ಕೃಷಿ ಸಚಿವಾಲಯ
7 ರಾಜ್ಯಗಳ 200 ಹೊಸ ಮಂಡಿಗಳು ಇ-ನ್ಯಾಮ್ ವೇದಿಕೆಗೆ ಸೇರ್ಪಡೆ
Posted On:
01 MAY 2020 5:28PM by PIB Bengaluru
ಕೃಷಿ ಉತ್ಪನ್ನಗಳ ಮಾರಾಟಕ್ಕೆ 7 ರಾಜ್ಯಗಳ 200 ಹೊಸ ಮಂಡಿಗಳು ಇ-ನ್ಯಾಮ್ ವೇದಿಕೆಗೆ ಸೇರ್ಪಡೆ
ಇ-ನ್ಯಾಮ್ ವೇದಿಕೆ, ಒಂದು ರಾಷ್ಟ್ರ ಒಂದು ಮಾರುಕಟ್ಟೆಯತ್ತ ಸಾಗುತ್ತಿದೆ – ಶ್ರೀ ನರೇಂದ್ರ ಸಿಂಗ್ ತೋಮರ್
ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮೇ 2020 ರೊಳಗೆ ಸುಮಾರು ಒಂದು ಸಾವಿರ ಮಂಡಿಗಳು ಇ-ನ್ಯಾಮ್ ವೇದಿಕೆಗೆ ಸೇರ್ಪಡೆಗೊಳ್ಳಲಿವೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಕೃಷಿ ಭವನದಲ್ಲಿ ಇಂದು ನಡೆದ ಇ-ನ್ಯಾಮ್ ವೇದಿಕೆಗೆ 7 ರಾಜ್ಯಗಳಿಂದ 200 ಹೊಸ ಮಂಡಿಗಳನ್ನು ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕರ್ನೂಲ್ ಹಾಗೂ ಹುಬ್ಬಳ್ಳಿಯಿಂದ ಮಂಡಿಗಳಲ್ಲಿ ನಡೆಯುತ್ತಿರುವ ಕಡಲೆ ಬೀಜ ಮತ್ತು ಮೆಕ್ಕೆ ಜೋಳದ ವ್ಯಾಪಾರವನ್ನು ಕೂಡಾ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಚಿವರು ವೀಕ್ಷಿಸಿದರು. ರೈತರಿಗಾಗಿ ತಂತ್ರಜ್ಞಾನವನ್ನು ಬಳಸುವ ಪ್ರಧಾನ ಮಂತ್ರಿಗಳ ಕನಸು ಬಹುಬೇಗ ನನಸಾಗಲಿದೆ ಎಂದು ಅವರು ಹೇಳಿದರು.
ಇಂದು ಇ-ನ್ಯಾಮ್ ವೇದಿಕೆಗೆ ಸೇರ್ಪಡೆಗೊಂಡ ಮಂಡಿಗಳು ಹೀಗಿವೆ : ಆಂಧ್ರ ಪ್ರದೇಶ (11 ಮಂಡಿಗಳು), ಗುಜರಾತ್ (25 ಮಂಡಿಗಳು), ಒಡಿಶಾ (16 ಮಂಡಿಗಳು), ರಾಜಸ್ಥಾನ್(94 ಮಂಡಿಗಳು), ತಮಿಳುನಾಡು (27 ಮಂಡಿಗಳು), ಉತ್ತರ ಪ್ರದೇಶ (25 ಮಂಡಿಗಳು), ಮತ್ತು ಕರ್ನಾಟಕ (02 ಮಂಡಿಗಳು). ಇದರಿಂದ ದೇಶದಲ್ಲಿರುವ ಒಟ್ಟು ಇ-ನ್ಯಾಮ್ ಮಂಡಿಗಳ ಸಂಖ್ಯೆ 785 ಕ್ಕೇರಿದೆ. ದೇಶಾದ್ಯಂತ 415 ಹೊಸ ಮಾರುಕಟ್ಟೆಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಾಧಿಸಿದಂತಹ ಪ್ರಥಮ ಹೆಜ್ಜೆಗುರುತು ಇದಾಗಿದೆ. ಇ-ನ್ಯಾಮ್ ರಾಜ್ಯಗಳ ಪಟ್ಟಿಗೆ ಮೊದಲ ಬಾರಿಗೆ ಕರ್ನಾಟಕವನ್ನು ಸೇರ್ಪಡೆಗೊಳಿಸಲಾಗಿದೆ. ಕೊನೆಯ ಹತದ ರೈತನನ್ನೂ ತಲುಪುವ ಮತ್ತು ಅವರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ವಿಧಾನವನ್ನು ಪರಿವರ್ತಿಸುವ ಗುರಿಯೊಂದಿಗೆ ಇಂದು ಈ ಹೊಸ ಮಂಡಿಗಳ ಹೆಚ್ಚು ರೈತರು ಮತ್ತು ಖರೀದಿದಾರರನ್ನು ತಲುಪುವ ಮೂಲಕ ಇ-ನ್ಯಾಮ್ ಹೆಚ್ಚು ಸಾಮರ್ಥ್ಯವನ್ನು ಗಳಿಸಿದೆ. ಈಗಾಗಲೇ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 585 ಮಂಡಿಗಳನ್ನು ಸಂಯೋಜಿಸಲಾಗಿದೆ ಮತ್ತು ಅವು ಕಾರ್ಯನಿರ್ಬಹಿಸುತ್ತಿವೆ.
ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯಿಂದ ಉತ್ತೇಜಿಸಲ್ಪಡುತ್ತಿರುವ ಇ-ಮಾರಟ ವೇದಿಕೆಯಾದ ಕರ್ನಾಟಕದ ರಾಷ್ಟ್ರೀಯ ಇ – ಮಾರ್ಕೆಟ್ ಸೇವೆಗಳ (ಆರ್ ಇ ಎಂ ಎಸ್) ಏಕೀಕೃತ ಮಾರುಕಟ್ಟೆ ವೇದಿಕೆ (ಯುಎಂಪಿ) ಯೊಂದಿಗೆ ಇಂದಿನಿಂದ ಇ-ನ್ಯಾಮ್ ಅನ್ನು ಸಂಯೋಜಿಸಲಾಗಿದೆ. ಸಿಂಗಲ್ ಸೈನ್ ಆನ್ ಫ್ರೇಮ್ ವರ್ಕ್ ಬಳಸಿ ಉಭಯ ವೇದಿಕೆಗಳಲ್ಲೂ ಅಡೆತಡೆಯಿಲ್ಲದೆ ವಹಿವಾಟು ನಡೆಸಲು ಎರಡೂ ವೇದಿಕೆಗಳ ವ್ಯಾಪಾರಸ್ಥರಿಗೆ ನುಕೂಲ ಕಲ್ಪಿಸಲಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದ ಕೃಷಿ ಉತ್ಪನ್ನಗಳಿಗೆ 2 ವಿಭಿನ್ನ ಇ-ವ್ಯಾಪಾರದ ವೇದಿಕೆಗಳನ್ನು ಪರಸ್ಪರ ಕಾರ್ಯ ಸಾಧ್ಯವಾಗುವಂತೆ ಮಾಡಲಾಗಿದೆ. ಇದು ಕರ್ನಾಟಕದ ರೈತರಿಗೆ ತಮ್ಮ ಉತ್ಪನ್ನಗಳನ್ನು ಇ-ನ್ಯಾಮ್ ನಲ್ಲಿ ನೋಂದಾಯಿಸಿಕೊಂಡ ಹೆಚ್ಚಿನ ಸಂಖ್ಯೆಯ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ಸಹಾಯಕರವಾಗಿರುತ್ತದೆ ಮತ್ತು ಇತರ ರಾಜ್ಯಗಳಲ್ಲಿರುವ ಇ-ನ್ಯಾಮ್ ಮಂಡಿಗಳ ರೈತರಿಗೆ ಕೂಡಾ ಕರ್ನಾಟಕದ ರೆಮ್ಸ್ ವೇದಿಕೆಗೆ ನೋಂದಾಯಿಸಿಕೊಂಡ ಕರ್ನಾಟಕದ ವ್ಯಾಪಾರಸ್ಥರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲ ಕಲ್ಪಿಸುತ್ತದೆ. ಅಲ್ಲದೆ ಇದು ಇ-ನ್ಯಾಮ್ ವೇದಿಕೆಯಲ್ಲಿ ನೋಂದಾಯಿಸಿಕೊಂಡ ಇತರ ರಾಜ್ಯಗಳು ಮತ್ತು ಕರ್ನಾಟಕದ ಮಧ್ಯೆ ಅಂತರ್ ರಾಜ್ಯ ವ್ಯಾಪಾರಕ್ಕೂ ಇದು ಉತ್ತೇಜನ ನೀಡುತ್ತದೆ
1.66 ಕೋಟಿ ರೈತರು ಮತ್ತು 1.28 ವ್ಯಾಪಾರಸ್ಥರು ನೊಂದಾಯಿಸಿಕೊಂಡಿರುವ ಇ-ನ್ಯಾಮ್ ಬಹು ದೂರ ಸಾಗಿ ಬಂದಿದೆ. 30 ಏಪ್ರೀಲ್ 2020 ರ ವೇಳೆಗೆ ಒಟ್ಟು ವ್ಯಾಪಾರದ ಪ್ರಮಾಣ 3.41 ಕೋಟಿ ಮೆಟ್ರಿಕ್ ಟನ್ ಮತ್ತು ಒಟ್ಟು 37 ಲಕ್ಷ ಸಂಖ್ಯೆಯ (ಬಿದಿರು ಮತ್ತು ತೆಂಗಿನ ಕಾಯಿ) ಸುಮಾರು 1.0 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ಇ-ನ್ಯಾಮ್ ವೇದಿಕೆಯಲ್ಲಿ ದಾಖಲಾಗಿದೆ. ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಪರಿಕಲ್ಪನೆಯ ಮಾರ್ಗವಾದ ಇ-ನ್ಯಾಮ್ ಆನ್ ಲೈನ್ ವೇದಿಕೆ ಭಾರತದಲ್ಲಿ ಕೃಷಿ ಮಾರುಕಟ್ಟೆ ಸುಧಾರಣೆಯಲ್ಲಿ ದಾಪುಗಾಲಿಟ್ಟಿರುವುದಾಗಿ ಸಾಬೀತುಮಾಡಿದೆ.
ಮಂಡಿ/ರಾಜ್ಯ ಗಡಿಗಳನ್ನೂ ದಾಟಿ ವ್ಯಾಪಾರ ಮಾಡಲು ಇ-ನ್ಯಾಮ್ ಅವಕಾಶ ಒದಗಿಸುತ್ತದೆ. 12 ರಾಜ್ಯಗಳ ಮಂಡಿಗಳ ಮಧ್ಯದ ವ್ಯಾಪಾರದಲ್ಲಿ ಒಟ್ಟು 233 ಮಂಡಿಗಳು ಭಾಗವಹಿಸಿದ್ದವು. ಇದರಲ್ಲಿ 13 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಇ-ನ್ಯಾಮ್ ವೇದಿಕೆಯಲ್ಲಿ ಅಂತರ್ ರಾಜ್ಯ ವ್ಯಾಪಾರದಲ್ಲಿ ದೂರದ ಊರುಗಳಲ್ಲಿರುವ ವ್ಯಾಪಾರಿಗಳೊಂದಿಗೆ ನೇರವಾಗಿ ಮಾತನಾಡಲು ಅನುಕೂಲ ಕಲ್ಪಿಸಿತ್ತು. ಪ್ರಸ್ತುತ ಇ-ನ್ಯಾಮ್ ವೇದಿಕೆಯಲ್ಲಿ 1000 ಕ್ಕೂ ಹೆಚ್ಚು ರೈತ ಉತ್ಪನ್ನ ಸಂಸ್ಥೆಗಳು ಲಭ್ಯವಿವೆ.
ಇದರ ಜೊತೆಗೆ ಕೋವಿಡ್ – 19 ರ ಬಿಕ್ಕಟ್ಟನ್ನು ಎದುರಿಸಲು ಸಚಿವಾಲಯ ಕಳೆದ ತಿಂಗಳು ಇ-ನ್ಯಾಮ್ ನಲ್ಲಿ 2 ಪ್ರಮುಖ ಮಾಡ್ಯೂಲ್ ಗಳನ್ನು ಬಿಡುಗಡೆ ಮಾಡಿದೆ. ಇವುಗಳ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರದೇ ಮಾರಾಟ ಮಾಡಬಹುದು. ಈ ಮಾಡ್ಯೂಲ್ ಗಳು ಯಾವುವೆಂದರೆ : ಎಫ್ ಪಿ ಒ ರೈತ ಸದಸ್ಯರಿಗೆ ತಮ್ಮ ಸಂಗ್ರಹ ಕೇಂದ್ರದಿಂದ ವ್ಯಾಪಾರ ಮಾಡಲು ಎಫ್ ಪಿ ಒ ಮಾಡ್ಯೂಲ್ ಗಳು ಸಹಾಯ ಮಾಡುತ್ತವೆ ಮತ್ತು ಇನ್ನೊಂದು ವೇರ್ ಹೌಸ್ ಮಾಡ್ಯೂಲ್ ಆಗಿದ್ದು ಇದರ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ನೋಂದಾಯಿಸಿಕೊಂಡ ಡಬ್ಲ್ಯೂ ಡಿ ಆರ್ ಎ ಗೋದಾಮುಗಳಲ್ಲಿ ಮಾರಾಟ ಮಾಡಬಹುದು. ಇವನ್ನು ರಾಜ್ಯಗಳು ಪರಿಗಣಿಸಿದ ಮಂಡಿ ಎಂದು ಘೋಷಿಸಲಾಗಿದೆ. ಇದರ ಜೊತೆಗೆ ಇತ್ತೀಚೆಗೆ ಸಚಿವಾಲಯವು “ಕಿಸಾನ್ ರಥ್” ಎಂಬ ಮೊಬೈಲ್ ಆಪ್ ನ್ನು ಆರಂಭಿಸಿದೆ, ಇದು ರೈತರಿಗೆ ತಮ್ಮ ಉತ್ಪನ್ನಗಳನ್ನು ಹತ್ತಿರದ ಮಾರುಕಟ್ಟೆ ಮತ್ತು ಗೋದಾಮುಗಳಿಗೆ ಸಾಗಿಸಲು ತಮಗೆ ಸೂಕ್ತವಾದ ವಾಹನಗಳು/ಟ್ರ್ಯಾಕ್ಟರ್ ನ್ನು ಹುಡುಕಲು ಸಹಾಯ ಮಾಡುತ್ತದೆ. ವಿಡಿಯೋ ಕಾನ್ಪೇರೆನ್ಸ್ ಮೂಲಕ ನಡೆದ ಇಂದಿನ ಕಾರ್ಯಕ್ರಮದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಹಾಯಕ ಸಚಿವರಾದ ಶ್ರೀ ಪರಶೋತ್ತನ್ ರೂಪಾಲಾ ಮತ್ತು ಶ್ರೀ ಕೈಲಾಶ್ ಚೌಧರಿ ಮತ್ತು ಕಾರ್ಯದರ್ಶಿಗಳು (ಎಸಿ ಮತ್ತು ಎಫ್ ಡಬ್ಲ್ಯೂ), ಶ್ರೀ ಸಂಜಯ್ ಅಗರ್ ವಾಲ್ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
***
(Release ID: 1620424)
Visitor Counter : 323