ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ಎಂಎಚ್ಎ ಕಂಟ್ರೋಲ್ ರೂಂಗೆ ನಿಯೋಜನೆ

Posted On: 03 MAY 2020 4:37PM by PIB Bengaluru

ಖಾಲಿ ಟ್ರಕ್ ಗಳ ಸಂಚಾರ ಸೇರಿದಂತೆ ಸರಕು ಸಾಗಾಣೆ ವಾಹನಗಳನ್ನು ಸಾಗಿಸುತ್ತಿರುವವರು ಮತ್ತು ಚಾಲಕರ ಸಮಸ್ಯೆ/ ದೂರುಗಳನ್ನು ಪರಿಹರಿಸಲು ಗೃಹ ವ್ಯವಹಾರಗಳ ಸಚಿವಾಲಯದ ಕಂಟ್ರೋಲ್ ರೂಂ ಬಳಕೆ

ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ಎಂಎಚ್ಎ ಕಂಟ್ರೋಲ್ ರೂಂಗೆ ನಿಯೋಜನೆ

ಸಹಾಯಕ್ಕಾಗಿ ಎಂಎಚ್ಎ ಸಹಾಯವಾಣಿ ಸಂಖ್ಯೆ 1930 ಮತ್ತು ಎನ್ಎಚ್ಎಐ ಸಹಾಯವಾಣಿ ಸಂಖ್ಯೆ 1033 ಬಳಕೆಗೆ ಅವಕಾಶ

 

ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಅಂತರರಾಜ್ಯಗಳ ನಡುವೆ ಖಾಲಿ ಟ್ರಕ್ ಗಳು ಮತ್ತು ಸರಕು ತುಂಬಿದ ವಾಹನಗಳ ಸಂಚಾರದ ವೇಳೆ ಸಾರಿಗೆ ಸಂಸ್ಥೆಯವರು/ಚಾಲಕರ ದೂರು/ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಗೃಹ ವ್ಯವಹಾರಗಳ ಸಚಿವಾಲಯದ ನಿಯಂತ್ರಣ ಕೋಣೆ(ಕಂಟ್ರೋಲ್ ರೂಂ)ಅನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಅದಕ್ಕಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ(ಎಂಒಆರ್ ಟಿಎಚ್) ಅಧಿಕಾರಿಗಳನ್ನು ಅಲ್ಲಿಗೆ ನಿಯೋಜಿಸಲಾಗಿದೆ.

ಲಾಕ್ ಡೌನ್ ಗೆ ಸಂಬಂಧಿಸಿದಂತೆ ಯಾವುದೇ ಸಾರಿಗೆ ಸಂಸ್ಥೆಯವರು/ಚಾಲಕರು ತಮ್ಮ ದೂರುಗಳು ಏನೇ ಇದ್ದರು ಎಂಎಚ್ಎ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಎನ್ಎಚ್ಎಐ ಸಹಾಯವಾಣಿ ಸಂಖ್ಯೆ 1033 ಕೂಡ ಲಭ್ಯವಿದೆ. ಎಂಒಆರ್ ಟಿಎಚ್, ಎನ್ಎಚ್ಎಐ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗಳು, ಸಾರಿಗೆ ಸಂಸ್ಥೆಗಳು, ಚಾಲಕರು/ಸಾರಿಗೆ ಸಂಸ್ಥೆಯವರಿಗೆ ಬಗ್ಗೆ ಮಾಹಿತಿ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಎಂಎಚ್ಎ ಕಂಟ್ರೋಲ್ ರೂಂಗೆ ನಿಯೋಜಿಸಲ್ಪಟ್ಟಿರುವ ಎಂಒಆರ್ ಟಿಎಚ್ ಅಧಿಕಾರಿಗಳು, ಚಾಲಕರು/ಸಾರಿಗೆ ವಲಯಕ್ಕೆ ಸಂಬಂಧಿಸಿದ ದೂರು ಮತ್ತು ಕುಂದುಕೊರತೆಗಳ ಪರಿಹಾರಕ್ಕೆ ನೆರವು ನೀಡುವರು. ಎಂಒಆರ್ ಟಿಎಚ್ ಅಧಿಕಾರಿಗಳು ಪ್ರತಿ ದಿನ ತಾವು ಸ್ವೀಕರಿಸುವ ದೂರುಗಳ ಕುರಿತು ವರದಿಗಳನ್ನು ಸಿದ್ಧಪಡಿಸಲಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ವಾಹನಗಳ ಸಂಚಾರ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಮಾರ್ಗಸೂಚಿ ಮತ್ತು ಆದೇಶಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಲಾಗಿದೆ.

ಖಾಲಿ ಟ್ರಕ್ ಗಳು ಸೇರಿದಂತೆ ಅಂತರ ರಾಜ್ಯಗಳ ನಡುವೆ ಸರಕು ಸಾಗಾಣೆಯ ವಾಹನಗಳು ಸಂಚರಿಸುವಾಗ ಚಾಲಕರು ಮತ್ತು ಸಾರಿಗೆ ಸಂಸ್ಥೆಯವರು ಎದುರಿಸುವ ದೂರುಗಳನ್ನು ಬಗೆಹರಿಸಲಾಗುವುದು. ಚಾಲಕರು, ಕ್ಲೀನರ್ ತಮ್ಮ ನಿವಾಸದಿಂದ ಟ್ರಕ್ ನಿಲುಗಡೆ ಮಾಡಿರುವ ಸ್ಥಳಕ್ಕೆ ಬರಲು ಮತ್ತು ಹೋಗಲು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಕಾರ್ಯತಂತ್ರದಿಂದಾಗಿ ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಿಸಿದ ನಂತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರಕು ಸಾಗಾಣೆಗೆ ಎದುರಾಗಿದ್ದ ಅಡೆತಡೆಗಳು ಬಹುಮುಖ್ಯವಾಗಿ ನಿವಾರಣೆಯಾಗುವ ಸಾಧ್ಯತೆ ಇದೆ.

***



(Release ID: 1620752) Visitor Counter : 243