ಪರಿಸರ ಮತ್ತು ಅರಣ್ಯ ಸಚಿವಾಲಯ

ಪರಿಸರ ತಂತ್ರಜ್ಞಾನವನ್ನು ಮುಕ್ತ ಸಂಪನ್ಮೂಲವಾಗಿಸುವ ನಿಟ್ಟಿನಲ್ಲಿ ವಿಶ್ವವು ಒಗ್ಗೂಡಬೇಕು ಮತ್ತು ಅದು ಕೈಗೆಟಕುವ ದರದಲ್ಲಿ ಲಭ್ಯ ಇರಬೇಕು: ಕೇಂದ್ರ ಪರಿಸರ ಸಚಿವರು

Posted On: 28 APR 2020 7:57PM by PIB Bengaluru

ಪರಿಸರ ತಂತ್ರಜ್ಞಾನವನ್ನು ಮುಕ್ತ ಸಂಪನ್ಮೂಲವಾಗಿಸುವ ನಿಟ್ಟಿನಲ್ಲಿ ವಿಶ್ವವು ಒಗ್ಗೂಡಬೇಕು ಮತ್ತು ಅದು ಕೈಗೆಟಕುವ ದರದಲ್ಲಿ ಲಭ್ಯ ಇರಬೇಕು: ಕೇಂದ್ರ ಪರಿಸರ ಸಚಿವರು

ಭಾರತವು 30 ದೇಶಗಳೊಂದಿಗೆ ಮೊದಲ ವರ್ಚುವಲ್ ಪೀಟರ್ಸ್ ಬರ್ಗ್ ವಾತಾವರಣ ಸಮ್ಮೇಳನದಲ್ಲಿ ವಾತಾವರಣ ಬದಲಾವಣೆ ವಿಷಯ ಕುರಿತು ರ್ಚೆ

 

ಪೀಟರ್ಸ್ ಬರ್ಗ್ ವಾತಾವರಣ ಸಮ್ಮೇಳನದ ಹನ್ನೊಂದನೇ ಅಧಿವೇಶನದಲ್ಲಿ ಭಾರತ ಇತರ 30 ದೇಶಗಳೊಂದಿಗೆ ಕೋವಿಡ್ -19 ಬಳಿಕ ಆರ್ಥಿಕತೆ ಮತ್ತು ಸಮಾಜಗಳ ಮರು ಉತ್ತೇಜನದ ಸವಾಲುಗಳನ್ನು ನಿಭಾಯಿಸಲು ಹಾದಿಗಳ ಬಗ್ಗೆ ಚರ್ಚಿಸಿತು. ಅತ್ಯಂತ ಅಪಾಯಕ್ಕೀಡಾಗುವ ಸಂಭಾವ್ಯತೆ ಇರುವವರನ್ನು ಬೆಂಬಲಿಸಿಕೊಂಡು ವಾತಾವರಣದ ಕ್ರಮಗಳ ವೇಗವರ್ಧನೆ ಮಾಡುತ್ತ ಸಾಮೂಹಿಕ ಪುನರುಜ್ಜೀವನದ ಬಗ್ಗೆ ಅದು ಸಮಾಲೋಚಿಸಿತು.

ಮೊಟ್ಟ ಮೊದಲ ವರ್ಚುವಲ್ ಪೀಟರ್ಸ್ ಬರ್ಗ್ ವಾತಾವರಣ ಸಮ್ಮೇಳನದಲ್ಲಿ ಕೇಂದ್ರ ಪರಿಸರ , ಅರಣ್ಯ ಮತ್ತು ವಾತಾವರಣ ಬದಲಾವಣೆ ಸಚಿವರಾದ ಶ್ರೀ ಪ್ರಕಾಶ್ ಜಾವಡೇಕರ್ ಪ್ರತಿನಿಧಿಸಿ ಮಾತನಾಡಿದರು. ಇಂದು ಇಡೀ ಜಗತ್ತು ಒಗ್ಗೂಡಿ ನೊವೆಲ್ ಕೊರೊನಾ ವೈರಸ್ ಗೆ ಲಸಿಕೆ ಹುಡುಕಲು ಪ್ರಯತ್ನಿಸುತ್ತಿದೆ, ಅದೇ ರೀತಿ ಎಲ್ಲರಿಗೂ ಕೈಗೆಟಕುವ ದರದಲ್ಲಿ ವಾತಾವರಣ ತಂತ್ರಜ್ಞಾನವನ್ನು ನಾವು ಮುಕ್ತ ಮೂಲವನ್ನಾಗಿಸಿಟ್ಟುಕೊಳ್ಳಬೇಕು ಎಂದವರು ಪ್ರತಿಪಾದಿಸಿದರು.

ವಾತಾವರಣ ಹಣಕಾಸು ವಿಷಯದ ಬಗ್ಗೆ ಒತ್ತು ನೀಡಿ ಪ್ರಸ್ತಾಪಿಸಿದ ಶ್ರೀ ಜಾವಡೇಕರ್ , ಜಗತ್ತಿಗೆ ಈಗ ಇನ್ನೂ ಹೆಚ್ಚು ಅಗತ್ಯವಿದೆ. ವಿಶ್ವವನ್ನು ಅಭಿವೃದ್ದಿಗೊಳಿಸಲು ತಕ್ಷಣಕ್ಕೆ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಅನುದಾನಕ್ಕೆ ನಾವು ಯೋಜನೆ ರೂಪಿಸಬೇಕುಎಂದು ವಾದಿಸಿದರು.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಡುತ್ತಿರುವ ಜಗತ್ತಿನ ಜೊತೆ ಒಗ್ಗಟ್ಟನ್ನು ವ್ಯಕ್ತಪಡಿಸಿದ ಕೇಂದ್ರ ಸಚಿವರು, ಕೋವಿಡ್ -19 ನಾವು ಅಲ್ಪದರಲ್ಲಿ ಬದುಕಬಹುದೆಂದು ಹೇಳಿಕೊಟ್ಟಿದೆ ಎಂದರು. ಸುಸ್ಥಿರ ಜೀವನ ವಿಧಾನಗಳ ಆವಶ್ಯಕತೆಗೆ ತಕ್ಕಂತೆ ಸುಸ್ಥಿರ ಬಳಕೆ ವಿಧಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ವಿಶ್ವವು ಚಿಂತಿಸಬೇಕಾಗಿದೆ. ಚಿಂತನೆಯನ್ನು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ಯಾರಿಸ್ ಸಿ..ಪಿ.ಯಲ್ಲಿ ಮೊದಲು ಮಂಡಿಸಿದ್ದರು ಎಂದೂ ಪರಿಸರ ಸಚಿವರು ಪುನರುಚ್ಚರಿಸಿದರು.

10 ವರ್ಷಗಳ ಸಮಯಮಿತಿಗೆ ಒಳಪಟ್ಟು ಭಾರತದ ರಾಷ್ಟ್ರೀಯ ನಿರ್ಧರಿತ ಕೊಡುಗೆಗಳು ಮಹತ್ವಾಕಾಂಕ್ಷೆಯಿಂದ ಕೂಡಿವೆ. ಮತ್ತು ಅವು ಪ್ಯಾರಿಸ್ ಒಪ್ಪಂದದ ಉಷ್ಣಾಂಶ ಗುರಿಯನ್ನು ಅನುಸರಿಸುತ್ತವೆ ಎಂದವರು ಉಲ್ಲೇಖಿಸಿದರು. ಮರುನವೀಕರಿಸಬಹುದಾದ ಇಂಧನ ಬಳಕೆಯನ್ನು ತ್ವರಿತಗೊಳಿಸಬಹುದಾದ ಅವಕಾಶ ಇಂದು ವಿಶ್ವಕ್ಕೆ ಲಭ್ಯವಾಗಿರುವ ಬಗ್ಗೆ ಮಾತನಾಡಿದ ಸಚಿವರು ಮರು ನವೀಕರಿಸಬಹುದಾದ ಇಂಧನ ಮತ್ತು ಇಂಧನ ದಕ್ಷತೆ ವಲಯದಲ್ಲಿ ಹೊಸ ಹಸಿರು ಉದ್ಯೋಗಗಳನ್ನು ಸೃಷ್ಟಿಸಬಹುದಾಗಿದೆ ಎಂದರು.

ಮೊದಲ ವರ್ಚುವಲ್ ವಾತಾವರಣ ಸಮ್ಮೇಳನವು ಜರ್ಮನಿಯು 2020 ರಲ್ಲಿ ಆರಂಭಿಸಿದ ಪೀಟರ್ಸ್ ಬರ್ಗ್ ವಾತಾವರಣ ಸಮ್ಮೇಳನದ 11 ನೇ ಅಧಿವೇಶನವಾಗಿದೆ. ಜರ್ಮನಿಯು ಇದನ್ನು ಅನೌಪಚಾರಿಕ ಉನ್ನತ ಮಟ್ಟದ ರಾಜಕೀಯ ಚರ್ಚೆಗಳನ್ನು ನಡೆಸುವುದಕ್ಕೆ , ಅಂತಾರಾಷ್ಟ್ರೀಯ ವಾತಾವರಣ ಸಂಬಂಧಿ ಮಾತುಕತೆಗಳಿಗಾಗಿ ಮತ್ತು ವಾತಾವರಣ ಕ್ರಮಗಳಿಗಾಗಿ ಆದ್ಯತೆ ನೀಡುವುದಕ್ಕಾಗಿ ಆರಂಭಿಸಿತ್ತು. ಹನ್ನೊಂದನೆ ವರ್ಚುವಲ್ ಪೀಟರ್ಸ್ ಬರ್ಗ್ ಸಮಾವೇಶದ ಸಹ ಅಧ್ಯಕ್ಷತೆಯನ್ನು ಜರ್ಮನಿ ಮತ್ತು ಯುನೈಟೆಡ್ ಕಿಂಗ್ಡಂಗಳು ವಹಿಸಿದ್ದವು. ವಿಶ್ವಸಂಸ್ಥೆಯ ವಾತಾವರಣ ಬದಲಾವಣೆಯ ಚೌಕಟ್ಟು ಅಧಿವೇಶನ (ಯು.ಎನ್.ಎಫ್.ಸಿ.ಸಿ.ಸಿ.) ಕ್ಕಾಗಿರುವ 26 ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಸಿ..ಪಿ.26) ಮುಂದಿನ ಅಧ್ಯಕ್ಷತೆಯು ಇವುಗಳ ಪಾಲಿನದಾಗಿದೆ. ಸುಮಾರು 30 ದೇಶಗಳ ಸಚಿವರು ಮತ್ತು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

ದೇಶಗಳು, ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ನಿಭಾಯಿಸುವಲ್ಲಿ, ಜೀವ ರಕ್ಷಿಸುವಲ್ಲಿ ನಿರತರಾಗಿರುವಾಗ ವರ್ಷದ ಮಾತುಕತೆ ನಡೆಯುತ್ತಿದೆ. ಸಾಂಕ್ರಾಮಿಕದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ನಿಭಾಯಿಸುತ್ತಲೇ 2020 ಕೋವಿಡೋತ್ತರ ಕಾಲದಲ್ಲಿ ಯು.ಎನ್.ಎಫ್.ಸಿ.ಸಿ. ಸಿ. ಅಡಿಯಲ್ಲಿ ಪ್ಯಾರಿಸ್ ಒಪ್ಪಂದದ ಅನುಷ್ಟಾನ ಹಂತಕ್ಕೆ ಸಾಗಲು ಸಿದ್ದತೆಗಳು ನಡೆಯುತ್ತಿವೆ. ಮಾತುಕತೆಯ ಪ್ರಮುಖ ಕಾರ್ಯಪಟ್ಟಿಯೆಂದರೆ ಕೋವಿಡ್ -19 ಬಳಿಕ ನಮ್ಮ ಆರ್ಥಿಕತೆಗಳನ್ನು ಮತ್ತು ಸಮಾಜಗಳನ್ನು ಮರು ಉತ್ತೇಜಿಸುವ ಸವಾಲುಗಳನ್ನು ಜಂಟಿಯಾಗಿ ಎದುರಿಸುವುದು ಹೇಗೆ ಎಂಬುದಾಗಿದೆ ಮತ್ತು ಅತ್ಯಂತ ಅಪಾಯಕ್ಕೀಡಾಗುವ ಸಂಭಾವ್ಯತೆ ಇರುವವರನ್ನು ಬೆಂಬಲಿಸುತ್ತಲೇ ನಮ್ಮ ವಾತಾವರಣದ ಮರು ಉತ್ತೇಜನ ಹೆಚ್ಚಳಕ್ಕೆ ಮುಂದಾಗುವುದಾಗಿದೆ.

ಕೇಂದ್ರ ಸಚಿವರು ಭಾರತ ಜರ್ಮನ್ ದ್ವಿಪಕ್ಷೀಯ ಸಭೆಯಲ್ಲಿ ಜರ್ಮನಿಯ ಫೆಡರಲ್ ಪರಿಸರ ಸಚಿವಾಲಯ , ಪರಿಸರ ರಕ್ಷಣೆ ಮತ್ತು ಅಣು ಸುರಕ್ಷೆ ಸಚಿವರಾದ ಶ್ರೀಮತಿ ಸ್ವೆಂಜಾಶುಲ್ಜ ಅವರೊಂದಿಗೆ ಪಾಲ್ಗೊಂಡರು. ದ್ವಿಪಕ್ಷೀಯ ಸಭೆಯು ವೀಡಿಯೋ ಕಾನ್ಫರೆನ್ಸ್ ಮೂಲಕ ಪೀಟರ್ಸ್ ಬರ್ಗ್ ವಾತಾವರಣ ಮಾತುಕತೆಗೆ ಮೊದಲು ನಡೆಯಿತು. ಇದರಲ್ಲಿ ವಾತಾವರಣ ಬದಲಾವಣೆ, ಜೀವ ವೈವಿಧ್ಯ ರಕ್ಷಣೆ ಮತ್ತು ಕ್ಷೇತ್ರಗಳಲ್ಲಿ ಜರ್ಮನಿಯೊಂದಿಗೆ ತಾಂತ್ರಿಕ ಸಹಕಾರವನ್ನು ಒಳಗೊಂಡಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದ ಉಭಯ ದೇಶಗಳಲ್ಲಿ ಉದ್ಭವಿಸಿರುವ ಪರಿಸ್ಥಿತಿ ಮತ್ತು ಅದರ ಚೇತರಿಕೆ ಪ್ರಯತ್ನಗಳನ್ನು ಮಾತುಕತೆಯಲ್ಲಿ ಚರ್ಚಿಸಲಾಯಿತು.

***


(Release ID: 1620860) Visitor Counter : 262