ಸಂಪುಟ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ನ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಆಧಾರ್ ಗೆ ದತ್ತಾಂಶ ಜೋಡಣೆಯ ಕಡ್ಡಾಯ ಅಗತ್ಯವನ್ನು 2020ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಒಂದು ವರ್ಷಗಳ ಕಾಲ ಸಡಿಲಿಸಲು ಸಂಪುಟದ ಅನುಮೋದನೆ

Posted On: 22 APR 2020 3:46PM by PIB Bengaluru

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಆಧಾರ್ ಗೆ ದತ್ತಾಂಶ ಜೋಡಣೆಯ ಕಡ್ಡಾಯ ಅಗತ್ಯವನ್ನು 2020 ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಒಂದು ವರ್ಷಗಳ ಕಾಲ ಸಡಿಲಿಸಲು ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೇಘಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಫಲಾನುಭವಿಗಳಿಗೆ ಪ್ರಯೋಜನವನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಆಧಾರ್ ಗೆ ದತ್ತಾಂಶ ಜೋಡಣೆಯ ಕಡ್ಡಾಯ ಅಗತ್ಯವನ್ನು 2021 ಮಾರ್ಚ್ 31ರವರೆಗೆ ಸಡಿಲಿಸಲು ತನ್ನ ಅನುಮೋದನೆ ನೀಡಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯನ್ನು 2019 ಫೆಬ್ರವರಿ 24ರಂದು ಮಾನ್ಯ ಪ್ರಧಾನಮಂತ್ರಿಯವರು ಉದ್ಘಾಟಿಸಿದ್ದರು. ಕೆಲವೊಂದನ್ನು ಹೊರತುಪಡಿಸಿ, ದೇಶಾದ್ಯಂತದ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಭೂ ಹಿಡುವಳಿದಾರ ರೈತ ಕುಟುಂಬಗಳಿಗೆ ಆದಾಯದ ಬೆಂಬಲವನ್ನು ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ. ಯೋಜನೆಯಡಿ ವಾರ್ಷಿಕ ರೂ.6000/-ನ್ನು ರೂ. 2000 ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಲಾಗುತ್ತದೆ. ಯೋಜನೆಯು 2018 ಡಿಸೆಂಬರ್ 1ರಿಂದ ಜಾರಿಗೆ ಬಂದಿದೆ. 2019 ಡಿಸೆಂಬರ್ 1ರಿಂದ ಯೋಜನೆಯ ಪ್ರಯೋಜನವನ್ನು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಆಧಾರ್ ಸಂಪರ್ಕಿತ ದತ್ತಾಂಶ ಅಪ್ ಲೋಡ್ ಮಾಡಿರುವ ಫಲಾನುಭವಿಗಳಿಗೆ ಮಾತ್ರ ನೀಡಲಾಗುತ್ತಿದೆ. ಅಸ್ಸಾಂ ಮತ್ತು ಮೋಘಾಲಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಗಳಲ್ಲಿ ಆಧಾರ್ ಪ್ರಕ್ರಿಯೆ ತೀಕ್ಷ್ಣವಾಗಿಲ್ಲದ ಕಾರಣ 2020 ಮಾರ್ಚ್ 31ರವರೆಗೆ ಅಗತ್ಯಕ್ಕೆ ವಿನಾಯಿತಿ ನೀಡಲಾಗಿತ್ತು.

ಅಸ್ಸಾಂ ಮೇಘಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ನಲ್ಲಿ ಫಲಾನುಭಾವಿಗಳ ಆಧಾರ್ ದತ್ತಾಂಶ ಜೋಡಣೆ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಕೆಲವು ಕಾಲ ಬೇಕಾಗುತ್ತದೆ ಎಂದು ನಿರ್ಧರಿಸಲಾಗಿದ್ದು, ಆಧಾರ್ ದತ್ತಾಂಶ ಜೋಡಣೆಯ ಕಡ್ಡಾಯಕ್ಕೆ ವಿನಾಯಿತಿ ನೀಡದೇ ಇದ್ದಲ್ಲಿ, ರಾಜ್ಯ /ಕೇಂದ್ರಾಡಳಿತ ಪ್ರದೇಶಗಳ ಯೋಜನೆಯ ಫಲಾನುಭವಿಗಳು 2020 ಏಪ್ರಿಲ್ 1 ನಂತರ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 8.4.2020ರವರೆಗೆ ಕನಿಷ್ಠ ಒಂದು ಕಂತು ಪಡೆದ ಫಲಾನುಭವಿ ರೈತರು ಅಸ್ಸಾಂನಲ್ಲಿ 27,09,586 ಫಲಾನುಭವಿಗಳು, ಮೇಘಾಲಯದಲ್ಲಿ 98,915 ಫಲಾನುಭವಿಗಳು ಮತ್ತು ಲಡಾಕ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಫಲಾನುಭವಿಗಳು 10,01,668 ಆಗಿದ್ದಾರೆ.

***


(Release ID: 1617247) Visitor Counter : 176