ಗೃಹ ವ್ಯವಹಾರಗಳ ಸಚಿವಾಲಯ
ರಾಜ್ಯದಲ್ಲಿ ಕೋವಿಡ್-19 ಲಾಕ್ ಡೌನ್ ಕ್ರಮಗಳ ಅನುಷ್ಠಾನದ ಪರಿಶೀಲನೆ ಮತ್ತು ಸ್ಥಳ ಪರಿಶೀಲನೆಗೆ ಕೇಂದ್ರದ ತಂಡಗಳಿಗೆ ಕಾರ್ಯನಿರ್ವಹಣೆಯಲ್ಲಿ ಅಡ್ಡಿಪಡಿಸಬಾರದೆಂದು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ನಿರ್ದೇಶನ ನೀಡಿದೆ
Posted On:
21 APR 2020 5:49PM by PIB Bengaluru
ರಾಜ್ಯದಲ್ಲಿ ಕೋವಿಡ್-19 ಲಾಕ್ ಡೌನ್ ಕ್ರಮಗಳ ಅನುಷ್ಠಾನದ ಪರಿಶೀಲನೆ ಮತ್ತು ಸ್ಥಳ ಪರಿಶೀಲನೆಗೆ ಕೇಂದ್ರದ ತಂಡಗಳಿಗೆ ಕಾರ್ಯನಿರ್ವಹಣೆಯಲ್ಲಿ ಅಡ್ಡಿಪಡಿಸಬಾರದೆಂದು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ನಿರ್ದೇಶನ ನೀಡಿದೆ
ರಾಜ್ಯದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಲಾಕ್ ಡೌನ್ ಕ್ರಮಗಳ ಅನುಷ್ಠಾನದ ಪರಿಶೀಲನೆ ಮತ್ತು ಸ್ಥಳ ಪರಿಶೀಲನೆಗೆ ಕೇಂದ್ರದ ತಂಡಗಳಿಗೆ ಕಾರ್ಯನಿರ್ವಹಣೆಯಲ್ಲಿ ಅಡ್ಡಿಪಡಿಸಬಾರದೆಂದು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೋಲ್ಕತ್ತಾ ಮತ್ತು ಜಲ್ ಪಾಯ್ ಗುರಿಯಲ್ಲಿ ಕ್ರಮವಾಗಿ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತ ಅವಶ್ಯಕ ಸಹಕಾರ ನೀಡುತ್ತಿಲ್ಲ ಎಂಬುದನ್ನು ಅಂತರ್ ಸಚಿವಾಲಯ ಕೇಂದ್ರ ತಂಡ (ಐಎಂಸಿಟಿ ಗಳು) ಗೃಹ ಸಚಿವಾಲಯದ ಗಮನಕ್ಕೆ ತಂದಿದೆ. ಸ್ಥಳೀಯ ಪರಿಸ್ಥಿತಿ ಅರಿತುಕೊಳ್ಳಲು ಯಾವುದೇ ಸ್ಥಳಕ್ಕೆ ಭೇಟಿ ನೀಡುವುದು, ಆರೋಗ್ಯ ವೃತ್ತಿಪರರೊಂದಿಗೆ ಸಂವಹನಕ್ಕೆ ಅವಕಾಶ ನೀಡದೇ ತಮಗೆ ತಾವೇ ನಿರ್ಭಂಧ ಹೇರಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಇದು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶಗಳ ಪರಿಪಾಲನೆಗೆ ಅಡ್ಡಿಯಾಗಿದೆ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಸಹ ನಿರ್ಭಂಧಿಸಿದಂತಾಗುತ್ತದೆ.
ಗುರುತಿಸಲಾದ ಆಯ್ದ ಜಿಲ್ಲೆಗಳಲ್ಲಿ ಪ್ರಸ್ತುತ ಸ್ಥಿತಿಯನ್ನು ಸ್ಥಳದಲ್ಲೇ ಮೌಲ್ಯಮಾಪನ ಮಾಡಿ ನಂತರ ಲಾಕ್ ಡೌನ್ ಕ್ರಮಗಳನ್ನು ಜಾರಿಗೊಳಿಸುವುದನ್ನು ಪರಿಶೀಲಿಸಲು 19.04.2020 ರಂದು ಕೇಂದ್ರ ಗೃಹ ಸಚಿವಾಲಯ 2 ಐಎಂಸಿಟಿ ಗಳನ್ನು ಪಶ್ಚಿಮ ಬಂಗಾಳ ರಾಜ್ಯಕ್ಕೆ ನೇಮಿಸಿದೆ. ಈ ತಂಡಗಳು ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ ಡಿ ಎಂ ಎ) ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಕೋವಿಡ್ – 19 ಹರಡುವಿಕೆಯನ್ನು ಹತೋಟಿಗೆ ತರುವ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಇವರ ನೈಪುಣ್ಯತೆಯನ್ನು ಬಳಸಿಕೊಳ್ಳಬಹುದಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪರಿಚ್ಛೇದ 35 ರಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಲಾದ ಅಧಿಕಾರದಡಿಯಲ್ಲಿ ಈ ತಂಡಗಳನ್ನು ನಿಯೋಜಿಸಲಾಗಿದೆ. ಈ ತಂಡಗಳು ವಿಪತ್ತು ನಿರ್ವಹಣೆಗಾಗಿ ಅಗತ್ಯವಿರುವ ಅಥವಾ ಸೂಕ್ತವೆನಿಸುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ಸಾರ್ವಜನಿಕ ಸುರಕ್ಷತೆಯ ಹಿತಾಸಕ್ತಿ ದೃಷ್ಟಿಯಿಂದ ರಾಜ್ಯ ಸರ್ಕಾರಗಳು ಭಾರತ ಒಕ್ಕೂಟ ಪತ್ರ ಮುಖೇನ ಹೊರಡಿಸಿದಂತ ಆದೇಶಗಳನ್ನು ಮತ್ತು ನಿರ್ದೇಶನಗಳನ್ನು ಸಂಪೂರ್ಣ ಚೈತನ್ಯದಿಂದ ಮತ್ತು ನಿಷ್ಠೆಯಿಂದ ಪಾಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ 31.03.2020 ರ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಮೇಲೆ ಹೇಳಿದಂತೆ ಕೋವಿಡ್ – 19 ಹರಡುವುದನ್ನು ತಡೆಗಟ್ಟುವ ದೃಷ್ಟಯಿಂದ ರಾಜ್ಯ ಸರ್ಕಾರಗಳಿಗೆ ಒಂದು ಜವಾಬ್ದಾರಿಯನ್ನು ವಿಧಸುತ್ತದೆ ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
ಗೃಹ ಸಚಿವಾಲಯ 19.04.2020 ರ ತನ್ನ ಆದೇಶವನ್ನು ಪಾಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶಿಸಿದೆ ಮತ್ತು ಐಎಂಸಿಟಿಗಳಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿ ಮೇಲಿನ ಆದೇಶದಲ್ಲಿ ಅವರಿಗೆ ವಹಿಸಿದಂತಹ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಹೇಳಿದೆ .
ಪಶ್ಚಿಮ ಬಂಗಾಳಕ್ಕೆ ನೀಡಿದ ಅಧಿಕೃತ ಸಂವಹನ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
***
(Release ID: 1617059)
Visitor Counter : 239