್ನು ಬಳಸಲು ಆಶಾ ಕಾರ್ಯಕರ್ತರು ಮತ್ತು ಇತರರಿಗೆ ತರಬೇತಿ ನೀಡಬಹುದಾಗಿದೆ ಇದು ಪೋರ್ಟಬಲ್ ಆಗಿದೆ. ವೆಂಟಿಲೇಟರ್ ಅನ್ನು ಏಕ ಕಾಲದಲ್ಲಿ ಇಬ್ಬರು ರೋಗಿಗಳಿಗೆ ಬಳಸಬಹುದಾಗಿದೆ ಮತ್ತು ಅದರೊಳಗೆ ಬ್ಯಾಟರಿ, ಆಕ್ಸಿಜನ್ ಕಾನ್ಸನ್ ಟ್ರೇಟರ್ ಮತ್ತು ಸ್ಟೆರಲೈಸರ್ ಕ್ಯಾಬಿನೆಟ್ ಕೂಡ ಇರಲಿದೆ. ಇದರ ಮಾದರಿ ಸಿದ್ಧವಿದ್ದು, ಕಂಪನಿ ವರ್ಷದ ಜೂನ್ ಅಂತ್ಯದ ವೇಳೆಗೆ ಪ್ರತಿ ತಿಂಗಳು ಸುಮಾರು 5,000 ಉಪಕರಣಗಳನ್ನು ಉತ್ಪಾದಿಸುವ ಸಾಮರ್ಥ್ಯ ಎದುರು ನೋಡುತ್ತಿದೆ.

IV) ಇತರೆ ಪರಿಹಾರಗಳು:

  1.  

ಡಿ. ಕ್ಯೂರ್.ಏಐ: ನವೋದ್ಯಮ ಎದೆ ಕ್ಷ-ಕಿರಣ(ಎಕ್ಸರೆ)ಗಳನ್ನು ವಿಶ್ಲೇಷಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಪ್ರತಿ ದಿನ ಸುಮಾರು 10,000 ಎಕ್ಸರೆ ಸಂಸ್ಕರಿಸುವ ಸಾಮರ್ಥ್ಯವಿದೆ. ಪ್ರಸ್ತುತ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಹಲವು ಸಂಶೋಧನಾ ಬೆಳವಣಿಗೆಗಳಲ್ಲಿ ಸಿಎಸ್ಆರ್ ಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಸಾಮರ್ಥ್ಯ ಪ್ರದರ್ಶನಗಳು ಕಂಡುಬಂದಿದ್ದು, ಇದರ ಫಲಿತಾಂಶಗಳನ್ನು ಜಾರಿಗೊಳಿಸಬಹುದಾಗಿದೆ. ಅವುಗಳ ರಾಷ್ಟ್ರೀಯ ಭಾಷಾ ಸಂಸ್ಕರಣೆ (ಎನ್ಎಲ್ ಪಿ) ಆಧಾರಿತ ಕೃತಕ ಬುದ್ಧಿಮತ್ತೆ ಛಾಟ್ ಬಾಟ್ ಅನ್ನು ಕೋವಿಡ್-19 ಸೋಂಕಿರುವ ವ್ಯಕ್ತಿಗಳ ಮೇಲೆ ನಿಗಾ ಇಡಲು ಬಳಸಬಹುದು.

. ದ್ರೋಣಂಆಪ್ಸ್: ಅತ್ಯಾಧುನಿಕ ಭೌಗೋಳಿಕ ಮಾಹಿತಿ ವ್ಯವಸ್ಥೆ(ಜಿಐಎಸ್) ಮತ್ತು ಜಿಯೋ-ಫೆನ್ಸಿಂಗ್ ಆಧಾರಿತ ಮ್ಯಾಪ್ ಗಳನ್ನು ನವೋದ್ಯಮ ಅಭಿವೃದ್ಧಿಪಡಿಸಿದ್ದು, ಅದನ್ನು ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಗುಂಪು ಕಾರ್ಯತಂತ್ರ ಮಾಹಿತಿಗಾಗಿ ಬಳಸಬಹುದಾಗಿದೆ.

  • . ಎಂಫೈನ್: ಇದು ಕೃತಕ ಬುದ್ಧಿಮತ್ತೆ ಆಧರಿಸಿದ ಆನ್ ಲೈನ್ ವೈದ್ಯರ ಸಮಾಲೋಚನೆ ಮತ್ತು ಟೆಲಿ ಮೆಡಿಸನ್ ವೇದಿಕೆಯಾಗಿದೆ. ಇದು ಡಯಾಗ್ನಾಸ್ಟಿಕ್ ಪ್ರಯೋಗಾಲಯಗಳು ಮತ್ತು ಫಾರ್ಮರ್ಸಿ ಇತ್ಯಾದಿಗಳ ನಡುವೆ ಸಂಪರ್ಕ ಕಲ್ಪಿಸಲಿದೆ. ವೇದಿಕೆಯಡಿ ವೈದ್ಯರ ಸಮಾಲೋಚನೆಗೆ ವಿಡಿಯೋ ಉಪಕರಣವನ್ನೂ ಸಹ ಬೆಂಬಲಿಸುತ್ತದೆ.

ಜಿ. ಮೈಕ್ರೋಗೊ: ನವೋದ್ಯಮ ಮಂಚೂಣಿಯಲ್ಲಿರುವ ವೈದ್ಯಕೀಯ ವೃತ್ತಿಪರರಿಗಾಗಿ ಕೈತೊಳೆಯುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಅದಕ್ಕೆ ಕನಿಷ್ಠ ಸಂಪನ್ಮೂಲಗಳ ಬಳಕೆ ಮಾಡಲಾಗಿದ್ದು, ಅದು ಬಳಕೆ ಮಾಡಿರುವ ದತ್ತಾಂಶವನ್ನು ಸಂಗ್ರಹಿಸಲಿದೆ. ನವೋದ್ಯಮಕ್ಕೆ ಪ್ರಸ್ತುತ ದಿನಕ್ಕೆ 100 ಉಪಕರಣಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಎಚ್. ಸ್ಟಾಕ್ಯೂ: ಕಂಪನಿ ಕೃತಕ ಬುದ್ಧಿಮತ್ತೆ ಆಧಾರಿತ ಥರ್ಮಲ್ ಇಮೇಜಿಂಗ್ ಕ್ಯಾಮರಾಅನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ತಪಾಸಣೆಗಾಗಿ ಬಳಕೆ ಮಾಡಲಾಗುವುದು ಮತ್ತು ಪ್ರಸ್ತುತ ಅದನ್ನು ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಅಗತ್ಯ ಸೇವೆಗಳು ಮತ್ತು ಅಗತ್ಯವಿರುವ ನಾಗರಿಕರಿಗೆ -ಪಾಸ್ ಸೃಷ್ಟಿಸಲು ಬಳಕೆ ಮಾಡಲಾಗುತ್ತಿದೆ.

. ಬೆಮೆಲ್ ರೈಲು ಕೋಚ್ ವಿಭಾಗ: ಇವುಗಳಲ್ಲದೆ, ಹಳೆಯ ರೈಲು ಬೋಗಿಯನ್ನು ನಡೆದಾಡುವ ಸೋಂಕು ನಿವಾರಕ ಸುರಂಗವನ್ನಾಗಿ ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ವಿನೂತನ ಪ್ರಯತ್ನಗಳು ನಡೆದಿವೆ. ಅಂಬುಜಾ ಸಿಮೆಂಟ್ ಫೌಂಡೇಶನ್ ಮತ್ತು ಎಸಿಸಿ ಟ್ರಸ್ಟ್, ನೂರಾರು ಗ್ರಾಮಗಳಿಗೆ ಏಕಕಾಲದಲ್ಲಿ ಸೋಂಕು ದ್ರಾವಣ ಸಿಂಪಡಿಸುವ ವಾಹನ ಮತ್ತು ಟ್ಯಾಂಕರ್ ಗಳನ್ನು ಅಭಿವೃದ್ಧಿಪಡಿಸಿದೆ.

ಜೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಿಯಮವಾಗಿರುವ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಅದಕ್ಕಾಗಿ ಪರಿಹಾರ ಕಂಡುಕೊಳ್ಳಲು ಡಿಜಿಟಲ್ ಅಪ್ಲಿಕೇಶನ್ ಗಳನ್ನು ಬಳಕೆ ಮಾಡುತ್ತಿವೆ. ಎಸ್ಎಪಿ ತನ್ನ ತಂತ್ರಜ್ಞಾನಗಳಿಗೆ ಮುಕ್ತ ಅವಕಾಶ ಕಲ್ಪಿಸಿದ್ದು, ಅದನ್ನು ಸೋಂಕು ತಡೆ ನಿಯಂತ್ರಣಕ್ಕೆ ಬಳಸಬಹುದಾಗಿದೆ. ಐಬಿಎಂ, ವಲ್ಡ್ ಕಮ್ಯುನಿಟಿ ಗ್ರಿಡ್ ಜೊತೆ ತಂಡವನ್ನು ಕಟ್ಟಿಕೊಂಡು, ಐಬಿಎಂ ಸಾಮಾಜಿಕ ಪರಿಣಾಮ ಉಪಕ್ರಮವನ್ನು ಆರಂಭಿಸಿದ್ದು, ಅದರಡಿ ಯಾವುದೇ ಕಂಪ್ಯೂಟರ್ ಮತ್ತು ಅಂತರ್ಜಾಲ ಸಂಪರ್ಕ ಹೊಂದಿರುವ ವ್ಯಕ್ತಿ ತನ್ನ ಉಪಕರಣವನ್ನು ವಿಶ್ವದ ಅತಿದೊಡ್ಡ ಸಮಸ್ಯೆಗಳಾಗಿರುವ ಆರೋಗ್ಯ ಮತ್ತು ಸುಸ್ಥಿರತೆ ಕುರಿತು ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಳ್ಳಲು ನೆರವನ್ನು ದೇಣಿಗೆಯಾಗಿ ಕೊಡಬಹುದು. ಮೈಕ್ರೋಸಾಫ್ಟ್ ತಂತ್ರಜ್ಞಾನ ಪಂಜಾಬ್ ಸರ್ಕಾರದ ಬೆಂಬಲದೊಂದಿಗೆ ಕೋವಾ ಅಭಿವೃದ್ಧಿಪಡಿಸಿದ್ದು, ಅಂದರೆ ಕೋವಿಡ್-19 ಕುರಿತ ಖಚಿತ ಮಾಹಿತಿ ಮತ್ತು ಸಕಾಲದಲ್ಲಿ ನೆರವು ನೀಡುವ ಆಪ್ ಇದಾಗಿದೆ.

6. ಆರೋಗ್ಯ ಸೇತು: ಟೆಲಿಮೆಡಿಸನ್ ಅಂಶ ಒಳಗೊಂಡಿರುವ ಅತಿದೊಡ್ಡ ಅಪಾಯ ಅಂದಾಜು ಮಾಡುವ ಮೊಬೈಲ್ ವೇದಿಕೆ

ಇಜಿ 6 ಎಲ್ಲ ಸಿಎಸ್ಒ, ಎನ್ ಜಿಒ, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಉದ್ಯಮ ಪಾಲುದಾರರಿಗೆ ತಮ್ಮ ಕಾರ್ಯಾಚರಣೆಗಳಲ್ಲಿ ಆರೋಗ್ಯ ಸೇತು ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವಂತೆ ಆಗ್ರಹಿಸಿದೆ. ಅಪ್ಲಿಕೇಶನ್ ಅಡಿ ಕೋವಿಡ್-19 ಸೋಂಕಿಗೆ ಒಳಗಾಗುವ ಸಾಧ್ಯತೆಗಳನ್ನು ಅಂದಾಜಿಸಲು ಜನರಿಗೆ ನೆರವಾಗಲಿದ್ದು, ಇದರಲ್ಲಿ ಕಟಿಂಗ್ ಎಡ್ಜ್ ಬ್ಲೂಟೂತ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಆಧರಿಸಿದ ಆಲ್ಗೊರಿಥಮ್ಸ್ ಮೂಲಕ ಬೇರೆಯವರೊಂದಿಗೆ ಸಂವಾದ ನಡೆಸಬಹುದು. ಇದು ವಿಶ್ವದ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಅದು ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಗೂಗಲ್ ಪ್ಲೇಸ್ಟೋರ್ ನಿಂದ ಸುಮಾರು 80 ಮಿಲಿಯನ್ ಗೂ ಅಧಿಕ ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ.

ಅದು ಇದೀಗ ಆನ್ ಲೈನ್ ಟೆಲಿಮೆಡಿಸನ್ ಮತ್ತು ವೈದ್ಯಕೀಯ ಸಮಾಲೋಚನೆಗಳು (ಕರೆ ಮತ್ತು ವಿಡಿಯೋ), ಹೋಮ್ ಲ್ಯಾಬ್ ಟೆಸ್ಟ್ ಮತ್ತು -ಫಾರ್ಮಸಿ ಸೇವೆಯನ್ನು ಒದಗಿಸುತ್ತಿದೆ. ಆರೋಗ್ಯಸೇತುಮಿತ್ರ ಎಂಬ ಹೊಸ ಅಂಶವನ್ನು ಒಳಗೊಂಡ ಆಪ್ ಅನ್ನು ನೀತಿ ಆಯೋಗ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ನಾಯಕತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆರೋಗ್ಯಸೇತುಮಿತ್ರದಲ್ಲಿ ಸಂಸ್ಥೆಗಳು, ಕೈಗಾರಿಕಾ ಒಕ್ಕೂಟಗಳು ಮತ್ತು ನವೋದ್ಯಮಗಳು ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳಬಹುದು.

7. ಪಿಪಿಇ ಮತ್ತು ಪರೀಕ್ಷಾ ಕಿಟ್ ಗಳು

ಇಜಿ 6, ಕೋವಿಡ್-19ಗೆ ಸಂಬಂಧಿಸಿದ ಉಪಕರಣಗಳನ್ನು ಉಚಿತವಾಗಿ ನೀಡಲು ಹಲವು ಪಾಲುದಾರರೊಂದಿಗೆ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ.

· ಆರ್ ಟಿಪಿಸಿಆರ್ ಪರೀಕ್ಷಾ ಕಿಟ್ ಗಳು- ಟೇಮಾಸೆಕ್(TEMASEK) ವತಿಯಿಂದ 70,000 ಕಿಟ್ ಗಳನ್ನು ಒದಗಿಸಲಾಗಿದೆ.

· ಆರ್ ಟಿಪಿಸಿಆರ್ ಪರೀಕ್ಷಾ ಕಿಟ್ ಗಳು ಬಿಎಂಜಿಎಫ್ ಫೌಂಡೇಶನ್ ನಿಂದ 30,000 ಕಿಟ್ ಗಳ ವಿತರಣೆ(ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ನೀಡಲಾಗಿದೆ)

· ಅಭಿವೃದ್ಧಿ ಪಾಲುದಾರರು ಮತ್ತು ದಾನಿಗಳ ಮೂಲಕ 3 ಲಕ್ಷ ಎನ್95 ಮತ್ತು 5 ಲಕ್ಷ ಸರ್ಜಿಕಲ್ ಮಾಸ್ಕ್ ವಿತರಣೆ.

ಕೋವಿಡ್-19 ಎದುರಿಸಲು ಎಲ್ಲ ಸಂಬಂಧಿಸಿದವರ ಆಯಾ ವಲಯದಲ್ಲಿನ ನಿರ್ದಿಷ್ಟ ಪ್ರಯತ್ನಗಳನ್ನು ಒಂದುಗೂಡಿಸಲು ಉನ್ನತಾಧಿಕಾರ ಸಮಿತಿ 6, ಒಂದು ಸಮಗ್ರ ವೇದಿಕೆಯನ್ನು ಒದಗಿಸುತ್ತಿದೆ. ಇದರಲ್ಲಿ ರಾಜ್ಯಗಳು ಮತ್ತು ಜಿಲ್ಲಾಡಳಿತಗಳಲ್ಲದೆ ಸೂಕ್ಷ್ಮ ಹಂತದಲ್ಲಿ ವಿಶ್ವ ಸಂಸ್ಥೆಯ ಏಜೆನ್ಸಿಗಳು, ಸಿಎಸ್ಒಗಳು, ಎನ್ ಜಿಒಗಳು, ನವೋದ್ಯಮಗಳು ಮತ್ತು ಕೈಗಾರಿಕಾ ಪಾಲುದಾರರ ನಡುವೆ ಸಮನ್ವಯದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಜಿ 6, ಪಿಪಿಇಗಳು ಮತ್ತು ವೆಂಟಿಲೇಟರ್ ಗಳ ಖರೀದಿ, ಎಂಇಎ ಪಾತ್ರ, ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಂವಹನ, 92,000 ಸಿಎಸ್ಒಗಳ ಭಾಗಿ, ಅವುಗಳು ಪರಸ್ಪರ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳುವುದು, ಸಮನ್ವಯ ಪ್ರಕ್ರಿಯೆಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಯಾವುದೇ ಅಡೆತಡೆಯಾಗದಂತೆ ತಕ್ಷಣಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಸೇರಿದಂತೆ ಎಲ್ಲ ಸರ್ಕಾರಗಳು ಮತ್ತು ಸಂಬಂಧಿಸಿದವರು ನಡುವೆ ಅಗತ್ಯ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದೆ. ಅಲ್ಲದೆ ಖರೀದಿ(ಇಜಿ 3), ಸಾಗಾಣೆ(ಇಜಿ 5) ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದ ಉನ್ನತಾಧಿಕಾರ ಸಮಿತಿಗಳು ಹಾಗೂ ಉದ್ಯಮದೊಂದಿಗೆ ನಿರ್ದಿಷ್ಟ ವಿಷಯಗಳಲ್ಲಿ ಸಂಪರ್ಕ ಕಲ್ಪಿಸಲು ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸಿ, ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ.

***



(Release ID: 1621538) Visitor Counter : 293