ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ದೇಶಾದ್ಯಂತ ಸ್ವಸಹಾಯ ಗುಂಪುಗಳಿಂದ ಒಂದು ಕೋಟಿಗೂ ಅಧಿಕ ಮಾಸ್ಕ್ ತಯಾರಿ

Posted On: 29 APR 2020 1:46PM by PIB Bengaluru

ದೇಶಾದ್ಯಂತ ಸ್ವಸಹಾಯ ಗುಂಪುಗಳಿಂದ ಒಂದು ಕೋಟಿಗೂ ಅಧಿಕ ಮಾಸ್ಕ್ ತಯಾರಿ

 

ದೇಶಾದ್ಯಂತ ವಿವಿಧ ಸ್ವ-ಸಹಾಯ ಗುಂಪುಗಳು ಒಂದು ಕೋಟಿಗೂ ಅಧಿಕ ಮಾಸ್ಕ್ ಗಳನ್ನು ತಯಾರಿಸಿವೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಮುಖ ಯೋಜನೆಯಾದ ಡಿ.ಎ.ವೈ-ಎನ್.ಯು.ಎಲ್.ಎಮ್. ಅಡಿಯಲ್ಲಿ ಕೋವಿಡ್ -19 ರ ವಿರುದ್ಧ ಹೋರಾಡಲು ಮಾಡಿರುವ ಸಕಾರಾತ್ಮಕ ಚಿಂತನೆ ಮತ್ತು ಪಟ್ಟುಹಿಡಿದ ಪ್ರಯತ್ನಗಳಿಂದಾಗಿ ದೇಶದಾದ್ಯಂತ ಸ್ವಸಹಾಯ ಗುಂಪುಗಳು ಏಕೀಕೃತ ಸಂಕಲ್ಪ ತೋರಿ, ಬೃಹತ್ ಗಾತ್ರದಲ್ಲಿ ಮಾಸ್ಕ್ ತಯಾರಿಸಿವೆ. ಮಹಿಳಾ ಉದ್ಯಮಿಗಳ ಸಬಲತೆಯ ಉದ್ಧೇಶದ ಮುಖ ಈ ಪ್ರಯತ್ನದಲ್ಲಿ ಕಾಣಬಹುದು. ಇದು ಜೀವನವನ್ನು ಆರ್ಥಿಕ ಸುರಕ್ಷತೆಯಲ್ಲಿ ಕಾಪಾಡುವ ನಿಜವಾದ ಅರ್ಥದ ಮಹಿಳಾ ಸಬಲೀಕರಣವಾಗಿದೆ.

   

ಸ್ವಸಹಾಯ ಗುಂಪುಗಳ ಕೆಲವು ಅಭಿಪ್ರಾಯಗಳ ಉಲ್ಲೇಖಗಳು:

ಸಮೃದ್ಧಿ ಏರಿಯಾ ಲೆವೆಲ್ ಫೆಡರೇಶನ್ (ಎಎಲ್ಎಫ್) ಅಧ್ಯಕ್ಷರಾದ ಶ್ರೀಮತಿ ಶುಭಂಗಿ ಚಂದ್ರಕಾಂತ್ ಧೈಗುಡೆ ಅವರ ಮುಖದ ಮೇಲೆ ಒಂದು ವಿಶಿಷ್ಟವಾದ ಸಂತಸದ ನಗುವಿದ್ದು ಅದು ತೃಪ್ತಿ ಮತ್ತು ಹೆಮ್ಮೆಯನ್ನು ಸಂಕೇತಿಸುತ್ತದೆ. ಅವರು ದೂರವಾಣಿ ಕರೆ ಮೂಲಕ ಕೆಲಸದ ಆದೇಶಗಳನ್ನು ಸಂಗ್ರಹಿಸುತ್ತಾರೆ ಮತ್ತು ಮಹಾರಾಷ್ಟ್ರದ ಟಿಟ್ವಾಲಾದಲ್ಲಿರು ತನ್ನ ಮನೆಯಲ್ಲಿ ಮಾಸ್ಕ್ ಗಳನ್ನು ಹೊಲಿಯುತ್ತಾರೆ. ಇವರು ಸುಮಾರು 50000 ಮಾಸ್ಕ್ ಗಳನ್ನು ತಯಾರಿಸಿದ್ದಾರೆ ಮತ್ತು "ಇನ್ನೂ ಇತರೆ 45 ಮಹಿಳೆಯರು ತಮ್ಮೊಂದಿಗೆ ಮಾಸ್ಕ್ ಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ" ಎಂದು ಅವರು ಹೇಳಿದರು

ಈ ಸಣ್ಣ ಹೆಜ್ಜೆ ಇತರರಿಗೆ ತುಂಬಾ ಸ್ಪೂರ್ತಿದಾಯಕವಾಗಬಹುದೆಂದು ಊಹಿಸಿರಲಿಲ್ಲಎಂದು ರಾಜಸ್ಥಾನದ ಕೋಟಾದಲ್ಲಿನ ಸವರ್ನಿ ಸ್ವಸಹಾಯ ಸಂಘದ ಸದಸ್ಯರಾದ ಶ್ರೀಮತಿ ಮೀನು ಜ್ಹಾ ಅವರು ಹೇಳಿದರು.ಇದು ಲಾಕ್ ಡೌನ್ ಸಮಯದಲ್ಲಿ ಮಾಡುತ್ತಿರುವ ಹೋರಾಟಕ್ಕೆ ನಾವು ನೀಡುವ ಕೊಡುಗೆಯಾಗಿದೆ” ಎಂದು ಶ್ರೀಮತಿ ಮೀನು ಜ್ಹಾ ಅವರು ಪುನರುಚ್ಚರಿಸಿದರು

ಅಸ್ಸಾಂನಲ್ಲಿ ಸಾಂಪ್ರದಾಯಿಕ ಬಟ್ಟೆ ಮತ್ತು ಗೌರವದ ಸಂಕೇತವಾದ ಗಮೊಚಾ ಇಂದು ದೇಶದಾದ್ಯಂತ ಆರೋಗ್ಯ, ಸುರಕ್ಷತೆ ಮತ್ತು ನೈರ್ಮಲ್ಯದ ಸಂಕೇತವಾಗಿದೆ. ನಾಗಾನ್‌ನ ರುಂಜ್ಹುನ್ ಸ್ವಸಹಾಯ ಸಂಘದ ಸದಸ್ಯರಾದ ಶ್ರೀಮತಿ ರಶ್ಮಿಅವರು ಈ ಸಾಂಪ್ರದಾಯಿಕ ಬಟ್ಟೆಯನ್ನು ( ಗಮೊಚಾ”) ಬಳಸಿ ಮಾಸ್ಕ್ ಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಥುವಾದ ಪ್ರಯಾಸ್ ಸ್ವಸಹಾಯ ಗುಂಪಿನ ಸದಸ್ಯರಾದ, ಶ್ರೀಮತಿ ಉಪದೇಶ್ ಆಂಡೋತ್ರಾ ಅವರು, ತಾನು ತ್ರಿವರ್ಣ ಮಾಸ್ಕ್ ಗಳನ್ನು ತಯಾರಿಸುವಾಗ ಬಹಳ ಹೆಮ್ಮೆ ಪಟ್ಟಕೊಂಡರು

 

***



(Release ID: 1619591) Visitor Counter : 211