ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ
ಎಂಟು ಈಶಾನ್ಯ ರಾಜ್ಯಗಳ ಪೈಕಿ ಐದು ರಾಜ್ಯಗಳು ಕೊರೊನಾ ಮುಕ್ತವಾಗಿದ್ದು ಇತರ ಮೂರು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ: ಡಾ.ಜಿತೇಂದ್ರ ಸಿಂಗ್
Posted On:
27 APR 2020 6:12PM by PIB Bengaluru
ಎಂಟು ಈಶಾನ್ಯ ರಾಜ್ಯಗಳ ಪೈಕಿ ಐದು ರಾಜ್ಯಗಳು ಕೊರೊನಾ ಮುಕ್ತವಾಗಿದ್ದು ಇತರ ಮೂರು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ: ಡಾ.ಜಿತೇಂದ್ರ ಸಿಂಗ್
ಎಂಟು ಈಶಾನ್ಯ ರಾಜ್ಯಗಳಲ್ಲಿ ಐದು ಕೊರೊನಾ ಮುಕ್ತವಾಗಿದ್ದರೆ, ಇತರ ಮೂರು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಈ ವಿಷಯವನ್ನು ಇಂದು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ (ಡಿಒಎನ್ ಇ ಆರ್), ಕೇಂದ್ರ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿ ಕಚೇರಿ ರಾಜ್ಯ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಸಚಿವರಾದ ಡಾ.ಜಿತೇಂದ್ರ ಸಿಂಗ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆಯ ನಂತರ ತಿಳಿಸಿದರು. ಇದರಲ್ಲಿ ಈಶಾನ್ಯ ಕೌನ್ಸಿಲ್ (ಎನ್ಇಸಿ) ಶಿಲ್ಲಾಂಗ್ನ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಪಿಎಸ್ ಯುಗಳ ಪ್ರತಿನಿಧಿಗಳು ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮ (ಎನ್ಇಆರ್ಎಎಂಸಿ), ಈಶಾನ್ಯ ಕರಕುಶಲ ಮತ್ತು ಕೈಮಗ್ಗ ಅಭಿವೃದ್ಧಿ ನಿಗಮ (ಎನ್ಇಹೆಚ್ಡಿಸಿ), ಈಶಾನ್ಯ ಅಭಿವೃದ್ಧಿ ಹಣಕಾಸು ನಿಗಮ ನಿಯಮಿತ ( ಎನ್ಇಡಿಎಫ್ಐ), ಕಬ್ಬು ಮತ್ತು ಬಿದಿರಿನ ತಂತ್ರಜ್ಞಾನ ಕೇಂದ್ರ (ಸಿಬಿಟಿಸಿ) ಇತ್ಯಾದಿಗಳು ಆಯಾ ಸ್ಥಳಗಳಿಂದ ಭಾಗವಹಿಸಿದ್ದವು.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ.ಜಿತೇಂದ್ರ ಸಿಂಗ್ ರವರು, ಕಳೆದ ಆರು ವರ್ಷಗಳಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಈಶಾನ್ಯ ಪ್ರದೇಶವು ಅಭಿವೃದ್ಧಿಶೀಲ ಪರಿವರ್ತನೆಯ ಪ್ರದೇಶದ ಮಾದರಿಯಾಗಿ ಹೊರಹೊಮ್ಮಿದೆ, ಪ್ರಸ್ತುತ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಇದು ಪರಿಣಾಮಕಾರಿ, ಶ್ರದ್ಧೆ ಮತ್ತು ಶಿಸ್ತುಬದ್ಧ ಆರೋಗ್ಯ ನಿರ್ವಹಣೆಯ ಪ್ರದೇಶದ ಒಂದು ಮಾದರಿಯಾಗಿ ಹೊರಹೊಮ್ಮಿದೆ
ಡಾ.ಜಿತೇಂದ್ರ ಸಿಂಗ್ ರವರು ಮತ್ತಷ್ಟು ವಿವರಣೆಯನ್ನು ನೀಡುತ್ತ, 5 ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ಮತ್ತು ತ್ರಿಪುರವು ಸಂಪೂರ್ಣವಾಗಿ ಕೊರೊನಾ ಮುಕ್ತವಾಗಿದ್ದು, ಇತರ 3 ರಾಜ್ಯಗಳಾದ ಅಸ್ಸಾಂ, ಮೇಘಾಲಯ ಮತ್ತು ಮಿಜೋರಾಂ ಕ್ರಮವಾಗಿ 8, 11 ಮತ್ತು 1 ಕೊರೊನಾ ಸೋಂಕು ಧೃಡಪಟ್ಟ ಪ್ರಕರಣಗಳನ್ನು ಹೊಂದಿವೆ ಮತ್ತು ಅವು ಋಣಾತ್ಮಕವಾಗಲು ಕಾಯುತ್ತಿವೆ, ಆದರೆ ಕಳೆದ ರಾತ್ರಿಯವರೆಗೆ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಪರಿಪೂರ್ಣ ಸಮನ್ವಯವನ್ನು ಖಾತ್ರಿಪಡಿಸಿದ್ದಕ್ಕಾಗಿ ಈಶಾನ್ಯ ಪ್ರದೇಶದ ರಾಜ್ಯ ಸರ್ಕಾರಗಳು, ಅವರ ಮುಖ್ಯಮಂತ್ರಿಗಳು ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಮತ್ತು ಈಶಾನ್ಯ ಮಂಡಳಿಯ (ಎನ್ಇಸಿ) ಅಧಿಕಾರಿಗಳನ್ನು ಅವರು ಅಭಿನಂದಿಸಿದರು.
ಸೋಂಕಿನ ನಿರ್ವಹಣೆ ಮತ್ತು ಕೊರೊನಾ ರೋಗಿಗಳ ಆರೈಕೆ, ನಿರ್ಣಾಯಕ ಆರೈಕೆ ಮತ್ತು ಸುಧಾರಿತ ಆರೋಗ್ಯ ರಕ್ಷಣೆಗಾಗಿ ಮೀಸಲಾಗಿರುವ ಹೊಸ ಆರೋಗ್ಯ ಸಂಬಂಧಿತ ಯೋಜನೆಗಳಿಗಾಗಿ ಮಿಜೋರಾಂ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಣಿಪುರದ ವಿವಿಧ ಈಶಾನ್ಯ ರಾಜ್ಯಗಳಿಂದ ಪಡೆದ ಮತ್ತು ಪರಿಗಣಿಸಲ್ಪಟ್ಟಿರುವ ಪ್ರಸ್ತಾಪಗಳ ಬಗ್ಗೆ ಡಾ.ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು. ಈ ಯೋಜನೆಗಳನ್ನು ಆದ್ಯತೆಯೊಂದಿಗೆ ವ್ಯವಹರಿಸಲಾಗುವುದು ಎಂದರು. ಇದಲ್ಲದೆ, ಲಾಕ್ಡೌನ್ ಗೆ ಮೊದಲೇ ಸಚಿವಾಲಯವು ಆರಂಭಿಕ ಹಂತದಲ್ಲಿಯೇ ಈಶಾನ್ಯ ರಾಜ್ಯಗಳ ವಿಲೇವಾರಿಗೆ 25 ಕೋಟಿ ರೂಪಾಯಿಗಳನ್ನು ಕೊರೊನಾ ಸಂಬಂಧಿತ ಚಟುವಟಿಕೆಗಳಿಗೆ ಅಂತರನಿಧಿಯಂತೆ ಇರಿಸಿತ್ತು.
ಸಭೆಯಲ್ಲಿ, ಡಾ. ಜಿತೇಂದ್ರ ಸಿಂಗ್ ಅವರು ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಮುಖ್ಯವಾಗಿ ಬಿದಿರು ಸಂಬಂಧಿತ ಚಟುವಟಿಕೆಗಳನ್ನು ಒಳಗೊಂಡಿದ್ದ ವಿನಾಯಿತಿ ಪಡೆದ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆದ ವಿವಿಧ ಆರ್ಥಿಕ ಚಟುವಟಿಕೆಗಳ ಬಗ್ಗೆ ಹೊಸ ಮಾಹಿತಿಗಳನ್ನು ಪಡೆದರು,
***
(Release ID: 1618843)
Visitor Counter : 821
Read this release in:
English
,
Urdu
,
Hindi
,
Manipuri
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu