ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಆಹಾರ ಧಾನ್ಯದ ರೇಕ್‌ಗಳನ್ನು ಲೋಡ್ ಮಾಡುವಲ್ಲಿ ಎಫ್‌ಸಿಐ ಹೊಸ ಮಾನದಂಡ

Posted On: 23 APR 2020 6:39PM by PIB Bengaluru

ಆಹಾರ ಧಾನ್ಯದ ರೇಕ್ಗಳನ್ನು ಲೋಡ್ ಮಾಡುವಲ್ಲಿ ಎಫ್ಸಿಐ ಹೊಸ ಮಾನದಂಡ

ಏಪ್ರಿಲ್ 15 ನಂತರ ಗೋಧಿ ಸಂಗ್ರಹಣೆ ವೇಗ ಪಡೆದುಕೊಂಡಿತು

ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಿದ ನಂತರವೂ ಎಫ್ಸಿಐ ತನ್ನ ಧಾನ್ಯಗಳ ಗೋದಾಮುಗಳನ್ನು ತ್ವರಿತವಾಗಿ ತುಂಬಿಸಲು ಆಶಿಸುತ್ತಿದೆ

 

ಸುಮಾರು 2.8 ಲಕ್ಷ ಮೆಟ್ರಿಕ್ ಟನ್ (2.8 ಎಲ್ಎಂಟಿ) ಆಹಾರ ಧಾನ್ಯಗಳನ್ನು ಹೊತ್ತ 102 ರೈಲು ಲೋಡ್ಗಳ ಸಾಗಾಣಿಕೆಯ ಮೂಲಕ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್ಸಿಐ) 22.04.20 ರಂದು ಹೊಸ ಮಾನದಂಡವನ್ನು ನಿಗದಿಪಡಿಸಿತು. ಗರಿಷ್ಠ ಸಾಗಾಣಿಕೆಯು ಪಂಜಾಬ್ನಿಂದ ಬಂದಿದ್ದು, ಅದು 46 ರೈಲು ಲೋಡ್ಗಳನ್ನು ಲೋಡ್ ಮಾಡಿದೆ, ನಂತರದ ಸ್ಥಾನ 18 ರೊಂದಿಗೆ ತೆಲಂಗಾಣದ್ದು. ಗೋಧಿ ಮತ್ತು ಕಚ್ಚಾ ಅಕ್ಕಿಯನ್ನು ಪಂಜಾಬ್ ಮತ್ತು ಹರಿಯಾಣದಿಂದ ದೇಶದ ವಿವಿಧ ಭಾಗಗಳಿಗೆ ಸಾಗಿಸಲಾಯಿತು, ಕುಸುಲಕ್ಕಿಯನ್ನು ತೆಲಂಗಾಣದಿಂದ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಸಾಗಿಸಲಾಯಿತು. ಸಾಗಾಣಿಕೆಯೊಂದಿಗೆ, ಲಾಕ್ಡೌನ್ ಅವಧಿಯಲ್ಲಿ ದೈನಂದಿನ ಸರಾಸರಿ 1.65 ಲಕ್ಷ ಮೆ.ಟನ್ ನಂತೆ ಎಫ್ಸಿಐ ಸಾಗಿಸಿದ ಒಟ್ಟು ಆಹಾರ ಧಾನ್ಯಗಳ ದಾಸ್ತಾನು 5 ಎಂಎಂಟಿ ದಾಟಿದೆ, ಇದೇ ಅವಧಿಯಲ್ಲಿ ದೇಶಾದ್ಯಂತದ ಲಾಕ್ಡೌನ್ ಮತ್ತು ಕಂಟೈನ್ಮೆಂಟ್ ವಲಯಗಳ ಘೋಷಣೆಯಿಂದಾಗಿ ಎಲ್ಲಾ ಸವಾಲುಗಳ ನಡುವೆಯೂ ಎಫ್ಸಿಐ 4.6 ಎಂಎಂಟಿ ದಾಸ್ತಾನುಗಳನ್ನು ಇಳಿಸಿ 9.8 ಎಂಎಂಟಿಯನ್ನು ರಾಜ್ಯ ಸರ್ಕಾರಗಳಿಗೆ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಆನ್ ಯೋಜನೆ (ಪಿಎಂಜಿಕೆಎ) ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ವಿತರಿಸಿತು, ಪಿಎಂಜಿಕೆಎ ಅಡಿಯಲ್ಲಿ, ಎಫ್ಸಿಐ ಈಗಾಗಲೇ ಸುಮಾರು 80 ಕೋಟಿ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿಯಂತೆ ಉಚಿತವಾಗಿ ವಿತರಿಸಲು 4.23 ಎಂಎಂಟಿ ಆಹಾರ ಧಾನ್ಯಗಳನ್ನು ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಿದೆ. ಅಗತ್ಯವಿರುವ ರಾಜ್ಯಗಳಿಗೆ ಸಕಾಲದಲ್ಲಿ ತಲುಪಿಸಿ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ (ಪಿಡಿಎಸ್) ನಿಯಮಿತ ಸರಬರಾಜುಗಳನ್ನು ಖಾತರಿಪಡಿಸುವತ್ತ ಗಮನ ಹರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವಂತೆಯೇ, ಗೋಧಿ ಸಂಗ್ರಹವು 15.04.20 ನಂತರ ವೇಗವನ್ನು ಪಡೆದುಕೊಂಡಿದೆ, ಎಲ್ಲಾ ಪ್ರಮುಖ ಉತ್ಪಾದನಾ ರಾಜ್ಯಗಳು ಖರೀದಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತವೆ. 22.04.20 ರವರೆಗೆ, ಕೇಂದ್ರೀಯ ಉಗ್ರಾಣಕ್ಕಾಗಿ 3.38 ಎಂಎಂಟಿ ಗೋಧಿಯನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ ಪಂಜಾಬ್ ರಾಜ್ಯವೇ 2.15 ಎಂಎಂಟಿ ನೀಡಿದೆ. ಋತುವಿನಲ್ಲಿ ಗೋಧಿ ಸಂಗ್ರಹಿಸಲು ನಿಗದಿಪಡಿಸಿದ ಗುರಿ 40 ಎಂಎಂಟಿ ಆಗಿದೆ. ಕೇಂದ್ರೀಯ ಉಗ್ರಾಣಕ್ಕೆ ಅಂತಹ ದೃಢವಾದ ಒಳಹರಿವಿನೊಂದಿಗೆ, ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ಅಗತ್ಯಗಳನ್ನು ಪೂರೈಸಲು ಆಹಾರ ಧಾನ್ಯಗಳ ಎಲ್ಲಾ ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಿದ ನಂತರವೂ, ಎಫ್ಸಿಐ ತನ್ನ ಧಾನ್ಯಗಳನ್ನು ತಾಜಾ ದಾಸ್ತಾನುಗಳೊಂದಿಗೆ ತ್ವರಿತವಾಗಿ ತುಂಬಲು ಸಾಧ್ಯವಾಗುತ್ತದೆ.

***



(Release ID: 1617762) Visitor Counter : 150