ಪಂಚಾಯತ್ ರಾಜ್ ಸಚಿವಾಲಯ

ಕೇಂದ್ರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರಿಂದ ಪಂಚಾಯತ್ ರಾಜ್ ಸಚಿವಾಲಯದ ಹೊಸ ಉಪಕ್ರಮವಾದ ’ಸ್ವಾಮಿತ್ವ’ ಯೋಜನೆಯ ಮಾರ್ಗದರ್ಶಿ ಬಿಡುಗಡೆ

Posted On: 27 APR 2020 7:10PM by PIB Bengaluru

ಕೇಂದ್ರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರಿಂದ ಪಂಚಾಯತ್ ರಾಜ್ ಸಚಿವಾಲಯದ ಹೊಸ ಉಪಕ್ರಮವಾದಸ್ವಾಮಿತ್ವಯೋಜನೆಯ ಮಾರ್ಗದರ್ಶಿ ಬಿಡುಗಡೆ

ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಗಳು, ಕಂದಾಯ ಸಂಗ್ರಹದ ಸುವ್ಯವಸ್ಥೆಗೊಳಿಸುವಿಕೆ ಮತ್ತು ಆಸ್ತಿ ಹಕ್ಕುಗಳ ಖಾತ್ರಿ

ಡ್ರೋನ್ ಸರ್ವೇ ತಂತ್ರಜ್ಞಾನದ ಮೂಲಕ  ಉತ್ತಮ ಗುಣಮಟ್ಟದ ಗ್ರಾಮ ಪಂಚಾಯತ್ ಅಭಿವೃದ್ದಿ ಯೋಜನೆಗಳು.

ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಸಂದರ್ಭದಲ್ಲಿ -ಗ್ರಾಮ ಸ್ವರಾಜ್ ಗೆ ಸಂಬಂಧಿಸಿದ ಸಾಮಾನ್ಯ ಕಾರ್ಯಾಚರಣಾ ಪ್ರಕ್ರಿಯೆ (ಎಸ್..ಪಿ.)ಗಳನ್ನೂ ಬಿಡುಗಡೆ ಮಾಡಿದರು

 

ದೇಶದಲ್ಲಿ ಪಂಚಾಯಿತಿಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಸಶಕ್ತಗೊಳಿಸಲು ಸರಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಪಂಚಾಯತ್ ರಾಜ್ ಸಚಿವಾಲಯದ ಹೊಸ ಉಪಕ್ರಮವಾದ “ ಸ್ವಾಮಿತ್ವ” ಯೋಜನೆಯ ಮಾರ್ಗದರ್ಶಿಗಳನ್ನು ಹೊಸದಿಲ್ಲಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.  ಗ್ರಾಮೀಣ ಜನತೆಗೆ ಆಸ್ತಿಗಳ ದಾಖಲೆಯನ್ನು ಒದಗಿಸುವುದು ಇದರ ಉದ್ದೇಶ. ಇದರಿಂದ ಅವರಿಗೆ ಆಸ್ತಿಗಳನ್ನು  ಅವರ ಆರ್ಥಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ಮಾತ್ರವಲ್ಲ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ಸಂಗ್ರಹ, ಯೋಜನೆಗಳನ್ನು ಒಗ್ಗೂಡಿಸಲು ಹಾಗು ಆಸ್ತಿ ಹಕ್ಕುಗಳ ಬಗ್ಗೆ ಸ್ಪಷ್ಟತೆ ಮೂಡಿಸುವುದಕ್ಕೂ ಸಹಾಯ ಮಾಡುತ್ತದೆ. ಇದರಿಂದ ಆಸ್ತಿ ಸಂಬಂಧಿತ ವಿವಾದಗಳನ್ನು ಪರಿಹರಿಸುವುದಕ್ಕೂ ಅನುಕೂಲವಾಗಲಿದೆ. ಯೋಜನೆಯು ಉತ್ತಮ ಗುಣಮಟ್ಟದ ಗ್ರಾಮ ಪಂಚಾಯತ್ ಅಭಿವೃದ್ದಿ ಯೋಜನೆಗಳನ್ನು (ಜಿ.ಪಿ.ಡಿ.ಪಿ.) ಈ ಯೋಜನೆಯಡಿ ರೂಪಿಸಲಾಗುವ ನಕ್ಷೆಗಳ ಆಧಾರದಲ್ಲಿ ತಯಾರಿಸುವುದಕ್ಕೆ  ಸಹಾಯವಾಗುತ್ತದೆ.

ಸ್ವಾಮಿತ್ವ ಯೋಜನೆಯು ಪಂಚಾಯತ್ ರಾಜ್ ಸಚಿವಾಲಯ, ರಾಜ್ಯ ಪಂಚಾಯತ್ ರಾಜ್ ಇಲಾಖೆಗಳು , ರಾಜ್ಯ ಕಂದಾಯ ಇಲಾಖೆಗಳು ಮತ್ತು ಭಾರತೀಯ ಸರ್ವೇ ಇಲಾಖೆಗಳ ಸಂಯುಕ್ತ ಪ್ರಯತ್ನದ ಫಲವಾಗಿದೆ. ಗ್ರಾಮೀಣ ಭಾರತಕ್ಕೆ ಅತ್ಯಾಧುನಿಕ ಡ್ರೋನ್ ಸರ್ವೇ ತಂತ್ರಜ್ಞಾನವನ್ನು ಜನವಸತಿ ಪ್ರದೇಶ ಗುರುತಿಸುವಿಕೆಗೆ (ಅಬಾಡಿ) ಬಳಸಿ ಆಸ್ತಿ ದೃಢೀಕರಣ ಪರಿಹಾರವನ್ನು ಒದಗಿಸುವ ಉದ್ದೇಶವನ್ನು ಒಳಗೊಂಡಿದೆ. ಈ ಕಾರ್ಯಕ್ರಮವನ್ನು ಮೊದಲಿಗೆ ಆರು ರಾಜ್ಯಗಳಲ್ಲಿ-ಹರ್ಯಾಣಾ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಗಳಲ್ಲಿ ಜಾರಿಗೆ ತರಲಾಗುವುದು. ಇದರಡಿ ಗ್ರಾಮೀಣ  ವಸತಿ ಭೂಮಿಯ ನಕ್ಷೆಗಳ (ಮ್ಯಾಪಿಂಗ್ ) ಕಾರ್ಯವನ್ನು ಇತ್ತೀಚಿನ ಸರ್ವೇ ವಿಧಾನಗಳು ಮತ್ತು ಡ್ರೋನ್ ಗಳನ್ನು ಬಳಸಿ ತಯಾರಿಸಲಾಗುವುದು. ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ 101 ನಿರಂತರ ಕಾರ್ಯಾಚರಣಾ ಪರಾಮರ್ಶನ ಕೇಂದ್ರಗಳನ್ನು ( ಕೋರ್ಸ್-ಸಿ.ಒ.ಆರ್.ಎಸ್.) ಈ ವರ್ಷದಲ್ಲಿ ಸ್ಥಾಪಿಸಲಾಗುವುದು, ಇವು ಮುಂದಿನ ವರ್ಷ ನೈಜ ಸರ್ವೇ ಮತ್ತು ಗ್ರಾಮಗಳ ಜನವಸತಿ ಪ್ರದೇಶಗಳ ಮ್ಯಾಪಿಂಗ್ ನಡೆಸುತ್ತವೆ.

 

 

ಸಂದರ್ಭದಲ್ಲಿ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಇ-ಗ್ರಾಮ ಸ್ವರಾಜ್ ಗೆ ಸಂಬಂಧಿಸಿ ಸಾಮಾನ್ಯ ಕಾರ್ಯಾಚರಣಾ ಪ್ರಕ್ರಿಯೆಗಳನ್ನು (ಎಸ್.ಒ.ಪಿ.) ಗಳನ್ನು ಬಿಡುಗಡೆ ಮಾಡಿದರು. ಈ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ಪಂಚಾಯತ್ ಗಳಿಗೆ ನೀಡಲಾದ ಹಣಕಾಸು ದುರುಪಯೋಗವಾಗದಂತೆ ಮತ್ತು ಪಾರದರ್ಶಕತೆ ಇರುವಂತೆ ಖಾತ್ರಿಪಡಿಸಲಾಗುವುದು ಎಂದವರು ಹೇಳಿದರು. ಪಂಚಾಯತ್ ರಾಜ್ ಸಚಿವಾಲಯದ ಪಾವತಿ ಪೋರ್ಟಲುಗಳಾದ ಪ್ರಿಯಾ ಸಾಫ್ಟ್ ಮತ್ತು ಪಿ.ಎಫ್.ಎಂ.ಎಸ್. ಗಳನ್ನು ಸಮನ್ವಯಗೊಳಿಸುವ ಮೂಲಕ ಬಲಿಷ್ಟ ಹಣಕಾಸು ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಕ್ರಿಯೆಯಿಂದ ಸಹಾಯವಾಗಲಿದೆ ಎಂದರು. ಈ ಅಪ್ಲಿಕೇಶನ್ ಉತ್ತಮ ಪಾರದರ್ಶಕತೆ ತರುವುದು ಮಾತ್ರವಲ್ಲದೆ  ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಇ-ಆಡಳಿತವನ್ನು ಬಲಪಡಿಸುವ ಉದ್ದೇಶ ಹೊಂದಿದೆ. ವಿಕೇಂದ್ರೀಕೃತ ಯೋಜನಾ ವ್ಯವಸ್ಥೆ, ಪ್ರಗತಿ ವರದಿ, ಮತ್ತು ಕಾಮಗಾರಿ ಆಧಾರಿತ ಲೆಕ್ಕಪತ್ರ ವ್ಯವಸ್ಥೆ ದೇಶಾದ್ಯಂತ ಜಾರಿಗೆ ಬರಲಿದೆ. ಇದು ಪಂಚಾಯತ್ ಗಳಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ., ಪಿ.ಆರ್.ಐ.ಗಳಿಗೆ ಹೆಚ್ಚು ಹಣಕಾಸಿನ  ಅಧಿಕಾರದ  ಅನುಕೂಲ ಮಾಡಿಕೊಡುತ್ತದೆ. ಇದಲ್ಲದೆ ಇ-ಗ್ರಾಮ ಸ್ವರಾಜ್ ಉನ್ನತಾಧಿಕಾರಿಗಳಿಂದ ಸಮರ್ಪಕ  ನಿಗಾ  ವ್ಯವಸ್ಥೆಯ ವೇದಿಕೆಯೂ ಆಗಿರುತ್ತದೆ. ಇದು ಪಂಚಾಯತ್ ಗಳ ಎಲ್ಲಾ ಯೋಜನೆಗಳು ಮತ್ತು ಲೆಕ್ಕಪತ್ರ ಆವಶ್ಯಕತೆಗಳಿಗೆ ಸಂಬಂಧಿಸಿದ ವೇದಿಕೆಯೂ ಆಗಿರುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ಪಂಚಾಯತ್ ರಾಜ್ ಸಚಿವಾಲಯದ ಪ್ರಮುಖ ಆದ್ಯತೆಯ ಕ್ಷೇತ್ರಗಳೆಂದರೆ ಕೇಂದ್ರೀಯ ಹಣಕಾಸು ಆಯೋಗದ ಅನುದಾನದ ಹಣಕಾಸು ಹರಿವಿನ ಮೇಲೆ ನಿಗಾ ಇಡುವುದು ಮತ್ತು ಪಂಚಾಯತಿನ ಸೇವಾ ಪೂರೈಕೆದಾರರಿಗೆ ರಿಯಲ್ ಟೈಮ್ ಆಧಾರದಲ್ಲಿ ಸಕಾಲದಲ್ಲಿ ಪಾವತಿಯನ್ನು ಖಾತ್ರಿಪಡಿಸುವುದಾಗಿದೆ. ಆನ್ ಲೈನ್ ಪಾವತಿ ಮಾದರಿಯು (ಹಿಂದಿನ ಪ್ರಿಯಾ ಸಾಪ್ಟ್-ಪಿ.ಎಫ್.ಎಂ.ಎಸ್. ಇಂಟರ್ ಫೇಸ್ (ಪಿ.ಪಿ.ಐ.)ಯು ಗ್ರಾಮಪಂಚಾಯತ್ ಗಳು ಸೇವಾ ಪೂರೈಕೆದಾರರಿಗೆ ಆನ್ ಲೈನ್ ಪಾವತಿಗೆ ಬಳಸುತ್ತಿದ್ದ ಮಾದರಿಗಳಾಗಿದ್ದವು. ಇಂತಹ ಮಾದರಿಗಳ ಅಳವಡಿಕೆಯ ಪ್ರಮುಖ ಉದ್ದೇಶ ಪಂಚಾಯತ್ ಗಳಲ್ಲಿ ಬಲಿಷ್ಟ ಹಣಕಾಸು ನಿರ್ವಹಣಾ ವ್ಯವಸ್ಥೆಯನ್ನು ತಂದು ಅವುಗಳ ವಿಶ್ವಾಸಾರ್ಹತೆ ಮತ್ತು ಪ್ರತಿಷ್ಟೆಯನ್ನು ಎತ್ತರಿಸುವುದಾಗಿದೆ.

ಪ್ರಯತ್ನಗಳು ಭಾರತವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನಾಧಾರಿತ ಆರ್ಥಿಕತೆಯಾದ _”ಮುಖ ರಹಿತ, ಪೇಪರ್ ರಹಿತ, ನಗದುರಹಿತ “ ವ್ಯವಸ್ಥೆಯಾಗಿ ಪರಿವರ್ತಿಸುವ  ಡಿಜಿಟಲ್ ಇಂಡಿಯಾ ಕಾರ್ಯಕ್ರಮಗಳಿಗೆ ಫೂರಕವಾದ ಕ್ರಮಗಳಾಗಿವೆ.

***(Release ID: 1619187) Visitor Counter : 271