ರೈಲ್ವೇ ಸಚಿವಾಲಯ

ರಾಜ್ಯ ಸರ್ಕಾರಗಳ ಮನವಿ ಹೊರತುಪಡಿಸಿ, ರೈಲ್ವೆ ಇತರೆ ಯಾವುದೇ ರೈಲುಗಳನ್ನು ಓಡಿಸುತ್ತಿಲ್ಲ

Posted On: 02 MAY 2020 10:29PM by PIB Bengaluru

ರಾಜ್ಯ ಸರ್ಕಾರಗಳು ಸಹಾಯ ನೀಡುತ್ತಿರುವ ಮತ್ತು ಕರೆತಂದಿರುವ ಪ್ರಯಾಣಿಕರನ್ನು ಮಾತ್ರ ಸ್ವೀಕರಿಸುತ್ತಿರುವ ರೈಲ್ವೆ

ಇತರೆ ಯಾವುದೇ ಪ್ರವಾಸಿಗರ ಗುಂಪು ಅಥವಾ ಸಾರ್ವಜನಿಕರು ರೈಲು ನಿಲ್ದಾಣಕ್ಕೆ ಬರುವಂತಿಲ್ಲ

ರಾಜ್ಯ ಸರ್ಕಾರಗಳ ಮನವಿ ಮೇರೆಗೆ ಮಾತ್ರ ವಿಶೇಷ ರೈಲುಗಳ ಸಂಚಾರ

ಇತರೆ ಎಲ್ಲ ಪ್ರಯಾಣಿಕರ ಮತ್ತು ಉಪನಗರ ರೈಲುಗಳ ಸಂಚಾರ ರದ್ದು ಮುಂದುವರಿಕೆ

ಯಾವುದೇ ನಿಲ್ದಾಣದಲ್ಲಿ ಟಿಕೆಟ್ ಗಳ ಮಾರಾಟವಿಲ್ಲ

ರಾಜ್ಯ ಸರ್ಕಾರಗಳ ಮನವಿ ಹೊರತುಪಡಿಸಿ, ರೈಲ್ವೆ ಇತರೆ ಯಾವುದೇ ರೈಲುಗಳನ್ನು ಓಡಿಸುತ್ತಿಲ್ಲ
 

ನಾನಾ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇನ್ನಿತರಿಗಾಗಿ ರಾಜ್ಯ ಸರ್ಕಾರಗಳ ಮನವಿ ಮೇರೆಗೆ ಮಾತ್ರ ವಿಶೇಷ ರೈಲುಗಳ ಸಂಚಾರ ಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯ ಮೂಲಕ ಸ್ಪಷ್ಟಪಡಿಸಿದೆ. ಉಳಿದಂತೆ ಇತರೆ ಎಲ್ಲ ಪ್ರಯಾಣಿಕರ ರೈಲು ಸೇವೆಗಳ ರದ್ದತಿ ಮುಂದುವರಿಯಲಿದೆ.

ರಾಜ್ಯ ಸರ್ಕಾರಗಳು, ಸಹಾಯ ನೀಡುತ್ತಿರುವ ಮತ್ತು ಕರೆತರುವ ಪ್ರಯಾಣಿಕರನ್ನು ಮಾತ್ರ ರೈಲ್ವೆ ಸ್ವೀಕರಿಸುತ್ತಿದೆ.

ಇತರೆ ಯಾವುದೇ ಪ್ರವಾಸಿಗರ ಗುಂಪು ಅಥವಾ ಸಾರ್ವಜನಿಕರು ರೈಲು ನಿಲ್ದಾಣಕ್ಕೆ ಬರುವಂತಿಲ್ಲ, ಯಾವುದೇ ನಿಲ್ದಾಣಗಳಲ್ಲಿ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿಲ್ಲ, ರಾಜ್ಯ ಸರ್ಕಾರಗಳ ಮನವಿ ಹೊರತುಪಡಿಸಿ, ಉಳಿದ ಯಾವುದೇ ರೈಲುಗಳ ಸಂಚಾರವನ್ನು ರೈಲ್ವೆ ನಡೆಸುತ್ತಿಲ್ಲ.

ಇತರೆ ಎಲ್ಲ ಪ್ರಯಾಣಿಕರ ಮತ್ತು ಉಪನಗರ ರೈಲುಗಳ ಸಂಚಾರ ನಿರ್ಬಂಧ ಮುಂದುವರಿಯಲಿದೆ. ಆದ್ದರಿಂದ ಯಾರೊಬ್ಬರೂ ರೈಲು ನಿಲ್ದಾಣಕ್ಕೆ ಬರಬಾರದು.

ಅದರಂತೆ ಸಲಹೆಗಳನ್ನು ನೀಡಲಾಗಿದೆ. ರೈಲು ಸಂಚಾರದ ಬಗ್ಗೆ ಯಾರೊಬ್ಬರೂ ಸುಳ್ಳು ಸುದ್ದಿಯನ್ನು ಹರಡಬಾರದು.


***



(Release ID: 1620730) Visitor Counter : 211