ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತವನ್ನು ಆದ್ಯತೆಯ ತಾಣವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಶ್ರೀ ಪಿಯೂಷ್ ಗೋಯಲ್ ವಿದೇಶದಲ್ಲಿರುವ ಇಂಡಿಯನ್ ಮಿಷನ್ಗಳಿಗೆ ಕರೆ
Posted On:
01 MAY 2020 5:42PM by PIB Bengaluru
ಭಾರತವನ್ನು ಆದ್ಯತೆಯ ತಾಣವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಶ್ರೀ ಪಿಯೂಷ್ ಗೋಯಲ್ ವಿದೇಶದಲ್ಲಿರುವ ಇಂಡಿಯನ್ ಮಿಷನ್ಗಳಿಗೆ ಕರೆ
ಇಂಡಿಯನ್ ಮಿಷನ್ಗಳು ವಿದೇಶದಲ್ಲಿ ವ್ಯಾಪಾರ ಮತ್ತು ರಪ್ತಿನ ಅವಕಾಶಗಳನ್ನು ಗುರುತಿಸಬೇಕು
ಕೋವಿಡ್ ನಂತರದ ಕಾಲದಲ್ಲಿ ವ್ಯಾಪಾರ ಮತ್ತು ಹೂಡಿಕೆಯು ಭಾರತಕ್ಕೆ ಚೇತರಿಕೆಯ ಮಾರ್ಗವಾಗಲಿದೆ: ವಿದೇಶಾಂಗ ವ್ಯವಹಾರಗಳ ಸಚಿವರ ಹೇಳಿಕೆ
ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ರೈಲ್ವೆ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ತಮ್ಮ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಭಾರತಕ್ಕೆ ವ್ಯಾಪಾರ ಮತ್ತು ರಫ್ತಿಗೆ ಇರುವ ಅವಕಾಶಗಳನ್ನು ಗುರುತಿಸುವಲ್ಲಿ ಮತ್ತು ಭಾರತವನ್ನು ಆದ್ಯತೆಯ ತಾಣವನ್ನಾಗಿ, ಹೂಡಿಕೆಗೆ ವಿಶ್ವಾಸಾರ್ಹ ತಾಣವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ವಿದೇಶದಲ್ಲಿರುವ ಭಾರತೀಯ ಇಂಡಿಯನ್ ಮಿಷನ್ಗಳಿಗೆ ಕರೆ ನೀಡಿದ್ದಾರೆ. ಅವರು ನಿನ್ನೆ ಸಂಜೆ ವಿವಿಧ ಭೌಗೋಳಿಕ ಪ್ರದೇಶಗಳಿಂದ 131 ರಾಯಭಾರಿ ಕಚೇರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿದೇಶಾಂಗ ಸಚಿವ ಶ್ರೀ ಎಸ್.ಜೈಶಂಕರ್ ಅವರ ಸಮ್ಮುಖದಲ್ಲಿ.ಮಾತನಾಡುತ್ತಿದ್ದರು,
ನಮ್ಮ ಕೈಗಾರಿಕೆಗಳನ್ನು ಸುಧಾರಿಸಲು, ಹೊಸ ಸುಧಾರಣೆಗಳನ್ನು ತರಲು ಈ ಕೋವಿಡ್-19 ಪರಿಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸಲು ಎಲ್ಲರೂ ಕೆಲಸ ಮಾಡಬೇಕು ಎಂದು ಶ್ರೀ ಗೋಯಲ್ ಹೇಳಿದರು. ನಾವು 3 ಪಟ್ಟದಷ್ಟು ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಗುರಿಯಾಗಿಸಿಕೊಳ್ಳಬೇಕು ಎಂದು ಹೇಳಿದರು. ಕೋವಿಡ್ ನಂತರದ ಕಾಲದಲ್ಲಿ ತೆರೆಯುವ ಅವಕಾಶಗಳನ್ನು ಬಳಸಿಕೊಳ್ಳಲು ಸ್ಪಷ್ಟ ಸೂಚನೆಗಳನ್ನು ನೀಡಲು ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಸಚಿವರು ಮಾಹಿತಿ ನೀಡಿದರು. ಇಂದು, ಗೌರವಾನ್ವಿತ ಪ್ರಧಾನ ಮಂತ್ರಿಯವರನ್ನು ಒಬ್ಬ ಸಮರ್ಥ, ನುಡಿದಂತೆ ನಡೆಯುವ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗೆ ಸ್ಫೂರ್ತಿ ನೀಡುವ ವ್ಯಕ್ತಿ ಎಂದು ಕಾಣಲಾಗುತ್ತಿದೆ. ಸುಮಾರು 100 ದೇಶಗಳು ಭಾರತೀಯ ಔಷದೋದ್ಯಮದಿಂದ ಲಾಭ ಪಡೆದಿವೆ. ಭಾರತವು ಸಹೋದರತ್ವವನ್ನು ತೋರಿಸಿದೆ ಮತ್ತು ‘ವಸುದೈವ ಕುಟುಂಬಕಂ’ ಎನ್ನುವುದರ ಮೇಲೆ ನಂಬಿಕೆ ಇಟ್ಟಿದೆ. ಎಲ್ಲಾ ರಾಷ್ಟ್ರಗಳು ಪ್ರಜಾಪ್ರಭುತ್ವ, ಪಾರದರ್ಶಕ ವ್ಯವಹಾರ, ಸಶಕ್ತ ಕಾನೂನಿನ ಆಡಳಿತ, ಉತ್ತಮ ಮಾಧ್ಯಮ ಮತ್ತು ನಂಬಿಕಸ್ಥ ಹಾಗೂ ಮತ್ತು ವಿಶ್ವಾಸಾರ್ಹತೆಗಳನ್ನೊಳಗೊಂಡ ದೇಶಗಳನ್ನು ಹುಡುಕುತ್ತಿವೆ ಎಂದು ಶ್ರೀ ಗೋಯಲ್ ಹೇಳಿದರು. ಭಾರತವನ್ನು ವಿಶ್ವಾಸಾರ್ಹ ಪಾಲುದಾರನ್ನನ್ನಾಗಿ ನೋಡಲಾಗುತ್ತಿದೆ ಎಂದು ಹೇಳಿದ ಅವರು, ತಾವಿರುವ ದೇಶಗಳಲ್ಲಿ ಇರುವ ವ್ಯಾಪಾರ ಅವಕಾಶಗಳನ್ನು ಗುರುತಿಸಲು ಭಾರತೀಯ ದೂತಾವಾಸಗಳು ನಮಗೆ ಸಹಾಯ ಮಾಡಬೇಕು ಎಂದು ಹೇಳಿದರು.
ಕಾರ್ಖಾನೆಗಳು ಮತ್ತು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ನೈಜವಾದ ಏಕ ಕಿಂಡಿಯನ್ನು ರಚಿಸಲು ಇನ್ವೆಸ್ಟ್ ಇಂಡಿಯಾ ಮತ್ತು ಹೂಡಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜಿಸುವ ಇಲಾಖೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಹೇಳಿದರು. ಇತರ ದೇಶಗಳಲ್ಲಿನ ಅವಕಾಶಗಳನ್ನು ವರದಿ ಮಾಡಲು ರಾಯಭಾರಿಗಳನ್ನು ಕೇಳಿದ ಶ್ರೀ ಗೋಯಲ್, ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವುದು ದೂತಾವಾಸಗಳು ಮತ್ತು ಸಚಿವಾಲಯಗಳು ಪಾಲುಮಾಡಿಕೊಂಡ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಎಲ್ಲಾ ದೂತಾವಾಸಗಳು ಅವಕಾಶ ಕೋವಿಡ್ -19 ರ ನಂತರದ ಕಾಲದಲ್ಲಿ ಇರುವ ಅವಕಾಶಗಳ ಬಗ್ಗೆ ಪ್ರಸ್ತಾಪವನ್ನು ಕಳುಹಿಸಲು ಕೋರಲಾಗಿದೆ. ಪ್ರಸ್ತಾಪವು ನವೀನ ಆಲೋಚನೆಗಳನ್ನು ಹೊಂದಿರಬೇಕು ಮತ್ತು ರಫ್ತುಗಳನ್ನು ಸುಧಾರಿಸಲು ಸಲಹೆಗಳನ್ನು ಒಳಗೊಂಡಿರಬೇಕು. ಅವರು ದೂತಾವಾಸಗಳಿಗೆ ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಅವರು ಎಲ್ಲಾ ರಾಯಭಾರ ಕಚೇರಿಯವರನ್ನು ಉತ್ತೇಜಿಸಿದರು. ಎಲ್ಲಾ ದೂತಾವಾಸಗಳ ಸಾಮಾನ್ಯ ದಿನಚರಿಯು ವಾಣಿಜ್ಯ ಕಾರ್ಯಗಳನ್ನು ನಿರ್ವಹಿಸುವುದು. ದೂತಾವಾಸಳು ನೆಟ್ವರ್ಕಿಂಗ್ ಪ್ರಾರಂಭಿಸಬೇಕು, ಕಂಪನಿಗಳೊಂದಿಗೆ ಸಂವಹನ ಪ್ರಾರಂಭಿಸಬೇಕು, ವ್ಯಾಪಾರದ ಸುಳಿವುಗಳು ಮತ್ತು ಹೊಸ ಸಂಪರ್ಕಗಳ ಮಾಹಿತಿಯೊಂದಿಗೆ ಬರಬೇಕು ಮತ್ತು ಭಾರತದಲ್ಲಿ ಕಾರ್ಯಗತಗೊಳಿಸಬಹುದಾದ ತಂತ್ರಜ್ಞಾನವನ್ನು ಗುರುತಿಸಬೇಕು ಮತ್ತು ತಾವಿರುವ ದೇಶಗಳಲ್ಲಿ ಭಾರತಕ್ಕಾಗಿ ಹೋರಾಡಬೇಕು.
ಈ ಸಾಂಕ್ರಾಮಿಕ ರೋಗದ ಫಲಿತಾಂಶವೇನೆಂದರೆ ಈಗ ಒಂದೇ ಭೌಗೋಳಿಕತೆಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರ ಪರಿಣಾಮಗಳ ಬಗ್ಗೆ ಇಡೀ ಜಗತ್ತಿಗೆ ತಿಳಿಯಿತು ಎನ್ನುವುದು ಎಂದು ವಿದೇಶಾಂಗ ಸಚಿವ ಶ್ರೀ ಎಸ್.ಜೈಶಂಕರ್ ಹೇಳಿದರು. ಭಾರತವು ಸ್ವತಃ ಬೆಳೆಯಲು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಎಲ್ಲಾ ದೇಶಗಳು ದುಷ್ಪರಿಣಾಮವನ್ನು ಎದುರಿಸುತ್ತಿರುವುದರಿಂದ, ವ್ಯಾಪಾರ ಮತ್ತು ಹೂಡಿಕೆಯು ಭಾರತಕ್ಕೆ ಚೇತರಿಕೆಯ ಮಾರ್ಗವಾಗಲಿದೆ ಎಂದು ಅವರು ಹೇಳಿದರು. ಈಗ ರಾಯಭಾರಿಗಳು ಕಚೇರಿಗಳಿಂದ ಹೊರಬರಲು, ನೆಟ್ವರ್ಕಿಂಗ್ ಮಾಡಲು, ಕಂಪನಿಗಳೊಂದಿಗೆ ಮಾತನಾಡಲು ಮತ್ತು ಭಾರತದಲ್ಲಿ ಹೂಡಿಕೆ ಮಾಡಲು ಮನವೊಲಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಅವರು ನಿರ್ದಿಷ್ಟವಾಗಿ ಔಷಧೀಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಮತ್ತು ಆಫ್ರಿಕಾ ಖಂಡದಲ್ಲಿ ಅವಕಾಶವನ್ನು ಗುರುತಿಸಿದರು. ವಿದೇಶಗಳಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಈ ರಾಯಭಾರಿಗಳು ಕಾರ್ಯಪ್ರವೃತ್ತವಾಗಬೇಕು ಮತ್ತು ಭಾರತದಲ್ಲಿರುವ ಸಚಿವಾಲಯಗಳೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಹೇಳಿದರು.
ವಾಣಿಜ್ಯ ಕಾರ್ಯದರ್ಶಿ ಡಾ.ಅನೂಪ್ ವಾಧವನ್ ಯವರು ರಫ್ತುಗಳನ್ನು ಸುಧಾರಿಸಲು ಇರುವ ದೊಡ್ಡ ಸಾಮರ್ಥ್ಯದ ಬಗ್ಗೆ ವಿವರಿಸಿದರು ಮತ್ತು ವಾಣಿಜ್ಯ ಸಚಿವಾಲಯವು ದೂತಾವಾಸಗಳ ಸಹಾಯದಿಂದ ಸಾಧಿಸಬಹುದು ಎಂದು ಹೇಳಿದರು ವಿವಿಧ ದೇಶಗಳಿಂದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಲು ದೂತಾವಾಸಗಳು ನಮಗೆ ಸಹಾಯ ಮಾಡಿವೆ ಎಂದು ಅವರು ಹೇಳಿದರು. ಅವರು ಕೊಡುಗೆಯ 3 ಕ್ಷೇತ್ರಗಳನ್ನು ಗುರುತಿಸಿದ್ದಾರೆ- ಜಾಗತಿಕವಾಗಿ ರಫ್ತನ್ನು ಉತ್ತೇಜಿಸುವುದು; ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು; ಮತ್ತು ಭಾರತವು ಅಳವಡಿಸಿಕೊಳ್ಳಬಹುದಾದ ತಂತ್ರಜ್ಞಾನವನ್ನು ನಿರ್ಣಯಿಸುವ ಅಗತ್ಯ.
***
(Release ID: 1620391)
Visitor Counter : 285