ಪ್ರಧಾನ ಮಂತ್ರಿಯವರ ಕಛೇರಿ
ನಾಮ್(NAM) ಸಂಪರ್ಕ ಗುಂಪಿನ ಆನ್ ಲೈನ್ ಶೃಂಗಸಭೆಯಲ್ಲಿ ಭಾಗಿಯಾದ ಪ್ರಧಾನಮಂತ್ರಿ
Posted On:
04 MAY 2020 9:57PM by PIB Bengaluru
ನಾಮ್(NAM) ಸಂಪರ್ಕ ಗುಂಪಿನ ಆನ್ ಲೈನ್ ಶೃಂಗಸಭೆಯಲ್ಲಿ ಭಾಗಿಯಾದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಸಕ್ತ ಎದುರಾಗಿಸುವ ಕೋವಿಡ್ -19 ಸಾಂಕ್ರಾಮಿಕದ ಬಿಕ್ಕಟ್ಟಿನ ಕುರಿತಂತೆ ಸ್ಪಂದನೆಯ ಚರ್ಚೆಗಾಗಿ 2020ರ ಮೇ 4ರಂದು ನಡೆದ ಅಲಿಪ್ತ ಚಳವಳಿ (ನಾಮ್) ನ ಸಂಪರ್ಕ ಗುಂಪಿನ ಆನ್ ಲೈನ್ ಶೃಂಗ ಸಭೆಯಲ್ಲಿ ಭಾಗಿಯಾದರು.
‘ಕೋವಿಡ್ -19 ವಿರುದ್ಧ ಒಂದಾಗಿ’ ಎಂಬ ಧ್ಯೆಯವಾಕ್ಯದೊಂದಿಗೆ ನಡೆದ ನಾಮ್ ಸಂಪರ್ಕ ಗುಂಪಿನ ಆನ್ ಲೈನ್ ಶೃಂಗಸಭೆಯನ್ನು ನಾಮ್ ಅಧ್ಯಕ್ಷ, ಅಜರ್ಬೈಜಾನ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಇಲ್ಹಾಮ್ ಅಲಿಯೇವ್ ಆಯೋಜಿಸಿದ್ದರು. ಕೋವಿಡ್ 19 ಸಾಂಕ್ರಾಮಿಕದ ವಿರುದ್ಧ ಅಂತಾರಾಷ್ಟ್ರೀಯ ಏಕಮತ್ಯವನ್ನು ಉತ್ತೇಜಿಸುವುದು ಮತ್ತು ಜಾಗತಿಕ ಮಹಾಮಾರಿನ್ನು ನಿಗ್ರಹಿಸಲು ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳ ಪ್ರಯತ್ನವನ್ನು ಕ್ರೋಡೀಕರಿಸುವುದು ಈ ಶೃಂಗಸಭೆಯ ಉದ್ದೇಶವಾಗಿತ್ತು. ಈ ಕಾರ್ಯಕ್ರಮ ಅಂತಾರಾಷ್ಟ್ರೀಯ ಬಹುತ್ವವಾದ ಮತ್ತು ಶಾಂತಿಗಾಗಿ ರಾಜತಾಂತ್ರಿಕತೆ ದಿನದ ಅಂಕವೂ ಆಗಿತ್ತು.
ಪ್ರಧಾನಮಂತ್ರಿ ಮೋದಿ ಅವರ ಭಾಗವಹಿಸುವಿಕೆ ನಾಮ್ ನ ಮೌಲ್ಯಗಳು ಮತ್ತು ನೀತಿಗಳಿಗೆ ಇದರ ಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಒಂದಾದ ಭಾರತದ ದೀರ್ಘ ಕಾಲೀನ ಬದ್ಧತೆಯನ್ನು ಒತ್ತಿ ಹೇಳಿತು. ಈ ಶೃಂಗದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಈ ಬಿಕ್ಕಟ್ಟಿಗೆ ವಿಶ್ವದ ಸಂಯೋಜಿತ, ಸಮಗ್ರ ಮತ್ತು ಸಮಾನವಾದ ಸ್ಪಂದನೆಯ ಮಹತ್ವ ಪ್ರತಿಪಾದಿಸಿದರು, ಭಾರತ ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಕೈಗೊಂಡಿರುವ ಕ್ರಮಗಳನ್ನು ಒತ್ತಿ ಹೇಳಿದ ಅವರು, ಚಳವಳಿಗೆ ಸಾಧ್ಯವಾದಷ್ಟು ಏಕಮತ್ಯ ಮತ್ತು ನೆರವು ಒದಗಿಸಲು ಭಾರತ ಬದ್ಧವಾಗಿರುವುದಾಗಿ ತಿಳಿಸಿದರು. ಇತರ ವೈರಸ್ ಗಳಾದ ಅದರಲ್ಲೂ ಭಯೋತ್ಪಾದನೆ ಮತ್ತು ಸುಳ್ಳು ಸುದ್ದಿಯ ವಿರುದ್ಧ ವಿಶ್ವ ಸಂಘಟಿತ ಪ್ರಯತ್ನ ಮಾಡುವ ಮಹತ್ವವನ್ನೂ ಪ್ರಧಾನಮಂತ್ರಿ ಪ್ರತಿಪಾದಿಸಿದರು.
ಪ್ರಧಾನಮಂತ್ರಿ ಮೋದಿಯವರು ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಮತ್ತು ಯುರೋಪಿನ ಸದಸ್ಯ ರಾಷ್ಟ್ರಗಳು ಸೇರಿದಂತೆ ಇತರ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ನಾಯಕರೊಂದಿಗೆ ಇದರಲ್ಲಿ ಭಾಗಿಯಾಗಿದ್ದರು. ಶೃಂಗಸಭೆಯನ್ನುದ್ದೇಶಿಸಿ ವಿಶ್ವಸಂಸ್ಥೆಯ ಮಹಾಧಿವೇಶನದ ಅಧ್ಯಕ್ಷ ಪ್ರೊ. ತಿಜ್ಜಾನಿ ಮುಹಮದ್ ಬಂಡೆ, ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಆಂಟೋನಿಯೋ ಗುತೇರಸ್, ಆಫ್ರಿಕಾ ಒಕ್ಕೂಟದ ಅಧ್ಯಕ್ಷ ಮೂಸ ಫಕಿ ಮಹಾಮತ್, ಐರೋಪ್ಯ ಒಕ್ಕೂಟದ ಉನ್ನತ ಪ್ರತಿನಿಧಿ ಜೋಸೆಫ್ ಬೋರೆಲ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ. ಟೆಡ್ರೊಸ್ ಗೆಬ್ರೆಯೆಸಸ್ ಮಾತನಾಡಿದರು.
ಒಟ್ಟಾರೆ, ನಾಮ್ ನಾಯಕರು ಕೋವಿಡ್ -19 ಪರಿಣಾಮದ ಪರಾಮರ್ಶೆ ನಡೆಸಿ, ಸಾಧ್ಯ ಪರಿಹಾರಗಳ ಅವಶ್ಯಕತೆ ಮತ್ತು ಅಗತ್ಯಗಳನ್ನು ಗುರುತಿಸಿದರು ಮತ್ತು ಕ್ರಿಯೆ ಆಧಾರಿತ ಅನುಸರಣಾ ಕ್ರಮಗಳಿಗೆ ಆಗ್ರಹಿಸಿದರು. ಶೃಂಗಸಭೆಯ ಬಳಿಕ, ನಾಯಕರು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಅಂತಾರಾಷ್ಟ್ರೀಯ ಒಗ್ಗಟ್ಟಿನ ಮಹತ್ವವನ್ನು ತಿಳಿಸುವ ಘೋಷಣೆಯನ್ನು ಅಂಗೀಕರಿಸಿದರು. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ತಮ್ಮ ಮೂಲ ವೈದ್ಯಕೀಯ, ಸಾಮಾಜಿಕ ಮತ್ತು ಮಾನವೀಯ ಅಗತ್ಯಗಳನ್ನು ಪ್ರತಿಬಿಂಬಿಸುವ ಸಾಮಾನ್ಯ ಡಾಟಾ ಬೇಸ್ ಸ್ಥಾಪಿಸುವ ಮೂಲಕ ಸದಸ್ಯ ರಾಷ್ಟ್ರಗಳ ಅಗತ್ಯತೆಗಳು ಮತ್ತು ಅವಶ್ಯಕತೆಗಳನ್ನು ಗುರುತಿಸಲು ನಾಯಕರು ‘ಕಾರ್ಯಪಡೆ’ ರಚಿಸುವುದಾಗಿಯೂ ಘೋಷಿಸಿದರು.
***
(Release ID: 1621103)
Visitor Counter : 586
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam