ಗ್ರಾಮೀಣಾಭಿವೃದ್ಧಿ ಸಚಿವಾಲಯ
ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಚಿವರೊಂದಿಗೆ ವಿಡಿಯೋ ಸಂವಾದ ನಡೆಸಿದರು
Posted On:
24 APR 2020 8:15PM by PIB Bengaluru
ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಚಿವರೊಂದಿಗೆ ವಿಡಿಯೋ ಸಂವಾದ ನಡೆಸಿದರು
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ.ಜಿ.ಎನ್.ಆರ್.ಇ.ಜಿ.ಎಸ್), ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಗ್ರಾಮಿಣ್ (ಪಿ.ಎಂ.ಎ.ವೈ.-ಜಿ.), ಪ್ರಧಾನ್ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿ.ಎಂ.ಜಿ.ಎಸ್.ವೈ.) ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ.) ಯೋಜನೆಗಳಡಿಯ ಕೆಲಸ(ಕಾಮಗಾರಿ)ಗಳನ್ನು ಹೆಚ್ಚಿಸುವ ಕುರಿತು ಚರ್ಚಿಸಲಾಯಿತು
ಗ್ರಾಮೀಣ ಮೂಲಸೌಕರ್ಯಗಳನ್ನು ಬಲಪಡಿಸಲು, ಉದ್ಯೋಗವನ್ನು ಸೃಷ್ಟಿಸಲು, ಗ್ರಾಮೀಣ ಪ್ರದೇಶಗಳ ಮತ್ತು ಗ್ರಾಮೀಣ ಜೀವನೋಪಾಯ ಅವಕಾಶಗಳನ್ನು ವಿಸ್ತಾರಗೊಳಿಸಲು ಅನುಕೂಲವಾಗುವ ರೀತಿಯಲ್ಲಿ ಕೊವಿಡ್ – 19 ತಂದೊಡ್ಡಿರುವ ಸವಾಲಗಳನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು
ಕೇಂದ್ರ ಗೃಹ ಸಚಿವಾಲಯ ಏಪ್ರಿಲ್ 20 , 2020 ರಿಂದ ಕಂಟೈನ್‌ಮೆಂಟ್ ಪ್ರದೇಶಗಳಲ್ಲದ ಪ್ರದೇಶಗಳಲ್ಲಿ ನೀಡಿರುವ ವಿನಾಯಿತಿ ಆಧಾರದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ.ಜಿ.ಎನ್.ಆರ್.ಇ.ಜಿ.ಎಸ್), ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಗ್ರಾಮಿನ್ (ಪಿ.ಎಂ.ಎ.ವೈ.-ಜಿ.), ಪ್ರಧಾನ್ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿ.ಎಂ.ಜಿ.ಎಸ್.ವೈ.) ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ.) ಯೋಜನೆಗಳಡಿಯಲ್ಲಿ ಕೆಲಸ(ಕಾಮಗಾರಿ)ಗಳನ್ನು ಹೆಚ್ಚಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್ ಮತ್ತು ಕೃಷಿ ಹಾಗು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ರಾಜ್ಯಗಳ ಮತ್ತು ಒಕ್ಕೂಟದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಇಂದು ವಿಡಿಯೋ ಸಂವಾದ ನಡೆಸಿದರು.
ಕೊವಿಡ್ – 19 ಸಾಂಕ್ರಾಮಿಕ ರೋಗ ತುಂಬಾ ಗಂಭೀರವಾಗಿದೆ, ಹರಡುವಿಕೆಯಿಂದ ಕಠಿಣ ಸವಾಲು ಎದುರಾಗಿದೆ, ಆದರೂ ಈ ಸವಾಲನ್ನು ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಮತ್ತು ಬಲಪಡಿಸಲು ಒಂದು ಅವಕಾಶವೆಂದು ಭಾವಿಸಿ ಮೂಲಸೌಕರ್ಯ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಗ್ರಾಮೀಣ ಜೀವನೋಪಾಯದ ಅನುಕೂಲ ವಿಸ್ತಾರಗೊಳಿಸಲು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಬಳಸಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಹೇಳಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಈಗಾಗಲೇ ರೂ. 36,000 ಕೋಟಿ ಬಿಡುಗಡೆ ಮಾಡಿದೆ ಎಂಬ ಮಾಹಿತಿ ಸಚಿವರು ನೀಡಿದರು. ಹಿಂದಿನ ವರ್ಷಗಳ ಬಾಕಿಯಿರುವ ವೇತನ ಮತ್ತು ಸಾಮಗ್ರಿಗಳ ಹಣ ರೂ 20,225 ಕೋಟಿ ಸೇರಿದಂತೆ ಬಿಡುಗಡೆಗಾಗಿ ಎಂ.ಜಿ.ಎನ್.ಆರ್.ಇ.ಜಿ.ಎ ಅಡಿಯಲ್ಲಿ ರೂ.33,300 ಕೋಟಿ ಬಿಡುಗಡೆಗೆ ಸಚಿವಾಲಯವು ಅನುಮೋದನೆ ನೀಡಿದೆ. ಈ ಅನುಮೋದಿತ ಮೊತ್ತ ಜೂನ್ 2020 ರವರೆಗೆ ಎಂ.ಜಿ.ಎನ್.ಆರ್.ಇ.ಜಿ.ಎ ಅಡಿಯಲ್ಲಿ ಬರುವ ಎಲ್ಲಾ ವೆಚ್ಚಗಳನ್ನು ಪೂರೈಸಲು ಸಾಕಾಗುವುದು. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸಾಕಷ್ಟು ಆರ್ಥಿಕ ಸಂಪನ್ಮೂಲಗಳು ಲಭ್ಯವಿದೆ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವರು ಭರವಸೆ ನೀಡಿದರು.
ಕೊವಿಡ್ – 19 ಸಂಬಂಧಿತ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತಾ , ಗ್ರಾಮೀಣ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿ, ಮೂಲಸೌಕರ್ಯ ರಚನೆ ಮತ್ತು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವುದು ಮುಂತಾದ ಕಾರ್ಯಯೋಜನೆಗಳನ್ನು ಮಾಡಬೇಕೆಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಒತ್ತಾಯಿಸಿದರು.
ಜಲಶಕ್ತಿ ಸಚಿವಾಲಯ ಮತ್ತು ಭೂ ಸಂಪನ್ಮೂಲ ಇಲಾಖೆಗಳ ಯೋಜನೆಗಳ ಜೊತೆಗೆ ಸೇರಿಸಿಕೊಂಡು ಎಂ.ಜಿ.ಎನ್.ಆರ್.ಇ.ಜಿ.ಎಸ್. ಅಡಿಯಲ್ಲಿ ಜಲ ಸಂರಕ್ಷಣೆ, ನೀರಿನ ಪುನರ್ಭರ್ತಿ ಮತ್ತು ನೀರಾವರಿ ಕೆಲಸಗಳು ಮುಂತಾದವುಗಳತ್ತ ಗಮನ ಹರಿಸಬೇಕು ಎಂದು ಸಚಿವರು ಹೇಳಿದರು
ಪಿ.ಎಂ.ಎ.ವೈ (ಜಿ) ಯೋಜನೆಯಡಿಯಲ್ಲಿ, 48 ಲಕ್ಷ ವಸತಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುತ್ತದೆ ಹಾಗೂ 3 ಮತ್ತು 4 ನೇ ಕಂತುಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ. ಪಿ.ಎಮ್.ಜಿ.ಎಸ್.ವೈ. ಯೋಜನೆಯಡಿಯಲ್ಲಿ ಮಂಜೂರಾದ ರಸ್ತೆಯಲ್ಲಿ ಟೆಂಡರ್‌ಗಳನ್ನು ತ್ವರಿತವಾಗಿ ನಿರ್ಮಾಣ ಮಾಡಲು ಮತ್ತು ಬಾಕಿ ಇರುವ ರಸ್ತೆ ಯೋಜನೆಗಳನ್ನು ಕೂಡಲೇ ಪ್ರಾರಂಭಿಸಲು ಗಮನ ಹರಿಸಬೇಕು. ಗುತ್ತಿಗೆದಾರರು, ಪೂರೈಕೆದಾರರು, ಕಾರ್ಮಿಕರನ್ನು ಕೆಲಸಗಳನ್ನು ತ್ವರಿತವಾಗಿ ಪ್ರಾರಂಭಿಸಲು ಪಳಗಿಸಬೇಕು.
ಎನ್.ಆರ್.ಎಲ್.ಎಂ ಯೋಜನೆಯಡಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳು ದೊಡ್ಡ ಪ್ರಮಾಣದಲ್ಲಿ ರಕ್ಷಣಾತ್ಮಕ ಮುಖ ಕವಚಗಳು, ಸ್ಯಾನಿಟೈಜರ್‌ಗಳು, ಸಾಬೂನುಗಳನ್ನು ಉತ್ಪಾದಿಸುವ ಮತ್ತು ಸಮುದಾಯ ಅಡಿಗೆಮನೆಗಳನ್ನು ನಡೆಸುವ ಕಾರ್ಯಮಾಡುತ್ತಿರುವುದು ಬಹಳ ಶ್ಲಾಘನೀಯ ವಿಷಯ ಎಂದು ಅವರು ಹೇಳಿದರು
ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವರ ಸಲಹೆಗಳನ್ನು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸಂಪೂರ್ಣವಾಗಿ ಒಪ್ಪಿಕೊಂಡಿವೆ. ಎಂ.ಜಿ.ಎನ್.ಆರ್.ಇ.ಜಿ.ಎಸ್. ಅಡಿಯಲ್ಲಿ ಬಾಕಿ ಇರುವ ವೇತನದ ಮತ್ತು ಸಲಕರಣೆಗಳ 100 ಪ್ರತಿಶತ ಮೊತ್ತವನ್ನು ಬಿಡುಗಡೆ ಮಾಡಿದ್ದಕ್ಕಾಗಿ ವಿಶೇಷವಾಗಿ ಮಹಾರಾಷ್ಟ್ರ, ಜಾರ್ಖಂಡ್, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸೂಚಿಸಿದವು.
ಕೇಂದ್ರ ಗೃಹ ಸಚಿವಾಲಯ, ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು ಹೊರಡಿಸಿದ ಮಾರ್ಗಸೂಚಿಗಳಂತೆ ಕೇಂದ್ರ ಸರ್ಕಾರದ ಸಕ್ರಿಯ ಬೆಂಬಲದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಈ ಸಂದರ್ಭದಲ್ಲಿ ಭರವಸೆ ನೀಡಿವೆ.
***
(Release ID: 1618048)
Visitor Counter : 557