ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ–1897 ತಿದ್ದುಪಡಿಗೆ ಸುಗ್ರೀವಾಜ್ಞೆ ಜಾರಿ

Posted On: 22 APR 2020 10:14PM by PIB Bengaluru

ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ–1897 ತಿದ್ದುಪಡಿಗೆ ಸುಗ್ರೀವಾಜ್ಞೆ ಜಾರಿ

 

ಪ್ರಸ್ತುತ ಕೋವಿಡ್‌–19 ಸಂದರ್ಭದಲ್ಲಿ, ಅತಿ ಅಗತ್ಯದ ಆರೋಗ್ಯ ರಕ್ಷಣೆಯ ಸೇವೆ ಒದಗಿಸುವವರನ್ನು ಗುರಿಯಾಗಿರಿಸಿಕೊಂಡು ದುಷ್ಕರ್ಮಿಗಳು ಹಲ್ಲೆ ನಡೆಸಿದರು. ಮೂಲಕ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ವೈದ್ಯಕೀಯ ಸಮುದಾಯದ ಸದಸ್ಯರು ನಿರಂತರವಾಗಿ 24 ಗಂಟೆಯೂ ನಿಷ್ಠೆಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಾ ನಾಗರಿಕರನ್ನು ರಕ್ಷಿಸುವ ಕೈಂಕರ್ಯದಲ್ಲಿ ತೊಡಗಿದ್ದಾರೆ. ಆದರೆ, ದುರದೃಷ್ಟವಶಾತ್ಆರೋಗ್ಯ ರಕ್ಷಕರ ಮೇಲೆಯೇ ಹಲ್ಲೆಗಳು ನಡೆಯುತ್ತಿವೆ. ಕೆಲವರು ತಪ್ಪು ತಿಳಿವಳಿಕೆಯಿಂದ ವೈರಸ್ ಅನ್ನು ಇವರೇ ಹಬ್ಬಿಸುತ್ತಿದ್ದಾರೆ ಎನ್ನುವ ವದಂತಿ ಹಬ್ಬಿಸಿದ್ದಾರೆ. ಇದರಿಂದಾಗಿ ವೈದ್ಯರಿಗೆ ಕಿರುಕುಳ ನೀಡಿ ಹಲ್ಲೆ ಮಾಡಿರುವ ಪ್ರಕರಣಗಳು ವರದಿಯಾಗಿವೆ. ಇಂತಹ ಕೃತ್ಯಗಳಿಂದಾಗಿ ವೈದ್ಯಕೀಯ ಸಮುದಾಯ ಧೈರ್ಯ ಮತ್ತು ನಿರ್ಭಿತಿಯಿಂದ ತಮ್ಮ ದೈನಂದಿನ ಕೆಲಸಗಳನ್ನು ಮಾಡುವುದು ಕಷ್ಟಕರವಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯರ ಸೇವೆ ಅತ್ಯಂತ ಅಗತ್ಯವಿರುವಾಗಲೇ ಇಂತಹ ಪ್ರಕರಣಗಳು ನಡೆಯುತ್ತಿವೆ. ಮೂಲಕ ವೈದ್ಯರ ನೈತಿಕತೆಯನ್ನು ಕುಗ್ಗಿಸುವುದಾಗಿದೆ. ಆರೋಗ್ಯ ರಕ್ಷಣೆ ಸೇವೆಯ ಸಿಬ್ಬಂದಿ ಯಾವುದೇ ರೀತಿಯ ತಾರತಮ್ಯವಿಲ್ಲದೆಯೇ ಸೇವೆ ಮಾಡಲು ಬದ್ಧರಾಗಿದ್ದಾರೆ. ಸಿಬ್ಬಂದಿ ತಮ್ಮ ಕರ್ತವ್ಯವನ್ನು ಆತ್ಮವಿಶ್ವಾಸದಿಂದ ನಿರ್ವಹಿಸಲು ನಾಗರಿಕ ಸಮಾಜದ ಬೆಂಬಲ ಮತ್ತು ಸಹಕಾರ ನೀಡುವುದು ಮೂಲಭೂತ ಅಗತ್ಯವಿದೆ.

ಹಿಂದೆ ವೈದ್ಯರಿಗೆ ಮತ್ತು ಇತರ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಹಲವು ರಾಜ್ಯಗಳು ವಿಶೇಷ ಕಾನೂನುಗಳನ್ನು ಜಾರಿಗೊಳಿಸಿವೆ. ಆದರೆ, ಕೋವಿಡ್‌–19 ವಿಭಿನ್ನ ಪರಿಸ್ಥಿತಿಯನ್ನು ಸೃಷ್ಟಿಸಿತು. ವೈರಸ್ಸೋಂಕು ಹಬ್ಬದಂತೆ ಕೈಗೊಂಡಿರುವ ಕಾರ್ಯಗಳಲ್ಲಿ ಪಾಲ್ಗೊಂಡಿರುವ ಆರೋಗ್ಯ ಕಾರ್ಯಕರ್ತರ ಮತ್ತು ಇತರರಿಗೆ ವಿವಿಧ ಸ್ಥಳಗಳಲ್ಲಿ ಕಿರುಕುಳ ನೀಡುತ್ತಿರುವ ಪ್ರಕರಣಗಳು ವರದಿಯಾಗಿವೆ. ಸ್ಮಶಾನದಲ್ಲಿಯೂ ಸಹ ಇಂತಹ ಘಟನೆಗಳು ನಡೆದಿವೆ. ಈಗಿರುವ ಕಾನೂನುಗಳಲ್ಲಿ ವ್ಯಾಪಕದ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅವಕಾಶಗಳಿಲ್ಲ. ಮನೆ ಮತ್ತು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ನಡೆಯುವ ಕಿರುಕುಳ ಮತ್ತು ಹಲ್ಲೆಗಳನ್ನು ಇವುಗಳು ಒಳಗೊಂಡಿರಲಿಲ್ಲ. ದೈಹಿಕ ಹಲ್ಲೆಯನ್ನು ಮಾತ್ರ ಒಳಗೊಂಡಿತ್ತು. ದುಷ್ಕೃತ್ಯಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಅವಕಾಶ ಇರಲಿಲ್ಲ.

ಹೀಗಾಗಿಯೇ, ಸಾಂಕ್ರಾಮಿಕ ಹಬ್ಬಿದ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ಹಾಗೂ ಆಸ್ತಿ ರಕ್ಷಣೆಗೆ ಸಂಬಂಧಿಸಿದಂತೆ 2020 ಏಪ್ರಿಲ್‌ 22ರಂದು ನಡೆದ ಕೇಂದ್ರ ಸಚಿವ ಸಂಪುಟವು ಸಾಂಕ್ರಾಮಿಕ ರೋಗಗಳ ಕಾಯ್ದೆ–1897ಕ್ಕೆ ತಿದ್ದುಪಡಿ ಮಾಡಿ ಹೊಸ ಸುಗ್ರೀವಾಜ್ಞೆ ಹೊರಡಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿತು. ತಿದ್ದುಪಡಿಯಲ್ಲಿ ಅವರು ವಾಸಿಸುವ ಸ್ಥಳವೂ ಸೇರಿಕೊಂಡಿದೆ. ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅವರು ಅಂಕಿತ ಹಾಕಿದ್ದಾರೆ. ಸುಗ್ರೀವಾಜ್ಞೆಯ ಅನ್ವಯ ಹಿಂಸಾಚಾರವು ಜಾಮೀನುರಹಿತ ಅಪರಾಧವಾಗಿದೆ ಮತ್ತು ಗಾಯಗೊಂಡ ಆರೋಗ್ಯ ರಕ್ಷಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪರಿಹಾರ ಒದಗಿಸುತ್ತದೆ. ಆಸ್ತಿಗೆ ಹಾನಿ ಮಾಡಿರುವುದಕ್ಕೂ ಪರಿಹಾರ ದೊರೆಯಲಿದೆ.

ಪ್ರಸ್ತುತ ಜಾರಿಯದ ಸುಗ್ರೀವಾಜ್ಞೆಯ ಅನ್ವಯ ಯಾವುದೇ ಸಂದರ್ಭದಲ್ಲಿ ಆರೋಗ್ಯ ರಕ್ಷಣೆಯ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಆಸ್ತಿಗೆ ಹಾನಿ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಾರ್ವಜನಿಕರು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಂಪೂರ್ಣ ಸಹಕಾರ ನೀಡಬೇಕು. ಕಳೆದ ತಿಂಗಳು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಸಾರ್ವಜನಿಕರು ಸಂಘಟಿತರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೂ, ಕೆಲವು ಅಹಿತಕರ ಘಟನೆಗಳು ವೈದ್ಯಕೀಯ ಸಮುದಾಯದ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿವೆ. ಹೀಗಾಗಿಯೇ ಹಲ್ಲೆ ಮತ್ತು ಹಿಂಸಾಚಾರ ತಡೆಯಲು ಪ್ರತ್ಯೇಕ ಮತ್ತು ಕಠಿಣ ಕ್ರಮಗಳನ್ನು ಒಳಗೊಂಡಿರುವ ಕಾನೂನು ಅಗತ್ಯ ಎನ್ನುವುದನ್ನು ಪರಿಗಣಿಸಲಾಯಿತು.

ಸುಗ್ರೀವಾಜ್ಞೆಯಲ್ಲಿ ವಾಖ್ಯಾನಿಸಿದಂತೆ ಹಿಂಸಾಚಾರವು ಕಿರುಕುಳ ಮತ್ತು ದೈಹಿಕ ಗಾಯ ಮತ್ತು ಆಸ್ತಿಗೆ ಹಾನಿ ಮಾಡುವುದನ್ನು ಒಳಗೊಂಡಿದೆ. ಆರೋಗ್ಯ ರಕ್ಷಣೆಯ ಸಿಬ್ಬಂದಿ ಅಂದರೆ ಸಾರ್ವಜನಿಕ ಮತ್ತು ಕ್ಲಿನಿಕಲ್ಆರೋಗ್ಯ ರಕ್ಷಣೆಯ ಸೇವೆ ಒದಗಿಸುವವರಾಗಿದ್ದಾರೆ. ಇವರಲ್ಲಿ ವೈದ್ಯರು, ನರ್ಸ್ಗಳು, ಪ್ಯಾರಾಮೆಡಿಕಲ್ವರ್ಕರ್ಸ್ಗಳು ಮತ್ತು ಸಮುದಾಯದ ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ. ಜತೆಗೆ, ಕಾಯ್ದೆ ಅಡಿಯಲ್ಲಿ ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಿಸಲು ನಿಯೋಜಿಸಲಾಗಿರುವ ವ್ಯಕ್ತಿಗಳು ಮತ್ತು ಸರ್ಕಾರದ ಗೆಜೆಟ್ನಲ್ಲಿ ಅಧಿಸೂಚಿಸಲಾದ ರಾಜ್ಯ ಸರ್ಕಾರದ ವ್ಯಕ್ತಿಗಳು ಸಹ ಒಳಗೊಂಡಿದ್ದಾರೆ.

ಆಸ್ತಿಗೆ ಹಾನಿ ಮಾಡಿರುವುದನ್ನು ಪರಿಗಣಿಸಿ ದಂಡ ವಿಧಿಸಲು ಅವಕಾಶವಿದೆ. ರೋಗಿಗಳ ಕ್ವಾರಂಟೈನ್ಮತ್ತು ಐಸೋಲೇಷನ್ಸ್ಥಳಗಳಲ್ಲಿನ ಸೌಲಭ್ಯಗಳು, ಮೊಬೈಲ್ವೈದ್ಯಕೀಯ ಘಟಕಗಳು ಮತ್ತು ಯಾವುದೇ ಆಸ್ತಿಗಳು ಸೇರಿದ್ದು, ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಆರೋಗ್ಯ ರಕ್ಷಣೆಯ ಸಿಬ್ಬಂದಿಗೆ ನೇರ ಹಿತಾಸಕ್ತಿ ಇರುತ್ತದೆ.

ಸುಗ್ರೀವಾಜ್ಞೆ ಅನ್ವಯ ಹಿಂಸಾಚಾರವು ಅಪರಾಧವಾಗಿದ್ದು, ಜಾಮೀನು ರಹಿತ ಅಪರಾಧವಾಗಿದೆ. ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದು ಮತ್ತು ಹಿಂಸಾಚಾರ ನಡೆಸಿದರೆ 3 ತಿಂಗಳಿನಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ. 50,000ರಿಂದ ರೂ. 2,00,000 ದವರೆಗೆ ದಂಡ ವಿಧಿಸಲಾಗುತ್ತದೆ. ಅಪಾರ ಹಾನಿಯಾಗಿದ್ದರೆ ಜೈಲು ಶಿಕ್ಷೆಯು 6 ತಿಂಗಳಿನಿಂಧ ಏಳು ವರ್ಷಗಳವರೆಗೆ ವಿಧಿಸಬಹುದಾಗಿದ್ದು, ರೂ. 1,00,000ರಿಂದ ರೂ. 5,00,000 ದಂಡ ವಿಧಿಸಬಹುದಾಗಿದೆ. ಹೆಚ್ಚುವರಿಯಾಗಿ ಅಪರಾಧಿಯು ಸಂತ್ರಸ್ತರಿಗೆ ಪರಿಹಾರ ನೀಡಬೇಕಾಗುತ್ತದೆ ಮತ್ತು ಆಸ್ತಿಗೆ ಹಾನಿ ಮಾಡಿರುವುದಕ್ಕೆ ಮಾರುಕಟ್ಟೆ ಮೌಲ್ಯಕ್ಕಿಂತಲೂ ಎರಡು ಪಟ್ಟು ಪರಿಹಾರವನ್ನು ಅಪರಾಧಿಯು ನೀಡಬೇಕಾಗುತ್ತದೆ.

 

ಅಪರಾಧಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ಹುದ್ದೆಯ ಅಧಿಕಾರಿ ತನಿಖೆ ನಡೆಸಿ 30 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ವಿಚಾರಣೆಯು ಒಂದು ವರ್ಷದ ಒಳಗೆ ಮುಗಿಯಬೇಕು. ಅನಿವಾರ್ಯ ಕಾರಣಗಳಿಂದ ನ್ಯಾಯಾಲಯು ಲಿಖಿತವಾಗಿ ಆದೇಶ ನೀಡಿದರೆ ಮಾತ್ರ ವಿಚಾರಣೆಗೆ ಹೆಚ್ಚಿನ ಸಮಯಾವಕಾಶ ದೊರೆಯಲಿದೆ.

ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕ್ರಮಗಳನ್ನು ಕೈಗೊಂಡು ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬೇಕು. ಜತೆಗೆ, ಹೆಚ್ಚುವರಿಯಾಗಿ, ದೇಶಕ್ಕೆ ಆಗಮಿಸುವ ಮತ್ತು ಇಲ್ಲಿಂದ ತೆರಳುವ ಹಡಗುಗಳ ಬಗ್ಗೆ ಗಮನಹರಿಸಬೇಕು. ರಸ್ತೆ, ರೈಲ್ವೆ, ಸಮುದ್ರ ಮತ್ತು ಹಡಗುಗಳ ಬಗ್ಗೆ ನಿಗಾವಹಿಸಲು ಸೂಚಿಸಲಾಗಿದೆ.

ಆರೋಗ್ಯ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವವರು ಮುಂಚೂಣಿಯಲ್ಲಿರುವ ಯೋಧರಾಗಿ ಕೋವಿಡ್‌–19 ಹಬ್ಬದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದಾರೆ. ಅವರು ತಮ್ಮ ಜೀವವನ್ನು ಅಪಾಯದಲ್ಲಿ ಸಿಲುಕಿಸಿ ಇತರರ ಸುರಕ್ಷತೆಯ ಬಗ್ಗೆ ಗಮನಹರಿಸುತ್ತಿದ್ದಾರೆ. ಆರೋಗ್ಯ ರಕ್ಷಕರು ಅತಿ ಉನ್ನತ ಮಟ್ಟದ ಗೌರವ ಮತ್ತು ಪ್ರೋತ್ಸಾಹವನ್ನು ನೀಡಬೇಕಾಗಿದೆಯೇ ಹೊರತು ಅವರ ಮೇಲೆ ಹಲ್ಲೆ ಮಾಡಬಾರದು. ಸುಗ್ರೀವಾಜ್ಞೆಯಿಂದ ವೈದ್ಯ ಸಮುದಾಯಕ್ಕೆ ಆತ್ಮ ವಿಶ್ವಾಸ ಮೂಡಲಿದೆ ಎನ್ನುವ ಭರವಸೆ ಇದೆ. ಮೂಲಕ ವೈದ್ಯರು ತಮ್ಮ ಪವಿತ್ರವಾದ ತಮ್ಮ ವೃತ್ತಿಯನ್ನು ಕೈಗೊಂಡು ಸಮರ್ಪಣಾ ಮನೋಭಾವದಿಂದ ಸೇವೆಯನ್ನು ಮುಂದುವರಿಸುತ್ತಾರೆ. ಕೋವಿಡ್‌–19ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು ಕ್ಲಿಷ್ಟಕರ ಸಂದರ್ಭದಗಳಲ್ಲಿ ವೈದ್ಯ ಸಮುದಾಯ ಸೇವೆ ಸಾರ್ವಜನಿಕರಿಗೆ ಎಂದಿನಂತೆ ದೊರೆಯುವ ವಿಶ್ವಾಸವಿದೆ.

***



(Release ID: 1617797) Visitor Counter : 3388