ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರ‍್ಯಾಪಿಡ್ ಆಂಟಿಬಾಡಿ ಪರೀಕ್ಷೆಗಳ ಬೆಲೆ ಕುರಿತ ವಿವಾದದ ಸತ್ಯಸಂಗತಿಗಳು

Posted On: 27 APR 2020 4:00PM by PIB Bengaluru

ರ‍್ಯಾಪಿಡ್ ಆಂಟಿಬಾಡಿ ಪರೀಕ್ಷೆಗಳ ಬೆಲೆ ಕುರಿತ ವಿವಾದದ ಸತ್ಯಸಂಗತಿಗಳು

 

ಮೊದಲನೆಯದಾಗಿ, .ಸಿ.ಎಂ.ಆರ್ ಸಂಸ್ಥೆ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಿನ್ನೆಲೆ ಅರ್ಥಮಾಡಿಕೊಳ್ಳುವುದು ಇಲ್ಲಿ ಬಹಳ ಮುಖ್ಯ. ಕೊವಿಡ್-19 ವಿರುದ್ಧ ಹೋರಾಡಲು ವೈದ್ಯಕೀಯ ಪರೀಕ್ಷೆಯು ಅತ್ಯಂತ ನಿರ್ಣಾಯಕ ಆಯುಧಗಳಲ್ಲಿ ಒಂದಾಗಿದೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಹೆಚ್ಚಿಸಲು .ಸಿ.ಎಂ.ಆರ್ ಎಲ್ಲ ವ್ಯವಸ್ಥೆಗಳನ್ನೂ ಮಾಡುತ್ತಿದೆ. ನಿಟ್ಟಿನಲ್ಲಿ ವೈದ್ಯಕೀಯ ಪರೀಕ್ಷೆಯ ಕಿಟ್ಗಳ ಸಂಗ್ರಹಣೆ ಮತ್ತು ಅವುಗಳನ್ನು ರಾಜ್ಯಗಳಿಗೆ ಪೂರೈಸುವ ಅಗತ್ಯವಿದೆ. ಜಾಗತಿಕವಾಗಿ ವೈದ್ಯಕೀಯ ಪರೀಕ್ಷಾ ಕಿಟ್ಗಳಿಗೆ ಭಾರಿ ಬೇಡಿಕೆ ಇರುವಾಗ ಮತ್ತು ವಿವಿಧ ದೇಶಗಳು ವೈದ್ಯಕೀಯ ಪರೀಕ್ಷಾ ಕಿಟ್ಪಡೆದುಕೊಳ್ಳಲು ತಮ್ಮ ಸಂಪೂರ್ಣ ಶಕ್ತಿಯನ್ನು, ಆರ್ಥಿಕ ಮತ್ತು ರಾಜತಾಂತ್ರಿಕತೆಯನ್ನು ಬಳಸುತ್ತಿರುವಾಗ, ನಮ್ಮಲ್ಲಿ ವೈದ್ಯಕೀಯ ಪರೀಕ್ಷಾ ಕಿಟ್ ಗಳ ಸಂಗ್ರಹಣೆ ಕಾರ್ಯ ಕೈಗೊಳ್ಳಲಾಗುತ್ತಿದೆ.

ವೈದ್ಯಕೀಯ ಪರೀಕ್ಷಾ ಕಿಟ್ಗಳನ್ನು ಸಂಗ್ರಹಿಸಲು .ಸಿ.ಎಂ.ಆರ್. ಮೊದಲ ಪ್ರಯತ್ನಕ್ಕೆ ಸರಬರಾಜುದಾರರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಎರಡನೇ ಪ್ರಯತ್ನಕ್ಕೆ ಸಾಕಷ್ಟು ಪ್ರತಿಕ್ರಿಯೆ ಸಿಕ್ಕಿತು. ಪ್ರತಿಕ್ರಿಯೆಗಳಲ್ಲಿ, ಸೂಕ್ಷ್ಮತೆ ಮತ್ತು ನಿರ್ದಿಷ್ಟತೆಯನ್ನು ಗಮನದಲ್ಲಿಟ್ಟುಕೊಂಡು, 2 ಕಂಪನಿಗಳ ವೈದ್ಯಕೀಯ ಪರೀಕ್ಷಾ ಕಿಟ್ಗಳನ್ನು (ಬಯೋಮೆಡೆಮಿಕ್ಸ್ ಮತ್ತು ವೊಂಡ್ಫೊ) ಸಂಗ್ರಹಣೆಗಾಗಿ ಆಯ್ಕೆಮಾಡಲಾಗಿದೆ. ಎರಡೂ ಸಂಸ್ಥೆಗಳೂ ಅಗತ್ಯವಾದ ಅಂತರರಾಷ್ಟ್ರೀಯ ಪ್ರಮಾಣೀಕರಣಗಳನ್ನು ಹೊಂದಿವೆ

ವೋಂಡ್ಫೊ ಸಂಸ್ಥೆಯಿಂದ ಮೌಲ್ಯಮಾಪನ ಸಮಿತಿಯು ರೂ. 1,204, ರೂ. 1,200, ರೂ. 844 ಮತ್ತು ರೂ. 600 ಬೆಲೆಗಳ 4 ಬಿಡ್ಗಳನ್ನು ಸ್ವೀಕರಿಸಿದೆ ಮತ್ತು ಅದರಂತೆ, ಬಿಡ್ ಆಫರ್ ರೂ. 600 ಅನ್ನು ಎಲ್ -1 ಎಂದು ಪರಿಗಣಿಸಲಾಗಿದೆ.

ಏತನ್ಮಧ್ಯೆ, ಚೀನಾದ ವೊಂಡ್ಫೊ ಕಂಪನಿಯಿಂದ ನೇರವಾಗಿ ಸಿ.ಜಿ.. ಮೂಲಕ ವೈದ್ಯಕೀಯ ಪರೀಕ್ಷಾ ಕಿಟ್ಗಳನ್ನು ಖರೀದಿಸಲು .ಸಿ.ಎಂ.ಆರ್. ಪ್ರಯತ್ನಿಸಿತು. ಆದಾಗ್ಯೂ, ನೇರ ಸಂಗ್ರಹಣೆಯಿಂದ ಪಡೆದ ಬೆಲೆಯ ಉದ್ಧರಣದಲ್ಲಿ ಕೆಳಗಿನ ಸಮಸ್ಯೆಗಳಿದ್ದವು:

  • ಉದ್ಧರಣವು ಎಫ್..ಬಿ (ಬೋರ್ಡ್ನಲ್ಲಿ ತುಂಬುವುದು ಉಚಿತ) ಆಗಿತ್ತು ವಿನಹ ಸಾಗಣಿಕೆ/ ಲಾಜಿಸ್ಟಿಕ್ಸ್ ವಿಷಯಗಳ ಬಗ್ಗೆ ಯಾವುದೇ ಬದ್ಧತೆಯಿರಲಿಲ್ಲ.
  • ಯಾವುದೇ ಖಾತರಿಯಿಲ್ಲದೆ 100% ನೇರ ಮುಂಗಡದ ಪಾವತಿಯ ಆಧಾರದ ಮೇಲೆ ಉದ್ಧರಣ.
  • ಟೈಮ್ಲೈನ್ಗಳಲ್ಲಿ ಯಾವುದೇ ಬದ್ಧತೆ ಇರಲಿಲ್ಲ.
  • ಬೆಲೆಗಳಲ್ಲಿನ ಏರಿಳಿತಗಳಿಗೆ ಯಾವುದೇ ಷರತ್ತು ಇಲ್ಲದೆ ದರಗಳನ್ನು ಯು.ಎಸ್. ಡಾಲರ್ಗಳಲ್ಲಿ ಪಾವತಿ ಮಾಡಬೇಕು

ಆದ್ದರಿಂದ, ಮುಂಗಡಕ್ಕಾಗಿ ಯಾವುದೇ ಷರತ್ತುಗಳಿಲ್ಲದೆ, ಎಫ್,,ಬಿ (ಲಾಜಿಸ್ಟಿಕ್ಸ್) ಗಾಗಿ ಎಲ್ಲ ಅಂತರ್ಗತ ಬೆಲೆಯನ್ನು ಉಲ್ಲೇಖಿಸಿದ ವೊಂಡ್ಫೊದ ಭಾರತದ ವಿಶೇಷ ವಿತರಕರಿಂದ ವೈದ್ಯಕೀಯ ಪರೀಕ್ಷಾ ಕಿಟ್ಗಳನ್ನು ಖರೀದಿ ಮಾಡಲು ನಿರ್ಧರಿಸಲಾಯಿತು.

ಅಂತಹ ಕಿಟ್ಗಳನ್ನು ಖರೀದಿಸಲು ಯಾವುದೇ ಭಾರತೀಯ ಸಂಸ್ಥೆ ಮಾಡಿದ ಮೊದಲ ಪ್ರಯತ್ನ ಇದಾಗಿದೆ ಮತ್ತು ಕೇವಲ ಬಿಡ್ದಾರರು ಉಲ್ಲೇಖಿಸಿದ ದರದಲ್ಲಿ ಪೂರೈಕೆ ಒಪ್ಪಂದ ಇದಾಗಿದೆ ಎಂಬುದನ್ನೂ ಸಹ ಇಲ್ಲಿ ನೆನಪಿನಲ್ಲಿಡಬೇಕು

ಕೆಲವು ಕಿಟ್ ಗಳ ಸರಬರಾಜುಗಳನ್ನು ಸ್ವೀಕರಿಸಿದ ನಂತರ, .ಸಿ.ಎಂ.ಆರ್ ಮತ್ತೆ ಪುನಃ ಕಿಟ್ಗಳ ಮೇಲೆ ಗುಣಮಟ್ಟದ ಪರಶೀಲನೆ, ಪರೀಕ್ಷೆ ಹಾಗೂ ತಪಾಸಣೆ ನಡೆಸಿದೆ. ಅವರ ಕಾರ್ಯಕ್ಷಮತೆಯ ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ, ಪ್ರಶ್ನೆಯಲ್ಲಿರುವ ಆದೇಶ (ವೊಂಡ್ಫೊ) ಜೊತೆಗೆ ಕಳಪೆ ಕಾರ್ಯಕ್ಷಮತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ತಯಾರಿಕೆ ಸಂಸ್ಥೆಗೆ ಸಂಬಂಧಿಸಿದ ಆದೇಶವನ್ನೂ ಕೂಡಾ ರದ್ದುಗೊಳಿಸಲಾಗಿದೆ.

ಸರಬರಾಜುಗಳಿಗೆ ಸಂಬಂಧಿಸಿದಂತೆ .ಸಿ.ಎಂ.ಆರ್ ಈತನಕ ಯಾವುದೇ ಪಾವತಿ ಮಾಡಿಲ್ಲ ಎಂದು ಸ್ಪಷ್ಟಪಡಿಸುತ್ತಿದೆ. ಭಾರತ ಸರಕಾರ 100% ಮುಂಗಡ ಮೊತ್ತದೊಂದಿಗೆ ಸಂಗ್ರಹಣೆಗೆ ಹೋಗುವುದಿಲ್ಲ ಮತ್ತು ಸರಿಯಾದ ಪ್ರಕ್ರಿಯೆಯ ನಂತರವೇ ಖರೀದಿ ಮಾಡುತ್ತದೆ. ಹಾಗಾಗಿ, ಭಾರತ ಸರಕಾರ ವ್ಯವಹಾರದಲ್ಲಿ ಒಂದು ರೂಪಾಯಿಯನ್ನು ಕಳೆದುಕೊಂಡಿಲ್ಲ.

***



(Release ID: 1618845) Visitor Counter : 262