ಪ್ರಧಾನ ಮಂತ್ರಿಯವರ ಕಛೇರಿ

ಥೈಲ್ಯಾಂಡ್ ಪ್ರಧಾನಮಂತ್ರಿ ಜನರಲ್ (ನಿವೃತ್ತ) ಪ್ರಯೂತ್ ಚಾನ್ ಒ ಚಾ ಅವರೊಂದಿಗೆ ಪ್ರದಾನಿ ನರೇಂದ್ರ ಮೋದಿ ದೂರವಾಣಿ ಮಾತುಕತೆ

Posted On: 01 MAY 2020 7:30PM by PIB Bengaluru

ಥೈಲ್ಯಾಂಡ್ ಪ್ರಧಾನಮಂತ್ರಿ ಜನರಲ್ (ನಿವೃತ್ತಪ್ರಯೂತ್ ಚಾನ್  ಚಾ ಅವರೊಂದಿಗೆ ಪ್ರದಾನಿ ನರೇಂದ್ರ ಮೋದಿ ದೂರವಾಣಿ 

ಮಾತುಕತೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಥೈಲ್ಯಾಂಡ್ ಪ್ರಧಾನಿ ಜನರಲ್ (ನಿವೃತ್ತಪ್ರಯೂತ್ ಚಾನ್--ಚಾ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.

ಆಸಿಯಾನ್ ಮತ್ತು ಸಂಬಂಧಿತ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲು 2019  ನವೆಂಬರ್ನಲ್ಲಿ ಬ್ಯಾಂಕಾಕ್ಗೆ ಭೇಟಿ ನೀಡಿದ್ದನ್ನು ಪ್ರಧಾನ ಮಂತ್ರಿಯವರು ಸ್ಮರಿಸಿಕೊಂಡರುಥೈಲ್ಯಾಂಡ್ ರಾಜಮನೆತನದ ಸದಸ್ಯರಿಗೆ ಮತ್ತು ಥಾಯ್ ಜನರಿಗೆ ಪ್ರಧಾನಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ತಮ್ಮ ದೇಶಗಳಲ್ಲಿ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಉಭಯ ನಾಯಕರು ಮಾಹಿತಿಯನ್ನು ಹಂಚಿಕೊಂಡರು.

ಸಾಂಕ್ರಾಮಿಕ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಪ್ರಾದೇಶಿಕ ಮತ್ತು ಜಾಗತಿಕ ಸಹಕಾರದ ಮಹತ್ವದ ಬಗ್ಗೆ ಪ್ರಧಾನಿ ಮಾತನಾಡಿದರುಥಾಯ್ಲೆಂಡ್ ಔಷಧೀಯ ಅವಶ್ಯಕತೆಗಳನ್ನು ಬೆಂಬಲಿಸುವ ಭಾರತದ ಬದ್ಧತೆಯ ಬಗ್ಗೆ ಥಾಯ್ ಪ್ರಧಾನ ಮಂತ್ರಿಯವರಿಗೆ ಅವರು ಭರವಸೆ ನೀಡಿದರು.

ಉಭಯ ದೇಶಗಳ ಸಂಶೋಧಕರುವಿಜ್ಞಾನಿಗಳ ನಡುವೆ ಹೆಚ್ಚಿನ ಸಹಯೋಗದ ಅವಶ್ಯಕತೆಯನ್ನು ನಾಯಕರು ಒಪ್ಪಿದರು.

ಪರಸ್ಪರ ದೇಶಗಳಲ್ಲಿರುವ ಇರುವ ತಮ್ಮ ನಾಗರಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯವನ್ನು ನಾಯಕರು ಶ್ಲಾಘಿಸಿದರು ಮತ್ತು ಅಂತಹ ಬೆಂಬಲವನ್ನು ಮುಂದುವರೆಸುವ ಭರವಸೆ ನೀಡಿದರು.

ಜನಾಂಗೀಯ ಮತ್ತು ಪ್ರಾಚೀನ ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿರುವ ಥೈಲ್ಯಾಂಡ್ ಭಾರತದ ವಿಸ್ತೃತ ನೆರೆಹೊರೆಯ ಮೌಲ್ಯಯುತ ಕಡಲ ತಡಿಯ ಸ್ನೇಹಿತ ರಾಷ್ಟ್ರವಾಗಿದೆ.

***



(Release ID: 1620300) Visitor Counter : 188