ನಾಗರೀಕ ವಿಮಾನಯಾನ ಸಚಿವಾಲಯ

ಕೋವಿಡ್ -19 ಲಾಕ್‌ಡೌನ್ ಅವಧಿಯಲ್ಲಿ 452 ವಿಮಾನಗಳು ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ ಕಾರ್ಯನಿರ್ವಹಣೆ

Posted On: 05 MAY 2020 7:12PM by PIB Bengaluru

ಕೋವಿಡ್ -19 ಲಾಕ್‌ಡೌನ್ ಅವಧಿಯಲ್ಲಿ 452 ವಿಮಾನಗಳು ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ ಕಾರ್ಯನಿರ್ವಹಣೆ

 

ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ ಒಟ್ಟು 452 ವಿಮಾನಗಳನ್ನು ಏರ್ ಇಂಡಿಯಾ, ಅಲೈಯನ್ಸ್ ಏರ್, ಐ.ಎ.ಎಫ್ ಮತ್ತು ಖಾಸಗಿ ವಿಮಾನ ಸರಕು ವಾಹಕಗಳು ನಿರ್ಣಾಯಕ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಾಟ ಮಾಡಲು ಕಾರ್ಯ ನಿರ್ವಹಿಸಿವೆ. ಈ ಪೈಕಿ 272 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸಿವೆ. ಇಲ್ಲಿಯವರೆಗೆ ಸಾಗಿಸಿದ ಸರಕು ಸುಮಾರು 824.44 ಟನ್ ಆಗಿದೆ. ಇಲ್ಲಿಯವರೆಗೆ ಲೈಫ್‌ಲೈನ್ ಉಡಾನ್ ವಿಮಾನಗಳು ಆವರಿಸಿರುವ ಒಟ್ಟು ವೈಮಾನಿಕ ದೂರ 4,41,564 ಕಿ.ಮೀ. ಕೊವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಅಗತ್ಯ ವೈದ್ಯಕೀಯ ಸರಕುಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ‘ಲೈಫ್‌ಲೈನ್ ಉಡಾನ್’ ವಿಮಾನಗಳನ್ನು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯ ನಿರ್ವಹಿಸುತ್ತಿದೆ.

ಪವನ್ ಹ್ಯಾನ್ಸ್ ಲಿಮಿಟೆಡ್ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್, ದ್ವೀಪಗಳು ಮತ್ತು ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿ ನಿರ್ಣಾಯಕ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಿಸುತ್ತಿವೆ. 4 ಮೇ, 2020 ರವರೆಗೆ 7,729 ಕಿ.ಮೀ ದೂರವನ್ನು ಪವನ್ ಹ್ಯಾನ್ಸ್ ವಿಮಾನಗಳು ಕ್ರಮಿಸಿ, ಸುಮಾರು 2.27 ಟನ್ ಸರಕುಗಳನ್ನು ಸಾಗಿಸಿದೆ.

ಈಶಾನ್ಯ ರಾಜ್ಯಗಳ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ರಾಜ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ.

ಏರ್ ಇಂಡಿಯಾ ಮತ್ತು ಐ.ಎ.ಎಫ್ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ, ಲಡಾಕ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳಿಗೆ ಸಹಕರಿಸಿದವು.

ದೇಶೀಯ ಕಾರ್ಗೋ ಆಪರೇಟರ್‌ಗಳಾದ ಸ್ಪೈಸ್‌ಜೆಟ್, ಬ್ಲೂ ಡಾರ್ಟ್, ಇಂಡಿಗೊ ಮತ್ತು ವಿಸ್ಟಾರ ವಾಣಿಜ್ಯ ವಿಮಾನಯಾನದಲ್ಲಿ ಸರಕು ಹಾರಾಟ ನಡೆಸುತ್ತಿವೆ. ಸ್ಪೈಸ್ ಜೆಟ್ ಮಾರ್ಚ್ 24 ರಿಂದ ಮೇ 4, 2020ರ ವರೆಗೆ 796 ಸರಕು ವಿಮಾನಗಳನ್ನು 13,61,141 ಕಿ.ಮೀ ದೂರ ಕ್ರಮಿಸಿ ಮತ್ತು 5,817 ಟನ್ ಸರಕುಗಳನ್ನು ಸಾಗಿಸಿತು. ಈ ಪೈಕಿ 290 ಅಂತಾರಾಷ್ಟ್ರೀಯ ಸರಕು ವಿಮಾನಗಳು. ಮಾರ್ಚ್ 25 ರಿಂದ ಮೇ 4, 2020 ರ ವರೆಗೆ ಬ್ಲೂ ಡಾರ್ಟ್ 266 ಸರಕು ವಿಮಾನಗಳ ಮೂಲಕ 2, 94, 928 ಕಿ.ಮೀ ದೂರ ಕ್ರಮಿಸಿ ಮತ್ತು 4,522 ಟನ್ ಸರಕುಗಳನ್ನು ಸಾಗಿಸಿತು. ಇವುಗಳಲ್ಲಿ 13 ಅಂತರರಾಷ್ಟ್ರೀಯ ಸರಕು ಹಾರಾಟಗಳು. ಇಂಡಿಗೊ ವಿಮಾನಗಳು ಏಪ್ರಿಲ್ 3 ರಿಂದ ಮೇ 4, 2020 ರ ವರೆಗೆ 90 ಸರಕು ವಿಮಾನ ಹಾರಾಟಗಳನ್ನು ನಡೆಸಿ 1, 50, 803 ಕಿ.ಮೀ ದೂರ ಕ್ರಮಿಸಿ, ಸುಮಾರು 444 ಟನ್ ಸರಕುಗಳನ್ನು ಸಾಗಿಸಿದೆ ಮತ್ತು ಇದರಲ್ಲಿ 34 ಅಂತರರಾಷ್ಟ್ರೀಯ ವಿಮಾನಗಳನ್ನು ಒಳಗೊಂಡಿದೆ. ಸರ್ಕಾರಕ್ಕೆ ಉಚಿತವಾಗಿ ಸಾಗಿಸುವ ವೈದ್ಯಕೀಯ ಸರಬರಾಜುಗಳೂ ಈ ಸಾಗಾಟ ಮಾಹಿತಿಯಲ್ಲಿ ಸೇರಿವೆ. ವಿಸ್ಟಾರ ಏಪ್ರಿಲ್ 19 ರಿಂದ ಮೇ 4, 2020 ರ ವರೆಗೆ 30 ಸರಕು ವಿಮಾನಗಳ ಮೂಲಕ 30,614 ಕಿ.ಮೀ ದೂರ ಕ್ರಮಿಸಿದೆ ಮತ್ತು ಸುಮಾರು 144 ಟನ್ ಸರಕುಗಳನ್ನು ಸಾಗಿಸಿದೆ.

ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕೋವಿಡ್ -19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಪೂರ್ವ ಏಷ್ಯಾದೊಂದಿಗೆ ಸರಕು ವಾಯು ಸಂಪರ್ಕವನ್ನು ಸ್ಥಾಪಿಸಲಾಯಿತು. ಏರ್ ಇಂಡಿಯಾ ಸಾಗಿಸಿ ತಂದ ವೈದ್ಯಕೀಯ ಸರಕುಗಳ ಪ್ರಮಾಣ 956 ಟನ್ ಆಗಿದೆ.

ಜೊತೆಗೆ, ಏಪ್ರಿಲ್ 14 ರಿಂದ ಮೇ 4, 2020 ರ ವರೆಗೆ ಬ್ಲೂ ಡಾರ್ಟ್ ಗುವಾಂಗ್‌ವು ಮತ್ತು ಶಾಂಘೈನಿಂದ ಸುಮಾರು 114 ಟನ್ ಮತ್ತು ಹಾಂಗ್ ಕಾಂಗ್‌ನಿಂದ 24 ಟನ್ ಗಳಷ್ಟು ವೈದ್ಯಕೀಯ ಸರಬರಾಜನ್ನು ಸಾಗಾಟ ಮಾಡಿವೆ. 4 ಮೇ, 2020 ರವರೆಗೆ ಸ್ಪೈಸ್‌ಜೆಟ್ ಸರಕು ವಿಮಾಗಳು ಶಾಂಘೈ ಮತ್ತು ಗುವಾಂಗ್‌ವುದಿಂದ 204 ಟನ್ ವೈದ್ಯಕೀಯ ಸರಬರಾಜುಗಳನ್ನು ಮತ್ತು ಹಾಂಗ್ ಕಾಂಗ್ ಮತ್ತು ಸಿಂಗಾಪುರದಿಂದ 16 ಟನ್ ವೈದ್ಯಕೀಯ ಸರಬರಾಜುಗಳನ್ನು ಸಾಗಾಟ ಮಾಡಿವೆ.

***



(Release ID: 1621519) Visitor Counter : 152