ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಪ್ರತಿಕೂಲತೆಯಿಂದ ಉದ್ಭವಿಸುವ ಹೊಸ ಅವಕಾಶಗಳನ್ನು ಅನ್ವೇಷಿಸಲು ಎಲೆಕ್ಟ್ರಾನಿಕ್ಸ್ ಉದ್ಯಮ ಕ್ಷೇತ್ರಕ್ಕೆ ಶ್ರೀ ರವಿಶಂಕರ್ ಪ್ರಸಾದ್ ಸಲಹೆ

Posted On: 29 APR 2020 8:41PM by PIB Bengaluru

ಪ್ರತಿಕೂಲತೆಯಿಂದ ಉದ್ಭವಿಸುವ ಹೊಸ ಅವಕಾಶಗಳನ್ನು ಅನ್ವೇಷಿಸಲು ಎಲೆಕ್ಟ್ರಾನಿಕ್ಸ್ ಉದ್ಯಮ ಕ್ಷೇತ್ರಕ್ಕೆ ಶ್ರೀ ರವಿಶಂಕರ್ ಪ್ರಸಾದ್ ಸಲಹೆ

ಆರೋಗ್ಯಾ ಸೇತು ಆ್ಯಪ್ ದೇಶದಲ್ಲಿ ಸುಮಾರು 8 ಕೋಟಿ ಮೊಬೈಲ್ ಫೋನ್‌ ಗಳನ್ನು ತಲುಪಿದೆ

ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ (ಇಎಸ್ಡಿಎಂ) ವಲಯದಲ್ಲಿ ಜಾಗತಿಕ ಅವಕಾಶದ ಸದುಪಯೋಗ ಮಾಡಿಕೊಳ್ಳಲು ಉದ್ಯಮದ ಪ್ರತಿನಿಧಿಗಳು ಮರುಪ್ರಾರಂಭಿಸಿ, ಮರುಸ್ಥಾಪಿಸಿ ಮತ್ತು ಪುನರುತ್ಥಾನಮಾದರಿಯನ್ನು ಪ್ರಸ್ತುತಪಡಿಸಿದರು

 

ಪ್ರತಿಕೂಲ ಪರಿಸ್ಥಿತಿಯಿಂದ ಉದ್ಭವಿಸುತ್ತಿರುವ ಹೊಸ ಅವಕಾಶಗಳನ್ನು ಅನ್ವೇಷಿಸಿ ಮತ್ತು ದೇಶವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಾಗತಿಕ ಕೇಂದ್ರವನ್ನಾಗಿ ಮಾಡಿ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಅವರು ಎಲೆಕ್ಟ್ರಾನಿಕ್ಸ್ ಉದ್ಯಮ ಕ್ಷೆತ್ರವನ್ನು ಪ್ರೋತ್ಸಾಹಿಸಿದರು. ಎಲೆಕ್ಟ್ರಾನಿಕ್ಸ್ ಇಂಡಸ್ಟ್ರಿ ಅಸೋಸಿಯೇಷನ್ಸ್, ಚೇಂಬರ್ಸ್ ಮತ್ತು ಪ್ರಮುಖ ಕೈಗಾರಿಕಾ ಕ್ಷೇತ್ರದ ಪ್ರಮುಖರೊಂದಿಗಿನ ಸಭೆಯಲ್ಲಿ, ಎಲೆಕ್ಟ್ರಾನಿಕ್ಸ್ ಉದ್ಯಮವು ಸಚಿವಾಲಯವು ಸೂಚಿಸಿದ ಅವಕಾಶ ಮತ್ತು ಹೊಸ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು, ಜಾಗತಿಕ ಹೂಡಿಕೆಯನ್ನು ಆಕರ್ಷಿಸಲು ಮತ್ತು ಕ್ಷೇತ್ರವನ್ನು ಬಲಪಡಿಸಲು ಅವರು ವಿನಂತಿಸಿದರು. ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಉದ್ಯಮದ ಪಾತ್ರವನ್ನು ವಿವರಿಸಿದರು, ಅದು ಸಂಪೂರ್ಣ ಬದಲಾವಣೆಯ ಹಂತದಲ್ಲಿದೆ ಎಂದು ಹೇಳಿದರು.

ಪ್ರಸ್ತುತ ಕೊವಿಡ್ -19 ಪರಿಸ್ಥಿತಿ ಮತ್ತು ಆರೋಗ್ಯಾ ಸೇತು ಪ್ಲಾಟ್‌ಫಾರ್ಮ್ ಗಳ ಮಾಹಿತಿಯನ್ನು ಸಚಿವಾಲಯದ ಅಧಿಕಾರಿಗಳು ಪ್ರಸ್ತುತಪಡಿಸಿದರು ಮತ್ತು ಆರೋಗ್ಯಾ ಸೇತು ಆ್ಯಪ್ ದೇಶದಲ್ಲಿ ಸುಮಾರು 8 ಕೋಟಿ ಮೊಬೈಲ್ ಫೋನ್‌ಗಳನ್ನು ತಲುಪಲು ಸಹಾಯ ಮಾಡಿದ ಮೊಬೈಲ್ ಉದ್ಯಮಕ್ಕೆ ಧನ್ಯವಾದಗಳು. ಕೊವಿಡ್-19 ಪರಿಣಾಮವನ್ನು ಕಡಿಮೆ ಮಾಡಲು ಅಲ್ಪಾವಧಿಯ, ಮಧ್ಯಮ ಮತ್ತು ದೀರ್ಘಾವಧಿಯ ನಿರೀಕ್ಷೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಕಾರ್ಯಕ್ರಮ, ಕಾರ್ಯಸೂಚಿ ಹಾಗೂ ಸಚಿವಾಲಯವು ಮಾಡಿದ ಪ್ರಯತ್ನಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ನೋಯ್ಡಾ, ಗ್ರೇಟರ್ ನೋಯ್ಡಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಪ್ರದೇಶಗಳು ಹೆಚ್ಚಿನ ಅಪಾಯದ ವಲಯಗಳಲ್ಲಿ ಇರುವುದರಿಂದ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ಗಳು ಸ್ಥಳೀಯ ನಿರ್ಬಂಧಗಳನ್ನು ಎದುರಿಸುತ್ತಿವೆ ಎಂದು ಉಲ್ಲೇಖಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಉದ್ಯಮದ ಪ್ರಚಾರಕ್ಕಾಗಿ ಮತ್ತು ಕೊವಿಡ್-19 ಗಾಗಿ ಮಾರಾಟ ಮಾರ್ಗಸೂಚಿಗಳು, ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಉದ್ಯಮದಿಂದ ಪಡೆದ ಬೆಂಬಲವನ್ನು ಅಧಿಕಾರಿಗಳು ಶ್ಲಾಘಿಸಿದರು.

ಐಸಿಟಿ ಉತ್ಪನ್ನಗಳಿಗೆ ಅಗತ್ಯ ವಸ್ತುಗಳ ವ್ಯಾಖ್ಯಾನವನ್ನು ವಿಸ್ತರಿಸುವುದು, ಐಸಿಟಿ ಅಗತ್ಯ ವಸ್ತುಗಳ ಚಿಲ್ಲರೆ / ಆನ್‌ಲೈನ್ ಮಾರಾಟ, ಅಧಿಕೃತ ಮಾರಾಟ ಮತ್ತು ಐಸಿಟಿ ಅಗತ್ಯ ವಸ್ತುಗಳ ಸೇವೆಗಳ ಕುರಿತು ಈಗಾಗಲೇ ಗೃಹ ಸಚಿವಾಲಯದೊಂದಿಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ಉದ್ಯಮ ಕ್ಷೇತ್ರದ ದಿಗ್ಗಜರಿಗೆ ತಿಳಿಸಿದರು. ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸಲು ಮೀಟಿವೈನ ಹೊಸದಾಗಿ ಅಧಿಸೂಚನೆಗೊಂಡ ಯೋಜನೆಗಳ ಅಡಿಯಲ್ಲಿ, ಭಾರತ ಸರ್ಕಾರವು ಇಎಸ್ಡಿಎಂ ಉದ್ಯಮಕ್ಕೆ ರೂ.50,000 ಕೋಟಿ ಇದಲ್ಲದೆ, ಕೊವಿಡ್-19 ವಿರುದ್ಧ ಹೋರಾಡುವಲ್ಲಿ ಸಚಿವಾಲಯದ ಉಪಕ್ರಮಗಳಾದ ಆರೋಗ್ಯಾ ಸೇತು, ಆಧಾರ್, ಡಿಜಿಟಲ್ ಪಾವತಿಗಳು ಇತ್ಯಾದಿಗಳು ಬಹಳ ಮುಖ್ಯವಾದ ಪಾತ್ರವಹಿಸಿವೆ ಎಂದು ಅವರು ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ (ಇಎಸ್ಡಿಎಂ) ವಲಯದಲ್ಲಿ ಜಾಗತಿಕ ಅವಕಾಶವನ್ನು ಪಡೆದುಕೊಳ್ಳಲು ಉದ್ಯಮದ ಪ್ರತಿನಿಧಿಗಳು ಮರುಪ್ರಾರಂಭಿಸಿ, ಮರುಸ್ಥಾಪಿಸಿ ಮತ್ತು ಪುನರುತ್ಥಾನಮಾದರಿಯನ್ನು ಪ್ರಸ್ತುತಪಡಿಸಿದರು. ಮೀಟಿವೈ ಯೋಜನೆಗಳ ಹೊಸ ಟ್ರೈಲಾಜಿಯನ್ನು ಭಾಗವಹಿಸಿದ ಬಹುಪಾಲು ಮಂದಿ ಮೆಚ್ಚಿದರು, ಅವುಗಳೆಂದರೆ, ಪಿಎಲ್ಐ, ಸ್ಪೆಕ್ಸ್ ಮತ್ತು ಇಎಂಸಿ 2.0; ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವನ್ನು ಬೆಂಬಲಿಸಲು. ಕಾರ್ಖಾನೆಗಳ ಕೆಲಸ, ಲಾಜಿಸ್ಟಿಕ್ಸ್, ರಫ್ತು, ಪೂರೈಕೆ ಸರಪಳಿ ಅಡ್ಡಿ ಮತ್ತು ಕೊವಿಡ್-19 ಕಾರಣದಿಂದಾಗಿ ಬೇಡಿಕೆ ಆಘಾತಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಉದ್ಯಮವು ಎತ್ತಿದೆ.

ಕೈಗಾರಿಕೆಗೆ ಸಂಪೂರ್ಣ ಬೆಂಬಲವನ್ನು ನೀಡುವಂತೆ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೌಲಭ್ಯಗಳನ್ನು ಪುನಃ ತೆರೆಯಲು ರಾಜ್ಯಗಳು / ಕೇಂದ್ರಾಡಳಿತಗಳೊಂದಿಗೆ ಸಂಪರ್ಕ ಸಾಧಿಸುವಂತೆ ಕೇಂದ್ರ ಸಚಿವರು ಸಚಿವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾಹಿತಿ ತಯಾರಕರ ಸಂಘ (ಎಂಐಐಟಿ), ಇಂಡಿಯನ್ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ), ಎಲೆಕ್ಟ್ರಾನಿಕ್ ಇಂಡಸ್ಟ್ರೀಸ್ ಅಸೋಸಿಯೇಶನ್ ಆಫ್ ಇಂಡಿಯಾ (ಇಎಲ್ಸಿನಾ), ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಶನ್ (ಐಇಎಸ್ಎ), ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘಟನೆ (ಅಸ್ಸೋಚಾಮ್), ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಐಐ), ಅಸೋಸಿಯೇಷನ್ ಆಫ್ ಇಂಡಿಯನ್ ಮೆಡಿಕಲ್ ಡಿವೈಸ್ ಇಂಡಸ್ಟ್ರಿ (ಐಐಎಂಇಡಿ), ಟೆಲಿಕಾಂ ಸಲಕರಣೆಗಳ ತಯಾರಕರ ಸಂಘ (ಟೆಮಾ), ಪಿಎಚ್‌ಡಿ ಚೇಂಬರ್ಸ್, ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿ ಲಿಮಿಟೆಡ್ (ಐಟಿಐ), ಮೊಬೈಲ್, ಗ್ರಾಹಕ ಎಲೆಕ್ಟ್ರಾನಿಕ್ಸ್, ಟೆಲಿಕಾಂ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಆಪಲ್, ಸ್ಯಾಮ್‌ಸಂಗ್, ಶಿಯೋಮಿ, ಫಾಕ್ಸ್‌ಕಾನ್, ಲಾವಾ, ವಿಸ್ಟ್ರಾನ್, ಒಪ್ಪೊ, ಫ್ಲೆಕ್ಸ್, ಸ್ಟೆರ್‌ಲೈಟ್, ಮೈಕ್ರೋಮ್ಯಾಕ್ಸ್, ಡೆಕಿ ಎಲೆಕ್ಟ್ರಾನಿಕ್ಸ್, ತೇಜಸ್ ನೆಟ್‌ವರ್ಕ್ಸ್ ಲಿಮಿಟೆಡ್, ಪ್ಯಾನಾಸೋನಿಕ್ ಇತ್ಯಾದಿ ಪ್ರಮುಖ ಸಂಸ್ಥೆಗಳು , ಸಂಘಗಳು ಸಭೆಯಲ್ಲಿ ಭಾಗವಹಿಸಿದವು

***



(Release ID: 1619707) Visitor Counter : 196