ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕೋವಿಡ್-19 ಎದುರಿಸುವಲ್ಲಿ ಜಮ್ಮು ಮತ್ತು ಕಾಶ್ಮೀರದ ಸಿದ್ಧತೆಯನ್ನು ಪರಿಶೀಲಿಸಿದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್

Posted On: 24 APR 2020 12:51PM by PIB Bengaluru

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕೋವಿಡ್-19 ಎದುರಿಸುವಲ್ಲಿ ಜಮ್ಮು ಮತ್ತು ಕಾಶ್ಮೀರದ ಸಿದ್ಧತೆಯನ್ನು ಪರಿಶೀಲಿಸಿದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್

 

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ (ಸ್ವತಂತ್ರ ನಿರ್ವಹಣೆ) ಮತ್ತು ಪ್ರಧಾನ ಮಂತ್ರಿಗಳ ಕಚೇರಿಯ ರಾಜ್ಯ ಸಚಿವರಾದ ಡಾ.ಜಿತೇಂದ್ರ ಸಿಂಗ್ ಅವರು ಇಂದು ಕೋವಿಡ್ -19 ವೈರಸ್ ವಿರುದ್ಧ ಹೋರಾಡುವಲ್ಲಿ ಜಮ್ಮು ಮತ್ತು ಕಾಶ್ಮೀರದ ಸಿದ್ಧತೆಯನ್ನು ಪರಿಶೀಲಿಸಿದರು. ಹಿರಿಯ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು, ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಮತ್ತು ಕಾಲೇಜುಗಳ ಮುಖ್ಯಸ್ಥರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಮರ್ಶೆ ಮಾಡಲಾಯಿತು.

ಕೇಂದ್ರಾಡಳಿತ ಪ್ರದೇಶದ ವೈದ್ಯಕೀಯ ಭಾಂದವರನ್ನು ಸಚಿವಾಲಯವು ಅಭಿನಂದಿಸಿತು, ವಿಶೇಷವಾಗಿ ಕೊರೊನಾವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ರೋಗಿಗಳೊಂದಿಗೆ ನೇರವಾಗಿ ವ್ಯವಹರಿಸುತ್ತಿರುವ ಕಿರಿಯ ನಿವಾಸಿ ವೈದ್ಯರು ಮತ್ತು ವೈದ್ಯಕೀಯ ಅಧಿಕಾರಿಗಳನ್ನು. ಕೋವಿಡ್ 19 ಅನ್ನು ಎದುರಿಸಲು ಭಾರತವು ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಜಮ್ಮು ಮತ್ತು ಕಾಶ್ಮೀರವು ಕೇರಳ ರಾಜ್ಯದಂತೆ ಉತ್ತಮವಾಗಿದೆ ಎಂದು ಅವರು ಹೇಳಿದರು. ಡಾ. ಜಿತೇಂದ್ರ ಸಿಂಗ್ ಅವರು ಕೋವಿಡ್ ಅನ್ನು ಎದುರಿಸಲು ಆರೋಗ್ಯ ಸೇತು ಆ್ಯಪ್ನ ಬಳಕೆಯನ್ನು ಒತ್ತಿಹೇಳಿದರು. ಡಾ. ಜಿತೇಂದ್ರ ಸಿಂಗ್ ಅವರು ವೈದ್ಯಕೀಯ ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ ಸರ್ಕಾರವು ಬಹಳ ಕಾಳಜಿ ವಹಿಸುತ್ತಿದೆ ಮತ್ತು ಕಾರಣಕ್ಕಾಗಿಯೇ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಾಗಿದೆ. ಪ್ರಮಾಣೀಕೃತ ಪಿಪಿಇ ಕಿಟ್ಗಳು ಮತ್ತು ಇತರ ಸಲಕರಣೆಗಳ ಲಭ್ಯತೆಯನ್ನು ಹೆಚ್ಚಿಸಲು ಕೇಂದ್ರಾಡಳಿತ ಪ್ರದೇಶಗಳ ಕೋರಿಕೆಯ ಮೇರೆಗೆ, ನಿಯಮಿತವಾಗಿ ಪಿಪಿಇ ಪೂರೈಕೆ ಮತ್ತು ಕೊರೊನಾ ವೈರಸ್ಗೆ ಪರೀಕ್ಷಾ ಕಿಟ್ಗಳನ್ನು ಪಡೆಯಲಿದೆ ಎಂದು ಸಚಿವರು ಹೇಳಿದರು.

ಕೇಂದ್ರಾಡಳಿ ಪ್ರದೇಶದ ಸನ್ನದ್ಧತೆಯ ಕುರಿತು ಪ್ರಸ್ತುತಿ ನೀಡಿ, ಹಣಕಾಸು ಆಯುಕ್ತ ಆರೋಗ್ಯ ವಿಭಾಗದ ಶ್ರೀ ಅಟಲ್ ಡುಲ್ಲೂ ಅವರು ಇಲ್ಲಿಯವರೆಗೆ ಇಲ್ಲಿ ಒಟ್ಟು 434 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು. ಪೈಕಿ 57 ಜನ ಜಮ್ಮು ಮತ್ತು 377 ಕಾಶ್ಮೀರದವರು. ಪ್ರತಿ ದಶಲಕ್ಷ ಜನರಿಗೆ ಸೋಂಕು ಪ್ರಕರಣದ ಪರೀಕ್ಷೆಯಲ್ಲಿ ಜೆ & ಕೆ ಇಡೀ ದೇಶದಲ್ಲಿ ದೆಹಲಿಯ ನಂತರ ಎರಡನೇ ಸ್ಥಾನದಲ್ಲಿದೆ ಎಂದು ಮಾನ್ಯ ಸಚಿವರಿಗೆ ತಿಳಿಸಲಾಯಿತು. ಜೆ & ಕೆ ಪ್ರತಿ ದಶಲಕ್ಷ ಜನರಿಗೆ 818 ಜನರನ್ನು ಪರೀಕ್ಷಿಸುತ್ತಿದೆ. ಕಾಶ್ಮೀರದಲ್ಲಿ ಸುಮಾರು 80 ಮತ್ತು ಜಮ್ಮುವಿನಲ್ಲಿ 15 ವಲಯಗಳನ್ನು ನಿಯಂತ್ರಣ ವಲಯಗಳಾಗಿ ಘೋಷಿಸಲಾಗಿದೆ. ಎಲ್ಲಾ ವರ್ಗದ ಪ್ರಕರಣಗಳನ್ನು ಎದುರಿಸಲು ಇಲ್ಲಿ ಮೀಸಲಾದ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಡುಲ್ಲೂ ಹೇಳಿದರು. ಆಸ್ಪತ್ರೆಗಳಲ್ಲಿ 126 ನಿವೃತ್ತ ವೈದ್ಯರನ್ನು ಮರುನೇಮಕ ಮಾಡುಲಾಗುತ್ತಿದೆ , ಸೋಂಕುನಿವಾರಕ ಸುರಂಗಗಳನ್ನು ಮತ್ತು ಮಾದರಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಗಡಿಗಳಲ್ಲಿನ ಸಿಬ್ಬಂದಿಗೆ ಮುಖಗವಸುಗಳು ಮತ್ತು ಸುರಕ್ಷತಾ ಕಿಟ್ಗಳನ್ನು ಒದಗಿಸಲಾಗಿದೆ.

ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ ಎಂದು ಮಾನ್ಯ ಸಚಿವರಿಗೆ ತಿಳಿಸಲಾಯಿತು ಮತ್ತು ಜನರು ಸಹಕರಿಸಿ ಮನೆಗಳಿಂದಲೇ ಪ್ರಾರ್ಥನೆ ಮಾಡುವಂತೆ ವೀಡಿಯೊಗಳನ್ನು ಸಹ ಪ್ರಸಾರ ಮಾಡಲಾಗುತ್ತಿದೆ. ಆಯುಷ್ ಎಲ್ಲಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಎಲ್ಲಾ ಮುಂಚೂಣಿ ಸಿಬ್ಬಂದಿ ಮತ್ತು ಜನರಿಗೆ ವಿತರಿಸಲಾಗುತ್ತಿದೆ.

***



(Release ID: 1618010) Visitor Counter : 178