ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಆಮದು ಬದಲಿ ನೀತಿಯ ಕುರಿತು ಚಿಂತನೆ: ಶ್ರೀ ನಿತಿನ್ ಗಡ್ಕರಿ

Posted On: 05 MAY 2020 5:42PM by PIB Bengaluru

ಆಮದು ಬದಲಿ ನೀತಿಯ ಕುರಿತು ಚಿಂತನೆ: ಶ್ರೀ ನಿತಿನ್ ಗಡ್ಕರಿ

ಮನರಂಜನಾ ಉದ್ಯಮದಲ್ಲಿ ಅಸಂಘಟಿತ ವಲಯದ ಹೆಚ್ಚಿನ ಔಪಚಾರಿಕೀಕರಣಕ್ಕೆ ಸಚಿವ ಶ್ರೀ ಗಡ್ಕರಿ ಒತ್ತು

 

ಕೊವಿಡ್-19 ಸಾಂಕ್ರಾಮಿಕ ರೋಗವು ಸೃಷ್ಟಿಸಿದ ಹೊಸ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಮದು ಮಾಡುವ ವಸ್ತುಗಳನ್ನು ದೇಶದೊಳಗೆ ಸ್ಥಳೀಯವಾಗಿ ಉತ್ಪಾದಿಸುವ ನೂತನ ಆಮದು ಬದಲಿ ನೀತಿ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಕೇಂದ್ರ ಎಂ.ಎಸ್‌.ಎಂ.ಇ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಾವೀನ್ಯತೆಗಳ ಮೂಲಕ ಗುಣಮಟ್ಟವನ್ನು ಸುಧಾರಿಸುವ ಮತ್ತು ವೆಚ್ಚವನ್ನು ಕಡಿತಗೊಳಿಸುವ ಮೂಲಕ ಜ್ಞಾನವನ್ನು ಸಂಪತ್ತಾಗಿ ಪರಿವರ್ತಿಸಲು ಅವರು ಉದ್ಯಮ ಕ್ಷೇತ್ರದ ವಿವಿಧ ಪಾಲುದಾರರಿಗೆ ಕರೆ ನೀಡಿದರು. ನಾಗ್ಪುರ ಮೂಲದ ಎಂ.ಎಸ್‌.ಎಂ.ಇ ಆರೆಂಜ್ ಕ್ಲಸ್ಟರ್ ಮೊದಲಿನಿಂದಲೂ ಪಿಪಿಇ ತಯಾರಿಕೆಯನ್ನು ತೆಗೆದುಕೊಳ್ಳುವ ಉದಾಹರಣೆಯನ್ನು ಅವರು ಸಂದರ್ಭದಲ್ಲಿ ಉಲ್ಲೇಖಿಸಿದರು. ಯಾವ ದೇಶವು ಹೆಚ್ಚು ಆಮದು ಅವಲಂಬಿತವಾಗಿದೆ ಅಲ್ಲಿ ಈ ಪಿ.ಪಿ..ಗಳು ಸುಮಾರು ರೂ.1200 ಗಳ ಮಾರುಕಟ್ಟೆ ಬೆಲೆಯ ಬದಲಾಗಿ ಈ ಸಂಸ್ಥೆಗೆ ರೂ. 550 ರಿಂದ 650.ಗಳವರೆಗೆ ವೆಚ್ಚವಾಗುತ್ತವೆ, ಇಂದು ಈ ಸಂಸ್ಥೆ , ಕ್ಲಸ್ಟರ್ ದೊಡ್ಡ ಪ್ರಮಾಣದ ಪಿಪಿಇಗಳನ್ನು ಪೂರೈಸುವ ಸ್ಥಿತಿಯಲ್ಲಿದೆ.

ಆರಂಭಿಕ ಪರಿಸರ ವ್ಯವಸ್ಥೆ ಮತ್ತು ಎಂ.ಎಸ್‌.ಎಂ.ಇ.ಗಳ ಮೇಲೆ ಕೊವಿಡ್-19 ರ ಪ್ರಭಾವದ ಕುರಿತು ಅಸೋಸಿಯೇಷನ್ ಆಫ್ ಲೇಡಿ ಎಂಟರ್‌ಪ್ರೆನರ್ಸ್ ಆಫ್ ಇಂಡಿಯಾ (ಎ.ಎಲ್.ಇ.ಎ.ಪಿ) ದ ಪ್ರತಿನಿಧಿಗಳು ಮತ್ತು ತಾಂತ್ರಿಕ ಸೇವಾ ಪೂರೈಕೆದಾರರು ಮತ್ತು ಮನರಂಜನಾ ವಲಯದ ಪ್ರದರ್ಶನ ಕಲಾವಿದರೊಂದಿಗೆ ಕೇಂದ್ರ ಸಚಿವ ಶ್ರೀ ಗಡ್ಕರಿ ಅವರು ವಿಡಿಯೋ ಸಂವಾದ ಮೂಲಕ ಜರುಗಿದ ಸಭೆಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ಸಭೆಯಲ್ಲಿ ಭಾಗವಹಿಸಿದ ಇತರರಲ್ಲಿ ಖ್ಯಾತ ಗಾಯಕರಾದ ಶ್ರೀ ಸೋನು ನಿಗಮ್, ಶ್ರೀ ನಿತಿನ್ ಮಿಕೇಶ್ ಮತ್ತು ಶ್ರೀ ತಲಾತ್ ಅಜೀಜ್ ಅವರು ಕೂಡಾ ಸೇರಿದ್ದಾರೆ.

ರಫ್ತು ವರ್ಧನೆಗೆ ವಿಶೇಷ ಗಮನವು ಸಮಯದ ಅವಶ್ಯಕತೆಯಾಗಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಲು ವಿದ್ಯುತ್ ವೆಚ್ಚ, ಲಾಜಿಸ್ಟಿಕ್ಸ್ ವೆಚ್ಚ ಮತ್ತು ಉತ್ಪಾದನಾ ವೆಚ್ಚ ಮುಂತಾದವನ್ನು ಕಡಿಮೆ ಮಾಡಲು ಅಗತ್ಯ ಅಭ್ಯಾಸ, ಕಾರ್ಯಯೋಜನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ಇದಲ್ಲದೆ, ವಿದೇಶಿ ಆಮದನ್ನು ದೇಶೀಯ ಉತ್ಪಾದನೆಯೊಂದಿಗೆ ಬದಲಿಸಲು ಹಾಗೂ ಆಮೂಲಕ ಆಮದು ಬದಲಾಗಿ ಪರ್ಯಾಯ ಮಾರ್ಗಗಳ ಬಗ್ಗೆಯೂ ಗಮನಹರಿಸಬೇಕಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಉದ್ಯಮವು ನಾವೀನ್ಯತೆ, ಉದ್ಯಮಶೀಲತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನಾ ಕೌಶಲ್ಯ ಮತ್ತು ಜ್ಞಾನವನ್ನು ಸಂಪತ್ತಾಗಿ ಪರಿವರ್ತಿಸಲು ಅನುಭವಗಳ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಕೇಂದ್ರ ಸಚಿವ ಶ್ರೀ ಗಡ್ಕರಿ ಅವರು ಹೇಳಿದರು.

ಮನರಂಜನಾ ಉದ್ಯಮದ ಹೆಚ್ಚಿನ ಔಪಚಾರಿಕೀಕರಣದ ಅಗತ್ಯವನ್ನು ಕೇಂದ್ರ ಸಚಿವ ಶ್ರೀ ಗಡ್ಕರಿ ಒತ್ತಿ ಹೇಳಿದರು. ಎಂ.ಎಸ್‌.ಎಂ.. ಸಚಿವಾಲಯದ ವಿವಿಧ ಯೋಜನೆಗಳ ಲಾಭ ಪಡೆಯಲು ಎಂ.ಎಸ್‌.ಎಂ..ಗಳಾಗಿ ನೋಂದಾಯಿಸಲು ಅವರು ಸೂಚಿಸಿದರು.

ಜನರ ಜೀವನೋಪಾಯವನ್ನು ಖಾತರಿಪಡಿಸುವಾಗ ಎಲ್ಲಾ ಪಾಲುದಾರರು ಮತ್ತು ಮಧ್ಯಸ್ಥಗಾರರು ಬಿಕ್ಕಟ್ಟನ್ನು ಎದುರಿಸಲು ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಈ ಸಮಯದಲ್ಲಿ ಈ ಬಿಕ್ಕಟ್ಟನ್ನು ಎದುರಿಸಲು ಉದ್ಯಮವು ಸಕಾರಾತ್ಮಕ ಮನೋಭಾವವನ್ನು ಹೊಂದಿರಬೇಕು ಎಂದು ಕೇಂದ್ರ ಸಚಿವ ಶ್ರೀ ಗಡ್ಕರಿ ಆಗ್ರಹಿಸಿದರು.

ಚೀನಾದಿಂದ ಜಪಾನಿನ ಹೂಡಿಕೆಗಳನ್ನು ತೆಗೆದುಕೊಂಡು ಬೇರೆಡೆಗೆ ಹೋಗಲು ಜಪಾನ್ ಸರ್ಕಾರ ತನ್ನ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡಿದೆ ಎಂದು ಸಚಿವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಇದು ಭಾರತಕ್ಕೆ ದೊರಕಬೇಕಾದ ಅವಕಾಶ , ಇದನ್ನು ನಾವು ಎಲ್ಲರೂ ಸೇರಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂವಾದದ ಸಮಯದಲ್ಲಿ, ಕೊವಿಡ್-19 ಸಾಂಕ್ರಾಮಿಕದ ನಡುವೆ ಕೆಲವು ಸಲಹೆಗಳೊಂದಿಗೆ ಮನರಂಜನಾ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಂ.ಎಸ್‌.ಎಂ..ಗಳು ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದರು ಮತ್ತು ಈ ವಲಯವನ್ನು ಸಮಸ್ಯೆಗಳಿಂದ ಪಾರುಮಾಡಲು ಸರ್ಕಾರದಿಂದ ಬೆಂಬಲವನ್ನು ಕೋರಿದರು.

ಪ್ರಸ್ತಾವನೆ ಮಾಡಲಾದ ಕೆಲವು ಪ್ರಮುಖ ವಿಷಯಗಳು ಮತ್ತು ನೀಡಿರುವ ಸಲಹೆಗಳು: ಎಸ್‌.ಎಂ..ಗಳಿಗೆ ತಂತ್ರಜ್ಞಾನಗಳನ್ನು ವರ್ಗಾಯಿಸಲು ಯಾವುದೇ ಪರವಾನಗಿ ಶುಲ್ಕವಿಲ್ಲ, ಬುಡಕಟ್ಟು ಪ್ರದೇಶಗಳಿಗೆ ಜೀವನೋಪಾಯವನ್ನು ಉತ್ತೇಜಿಸುವ ಯೋಜನೆಗಳ ಪ್ರಸಾರ, ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಫಾರ್ಮಾ ವಲಯದ ಎಸ್‌.ಎಂ..ಗಳಿಗೆ ಬೆಂಬಲ ಮತ್ತು ಆರ್‌.ಬಿ.ಐ ನೀಡಿದ 3 ತಿಂಗಳ ಸಾಲವಿರಾಮವನ್ನು ಮತ್ತಷ್ಟು ವಿಸ್ತರಿಸುವುದು, ಲಘು/ಮೃದು ಸಾಲವನ್ನು ವಿಸ್ತರಿಸುವುದು, ಜಿ.ಎಸ್‌.ಟಿ ಮುಂದೂಡುವುದು / ಕಡಿಮೆ ಮಾಡುವುದು ಇತ್ಯಾದಿ.

ಪ್ರತಿನಿಧಿಗಳ ಪ್ರಶ್ನೆಗಳಿಗೆ ಸಚಿವ ಶ್ರೀ ಗಡ್ಕರಿ ಪ್ರತಿಕ್ರಿಯಿಸಿದರು ಮತ್ತು ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಭರವಸೆ ನೀಡಿದರು. ಸಂಬಂಧಿತ ಇಲಾಖೆಗಳೊಂದಿಗೆ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವುದಾಗಿ ಮಾಹಿತಿ ನೀಡಿದರು.

ಉದ್ಯಮವು ಸಕಾರಾತ್ಮಕ ವಿಧಾನವನ್ನು ತೆಗೆದುಕೊಳ್ಳಬೇಕು ಮತ್ತು ಕೊವಿಡ್-19 ಬಿಕ್ಕಟ್ಟು ಎದುರಾದಾಗ ಸೃಷ್ಟಿಯಾಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

 

***



(Release ID: 1621524) Visitor Counter : 191