ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಕೋವಿಡ್–19: ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕೌನ್ಸಿಲರ್ಗಳು ಮತ್ತು ಕಾರ್ಪೋರೇಟರ್ಗಳ ಜತೆ ಸಮಾಲೋಚನೆ
ಪ್ರಕಟಣಾ ದಿನಾಂಕ:
22 APR 2020 6:55PM by PIB Bengaluru
ಕೋವಿಡ್–19: ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕೌನ್ಸಿಲರ್ಗಳು ಮತ್ತು ಕಾರ್ಪೋರೇಟರ್ಗಳ ಜತೆ ಸಮಾಲೋಚನೆ
ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಇಂದು ಕೋವಿಡ್–19ಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕೌನ್ಸಿಲರ್ಗಳು ಮತ್ತು ಕಾರ್ಪೋರೇಟರ್ಗಳ ಜತೆ ಸಮಾಲೋಚನೆ ನಡೆಸಿದರು.
ಒಂದೂವರೆ ಗಂಟೆ ವಿಡಿಯೊ ಕಾನ್ಫೆರೆನ್ಸ್ ಮೂಲಕ ನಡೆದ ಸಮಾಲೋಚನೆ ಸಂದರ್ಭದಲ್ಲಿ ಡಾ.ಜಿತೇಂದ್ರ ಸಿಂಗ್ ಅವರು ವಿವಿಧ ಮುನ್ಸಿಪಲ್ ಸಂಸ್ಥೆಗಳ ಪ್ರತಿನಿಧಿಗಳ ಜತೆ ಮಾಹಿತಿಯನ್ನು ವಿನಿಮಯ ಮಾಡಿಕೊಂಡರು. ಜಮ್ಮು ಮೇಯರ್ ಚಂದ್ರ ಮೋಹನ್ ಗುಪ್ತಾ, ಅನಂತನಾಗ್ನ ಹಿಲಾಲ್ ಶಾ, ಲೇಹ್ನ ಡಾ. ಇಷೆ, ಕಥುವಾದ ನರೇಶ್ ಕುಮಾರ್, ಹಿರಾನಗರದ ವಿಜಯಕುಮಾರ್ ಶರ್ಮಾ, ಕುಪ್ವಾರಾದ ರಿಯಾಜ್ ಅಹ್ಮದ್ ಮಿರ್, ಉಧಮಪುರದ ಡಾ. ಯೋಗೇಶ್ವರ ಗುಪ್ತಾ, ಬಿಲ್ಲಾವರ್ದ ಉಮಾಕಾಂತ ಬಸೋತ್ರಾ, ಭದರ್ವಾಹ ಡಾ. ಶಹೀದ್ ಮುಘಲ್, ದೋಡಾದ ವೇದ ಪ್ರಕಾಶ್, ರಿಯಾಸಿಯ ಸುದೇಶಪುರಿ, ರಾಜೌರಿಯ ಮೊಹ್ಮದ್ ಅರೀಫ್, ಕತ್ರಾದ ಶಶಿಕುಮರ್ ಮತ್ತು ಅಜಯ್ ಬಾರು, ಕಿಶ್ತಾವರ್ನ ರಯಾಜ್, ಬಟೋಟೆಯ ಎಸ್. ರವೀಂದ್ರ ಸಿಂಗ್ ಮತ್ತು ರಂಬಾನ್ನ ಅಮಿತ್ ಕುಮಾರ್ ಅವರು ವಿಡಿಯೊ ಕಾನ್ಫೆರೆನ್ಸ್ನಲ್ಲಿ ಪಾಲ್ಗೊಂಡಿದ್ದ ಪ್ರಮುಖರು.
ಕೋವಿಡ್–19 ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ನಿರ್ದೇಶನಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದಕ್ಕಾಗಿ ಡಾ. ಜಿತೇಂದ್ರ ಸಿಂಗ್ ಅವರು ಜನಪ್ರತಿನಿಧಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು. ನಾಗರಿಕರು ಮತ್ತು ಆಡಳಿತ ನಡುವೆ ಸೇತುವೆಯಾಗಿ ಸಹಕಾರ ನೀಡಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸಹಕಾರ ನೀಡಿದ್ದಾರೆ ಎಂದು ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಕಲೆಕ್ಟರ್ಗಳು ಮೆಚ್ಚುಗೆ ವ್ಯಕ್ಪಡಿಸಿದ್ದಾರೆ ಎಂದು ಡಾ. ಜಿತೇಂದ್ರ ಸಿಂಗ್ ಈ ಸಂದರ್ಭದಲ್ಲಿ ಪ್ರಸ್ತಾಪಿಸಿ ಶ್ಲಾಘಿಸಿದರು.

ಲಾಕ್ಡೌನ್ನ ಕೆಲವು ನಿಯಮಾವಳಿಗಳನ್ನು ಸಡಿಲಿಕೆ ಮಾಡಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಜಮ್ಮು ಮತ್ತು ಕಾಶ್ಮೀರದ ಜನತೆ ವಾಪಸ್ ತಮ್ಮ ಮನೆಗಳಿಗೆ ತೆರಳಲು ಬಯಸುವವರಿಗೆ ವ್ಯವಸ್ಥೆಗಳನ್ನು ಕಲ್ಪಿಸುವುದು ಸವಾಲಿನ ಕೆಲಸವಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು. ಅಪಾರ ಸಂಖ್ಯೆಯಲ್ಲಿ ಕಾರ್ಮಿಕರು ಸಹ ದೇಶದ ವಿವಿಧೆಡೆ ತೆರಳಿದ್ದಾರೆ. ಜತೆಗೆ ದೇಶದ ವಿವಿಧೆಡೆ ಅಧ್ಯಯನಕ್ಕಾಗಿ ತೆರಳಿರುವ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳ ಪೋಷಕರು ಸಹ ಮನವಿ ಮಾಡಿದ್ದಾರೆ. ಇವರೆಲ್ಲರನ್ನು ವಾಪಸ್ ತಮ್ಮ ಮನೆಗಳಿಗೆ ಕರೆತರಲು ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು.
ಜನಪ್ರತಿನಿಧಿಗಳು ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಹಕಾರ ಅತಿ ಅಗತ್ಯವಿದೆ. ಬೇರುಮಟ್ಟದಲ್ಲಿ ಇವರಿಗೆ ಜನರ ಸಂಪರ್ಕವಿರುವುದರಿಂದ ಜನರಿಗೆ ತಿಳಿಸಲು ಮತ್ತು ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಸಣ್ಣ ಗುಂಪುಗಳಲ್ಲಿ ಮಾತ್ರ ಸಂಚಾರದ ವ್ಯವಸ್ಥೆ ಸಾಧ್ಯ. ಅದಕ್ಕೂ ಸಹ ಸಮರ್ಪಕ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಬೇಕಾಗುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು. ಅವಸರದಲ್ಲಿ ನಾವು ಯಾವುದೇ ರೀತಿಯ ಅಪಾಯ ತಂದುಕೊಳ್ಳಲು ಸಿದ್ಧರಿಲ್ಲ. ಕಥುವಾ ಜಿಲ್ಲೆ ಇದುವರೆಗೆ ಕೊರೊನಾ ಮುಕ್ತವಾಗಿದೆ. ಲಾಕ್ಡೌನ್ ಘೋಷಣೆಯಾದ ಬಳಿಕವೂ ಈ ಜಿಲ್ಲೆಗೆ ಎರಡು ಕಡೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಕಥುವಾಗೆ ಬಂದಿದ್ದಾರೆ. ಆದರೆ, ದಿಢೀರನೆ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ನಿಗದಿಪಡಿಸಿದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸದೆ ಹಿರಾನಗರದಲ್ಲಿ ಗ್ರಾಮಕ್ಕೆ ತೆರಳಲು ಈತ ಸಿದ್ಧನಾಗಿದ್ದ ಎಂದು ಡಾ.ಜಿತೇಂದ್ರ ವಿವರಿಸಿದರು.
ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ಜನರು ತಮ್ಮ ಕುಟುಂಬವನ್ನು ಶೀಘ್ರ ಸೇರಬೇಕು ಎನ್ನುವುದು ಎಲ್ಲರ ಬಯಕೆಯಾಗಿದೆ. ಆದರೆ, ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ. ಇದಕ್ಕಾಗಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವವರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳೀಯ ಜಿಲ್ಲಾಡಳಿತದ ಅಧಿಕಾರಿಗಳು ಸಂಬಂಧಿಸಿದವರನ್ನು ಸಂಪರ್ಕಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗುತ್ತಿದೆ. ಸಮಸ್ಯೆಗಳಿಗೆ ಶೀಘ್ರ ಪರಿಹಾರ ರೂಪಿಸಲಾಗುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ವಿವರಿಸಿದರು.
ಕಳೆದ ನಾಲ್ಕು ವಾರಗಳಲ್ಲಿ ನಾಗರಿಕರ ಸಮಾಜ ಕಾರ್ಮಿಕರಿಗೆ ರೇಷನ್ ಮತ್ತು ಆಹಾರವನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದು ಡಾ. ಜಿತೇಂದ್ರ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದಾದರೂ ಸಮಸ್ಯೆ ಮತ್ತು ತೊಂದರೆಗಳನ್ನು ಗಮನಕ್ಕೆ ತಂದರೆ ಆಯಾ ಕಾರ್ಪೋರೇಷನ್/ಮುನ್ಸಿಪಲ್ ಸಂಸ್ಥೆಗಳ ಸದಸ್ಯರು ತಕ್ಷಣವೇ ಮಧ್ಯಪ್ರವೇಶಿಸಿ ನೆರವು ಒದಗಿಸುತ್ತಿದ್ದಾರೆ ಎಂದು ಡಾ. ಜಿತೇಂದ್ರ ಸಿಂಗ್ ವಿವರಿಸಿದರು.
***
(ಪ್ರಕಟಣೆ ಐ.ಡಿ.: 1617559)
ವಿಸಿಟರ್ ಕೌಂಟರ್ : 170