ಕಲ್ಲಿದ್ದಲು ಸಚಿವಾಲಯ

ಕೋಲ್ ಇಂಡಿಯಾ ಲಿಮಿಟೆಡ್ ಪ್ರಸಕ್ತ ಹಣಕಾಸು ವರ್ಷದಲ್ಲಿ 710 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಲಿದೆ: ಶ್ರೀ ಪ್ರಲ್ಹಾದ್ ಜೋಶಿ

Posted On: 23 APR 2020 2:30PM by PIB Bengaluru

ಕೋಲ್ ಇಂಡಿಯಾ ಲಿಮಿಟೆಡ್ ಪ್ರಸಕ್ತ ಹಣಕಾಸು ವರ್ಷದಲ್ಲಿ 710 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಲಿದೆ: ಶ್ರೀ ಪ್ರಲ್ಹಾದ್ ಜೋಶಿ

 

ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) 710 ಮಿಲಿಯನ್ ಟನ್ (ಎಂಟಿ) ಕಲ್ಲಿದ್ದಲನ್ನು ಉತ್ಪಾದಿಸಲಿದೆ ಮತ್ತು ಕಂಪನಿಯ ಕಲ್ಲಿದ್ದಲು ಪಡೆದುಕೊಳ್ಳುವ ಗುರಿ ಹಣಕಾಸು ವರ್ಷದಲ್ಲಿಯೂ ಸಹ 710 ಮೆಟ್ರಿಕ್ ಟನ್ ಆಗಿರುತ್ತದೆ. 22 ಏಪ್ರಿಲ್ 2020 ರಂದು ನಡೆದ ವಿಡಿಯೋ ಕಾನ್ಫರೆನ್ಸ್ ಮೂಲಕ ಅದರ ಕಾರ್ಯಕ್ಷಮತೆಯನ್ನು ಪರಿಶೀಲಿಸುವಾಗ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಗುರಿಗಳನ್ನು ನಿಗದಿಪಡಿಸಿದ್ದಾರೆ.

"ಕೊರೊನಾವೈರಸ್ ಲಾಕ್ಡೌನ್ ನಂತರ ಕಲ್ಲಿದ್ದಲಿನ ಬೇಡಿಕೆ ಮತ್ತೆ ಹೆಚ್ಚಾಗುತ್ತದೆ, ಆದ್ದರಿಂದ 2023-24 ವೇಳೆಗೆ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯನ್ನು ಸಾಧಿಸುವ ಗುರಿಯೊಂದಿಗೆ 2020-21 ಆರ್ಥಿಕ ವರ್ಷದಲ್ಲಿ 710 ಮೆ.ಟನ್ ಉತ್ಪಾದನೆ ಮತ್ತು ಗುರಿಗಳನ್ನು ಉಳಿಸಿಕೊಳ್ಳಲು ನಾನು ಸಿಐಎಲ್ಗೆ ನಿರ್ದೇಶನ ನೀಡಿದ್ದೇನೆ.ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು.

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರು ವರ್ಷದುದ್ದಕ್ಕೂ ಕಲ್ಲಿದ್ದಲು ಉತ್ಪಾದನೆಯಲ್ಲಿ ಸ್ಥಿರತೆಯಿರಬೇಕಾಗಿರುವುದನ್ನು ಒತ್ತಿಹೇಳಿದರು ಮತ್ತು ಮಾನ್ಸೂನ್ ಋತುವಿನಲ್ಲಿ ಸಹ ಉತ್ಪಾದನೆಯು ಪರಿಣಾಮ ಬೀರದಂತೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಲು ಸಿಐಎಲ್ ಆಡಳಿತ ಸಿಬ್ಬಂಧಿಗೆ ಸೂಚಿಸಿದರು. ಎಲ್ಲಾ ಗ್ರಾಹಕರಿಗೆ ಗುಣಮಟ್ಟದ ಕಲ್ಲಿದ್ದಲು ಒದಗಿಸುವಂತೆ ಮತ್ತು ವರ್ಷದಲ್ಲಿ ವಿದ್ಯುತ್ ಸ್ಥಾವರದಲ್ಲಿ ಸಾಕಷ್ಟು ಕಲ್ಲಿದ್ದಲು ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದು ಅವರು ಸಿಐಎಲ್ ಅಧಿಕಾರಿಗಳನ್ನು ಕೇಳಿದರು.

2020-21 ಆರ್ಥಿಕ ವರ್ಷಕ್ಕೆ ಕಂಪನಿಯ ಓವರ್ ಬರ್ಡನ್ (ಒಬಿ) ತೆಗೆಯುವ ಗುರಿಯನ್ನು ಅದರ 1 ಬಿಟಿ ಯೋಜನೆಗಳೊಂದಿಗಿನ ಜೋಡಣೆಯಲ್ಲಿ 1580 ಮಿಲಿಯನ್ ಘನ ಮೀಟರ್ಗಳೆಂದು ಸಭೆಯಲ್ಲಿ ನಿಗದಿಪಡಿಸಲಾಗಿದೆ. ಒಬಿ ತೆಗೆಯುವುದು ಕಲ್ಲಿದ್ದಲು ಸ್ತರಗಳನ್ನು ಗಣಿಗಾರಿಕೆಗೆ ಸಿದ್ಧವಾಗುವಂತೆ ಒಡ್ಡಲು ಮೇಲ್ಭಾಗದ ಮಣ್ಣನ್ನು ತೆಗೆಯುವುದನ್ನು ಸೂಚಿಸುತ್ತದೆ.

"ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸಹಜ ಜೀವನ ಸ್ಥಿತಿಗಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ನಮ್ಮ ಕಲ್ಲಿದ್ದಲು ವಾರಿಯರ್ಸ್ ಬಗ್ಗೆ ನನಗೆ ಹೆಮ್ಮೆ ಇದೆ ಮತ್ತು ಸಮಯಕ್ಕೆ ಅಥವಾ ಮೊದಲು ಸಿಐಎಲ್ ಎಲ್ಲಾ ನಿಗದಿತ ಗುರಿಗಳನ್ನು ಸಾಧಿಸುತ್ತದೆ ಎಂಬ ಭರವಸೆ ಇದೆ. ಗುರಿಗಳನ್ನು ಸಾಧಿಸಲು ಸರ್ಕಾರವು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತದೆ. ಶ್ರೀ ಪ್ರಲ್ಹಾದ್ ಜೋಶಿ.

ತಮ್ಮ ಬೇಡಿಕೆಯನ್ನು ಪೂರೈಸಲು ಪ್ರಸ್ತುತ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಕಂಪನಿಗಳನ್ನು ಸಂಪರ್ಕಿಸುವಂತೆ ಸಚಿವರು ಸಿಐಎಲ್ ಆಡಳಿತ ವರ್ಗವನ್ನು ಕೇಳಿದರು ಮತ್ತು ಕಲ್ಲಿದ್ದಲು ಆಮದನ್ನು ಕಡಿಮೆ ಮಾಡುವ ವಿವರವಾದ ಯೋಜನೆಯನ್ನು ರೂಪಿಸಲು ಸಲಹೆ ನೀಡಿದರು.

***



(Release ID: 1617588) Visitor Counter : 160