ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ದ್ವಿದಳ ಧಾನ್ಯಗಳ ವಿತರಣೆಯ ಅತಿದೊಡ್ಡ ಕಾರ್ಯಾಚರಣೆ

Posted On: 25 APR 2020 4:09PM by PIB Bengaluru

ದ್ವಿದಳ ಧಾನ್ಯಗಳ ವಿತರಣೆಯ ಅತಿದೊಡ್ಡ ಕಾರ್ಯಾಚರಣೆ

ಪಿ.ಎಂ.ಜಿ.ಕೆ.. ಯೋಜನೆಯಡಿ ಸುಮಾರು 20 ಕೋಟಿ ಎನ್‌.ಎಫ್‌.ಎಸ್‌.. ಕುಟುಂಬಗಳಿಗೆ ಪಡಿತರ ಅಂಗಡಿಗಳ ಮೂಲಕ
ಮೂರು ತಿಂಗಳವರೆಗೆ ಸುಮಾರು 5.88 ಎಲ್‌.ಎಂ.ಟಿ. ದ್ವಿದಳ ಧಾನ್ಯಗಳನ್ನು ನಾಫೆಡ್ ವಿತರಿಸಲಿದೆ

4 ವಾರ ಅವಧಿಯಲ್ಲಿ ಲೋಡ್/ ಅನ್ಲೋಡ್ ಸೇರಿದಂತೆ ಸುಮಾರು 2 ಲಕ್ಷ ಟ್ರಕ್ ಟ್ರಿಪ್ಗಳನ್ನು ಒಳಗೊಂಡಿರುವ ಬೃಹತ್ ಕಾರ್ಯಾಚರಣೆ

 

ದೇಶದಲ್ಲಿ ಮೂರು ತಿಂಗಳ ಕಾಲ ಸುಮಾರು 20 ಕೋಟಿ ಕುಟುಂಬಗಳಿಗೆ ಒಂದು ಕೆ.ಜಿ. ದ್ವಿದಳ ಧಾನ್ಯಗಳನ್ನು ವಿತರಿಸುವ ಸಲುವಾಗಿ, ದ್ವಿದಳ ಧಾನ್ಯಗಳ ಗಿರಣಿಗಳಲ್ಲಿ ಮತ್ತು ಸಾಗಣೆಯಲ್ಲಿ ಬೃಹತ್ ಕಾರ್ಯಾಚರಣೆ ನಡೆಯುತ್ತಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ಪ್ರೋಟೀನ್ ಅಗತ್ಯಗಳನ್ನು ಪೂರೈಸುವ ಸಲುವಾಗಿ, ಪ್ರತಿ ಎನ್‌.ಎಫ್‌.ಎಸ್‌.. ಕುಟುಂಬಗಳಿಗೆ ಒಂದು ಕೆ.ಜಿ. ಗಿರಣಿಯಲ್ಲಿ ಅರೆದ ಮತ್ತು ಸ್ವಚ್ಛಗೊಳಿಸಿದ ದ್ವಿದಳ ಧಾನ್ಯಗಳನ್ನು ಪಿ.ಎಂ ಗರಿಬ್ ಕಲ್ಯಾಣ್ ಅನ್ನ ಯೋಜನೆ (ಪಿ.ಎಂ.ಜಿ.ಕೆ..) ಅಡಿಯಲ್ಲಿ ಮೂರು ತಿಂಗಳ ಕಾಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಗ್ರಾಹಕರ ವ್ಯವಹಾರಗಳ ಇಲಾಖೆಯ ಮಾರ್ಗದರ್ಶನದಲ್ಲಿ ನಾಫೆಡ್ನಿಂದ ಕಾರ್ಯಗತಗೊಳಿಸಲ್ಪಟ್ಟ ಕಾರ್ಯಾಚರಣೆಯು ಕೇಂದ್ರ/ ರಾಜ್ಯ ಗೋದಾಮಿನ ನಿಗಮಗಳ ಪ್ರತಿ ಗೋದಾಮಿನಿಂದ ಗಿರಣಿಗಳಲ್ಲಿ ಸಂಸ್ಕರಿಸದ ದ್ವಿದಳ ಧಾನ್ಯಗಳನ್ನು ಸಾಗಾಟಮಾಡುವುದು, ಎಫ್‌.ಎಸ್‌.ಎಸ್‌... ಸೂಚಿಸಿದ ಗುಣಮಟ್ಟದ ಮಾನದಂಡಗಳ ಪ್ರಕಾರ ದ್ವಿದಳ ಧಾನ್ಯಗಳನ್ನು ಗಿರಣಿಗಳಲ್ಲಿ ಅರೆದು ಸಂಸ್ಕರಿಸಿ ಸ್ವಚ್ಛಗೊಳಿಸಲಾಗುವುದು. ಆನಂತರ ಗಿರಣಿಗಳ ದ್ವಿದಳ ಧಾನ್ಯಗಳು ರಾಜ್ಯಗಳಿಗೆ ತಲುಪುತ್ತದೆ. ತದನಂತರ, ಅರೆಯಲಾದ ದ್ವಿದಳ ಧಾನ್ಯಗಳನ್ನು ರಾಜ್ಯ ಸರ್ಕಾರಿ ಉಗ್ರಾಣಗಳಿಗೆ ಮತ್ತು ನಂತರ ಕೊನೆಗೆ ಪಿ.ಡಿ.ಎಸ್. ಅಂಗಡಿಗಳಿಗೆ ವಿತರಣೆಗಾಗಿ ಸಾಗಿಸಲಾಗುತ್ತದೆ.

ಆನ್ಲೈನ್ ಹರಾಜಿನ ಮೂಲಕ ಒಟ್ಟು ವ್ಯವಹಾರದ ಅನುಪಾತ (.ಟಿ.ಆರ್.) ಬಿಡ್ಗಳ ಆಧಾರದ ಮೇಲೆ ಗಿರಣಿಗಳನ್ನು ನಾಫೆಡ್ ಆಯ್ಕೆ ಮಾಡುತ್ತದೆ. .ಟಿ.ಆರ್. ಬಿಡ್ಡಿಂಗ್ನಲ್ಲಿ, ಎಂಪನೇಲ್ಡ್ ಗಿರಣಿಗಳು ತಮ್ಮ ಪ್ರತಿ ಕ್ವಿಂಟಾಲ್ ಕಚ್ಚಾ ನಾಡಿಗಳಿಗೆ ಶೇಕಡಾವಾರು ಗಿರಣಿಯಲ್ಲಿ ಅರೆದ ದ್ವಿದಳ ಧಾನ್ಯಗಳನ್ನು ಉಲ್ಲೇಖಿಸುವುದು ಅಗತ್ಯವಾಗಿರುತ್ತದೆ. ಸ್ವಚ್ಛಗೊಳಿಸುವಿಕೆ, ಗಿರಣಿಯಲ್ಲಿ ಅರೆದ, ಪ್ಯಾಕಿಂಗ್, ಸಾಗಣೆಗೆ ಒಳಗಿನ ಮತ್ತು ಹೊರಗಿನ ಖರ್ಚುಗಳನ್ನು ಪರಿಗಣಿಸಿ ದ್ವಿದಳ ಪ್ಯಾಕಿಂಗ್ 50 ಕೆ.ಜಿ. ಚೀಲಗಳಲ್ಲಿರುತ್ತವೆ.. ಯಾವುದೇ ಗಿರಣಿಯಲ್ಲಿ ಅರೆಯುವ ಶುಲ್ಕವನ್ನು ಗಿರಣಿಗಳಿಗೆ ಪಾವತಿಸುವುದಿಲ್ಲ.. ಗಿರಣಿಗಳನ್ನು ಗುಂಪು/ಗೊಂಚಲುಗಳಾಗಿ ವರ್ಗೀಕರಿಸಲಾಗಿದೆ. ಉತ್ಪಾದಿಸುವ ರಾಜ್ಯಗಳಲ್ಲಿ, ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳು ಮತ್ತು ಅಲ್ಲಿನ ಸ್ಥಳೀಯ ಗಿರಣಿಗಳಿಗೆ ಆದ್ಯತೆ ನೀಡಲಾಗುತ್ತದೆ. ಪಡಿತರ ಅಂಗಡಿಗಳಿಗೆ ನೀಡುವ ಪ್ರಾಸಂಗಿಕ ಹಾಗೂ ನಿರ್ವಹಣಾ ಶುಲ್ಕಗಳು ಸೇರಿದಂತೆ ವಿತರಣೆಯಲ್ಲಿನ ಎಲ್ಲಾ ವೆಚ್ಚಗಳನ್ನು ಕೇಂದ್ರ ಸರ್ಕಾರವು ಪೂರೈಸುತ್ತಿದೆ.

ಕಾರ್ಯಾಚರಣೆಯ ಪ್ರಮಾಣವು ಬೃಹತ್ ಗಾತ್ರದಲ್ಲಿದ್ದು, ಸಾಮಾನ್ಯ ಆಹಾರ ಧಾನ್ಯಗಳ ಸಾಗಾಟದ ಚಲನೆಗಿಂತ ಹೆಚ್ಚು ಸಂಕೀರ್ಣವಾಗಿದೆ. ಪ್ರತಿ ಕೆ.ಜಿ. ದ್ವಿದಳವೂ ಹೊರುವಿಕೆ, ತುಂಬುವಿಕೆ, ಸಾಗಾಟ, ಮತ್ತು ಇಳಿಸುವಿಕೆಯ ಅನೇಕ ಚಕ್ರಗಳ ಮೂಲಕ ಕನಿಷ್ಠ ಮೂರು (ಅನೇಕ ಸಂದರ್ಭಗಳಲ್ಲಿ ನಾಲ್ಕು) ಬಾರಿ ಟ್ರಕ್ ಮೂಲಕ ಸಾಗಿ ಹೋಗುತ್ತವೆ.. ದೂರದ ಸ್ಥಳಗಳಿಗೆ, ಸರಕು ರೈಲು ಮೂಲಕ ಸಾಗಣಿಕೆ ಮಾಡಿದರೆ, ಹೆಚ್ಚಿನ ಸಂದರ್ಭಗಳಲ್ಲಿ ರಸ್ತೆ ಮೂಲಕ ಟ್ರಕ್ಗಳಲ್ಲಿ ರವಾನೆ ನಡೆಯುತ್ತದೆ. ಪ್ರಕ್ರಿಯೆಯಲ್ಲಿ ಸುಮಾರು 5.88 ಎಲ್.ಎಂ.ಟಿ ಗಿರಣಿಯಲ್ಲಿ ಅರೆದ/ ಕ್ಲೀನ್ಡ್ ದ್ವಿದಳ ಧಾನ್ಯಗಳನ್ನು ನಾಗರಿಕರಿಗೆ ವಿತರಿಸಲು, ಸುಮಾರು 8.5 ಲಕ್ಷ ಮೆ.ಟನ್ (ಗಿರಣಿಯಲ್ಲಿ ಅರೆಯದ) ದ್ವಿದಳ ಧಾನ್ಯಗಳನ್ನು ಬಳಸಲಾಗುತ್ತದೆ. ಯೋಜನೆಗಾಗಿ ದೇಶಾದ್ಯಂತ ಸುಮಾರು 165 ನಾಫೆಡ್ ಉಗ್ರಾಣಲ್ಲಿರುವ ತನ್ನ ಪಾಲುಗಳನ್ನು ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇಲ್ಲಿಯವರೆಗೆ, ನಾಫೆಡ್ ತನ್ನ ದ್ವಿದಳ ಸಂಸ್ಕರಣೆ ಮತ್ತು ವಿತರಣಾ ಸೇವೆಗೆ ದೇಶಾದ್ಯಂತ 100 ದ್ವಿದಳ ಗಿರಣಿಗಳನ್ನು ಉಪಯೋಗಿಸಿದೆ.

ಪ್ರತಿ ತಿಂಗಳು, 1.96 ಎಲ್.ಎಮ್.ಟಿ ದ್ವಿದಳ ಧಾನ್ಯಗಳನ್ನು ದೇಶದ ಎನ್‌.ಎಫ್‌.ಎಸ್‌.. ಕುಟುಂಬಗಳಿಗೆ ಪಡಿತರ ಅಂಗಡಿಗಳ ಮೂಲಕ ವಿತರಿಸಬೇಕಾಗುತ್ತದೆ. ಗಿರಣಿಯಲ್ಲಿ ಅರೆದ/ ಸ್ವಚ್ಛಗೊಳಿಸಿದ ದ್ವಿದಳ ಧಾನ್ಯಗಳಲ್ಲಿ ಸುಮಾರು ನಾಲ್ಕನೇ ಒಂದು ಭಾಗವನ್ನು (1.45 ಎಲ್.ಎಮ್.ಟಿ ಗಿಂತ ಹೆಚ್ಚು) ಈಗಾಗಲೇ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ದ್ವಿದಳ ಗಿರಣಿಗಳನ್ನು ಹೊಂದಿರುವ ಹಲವಾರು ರಾಜ್ಯಗಳು ಪ್ರಕ್ರಿಯೆಯನ್ನು ವೇಗಗೊಳಿಸಲು ಸ್ವಕ್ಷೇತ್ರದ ಗಿರಣಿಯಲ್ಲಿ ಅರೆದ ದ್ವಿದಳ ಧಾನ್ಯಗಳನ್ನು ವಿತರಣೆಗಾಗಿ ಬಳಸಿವೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಮಾಸಿಕ ವಿತರಣಾ ಅವಶ್ಯಕತೆಯ ಮೂರನೇ ಒಂದು ಭಾಗವನ್ನು ವಿತರಣೆಗಾಗಿ ಈಗಾಗಲೇ ಅಂತಿಮ ಸ್ಥಳಗಳಿಗೆ ಸಾಗಿಸಿವೆ. ಈಗಾಗಲೇ ವಿತರಣೆ ಪ್ರಾರಂಭಿಸಿದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಂದರೆ - ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್ ಗಡ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಅರುಣಾಚಲ ಪ್ರದೇಶ, ಅಂಡಮಾನ್, ಚಂಡೀಗಡ, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು. ಇತರ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಮಾಜಿಕ ಅಂತರ ಮತ್ತು ಸಾರ್ವಜನಿಕ ಸುರಕ್ಷತೆಯ ಕಾರಣಗಳಿಗಾಗಿ ಮೇ ಮೊದಲ ವಾರದಲ್ಲಿ ಆಹಾರ ಧಾನ್ಯ ವಿತರಣೆಯೊಂದಿಗೆ ದ್ವಿದಳ ಧಾನ್ಯಗಳನ್ನು ವಿತರಿಸಲು ನಿರ್ಧರಿಸಿದೆ. ಇಂದಿನ ದಿನಾಂಕದಂತೆ, ಸುಮಾರು 30,000 ಮೆ.ಟನ್ ಧಾನ್ಯಗಳನ್ನು ವಿತರಿಸಲಾಗಿದೆ, ಆದರೆ ಇದು ಮೇ ಮೊದಲ ವಾರದಲ್ಲಿ ಇನ್ನೂ ವೇಗದಲ್ಲಿ ಸಾಗಲಿದೆ. ಅನೇಕ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು, ವಿಶೇಷವಾಗಿ ಅಂಡಮಾನ್, ಚಂಡೀಗಡ, ದಾದ್ರಾ ನಗರ ಹವೇಲಿ, ಗೋವಾ, ಲಡಾಖ್, ಪುದುಚೇರಿ, ಲಕ್ಷದ್ವೀಪ ಮತ್ತು ಪಂಜಾಬ್ಗಳಂತಹ ಸಣ್ಣ ರಾಜ್ಯಗಳಿಗೆ ಮೂರು ತಿಂಗಳ ಗಿರಣಿ ಸ್ವಚ್ಛಗೊಳಿಸಿದ ದ್ವಿದಳ ಧಾನ್ಯಗಳನ್ನು ಒಮ್ಮಲೇ ಒದಗಿಸಲಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಹಾಯದಿಂದ ಜಂಟಿ ಕಾರ್ಯದರ್ಶಿಗಳ ನೇತೃತ್ವದ ಐದು ಗುಂಪುಗಳ ಅಧಿಕಾರಿಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು, ನಾಫೆಡ್, ಧಾನ್ಯಗಳ ಗಿರಣಿಗಳು ಮತ್ತು ಉಗ್ರಾಣ ನಿಗಮಗಳೊಂದಿಗೆ ಪರಸ್ಪರ ಸಮನ್ವಯಗೊಳಿಸಲು ನಿಯೋಜಿಸಲಾಗಿದೆ. ಕಾರ್ಯದರ್ಶಿ, ಕೃಷಿ ಮತ್ತು ಕಾರ್ಯದರ್ಶಿ, ಗ್ರಾಹಕ ವ್ಯವಹಾರಗಳು ಜಂಟಿಯಾಗಿ ಪ್ರತಿದಿನವೂ ಪ್ರಗತಿಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ತಲಮಟ್ಟದ ಸಮಸ್ಯೆ-ಅಡಚಣೆಗಳನ್ನು ಬಗೆಹರಿಸುತ್ತಿದ್ದಾರೆ. ಪ್ರತಿದಿನದ ವಿತರಣೆಯ ಅಗತ್ಯತೆಯನ್ನು ಸಂಪುಟ ಕಾರ್ಯದರ್ಶಿ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಗ್ರಾಹಕ ವ್ಯವಹಾರಗಳ ಇಲಾಖೆ ದ್ವಿದಳ ಧಾನ್ಯಗಳ ರೀತಿಯ ಬೃಹತ್ ಕಾರ್ಯಾಚರಣೆಯನ್ನು ನಡೆಸುತ್ತಿರುವುದು ಇದೇ ಮೊದಲ ಬಾರಿ. ಕಾರ್ಯಾಚರಣೆಯು ಸುಮಾರು ಎರಡು ಲಕ್ಷ ಟ್ರಕ್ ಟ್ರಿಪ್ಗಳನ್ನು ಒಳಗೊಂಡಿರುತ್ತದೆ ಮತ್ತು 4 ವಾರಗಳ ಅವಧಿಯಲ್ಲಿ ಸಾಗಾಟ, ತುಂಬುವಿಕೆ ಮತ್ತು ಇಳಿಸುವಿಕೆಯ ಕಾರ್ಯಾಚರಣೆಯನ್ನು ಒಳಗೊಂಡಿರುತ್ತದೆ. ಇದು ಸಾಮಾನ್ಯ ಕಾಲಾವಧಿಯಲ್ಲಿ ಕೇವಲ ಮಹತ್ವಾಕಾಂಕ್ಷೆಯ ವಿಷಯವಾಗಿದ್ದರೆ, ಇಂದು ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಗಿರಣಿಗಳು ಮತ್ತು ಉಗ್ರಾಣಗಳು ಹಾಟ್ಸ್ಪಾಟ್ ಪ್ರದೇಶಗಳಲ್ಲಿರುವ ಕಾರಣ ತುಂಬಾ ಸವಾಲಿನ ಸಂಗತಿಯಾಗಿದೆ. ಅಂತಹ ಪ್ರದೇಶಗಳಲ್ಲಿ ಸುರಕ್ಷಿತವಾಗಿ ಕಾರ್ಯಾಚರಣೆಗಳನ್ನು ನಿರ್ವಹಿಸುವುದು ಬಹಳ ಮುಖ್ಯ. ಅಂತಹ ಪ್ರದೇಶಗಳಲ್ಲಿ, ಟ್ರಕ್ಗಳ ಲಭ್ಯತೆ ಮತ್ತು ತುಂಬುವಿಕೆ ಮತ್ತು ಇಳಿಸುವಿಕೆಯ ಕಾರ್ಮಿಕರ ಲಭ್ಯತೆ ದೊಡ್ಡ ಸಮಸ್ಯೆಯಾಗಿದೆ.

ಹೆಚ್ಚಿನ ಫಲಾನುಭವಿಗಳು ತಮ್ಮ ಕೋಟಾದ ಮೊದಲ ತಿಂಗಳ ಧಾನ್ಯಗಳನ್ನು ಏಪ್ರಿಲ್ ಅಂತ್ಯದೊಳಗೆ ಅಥವಾ ಮೇ ಮೊದಲ ವಾರದೊಳಗೆ ಸ್ವೀಕರಿಸಲಿದ್ದಾರೆ. ಹಲವಾರು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲಿನಿಂದಲೇ ಎಲ್ಲಾ ಮೂರು ತಿಂಗಳವರೆಗೆ ದ್ವಿದಳ ಧಾನ್ಯಗಳನ್ನು ಒಟ್ಟಿಗೆ ವಿತರಿಸಲು ಸಾಧ್ಯವಾಗಿದೆ. ಉಳಿದ ರಾಜ್ಯಗಳಲ್ಲಿ ಮೇ ತಿಂಗಳ ಮೂರನೇ ವಾರದಲ್ಲಿಯೇ ಎಲ್ಲಾ ಮೂರು ತಿಂಗಳ ಕೋಟಾವನ್ನು ಒಟ್ಟಿಗೆ ವಿತರಣೆಮಾಡಲು ಪ್ರಯತ್ನಗಳು ನಡೆಯುತ್ತಿವೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿತರಣಾ ಸಿದ್ಧತೆಗಳನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವರು ಏಪ್ರಿಲ್ 24, 2020 ರಂದು ಪರಿಶೀಲಿಸಿದರು. ರಾಜ್ಯಗಳ ವಿತರಣಾ ಸನ್ನದ್ಧತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವರು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡಿದ ಸಹಕಾರ ಮತ್ತು ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದರು, ಹಾಗೂ ಮುಂಬರುವ ವಾರಗಳಲ್ಲಿ ವಿತರಣೆಯ ಗಾತ್ರವನ್ನು ಹೆಚ್ಚಿಸಲಾಗುವುದು ಎಂಬ ಆಶಯವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವರು ವ್ಯಕ್ತಪಡಿಸಿದರು

***



(Release ID: 1618565) Visitor Counter : 261