ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಭಾರತದಾದ್ಯಂತದ ಸಿ.ಎಸ್‌.ಐ.ಆರ್. ಲ್ಯಾಬ್‌ಗಳು ತಮ್ಮ ಪ್ರದೇಶಗಳಲ್ಲಿ ಮತ್ತು ಇತರಡೆ ಆಹಾರ, ಸ್ಯಾನಿಟೈಜರ್‌ಗಳು, ಮುಖಕವಚಗಳು ಇತ್ಯಾದಿಗಳನ್ನು ಒದಗಿಸುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದೆ

Posted On: 30 APR 2020 3:18PM by PIB Bengaluru

ಭಾರತದಾದ್ಯಂತದ ಸಿ.ಎಸ್‌..ಆರ್. ಲ್ಯಾಬ್‌ಗಳು ತಮ್ಮ ಪ್ರದೇಶಗಳಲ್ಲಿ ಮತ್ತು ಇತರಡೆ ಆಹಾರ, ಸ್ಯಾನಿಟೈಜರ್‌ಗಳು, ಮುಖಕವಚಗಳು ಇತ್ಯಾದಿಗಳನ್ನು ಒದಗಿಸುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದೆ

ಸಿ.ಎಸ್..ಆರ್-ಸಿ.ಎಫ್ಟಿ.ಆರ್.ಐ, ಮೈಸೂರು, ಸಿ.ಎಸ್..ಆರ್-ಐಹೆಚ್ಬಿಟಿ, ಪಾಲಂಪೂರ್,
ಸಿ.ಎಸ್..ಆರ್-ಐ.ಎಂ.ಎಂ.ಟಿ, ಭುವನೇಶ್ವರ, ಸಿ.ಎಸ್..ಆರ್-ಸಿ..ಎಂ.ಎಫ್.ಆರ್, ಧನ್ಬಾದ್ ಮತ್ತು ಸಿ.ಎಸ್..ಆರ್-ಐಐಪಿ, ಡೆಹ್ರಾಡೂನ್, ಸಿ.ಎಸ್..ಆರ್ ಲ್ಯಾಬ್ ಗಳು
ಕೋವಿಡ್ 19 ಸಂದರ್ಭದಲ್ಲಿ ವಲಸೆ ಕಾರ್ಮಿಕರು, ರೋಗಿಗಳು, ಆರೋಗ್ಯ ಕಾರ್ಯಕರ್ತರು, ಪೊಲೀಸ್ ಮತ್ತು ಇತರರಿಗೆ ಸಿದ್ದ ಆಹಾರ ಪೊಟ್ಟಣ ಪೂರೈಕೆ ಮಾಡಿವೆ

ಸಿ.ಎಸ್..ಆರ್ ಸಂಶೋಧನೆ ಮತ್ತು ಅಭಿವೃದ್ಧಿ ಹಾಗು ವಿಜ್ಞಾನ ಮತ್ತು ತಂತ್ರಜ್ಞಾನ ಜ್ಞಾನ ನೆಲೆಗೆ ಹೆಸರುವಾಸಿಯಾಗಿದ್ದರೂ ತುರ್ತು ಸೇವೆಗಳನ್ನು ಪೂರೈಸಿದ ದಾಖಲೆ ಹೊಂದಿದೆ

 

 

ವೈರಸ್ (ಸಾರ್ಸ್ – ಕೊವ್ – 2 ) ವೇಗವಾಗಿ ಹರಡುವುದನ್ನು ತಡೆಗಟ್ಟುವ ಪ್ರಮುಖ ಅಸ್ತ್ರವಾಗಿ ಭೌತಿಕ ಅಂತರವಿರುವುದರಿಂದ, ದೇಶದಲ್ಲಿ ಸಾಂಕ್ರಾಮಿಕ ರೋಗದ ಮಂದಗತಿಗೆ ಲಾಕ್ ಡೌನ್ ಹೇರಿಕೆಯು ಪ್ರಾಯೋಗಿಕ ಪರಿಹಾರವಾಗಿದೆ. ಲಾಕ್ ಡೌನ್ ಅಗತ್ಯವಿರುವಷ್ಟು ದಿನವೂ, ವಲಸಿಗರು ಮತ್ತು ಸಾಮಾಜಿಕ ಆರ್ಥಿಕವಾಗಿ ದುರ್ಬಲರು, ಸಮಾಜದ ದುರ್ಬಲ ವರ್ಗಕ್ಕೆ ಕಷ್ಟವನ್ನುಂಟುಮಾಡುತ್ತದೆ ಎಂದು ಕೂಡಾ ಸಾಬೀತಾಗಿದೆ.

ದೇಶದ ಆರ್ & ಡಿ ಮತ್ತು ಎಸ್ & ಟಿ ಕ್ಷೇತ್ರದ ಜ್ಞಾನ ನೆಲೆಗೆ ಸದಾ ಹೆಸರುವಾಸಿಯಾಗಿರುವ, ಸಿ.ಎಸ್.ಐ.ಆರ್ ದೇಶದ ಪ್ರಮುಖ ವಿಪತ್ತುಗಳ ಸಂದರ್ಭದಲ್ಲಿ ಈ ಹಿಂದೆ ತುರ್ತು ಮಧ್ಯಸ್ಥಿಕೆಗಳನ್ನು ಒದಗಿಸಿದ ದಾಖಲೆಯನ್ನು ಹೊಂದಿದೆ. ಅದು ಉತ್ತರಕಾಶಿ ಮತ್ತು ಚೆನ್ನೈ ಪ್ರವಾಹಗಳು ಅಥವಾ ಫಾನಿ ಚಂಡಮಾರುತದ ಸಮಯದಲ್ಲಿ, ಸಿ.ಎಸ್.ಐ.ಆರ್ ಪ್ರಯೋಗಾಲಯಗಳು ತಮ್ಮೊಂದಿಗೆ ನೀರಿನ ಶುದ್ಧೀಕರಣ ತಂತ್ರಜ್ಞಾನಗಳು, ಕೈ ಪಂಪ್‌ಗಳು, ಚಂಡಮಾರುತದ ಆಶ್ರಯಗಳು, ರಚನಾತ್ಮಕ ಪುನರ್ವಸತಿ ಮತ್ತು ತಿನ್ನಲು ಸಿದ್ಧವಾದ ಪೌಷ್ಠಿಕ ಆಹಾರದ ರೂಪದಲ್ಲಿ ಸಹಾಯ ಮತ್ತು ಬೆಂಬಲವನ್ನು ಒದಗಿಸಲು ಪರಿಣತಿ ಮತ್ತು ಸಂಪನ್ಮೂಲಗಳನ್ನು ತನ್ನ ಎಲ್ಲಾ ಬಳಸಿಕೊಂಡಿದೆ

ಸಿ.ಎಸ್.ಐ.ಆರ್ ವೈರಲ್ ಜೀನೋಮ್ ಅನ್ನು ಅನುಕ್ರಮಗೊಳಿಸಲು, ಔಷಧಗಳು ಮತ್ತು ರೋಗನಿರ್ಣಯದ ಕಿಟ್ ಗಳನ್ನು ಅಭಿವೃದ್ಧಿಪಡಿಸಲು ಮತ್ತು ಕೊವಿಡ್ -19 ವಿರುದ್ಧ ಲಸಿಕೆಗಳನ್ನು ಅನ್ವೇಷಿಸಲು ಯೋಜನೆಗಳನ್ನು ಒಟ್ಟುಗೂಡಿಸಿದರೂ, ಸಿ.ಎಸ್.ಐ.ಆರ್ ಆಹಾರ ಸಂಬಂಧಿತ ಸಂಶೋಧನೆ ಮತ್ತು ತಂತ್ರಜ್ಞಾನಗಳಲ್ಲಿ ಪ್ರಮುಖ ಹಸ್ತಕ್ಷೇಪಗಳನ್ನು ಅಭಿವೃದ್ಧಿಪಡಿಸಿದೆ, ನಾವು ದೇಶದ ವಿವಿಧ ಸ್ಥಳಗಳಲ್ಲಿ ವಲಸೆ ಕಾರ್ಮಿಕರಿಗೆ ಮತ್ತು ಇತರ ನಿರ್ಗತಿಕರಿಗೆ ಆಹಾರ ನೆರವು ನೀಡಲು ನಿರ್ಧರಿಸಿದೆ. ಭಾರತಾದ್ಯಂತದ ಸಿ.ಎಸ್.ಐ.ಆರ್ ಲ್ಯಾಬ್‌ಗಳು ಆಯಾ ಪ್ರದೇಶಗಳಲ್ಲಿ ಮತ್ತು ಅದಕ್ಕೂ ಮೀರಿ ಆಹಾರ, ಸ್ಯಾನಿಟೈಜರ್‌ಗಳು, ಮುಖಕವಚಗಳು ಇತ್ಯಾದಿಗಳನ್ನು ಒದಗಿಸುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಲು ತಾವಾಗಿಯೇ ಮುಂದೆ ಬರುತ್ತಿರುವುದನ್ನು ಕಂಡು ನಾನು ಸಂತೋಷಪಡುತ್ತೇನೆ.ಎಂದು ಸಿ.ಎಸ್.ಐ.ಆರ್, ಡಿಜಿ, ಡಾ. ಶೇಖರ್ ಮಾಂಡೆ ಹೇಳುತ್ತಾರೆ,

ದೇಶದ ಪ್ರಮುಖ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಮೈಸೂರು ಮೂಲದ ಸಿ.ಎಸ್.ಐ.ಆರ್-ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿ.ಎಸ್.ಐ.ಆರ್-ಸಿಎಫ್ಟಿಆರ್ಐ), ಅಸಂಖ್ಯಾತ ಆಹಾರ ಮತ್ತು ಆಹಾರ ಸಂಸ್ಕರಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ, ಆಹಾರ ಉತ್ಪನ್ನಗಳು ರೈತರಿಗೆ ಪ್ರಯೋಜನವಾಗುವುದಲ್ಲದೆ ಹೆಚ್ಚು ಪೌಷ್ಠಿಕಾಂಶದ ಮೌಲ್ಯವನ್ನೂ ಹೊಂದಿದೆ. ಈ ಸಮಯದಲ್ಲಿ, ಸಿ.ಎಸ್.ಐ.ಆರ್-ಸಿಎಫ್ಟಿಆರ್ಐ 10 ಟನ್ ಹೆಚ್ಚಿನ ಪ್ರೋಟೀನ್ ಬಿಸ್ಕತ್ತುಗಳು, 1 ಟನ್ ಸ್ಪಿರುಲಿನಾ ಚಿಕ್ಕಿ, 10 ಟನ್ ಏಲಕ್ಕಿ-ಸುವಾಸನೆಯ ನೀರು, ಮತ್ತು 5 ಟನ್ ನ್ಯೂಟ್ರಿಫ್ರೂಟ್ ಬಾರ್ ಗಳನ್ನು 56,000 ಕ್ಕೂ ಹೆಚ್ಚು ವಲಸೆ ಕಾರ್ಮಿಕರು, ರೋಗಿಗಳು, ವೈದ್ಯರು ಮತ್ತು ಎರಡು ಮಹಾನಗರಗಳಲ್ಲಿನ ಪೊಲೀಸರು ಮುಂತಾದವರಿಗೆ ಪೂರೈಕೆ ಮಾಡಿದೆ. ಸಿ.ಎಸ್.ಐ.ಆರ್-ಸಿಎಫ್ಟಿಆರ್ಐ ಸರಬರಾಜು ಮಾಡಿದ ಆಹಾರ ಪದಾರ್ಥಗಳು ದೀರ್ಘಾವಧಿಯ ಕವಾಟು(ಶೆಲ್ಫ್) ಶೇಖರಣೆಯ-ಜೀವಿತಾವಧಿಯನ್ನು ಹೊಂದಿರುತ್ತವೆ ಮತ್ತು ಆದ್ದರಿಂದ ಹೆಚ್ಚು ಕಾಲ ಉಳಿಸಿಕೊಳ್ಳುತ್ತವೆ. ಅವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುವ ಸೂಕ್ಷ್ಮ ಪೋಷಕಾಂಶಗಳೊಂದಿಗೆ ಪೂರಕವಾಗಿವೆ.

ಉದಾಹರಣೆಗೆ, ಹಣ್ಣಿನ ಬಾರ್‌ ಗಳಲ್ಲಿ ಅಧಿಕ ವಿಟಮಿನ್ ಸಿ ಮತ್ತು ಸತ್ವ ಇರುತ್ತವೆ, ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಸ್ಪಿರುಲಿನಾ ಚಿಕ್ಕಿ, ಲಘು, ಸ್ಪಿರುಲಿನಾಗಳು ಸೂಕ್ಷ್ಮ ಪೋಷಕಾಂಶಗಳಾದ ವಿಟಮಿನ್ ಎ, ಬೀಟಾ ಕ್ಯಾರೋಟಿನ್ ಮತ್ತು ಸುಲಭವಾಗಿ ಜೀರ್ಣವಾಗುವ ಪಾಚಿಯ ಪ್ರೋಟೀನ್‌ಗಳನ್ನು ಒದಗಿಸುತ್ತದೆ. ಏಲಕ್ಕಿ-ಅನುಕೂಲಕರ ನೀರಿನಲ್ಲಿ ಬೆರೆಸಿ, ಲಭ್ಯವಿರುವ ಪಾನೀಯಗಳಲ್ಲಿ, ಮಸಾಲೆ ಸಾರವನ್ನು (ಏಲಕ್ಕಿ ಪರಿಮಳ) ವಾಣಿಜ್ಯಿಕವಾಗಿ ನೀಡಿದರೆ ಅದು ಆರೋಗ್ಯಕರ ಪರ್ಯಾಯವಾಗುತ್ತದೆ. .

ವಾಸ್ತವವಾಗಿ, ಏಮ್ಸ್ನ ವಿಶೇಷ ಕೋರಿಕೆಯ ಮೇರೆಗೆ ಕೊವಿಡ್ -19 ರೋಗಿಗಳನ್ನು ಚೇತರಿಸಿಕೊಳ್ಳಲು ಸಿಐಎಸ್ಐಆರ್-ಸಿಎಫ್ಟಿಆರ್ಐ ಸಂಸ್ಥೆಯು ಏಮ್ಸ್-ನವದೆಹಲಿಗೆ 500 ಕೆಜಿ ಹೆಚ್ಚಿನ ಪ್ರೋಟೀನ್ ಯುಕ್ತ ಬಿಸ್ಕತ್ತು ಮತ್ತು 500 ಕೆಜಿ ಅಧಿಕ ಪ್ರೋಟೀನ್ ರಸ್ಕ್ ಗಳನ್ನು ಏಮ್ಸ್-ನವದೆಹಲಿಗೆ ಸರಬರಾಜು ಮಾಡಿದೆ. ಈ ವಿಶೇಷ ಬಿಸ್ಕತ್ತುಗಳು ಸಾಮಾನ್ಯ ಬಿಸ್ಕತ್ತುಗಳಿಗಿಂತ 60-80% ಪ್ರೋಟೀನ್‌ನಲ್ಲಿ ಶ್ರೀಮಂತವಾಗಿದೆ.

"ಪೌಷ್ಠಿಕಾಂಶದ ಉತ್ಪನ್ನಗಳನ್ನು ಪ್ರೋಟೀನ್ ಅಥವಾ ಖನಿಜಗಳು ಮತ್ತು ಜೀವಸತ್ವಗಳೊಂದಿಗೆ ಧನಾತ್ಮಕವಾಗಿ ಪರಿಣಾಮ ಬೀರುವ ರೀತಿಯಲ್ಲಿ ಪೂರಕವಾಗಿರುವ ರೀತಿಯಲ್ಲಿ ಆಯ್ಕೆಮಾಡಲಾಗಿದೆ, ಏಕೆಂದರೆ ಲಾಕ್‌ಡೌನ್ ಮತ್ತು ಪ್ರತ್ಯೇಕತೆಗೆ ಸಂಬಂಧಿಸಿದ ತೀವ್ರ ಆತಂಕ ಮತ್ತು ಅನಿಶ್ಚಿತತೆಯು ಈ ಎರಡನ್ನೂ ಹೆಚ್ಚಿಸುವ ಅಗತ್ಯವಿದೆ" ಎಂದು ಸಿ.ಎಸ್.ಐ.ಆರ್-ಸಿಎಫ್ಟಿಆರ್ಐ ನಿರ್ದೇಶಕ, ಡಾ. ಕೆ.ಎಸ್.ಎಂ.ಎಸ್. ರಾಘವರಾವ್ ಹೇಳಿದರು.

( ಸಿ.ಎಸ್.ಐ.ಆರ್-ಸಿಎಫ್ಟಿಆರ್ಐ ಸರಬರಾಜು ಮಾಡುವ ಬಿಸ್ಕತ್ತುಗಳು ಮತ್ತು ಚಿಕ್ಕಿಗಳನ್ನು ಸವಿಯುತ್ತಾ ಮಕ್ಕಳು ಆನಂದಿಸುತ್ತಿದ್ದಾರೆ)

ಸಿ.ಎಸ್.ಐ.ಆರ್-ಸಿಎಫ್‌ಟಿಆರ್ಐ ಈ ಸೇವಾ ಪ್ರಯತ್ನದಲ್ಲಿ ಅದ್ಭುತ ಪಾಲುದಾರರಾಗಿದ್ದಾರೆ. ಯಾವುದೇ ಅಧಿಕಾರಶಾಹಿ ಅಡೆತಡೆಗಳಿಲ್ಲದೆ ನಾವು ವಲಸೆ ಕಾರ್ಮಿಕರಲ್ಲಿ ಪ್ರೋಟೀನ್-ಪುಷ್ಟೀಕರಿಸಿದ ಬಿಸ್ಕತ್ತುಗಳು ಮತ್ತು ಸ್ಪಿರುಲಿನಾ ಚಿಕ್ಕಿಗಳನ್ನು ತಕ್ಷಣ ವಿತರಿಸಲು ಸಾದ್ಯವಾಯಿತು. ಮಕ್ಕಳು ಆಹಾರ ಪೊಟ್ಟಣದಿಂದ ಉತ್ಪನ್ನಗಳನ್ನು ತಿಂದು ಮೆಲುಕು ಹಾಕುತ್ತಿರುವುದನ್ನು ನೋಡುವುದು ಹೃದಯಸ್ಪರ್ಶಿಯಾಗಿತ್ತು. ವಿಜ್ಞಾನವನ್ನು ಜನರಿಗೆ ಕೊಂಡೊಯ್ಯಲು ಇದೊಂದು ಉತ್ತಮ ಉದಾಹರಣೆ ಎಂದು ನಾನು ಭಾವಿಸುತ್ತೇನೆ. ಎಂದು ಬೆಂಗಳೂರು ನಗರದ ವಲಸೆ ಕಾರ್ಮಿಕರಿಗಾಗಿ ಆದಾಯ ತೆರಿಗೆ ಕಚೇರಿಯ ಪರವಾಗಿ ಪರಿಹಾರ ಕಾರ್ಯಗಳನ್ನು ಕೈಗೊಂಡ ಪ್ರಧಾನ ಆದಾಯ ತೆರಿಗೆ ಆಯುಕ್ತರಾದ ಶ್ರೀ ಝಾಕಿರ್ ಥಾಮಸ್ ಹೇಳಿದ್ದಾರೆ

ಏತನ್ಮಧ್ಯೆ, ಲಾಕ್ ಡೌನ್ ನಿಂದಗಿ ಸಿಲುಕಿರುವ ಹಲವಾರು ವಲಸೆ ಕಾರ್ಮಿಕರ ಕುಟುಂಬಗಳು ಆಹಾರವನ್ನು ಹುಡುಕಲು ಹೆಣಗಾಡುತ್ತಿವೆ ಎಂದು ಪಂಚಾಯತ್ ಪ್ರತಿನಿಧಿಯೊಬ್ಬರಿಗೆ ತಿಳಿಸಿದ ನಂತರ, ಪಾಲಂಪೂರ್ ಮೂಲದ ಸಿ.ಎಸ್.ಐ.ಆರ್-ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಬಯೋಸೋರ್ಸ್ ಟೆಕ್ನಾಲಜಿ (ಸಿ.ಎಸ್.ಐ.ಆರ್-ಐಹೆಚ್ಬಿಟಿ), ಮತ್ತೊಂದು ಆಹಾರ ಸಂಸ್ಕರಣಾ ತಂತ್ರಜ್ಞಾನಗಳಿಗೆ ಹೆಸರುವಾಸಿಯಾದ ಸಂಸ್ಥೆ ಜೊತೆಗೂಡಿ 60 ಟನ್ನ್ಗ ಗಳಷ್ಟು ದಾಲ್ ಚವಾಲ್ ಆಲೂ ಮಿಕ್ಸ್, 2.16 ಟನ್ ಕಾಂಗ್ರಾ ಪಾಕ, 1500 ಸ್ಪಿರುಲಿನಾ ಕಡಲೆಕಾಯಿ ಬಾರ್ ಗಳು, 1000 ಮಲ್ಟಿಗ್ರೇನ್ ಎನರ್ಜಿ ಬಾರ್‌ಗಳು ಮತ್ತು 5000 ಪೆಟ್ಟಿಗೆಗಳನ್ನು , 1500 ಮಲ್ಟಿಗ್ರೇನ್ ಪ್ರೋಟೀನ್ ಪೌಡರ್ ವಲಸೆ ಕಾರ್ಮಿಕರಿಗೆ ಮಾತ್ರವಲ್ಲದೆ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರಂತಹ ಮುಂಚೂಣಿ ಕಾರ್ಮಿಕರಿಗೂ ಸಹ ಪೂರೈಸಿದೆ. ಆಹಾರವು ರಾಸಾಯನಿಕ ಮತ್ತು ಕೃತಕ ಸಂರಕ್ಷಕಗಳಿಂದ ಮುಕ್ತವಾಗಿದೆ, ಹಾಗೂ ಪ್ರೋಬಯಾಟಿಕ್ ಪರಿಣಾಮಗಳನ್ನು ಹೊಂದಿದೆ ಮತ್ತು ಅದರ ಕವಾಟಿನಲ್ಲಿ ಸುರಕ್ಷಿತವಾಗಿಡುವ -ಜೀವಿತಾವಧಿಯು 12 ತಿಂಗಳುಗಳು ಇರುತ್ತವೆ.

ಡೆಹ್ರಾಡೂನ್‌ನ ಸಿ.ಎಸ್.ಐ.ಆರ್-ಐ..ಪಿ ಕಳೆದ ಒಂದು ತಿಂಗಳಿನಿಂದ ಪ್ರತಿದಿನ ಸುಮಾರು 300 ಜನರಿಗೆ ಆಹಾರವನ್ನು ಒದಗಿಸುತ್ತಿದೆ.

ಭುವನೇಶ್ವರದಲ್ಲಿರುವ ಸಿ.ಎಸ್.ಐ.ಆರ್-ಇನ್ಸ್ಟಿಟ್ಯೂಟ್ ಆಫ್ ಮಿನರಲ್ಸ್ & ಮೆಟೀರಿಯಲ್ಸ್ ಟೆಕ್ನಾಲಜಿ (ಸಿ.ಎಸ್.ಐ.ಆರ್-ಐಎಂಎಂಟಿ) ಸಂಸ್ಥೆಯು 30000 ಸಿದ್ದ ಹಾ ಪೊಟ್ಟಣ (ಖಿಚಿಡಿ) ಮತ್ತು ಜೊತೆಗೆ ಸಿಎಸ್‍ಆರ್-ಐಎಚ್‌ಬಿಟಿ ಒದಗಿಸಿದ ಹ್ಯಾಂಡ್ ಸ್ನಿಟೈಜರ್ , ಸಾಬೂನುಗಳನ್ನು ಸಾಬೂನು ಭುವನೇಶ್ವರ ಪೊಲೀಸ್ ಕಮಿಷನರೇಟ್ ಕಚೇರಿಗೆ ನೀಡಿತು. ಕರ್ನಾಟಕದ ದೋಣಿಮಲೈ ಐರನ್ ಐರೆ ಮೈನ್‌ನಲ್ಲಿರುವ ಸಿ.ಎಸ್.ಐ.ಆರ್-ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಮೈನಿಂಗ್ ಅಂಡ್ ಇಂಧನ ಸಂಶೋಧನೆ (ಸಿ.ಎಸ್.ಐ.ಆರ್-ಸಿಐಎಂಎಫ್ಆರ್) ಅಗತ್ಯವಿರುವವರಿಗೆ ಅಗತ್ಯವಾದ ಪಡಿತರ ವನ್ನು ಹೊಂದಿರುವ ಆಹಾರ ಪೊಟ್ಟಣಗಳನ್ನು ವಿತರಿಸುವ ಕಾರ್ಯ ಮಾಡಿದೆ.

Image 

ಸಿ.ಎಸ್.ಐ.ಆರ್-ಐಹೆಚ್ಬಿಟಿ ಸಿದ್ಧಪಡಿಸಿದ ಆಹಾರ ಪೆಟ್ಟಿಗೆಗಳು ವಲಸೆ ಕಾರ್ಮಿಕರಿಗೆ ವಿತರಣೆಗೆ ಸಿದ್ಧವಾಗಿದೆ ಮತ್ತು ಸಿ.ಎಸ್.ಐ.ಆರ್-ಐಹೆಚ್ಬಿಟಿಯ ಈ ಆಹಾರ ಪೊಟ್ಟಣಗಳನ್ನು ಸಿ.ಎಸ್.ಐ.ಆರ್-ಐಎಂಎಂಟಿ, ಭುವನೇಶ್ವರ ಸಂಸ್ಥೆಯು ವಿತರಿಸಿದೆ.

ಇದಲ್ಲದೆ, ಆಹಾರ ನೆರವು ನೀಡುವುದರೊಂದಿಗೆ, ಕೈಗಾರಿಕಾ ಕ್ಷೇತ್ರದ ಬೆಂಬಲದೊಂದಿಗೆ ಗ್ರಾಮೀಣ ಯುವ ಜನರಿಗಾಗಿ ಉದ್ಯಮಶೀಲತೆಯ ಮೂಲಕ ಗ್ರಾಮೀಣ / ಸಾಮಾಜಿಕ ಉದ್ಯಮಗಳ ರಚನೆಗೆ ಸಿ.ಎಸ್.ಐ.ಆರ್ ಸಹಕರಿಸುತ್ತಿದೆ. ಏಕಾಏಕಿ ಪಸರಿಸುವ ಕಾರಣ ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ವಲಸೆ ಹೋಗುತ್ತಿರುವವರಿಗೆ ಇದು ನೂತನ ಅವಕಾಶಗಳನ್ನು ಒದಗಿಸುತ್ತದೆ. ಸಾಮಾಜಿಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಮೂಲಕ ಸೋಂಕುನಿವಾರಕಗಳು, ಸ್ಯಾನಿಟೈಜರ್‌ಗಳು, ಸಾಬೂನುಗಳು, ಮುಖಕವಚಗಳು, ಕೈಗವಸುಗಳು, ಆಹಾರ ಉತ್ಪನ್ನಗಳು, ನೀರು ಶುದ್ಧೀಕರಣ ಕಿಟ್‌ಗಳು ಇತ್ಯಾದಿಗಳ ಸಂಶ್ಲೇಷಣೆ ಮತ್ತು ತಯಾರಿಕೆಯ ತರಬೇತಿಯನ್ನು ಸಿ.ಎಸ್.ಐ.ಆರ್ ಕಾರ್ಯಯೋಜನೆಯಲ್ಲಿ ಒಳಗೊಂಡಿದೆ.

#CSIRFightsCovid19

***



(Release ID: 1620238) Visitor Counter : 225