ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಹಸಿರು, ಕಿತ್ತಳೆ ಮತ್ತು ಕೆಂಪು ವಲಯಗಳಲ್ಲಿ ಸಿಎಟಿಯಿಂದ ಪ್ರಕರಣಗಳ ವಿಚಾರಣೆಗೆ ಹೊಸ ಮಾರ್ಗಸೂಚಿಗಳು

Posted On: 02 MAY 2020 1:25PM by PIB Bengaluru

ಹಸಿರು, ಕಿತ್ತಳೆ ಮತ್ತು ಕೆಂಪು ವಲಯಗಳಲ್ಲಿ ಸಿಎಟಿಯಿಂದ ಪ್ರಕರಣಗಳ ವಿಚಾರಣೆಗೆ ಹೊಸ ಮಾರ್ಗಸೂಚಿಗಳು

 

ನವದೆಹಲಿಯ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯ ಮಾನ್ಯ ಅಧ್ಯಕ್ಷರ ನಿರ್ದೇಶನದಂತೆ ಅಧಿಸೂಚನೆಯನ್ನು ಹೊರಡಿಸಲಾಗಿದೆ:

ಭಾರತ ಸರ್ಕಾರದ ಗೃಹ ಸಚಿವಾಲಯವು ಲಾಕ್ಡೌನ್ ಘೋಷಿಸಿ 24.03.2020 ರಂದು ಹೊರಡಿಸಿದ ಆದೇಶ ಮತ್ತು ನಂತರ 14.04.2020 ರಿಂದ 03.05.2020 ರವರೆಗೆ ವಿಸ್ತರಣೆಯ ಆದೇಶದ ಹಿನ್ನೆಲೆಯಲ್ಲಿ ದೇಶಾದ್ಯಂತದ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯ ಪ್ರಧಾನ ಪೀಠ ಮತ್ತು ಅದರ ಇತರ ನ್ಯಾಯಪೀಠಗಳ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಕೋವಿಡ್-19 ಪ್ರಕರಣಗಳ ತೀವ್ರತೆಯನ್ನು ಆಧರಿಸಿ ಕೆಂಪು (ಹಾಟ್ಸ್ಪಾಟ್ಗಳು), ಹಸಿರು ಮತ್ತು ಕಿತ್ತಳೆ ವಲಯಗಳನ್ನು ಗುರುತಿಸಲು ಮತ್ತು ಹಾಗೆ ಘೋಷಿಸಲಾದ ವಲಯಗಳಲ್ಲಿ ನಿಷೇಧಿತ ಮತ್ತು ಅನುಮತಿಸಲಾದ ಚಟುವಟಿಕೆಗಳ ಸ್ವರೂಪಗಳ ಕುರಿತು ಮಾರ್ಗಸೂಚಿಗಳನ್ನು ಗೃಹ ಸಚಿವಾಲಯವು  01.05.2020 ಆದೇಶದಲ್ಲಿ ತಿಳಿಸಿದೆ. ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡು, ಕೇಂದ್ರೀಯ ಆಡಳಿತ ನ್ಯಾಯಮಂಡಳಿಯ ಕಾರ್ಯವೈಖರಿಗೆ ಸಂಬಂಧಿಸಿದಂತೆ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ:

ಹಸಿರು ವಲಯಗಳಲ್ಲಿರುವ ನ್ಯಾಯಪೀಠಗಳು / ನ್ಯಾಯಾಲಯಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ನೈರ್ಮಲ್ಯ ವ್ಯವಸ್ಥೆಗಳನ್ನು ಕಲ್ಪಿಸುವುದು ಮತ್ತು ನೇರ ಸಂಪರ್ಕವನ್ನು ತಪ್ಪಿಸುವುದು ಮುಂತಾದ ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸಿ ಅವು ಕಾರ್ಯನಿರ್ವಹಿಸುತ್ತವೆ. ಸಾಧ್ಯವಾದಷ್ಟು ಮಟ್ಟಿಗೆ, ಸಂಬಂಧಪಟ್ಟ ಪ್ರದೇಶದಲ್ಲಿ ಹೈಕೋರ್ಟ್ಗಳ ಕಾರ್ಯನಿರ್ವಹಣೆಯ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಸಂಬಂಧಪಟ್ಟ ನ್ಯಾಯಪೀಠದ ವಿಭಾಗದ ಮುಖ್ಯಸ್ಥರು (ಎಚ್ಒಡಿ) ಬಾರ್ ಅಸೋಸಿಯೇಷನ್ ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನೌಕರರ ಅನುಕೂಲತೆ ಮತ್ತು ಅವರ ಕಾರ್ಯ ವಿಧಾನದ ಬಗ್ಗೆ ಫೀಡ್ ಬ್ಯಾಕ್ ಅನ್ನು ನ್ಯಾಯಪೀಠದ ರಿಜಿಸ್ಟ್ರಾರ್ರಿಂದ ತೆಗೆದುಕೊಳ್ಳಲಾಗುತ್ತದೆ. ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ತಕ್ಷಣವೇ ಪ್ರಧಾನ ನ್ಯಾಯಪೀಠದ ರಿಜಿಸ್ಟ್ರಿಗೆ ಕಳುಹಿಸಬೇಕು.

ಕೆಂಪು (ಲಾಕ್ಡೌನ್ ಪ್ರದೇಶಗಳು) ಮತ್ತು ಕಿತ್ತಳೆ ವಲಯಗಳಲ್ಲಿರುವ ನ್ಯಾಯಪೀಠಗಳಿಗೆ ಸಂಬಂಧಿಸಿದಂತೆ, ಸಂಬಂಧಪಟ್ಟ ನ್ಯಾಯಪೀಠದ ರಿಜಿಸ್ಟ್ರಾರ್ ಅವರನ್ನು ಎಲೆಕ್ಟ್ರಾನಿಕ್ ಮೇಲ್ ಸೇವೆ (-ಮೇಲ್) ಮೂಲಕ ಸಂಪರ್ಕಿಸಿ ತುರ್ತು ಪ್ರಕರಣಗಳನ್ನು ದಾಖಲಿಸಬಹುದು. ಒಎ ಕ್ರಮಬದ್ಧವಾಗಿದ್ದರೆ ಮತ್ತು ತುರ್ತಾಗಿ ವ್ಯವಹರಿಸಬೇಕಾದ ಅಗತ್ಯವಿದೆಯೆಂದು ರಿಜಿಸ್ಟ್ರಿಗೆ ಅನ್ನಿಸಿದರೆ, ನ್ಯಾಯಪೀಠದ ವಿಭಾಗದ ಮುಖ್ಯಸ್ಥರಿಗೆ ಅದರ ಬಗ್ಗೆ ತಿಳಿಸಲಾಗುವುದು. ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂದು ವಿಭಾಗದ ಮುಖ್ಯಸ್ಥರು ನಿರ್ಧರಿಸುತ್ತಾರೆ. ಪ್ರಕರಣದ ವಿಚಾರಣೆಗೆ ಸಮ್ಮತಿಸಿದರೆ,  ಅದನ್ನು CISCO WEBEX ಆನ್ಲೈನ್ ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆಯ ಮೂಲಕ ಮಾಡಲಾಗುತ್ತದೆ.

ಅದರ ವಿವರಗಳನ್ನು ಪ್ರಧಾನ ನ್ಯಾಯಪೀಠದ ರಿಜಿಸ್ಟ್ರಿಯೊಂದಿಗೆ ಸಮಾಲೋಚಿಸಿ ನ್ಯಾಯಪೀಠಗಳ ವಿಭಾಗದ ಮುಖ್ಯಸ್ಥರು ಅಂತಿಮಗೊಳಿಸುತ್ತಾರೆ. ವೀಡಿಯೊ ಕಾನ್ಫರೆನ್ಸ್ ನಲ್ಲಿ ಭಾಗವಹಿಸುವವರು ಸರಿಯಾದ ಉಡುಪು ಧರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಅಂತಹ ನ್ಯಾಯಪೀಠಗಳ ಬಾರ್ ಅಸೋಸಿಯೇಷನ್ ವಕೀಲರು ಕಾರ್ಯವಿಧಾನದ ಮೂಲಕ ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ಸಮ್ಮತಿಸಿದರೆ, ಪ್ರಕರಣಗಳನ್ನು ರಿಜಿಸ್ಟ್ರಿ ಗುರುತಿಸುತ್ಥಾರೆ ಮತ್ತು ಅದರ ವಿಚಾರಣೆಯು ವಿಭಾಗದ ಮುಖ್ಯಸ್ಥರು ದೈನಂದಿನ ಆಧಾರದ ಮೇಲೆ ನೀಡುವ ಸಮಯ ನಿಗದಿಯಂತೆ ಅದೇ ವ್ಯವಸ್ಥೆಯ ಮೂಲಕ ನಡೆಯುತ್ತದೆ.

ವ್ಯವಸ್ಥೆಯು 17.05.2020 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

***



(Release ID: 1620726) Visitor Counter : 179