ಕೃಷಿ ಸಚಿವಾಲಯ
2020 ರ ಹಿಂಗಾರು ಹಂಗಾಮಿನಲ್ಲಿ 20 ರಾಜ್ಯಗಳಲ್ಲಿ ಕನಿಷ್ಟ ಬೆಂಬಲ ಬೆಲೆಗೆ ದ್ವಿದಳ ಧಾನ್ಯ ಮತ್ತು ಎಣ್ಣೆ ಕಾಳುಗಳ ಖರೀದಿ ಪ್ರಗತಿಯಲ್ಲಿ
Posted On:
22 APR 2020 8:32PM by PIB Bengaluru
2020 ರ ಹಿಂಗಾರು ಹಂಗಾಮಿನಲ್ಲಿ 20 ರಾಜ್ಯಗಳಲ್ಲಿ ಕನಿಷ್ಟ ಬೆಂಬಲ ಬೆಲೆಗೆ ದ್ವಿದಳ ಧಾನ್ಯ ಮತ್ತು ಎಣ್ಣೆ ಕಾಳುಗಳ ಖರೀದಿ ಪ್ರಗತಿಯಲ್ಲಿ
ನಾಫೆಡ್ ಮತ್ತು ಎಫ್ ಸಿ ಐ ರೂ.1313 ಕೋಟಿ ಮೌಲ್ಯದ ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಖರೀದಿ ಮಾಡಿದ್ದು 1,74,284 ರೈತರಿಗೆ ಲಾಭದಾಯಕವಾಗಿದೆ
ಈಶಾನ್ಯ ಭಾಗದ ಅವಶ್ಯಕ ವಸ್ತುಗಳ ಸರಬರಾಜಿನ ಮೇಲೆ ನಿಗಾವಹಿಸಲು ಪ್ರತ್ಯೇಕ ವಿಭಾಗ ರಚನೆ
ಲಾಕ್ ಡೌನ್ ಅವಧಿಯಲ್ಲಿ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಕ್ಷೇತ್ರ ಮಟ್ಟದಲ್ಲಿ ಅನುಕೂಲವಾಗುವಂತೆ ಭಾರತ ಸರ್ಕಾರದ ಕೃಷಿ ಇಲಾಖೆ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ನವೀಕರಿಸಿದ ಸ್ಥಿತಿ ಈ ಕೆಳಗಿನಂತಿದೆ:
- 2020 ರ ಹಿಂಗಾರು ಹಂಗಾಮಿನಲ್ಲಿ 20 ರಾಜ್ಯಗಳಲ್ಲಿ ಕನಿಷ್ಟ ಬೆಂಬಲ ಬೆಲೆ ನೀಡಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಖರೀದಿ ಪ್ರಗತಿಯಲ್ಲಿದೆ. 1,67,570.95 ಮೆಟ್ರಿಕ್ ಟನ್ ನಷ್ಟು ದ್ವಿದಳ ಧಾನ್ಯಗಳು ಮತ್ತು 1,11,638.52 ಮೆಟ್ರಿಕ್ ಟನ್ ನಷ್ಟು ಎಣ್ಣೆ ಕಾಳುಗಳನ್ನು ನಾಫೆಡ್ ಸಂಗ್ರಹಿಸಿದೆ ಮತ್ತು ಎಫ್ ಸಿ ಐ ರೂ 1313 ಎಂದು ಮೌಲ್ಯಮಾಪನ ಮಾಡಿದ್ದು ಇದರ ಮೂಲಕ 1,74,284 ರೈತರು ಲಾಭ ಪಡೆದಿದ್ದಾರೆ.
- ಈಶಾನ್ಯ ಭಾಗದಲ್ಲಿ ಅಂತರ್ ರಾಜ್ಯ ಸಾಗಾಣೆ ಜೊತೆಗೆ ಅವಶ್ಯಕ ವಸ್ತುಗಳ ಮತ್ತು ಹಣ್ಣು ತರಕಾರಿಗಳ ಸರಬರಾಜು ಮತ್ತು ಬೆಲೆಯ ಮೇಲೆ ನಿಗಾವಹಿಸಲು ಪ್ರತ್ಯೇಕ ತಂಡವನ್ನು ವಿಭಾಗ ರಚಿಸಲಾಗಿದೆ.
- ಮಹಾರಾಷ್ಟ್ರದ ಉತ್ಪಾದನಾ ಪ್ರದೇಶಗಳಿಂದ ಇತರ ರಾಜ್ಯಗಳಿಗೆ ಈರುಳ್ಳಿ ಸರಬರಾಜು ಮಾಡಲು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮಹಾರಾಷ್ಟ್ರ ಮಾರುಕಟ್ಟೆ ಮಂಡಳಿಯೊಂದಿಗೆ ಸಂಪರ್ಕದಲ್ಲಿದೆ. ಪ್ರಸ್ತುತ ನಾಸಿಕ್ ಜಿಲ್ಲೆಯಲ್ಲಿರುವ ಎಪಿಎಂಸಿಗಳು ಪ್ರತಿದಿನ ಸುಮಾರು 300 ಟ್ರಕ್ ಗಳನ್ನು ದೇಶದ ವಿವಿಧ ಭಾಗಗಳಿಗೆ ಅಂದರೆ ದೆಹಲಿ, ಹರಿಯಾಣ, ಬಿಹಾರ್, ತಮಿಳುನಾಡು, ಪಂಜಾಬ್, ಕೊಲ್ಕತ್ತಾ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಒಡಿಶಾ, ಗುಜರಾತ್ ಉತ್ತರಪ್ರದೇಶ, ಅಸ್ಸಾಂ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಇತ್ಯಾದಿ ರಾಜ್ಯಗಳಿಗೆ ನಿಯಮಿತವಾಗಿ ಸರಬರಾಜು ಮಾಡುತ್ತಿದೆ.
- ಸಗಟು ಮಾರುಕಟ್ಟೆಯ ನಿಬಿಡತೆಯನ್ನು ತಗ್ಗಸಿ ಸರಬರಾಜು ಸರಪಳಿಗಳಿಗೆ ಉತ್ತೇಜನ ನೀಡಲು ಸಚಿವಾಲಯ ಹಲವಾರು ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ ನ್ಯಾಮ್) ಪೋರ್ಟಲ್ ಗೆ 2 ಹೊಸ ಮಾಡ್ಯೂಲ್ ಗಳ ಸೇರ್ಪಡೆಯಿಂದ ನವೀಕರಿಸಲಾಗಿದೆ. (ಎ) ಗೋದಾಮು ಆಧಾರಿತ ವ್ಯಾಪಾರ ಮಾಡ್ಯೂಲ್ (ಬಿ) ರೈತ ಉತ್ಪಾದಕ ಸಂಸ್ಥೆಗಳು (ಎಫ್ ಪಿ ಒ) ಗಳ ಮಾಡ್ಯೂಲ್. ಗೋದಾಮು ಆಧಾರಿತ ವ್ಯಾಪಾರ ಮಾಡ್ಯೂಲ್ ರೈತರಿಗೆ ಉಗ್ರಾಣಾಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ (ಡಬ್ಲ್ಯು ಡಿ ಆರ್ ಎ) ನೋಂದಾಯಿತ ಗೋದಾಮುಗಳಿಂದ ತಮ್ಮ ಉತ್ಪನ್ನಗಳನ್ನು ಮರಾಟ ಮಾಡಲು ಅನುವು ಮಾಡಿಕೊಡುತ್ತದೆ. ಎಫ್ ಪಿ ಒ ಟ್ರೇಡಿಂಗ್ ಮಾಡ್ಯೂಲ್ , ರೈತ ಉತ್ಪಾದಕ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಸಂಗ್ರಹಣಾ ಕೇಂದ್ರಗಳಿಂದ ಚಿತ್ರ ತೆಗೆದು, ಗುಣಮಟ್ಟದ ನಿಯತಾಂಕದೊಂದಿಗೆ ಆನ್ ಲೈನ್ ಬಿಡ್ಡಿಂಗ್ ಗಾಗಿ ಸ್ವತಃ ಮಾರುಕಟ್ಟೆಗೆ ಹೋಗದೇ ಅಪ್ ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಈವರೆಗೆ 12 ರಾಜ್ಯಗಳ (ಪಂಜಾಬ್, ಒಡಿಶಾ, ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರಿಯಾಣ, ಆಂಧ್ರ ಪ್ರದೇಶ, ತಮಿಳುನಾಡು, ಉತ್ತರಾಖಂಡ್, ಉತ್ತರ ಪ್ರದೇಶ ಮತ್ತು ಜಾರ್ಖಂಡ್) ಎಫ್ ಪಿ ಒ ಗಳು ವ್ಯಾಪಾರದಲ್ಲಿ ಭಾಗವಹಿಸಿವೆ.
- ಜಾರ್ಖಂಡ್ ನಂತಹ ರಾಜ್ಯಗಳು ಇ-ನ್ಯಾಮ್ ವೇದಿಕೆ ಮೂಲಕ ಫಾರ್ಮ್ ಗೇಟ್ ವ್ಯಾಪಾರವನ್ನು ಪ್ರಾರಂಭಿಸಿವೆ. ಈ ಮೂಲಕ ರೈತರು ಎಪಿಎಂಸಿಗೆ ಹೋಗದೇ, ಆನ್ ಲೈನ್ ಬಿಡ್ಡಿಂಗ್ ಗಾಗಿ ತಮ್ಮ ಉತ್ಪನ್ನಗಳ ವಿವಿರಗಳನ್ನು ಚಿತ್ರಗಳೊಂದಿಗೆ ಅಪ್ ಲೋಡ್ ಮಾಡುತ್ತಿದ್ದಾರೆ. ಹಾಗೆಯೇ, ಎಫ್ ಪಿ ಒ ಗಳು ಸಹ ತಮ್ಮ ಉತ್ಪನ್ನಗಳ ಚಿತ್ರಗಳನ್ನು ಸಂಗ್ರಹಣಾ ಕೇಂದ್ರಗಳಿಂದ ಇ-ನ್ಯಾಮ್ ವೇದಿಕೆ ಅಡಿಯಲ್ಲಿ ವ್ಯಾಪಾರಕ್ಕಾಗಿ ಅಪ್ ಲೋಡ್ ಮಾಡುತ್ತಿವೆ
- ಸಾಗಾಣೆ ಹೆಚ್ಚಿಸುವ ವ್ಯವಸ್ಥೆಯ ಮಾಡ್ಯೂಲ್ ನ್ನು ಇತ್ತೀಚೆಗೆ ಇ-ನ್ಯಾಮ್ ವೇದಿಕೆಯಲ್ಲಿ ಪ್ರಾರಂಭಿಸಲಾಗಿದೆ. ಇದು ವ್ಯಾಪಾರಿಗಳು ಮಾರುಕಟ್ಟೆಯಿಂದ ತಮ್ಮ ಕೃಷಿ ಉತ್ಪನ್ನಗಳನ್ನು ವಿವಿಧ ಸ್ಥಳಗಳಿಗೆ ಸಾಗಿಸಲು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿರುವ ಸಾಗಾಣಿದಾರರನ್ನು ಗುರುತಿಸಲು ಸಹಾಯ ಮಾಡುತ್ತದೆ. 11.37 ಲಕ್ಷಕ್ಕಿಂತ ಹೆಚ್ಚು ಟ್ರಕ್ ಗಳು 2.3ಲಕ್ಷ ಸಾಗಾಣೆದಾರರು ಈ ಮಾಡ್ಯೂಲ್ ನಲ್ಲಿ ಈಗಾಗಲೇ ಸಂಪರ್ಕ ಹೊಂದಿದ್ದಾರೆ
***
(Release ID: 1617654)
Visitor Counter : 253