ಹಣಕಾಸು ಆಯೋಗ

15 ನೇ ಹಣಕಾಸು ಆಯೋಗ ಸಲಹಾ ಮಂಡಳಿ ಸಭೆ

Posted On: 24 APR 2020 7:01PM by PIB Bengaluru

15 ನೇ ಹಣಕಾಸು ಆಯೋಗ ಸಲಹಾ ಮಂಡಳಿ ಸಭೆ

 

ಹದಿನೈದನೇ ಹಣಕಾಸು ಆಯೋಗ ತನ್ನ ಸಲಹಾ ಮಂಡಳಿಯೊಂದಿಗೆ ಏಪ್ರಿಲ್ 23-24, 2020ರಂದು ಜಾಲತಾಣಗಳ ಮೂಲಕ ಸಭೆಗಳನ್ನು ನಡೆಸಿತು ಮತ್ತು ಈಗ ಆಯೋಗ ಎದುರಿಸುತ್ತಿರುವ ವಿವಿಧ ವಿಷಯಗಳ ಕುರಿತು ಚರ್ಚಿಸಿತು. ಎಕ್ಸ್.ವಿ.ಎಫ್.ಸಿ. ಅಧ್ಯಕ್ಷರಾದ ಶ್ರೀ ಎನ್.ಕೆ. ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯೋಗದ ಎಲ್ಲಾ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಲಹಾ ಮಂಡಳಿಯಿಂದ, ಏಪ್ರಿಲ್ 23, 2020 ರಂದು ನಡೆದ ಸಭೆಯಲ್ಲಿ ಡಾ. ಸಜ್ಜಿದ್ ಝೆಡ್. ಚಿನೊಯ್, ಡಾ. ಪ್ರಾಚಿ ಮಿಶ್ರಾ, ಶ್ರೀ ನೀಲಕಂಠ್ ಮಿಶ್ರಾ ಮತ್ತು ಡಾ. ಓಂಕಾರ್ ಗೋಸ್ವಾಮಿ ಅವರು ಭಾಗವಹಿಸಿದ್ದಾರೆ ಮತ್ತು ಏಪ್ರಿಲ್ 24, 2020 ರಂದು ನಡೆದ ಸಭೆಯಲ್ಲಿ ಡಾ. ಅರವಿಂದ್ ವರ್ಮಾನಿ, ಡಾ. ಇಂದಿರಾ ರಾಜಾರಾಮನ್, ಡಾ. ಡಿ.ಕೆ. ಶ್ರೀವಾಸ್ತವ, ಡಾ. ಎಂ.ಗೋವಿಂದ ರಾವ್, ಡಾ. ಸುದೀಪ್ತೊ ಮುಂಡಲ್ ಮತ್ತು ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಭಾಗವಹಿಸಿದ್ದಾರೆ. ಎಕ್ಸ್.ವಿ.ಎಫ್.ಸಿ. 2020-21ನೇ ಸಾಲಿನ ವರದಿಯನ್ನು ಸಲ್ಲಿಸಿದ ನಂತರ ಇದು ಸಲಹಾ ಮಂಡಳಿಯ ಎರಡನೇ ಸುತ್ತಿನ ಸಭೆಗಳಾಗಿವೆ

ಕೊವಿಡ್ ಸಾಂಕ್ರಾಮಿಕದಿಂದಾಗಿ ಜಾಗತಿಕ ಬೇಡಿಕೆಯ ನಷ್ಟದ ಮೂಲಕ ದೇಶೀಯ ಚಟುವಟಿಕೆ ಮಂದಗತಿಯಲ್ಲಿದೆ, ರಾಷ್ಟ್ರೀಯ ಲೊಕ್ ಡೌನ್ ಪರಿಣಾಮದಿಂದಾಗಿ ಹಾಗೂ ಮಂದಗತಿಯ ಜಾಗತಿಕ ಆರ್ಥಿಕ ಹಿಂಜರಿಕೆಯಿಂದಾಗಿ ಭಾರತೀಯ ಉತ್ಪನ್ನಗಳಿಗೆ, ಹಣಕಾಸು ಸಂಸ್ಥೆಗಳಿಗೆ, ವ್ಯಾಪಾರೋದ್ಯಮಗಳ ಹಣದ ಒಳಹರಿವುಗಳಿಗೆ ಮತ್ತು ಭಾರತೀಯ ಆರ್ಥಿಕತೆಯ ಮೇಲೆ ಬಹಳ ದೊಡ್ಡ ಮಟ್ಟಿನಪರಿಣಾಮ ಬೀರಲಿದೆ ಎಂದು ಸಲಹಾ ಮಂಡಳಿಯ ಸದಸ್ಯರು ಅಭಿಪ್ರಾಯಪಟ್ಟರು. ಮಾರ್ಚ್ 2020 ಮೊದಲು ಮಾಡಿದ ನೈಜ ಜಿ.ಡಿ.ಪಿ ಬೆಳವಣಿಗೆಯ ಪ್ರಕ್ಷೇಪಗಳನ್ನು ಸಂಪೂರ್ಣವಾಗಿ ಮರುಪರಿಶೀಲಿಸುವ ಅಗತ್ಯವಿದೆ ಎಂದು ಭಾಗವಹಿಸಿದವರೆಲ್ಲರೂ ಸರ್ವಾನುಮತದಿಂದ ಹೇಳಿದರು, ಮತ್ತು ಪುನಃ ಪರಿಷ್ಕರಣೆಗೆ ಒಳಪಡಬೇಕು ಎಂಬ ಸಲಹೆ ನೀಡಿದರು. ಆರ್ಥಿಕತೆಯ ಲಾಕ್ಡೌನ್ ಸಡಿಲವಾಗಿ ಸರಳವಾದ ನಂತರ, ಕೆಲಸಗಾರರಿಗೆ ಶೀಘ್ರದಲ್ಲೇ ಕೆಲಸಕ್ಕೆ ಮರಳುವ ಸಾಮರ್ಥ್ಯ, ಮಧ್ಯವರ್ತಿಗಳ ಸರಬರಾಜು ವ್ಯವಸ್ಥೆ, ಉತ್ಪಾದನೆಯ ಬೇಡಿಕೆ ಮತ್ತು ಹಣದ ಒಳಹರಿವಿನ ಆಧಾರದ ಮೇಲೆ ಸಹಜವಾಗಿ ಕ್ರಮೇಣ ಚೇತರಿಕೆ ಕಾಣಬಹುದು. ಆದ್ದರಿಂದ, ಕೊವಿಡ್ ನಿಂದಾದ ಆರ್ಥಿಕ ಪ್ರಭಾವದ ದುಷ್ಪರಿಣಾಮಗಳ ಪ್ರಮಾಣವು ಕೇವಲ ಮುಂಬರುವ ದಿನಗಳಲ್ಲಿ ದೀರ್ಘಾವಧಿಯಲ್ಲಿ ಮಾತ್ರ ಸ್ಪಷ್ಟವಾಗಲಿದೆ.

ಸಾರ್ವಜನಿಕ ಆರ್ಥಿಕತೆಯ ಮೇಲೆ ಬೆಳವಣಿಗೆಗಳ ಪ್ರಭಾವದ ಪ್ರಮಾಣ ಇನ್ನೂ ಅನಿಶ್ಚಿತವಾಗಿದೆ, ಆದರೆ ಖಂಡಿತವಾಗಿಯೂ ಬಹಳ ಮಹತ್ವದ್ದಾಗಿದೆ ಎಂದು ಸಲಹಾ ಮಂಡಳಿಯು ಅಭಿಪ್ರಾಯಪಟ್ಟಿದೆ. ಆರೋಗ್ಯ ಕ್ಷೇತ್ರದಲ್ಲಿ, ಬಡವರಿಗೆ ಮತ್ತು ಇತರ ಹಣಕಾಸು ಏಜೆಂಟರಿಗೆ ಆರ್ಥಿಕ ಬೆಂಬಲ ನೀಡುವ ಕಾರಣದಿಂದಾಗಿ ಸರ್ಕಾರಗಳು ಈಗಾಗಲೇ ಸಾಕಷ್ಟು ಖರ್ಚಿನ ಹೊರೆ ಹೊಂದಿವೆ. ಆರ್ಥಿಕ ಕುಂಠಿತ ಚಟುವಟಿಕೆಯಿಂದಾಗಿ ದೊಡ್ಡಪ್ರಮಾಣದಲ್ಲಿ ತೆರಿಗೆ ಮತ್ತು ಇತರ ಆದಾಯದ ಕೊರತೆಯಾಗಲಿದೆ ಎಂದು ಕೌನ್ಸಿಲ್ ಸದಸ್ಯರು ಅಭಿಪ್ರಾಯಪಟ್ಟರು. ಆದ್ದರಿಂದ, ಬಿಕ್ಕಟ್ಟಿಗೆ ಹಣಕಾಸಿನ ಸ್ಪಂದನೆ ಹೆಚ್ಚು ಸೂಕ್ಷ್ಮವಾಗಿರಬೇಕು. ಹಣಕಾಸಿನ ಸಹಾಯ ಪ್ರಕ್ರಿಯೆಯ ಗಾತ್ರವನ್ನು ಮಾತ್ರವಲ್ಲದೆ ವಿಧಿವಿಧಾನಗಳನ್ನು ಗಮನವಿಟ್ಟು ಎಚ್ಚರಿಕೆಯಿಂದ ನೋಡುವುದು ಸಂದರ್ಭದಲ್ಲಿ ಮುಖ್ಯವಾಗಿದೆ. ಆರ್ಥಿಕತೆಗೆ ಪೂರಕ ಸಾರ್ವಜನಿಕ ಖರ್ಚುಗಳಿಗೆ ಬೆಂಬಲ ನೀಡುವ ವಿಷಯದಲ್ಲಿ ಸಂಗ್ರಹಿಸುವ ವಿಭಿನ್ನ ಸಲಹೆಗಳ ಬಗ್ಗೆ ಕೌನ್ಸಿಲ್ ಸದಸ್ಯರು ಹಣಕಾಸು ಆಯೋಗಕ್ಕೆ ತಿಳಿಸಿದರು. ಕೆಳಗಿನ ಪರಿಗಣನೆಗೆ ಸೂಕ್ತ ಮಹತ್ತರ ಸೂಚನೆಗಳು, ಸಂದರ್ಭದಲ್ಲಿ ಬಹಳ ಮುಖ್ಯವಾಗುತ್ತವೆ ಎಂದು ಅವರು ಭಾವಿಸಿದರು.

() ಕೊವಿಡ್ ಪ್ರಾರಂಭವಾಗುವ ಮೊದಲೇ ಸಣ್ಣ ಪ್ರಮಾಣದ ಉದ್ಯಮಗಳು ಹಣದ ಸಮಸ್ಯೆಯಿಂದ ಬಳಲುತ್ತಿದ್ದವು. ಉದ್ಯಮಗಳಿಗೆ ವ್ಯವಹಾರಿಕ ಚಟುವಟಿಕೆಗಳು ಮತ್ತು ಹಣದ ಒಳಹರಿವುಗಳು ನೇರ ಪರಿಣಾಮ ಬೀರುವುದರಿಂದ, ಸಮಸ್ಯೆಯನ್ನು ಹೋಗಲಾಡಿಸಲು ಉದ್ಯಮಗಳಿಗೆ ಸಹಾಯ ಮಾಡುವ ವ್ಯವಸ್ಥೆಯನ್ನು ರೂಪಿಸುವುದು ಬಹಳ ಮುಖ್ಯ.

(ಬಿ) ಈಗಿನ ಮಂದಗತಿಯಿಂದ ಬ್ಯಾಂಕೇತರ ಹಣಕಾಸು ಕಂಪನಿಗಳು ಅಧಿಕ ಪ್ರಭಾವಿತವಾಗಿವೆ. ಹಣಕಾಸು ವಲಯದಲ್ಲಿ ಬೃಹತ್ ಗಾತ್ರದಲ್ಲಿ ದಿವಾಳಿತನಗಳು ಮತ್ತು ಉತ್ಪಾದಕ ರಹಿತ ಸಂಪತ್ತ(ಎನ್.ಪಿ..)ಗಳಾಗುವುದನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ವಿನ್ಯಾಸಗೊಳಿಸಬೇಕು. ಖಾತರಿಯ ಭಾಗಶಃ ಸಾಲದಂತಹ ಕ್ರಮಗಳು ಬಹುಶಃ ಸಹಾಯ ಮಾಡಬಹುದು. ಹಣಕಾಸು ಸಂಸ್ಥೆಗಳು ಉತ್ತಮ ಬಂಡವಾಳಹೊಂದಿವೆಯೇ ಎಂದು ದೃಢಪಡಿಸಿಕೊಳ್ಳುವಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

(ಸಿ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ವ್ಯವಸ್ಥೆಯನ್ನು ಬಹಳ ಗಮನವಿಟ್ಟು ಎಷ್ಷರಿಕೆಯಿಂದ ನೋಡಬೇಕಾಗಿದೆ. ಈಗಿನ ಸಂದರ್ಭದಲ್ಲಿ, ಲಭ್ಯ ಹಣ ಮತ್ತು ಹಣದ ಒಳಹರಿವುಗಳು ಸರ್ಕಾರಗಳು ಮಾಡುವ ಸಹಾಯ ವ್ಯವಸ್ಥೆಗಳು ಮತ್ತು ವಿಧಾನಗಳಿಗೆ ಸಮರ್ಪಕ ಹೊಂದಾಣಿಕೆಯಾಗುತ್ತವೆ. ನಾವು ಮುಂದೆ ಸಾಗುವಾಗ, ಹೆಚ್ಚುವರಿ ಕೊರತೆಯನ್ನು ನೀಗಿಸುವ ಆಯ್ಕೆಗಳ ಬಗ್ಗೆ ನಾವು ಆಗ ಯೋಚಿಸಬೇಕು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳು ಸಾಕಷ್ಟು ಹಣವನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಸಂದರ್ಭದಲ್ಲಿ ಬಹಳ ಮುಖ್ಯ.

(ಡಿ) ಸಾಂಕ್ರಾಮಿಕ ಪ್ರಭಾವದ ತೀವ್ರತೆಯಿಂದ ವಿವಿಧ ರಾಜ್ಯಗಳು ವಿವಿಧ ಹಂತಗಳಲ್ಲಿ ಸುಧಾರಿಸಿಕೊಂಡು ಹೊರಬರುವ ಸಾಧ್ಯತೆಯಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಆದ್ದರಿಂದ, ವಿವಿಧ ರಾಜ್ಯಗಳ ಪುನರುಜ್ಜೀವನ ಚಟುವಟಿಕೆಗಳ ಪರಿಶೀಲನೆಯನ್ನು ವಿಭಿನ್ನ ಹಂತಗಳಲ್ಲಿ ಮಾಡಲಾಗುವುದು.

ಸಲಹಾ ಮಂಡಳಿಯೊಂದಿಗೆ ಸೇರಿಕೊಂಡು ಹದಿನೈದನೇ ಹಣಕಾಸು ಆಯೋಗವು ಜಾಗತಿಕವಾಗಿ ಮತ್ತು ದೇಶೀಯವಾಗಿ ಎದುರಿಸುತ್ತಿರುವ ಎಲ್ಲಾ ಪರಿಸ್ಥಿತಿಗಳನ್ನು ಬಹಳ ಆಸಕ್ತಿಯಿಂದ ಸೂಕ್ಷ್ಮವಾಗಿ ಗಮನಿಸುತ್ತಿದೆ.

***



(Release ID: 1618088) Visitor Counter : 1200