ಕೃಷಿ ಸಚಿವಾಲಯ

ಆಹಾರ ಭದ್ರತೆ, ಸುರಕ್ಷತೆ ಮತ್ತು ಪೋಷಣೆಯ ಮೇಲೆ ಕೋವಿಡ್-19 ರ ಪರಿಣಾಮಗಳ ಕುರಿತು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಜಿ- 20 ಕೃಷಿ ಮಂತ್ರಿಗಳ ಸಭೆಯಲ್ಲಿ ಶ್ರೀ ನರೇಂದ್ರ ಸಿಂಗ್ ತೋಮರ್ ಭಾಗವಹಿಸಿದ್ದರು

Posted On: 21 APR 2020 9:18PM by PIB Bengaluru

ಆಹಾರ ಭದ್ರತೆ, ಸುರಕ್ಷತೆ ಮತ್ತು ಪೋಷಣೆಯ ಮೇಲೆ ಕೋವಿಡ್-19 ರ ಪರಿಣಾಮಗಳ ಕುರಿತು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಜಿ- 20 ಕೃಷಿ ಮಂತ್ರಿಗಳ ಸಭೆಯಲ್ಲಿ ಶ್ರೀ ನರೇಂದ್ರ ಸಿಂಗ್ ತೋಮರ್ ಭಾಗವಹಿಸಿದ್ದರು

ಲಾಕ್ ಡೌನ್ ಅವಧಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಿಕೆಯನ್ನು ಅನುಸರಿಸುವ ಷರತ್ತಿನೊಂದಿಗೆ ಎಲ್ಲ ಕೃಷಿ  ಚಟುವಟಿಕೆಗಳಿಗೆ ವಿನಾಯ್ತಿ ನೀಡುವ ಭಾರತ ಸರ್ಕಾರದ ನಿರ್ಧಾರವನ್ನು  ತೋಮರ್ ಹಂಚಿಕೊಂಡರು

ಅಂತಾರಾಷ್ಟ್ರೀಯ ಸಹಕಾರ, ಆಹಾರ ವ್ಯರ್ಥ ಮಾಡುವುದಕ್ಕೆ ತಡೆ, ಗಡಿಯುದ್ದಕ್ಕೂ ಆಹಾರ ಪೂರೈಕೆಯ ಮೌಲ್ಯಯುತ ಸರಪಳಿಯನ್ನು ನಿರಂತರ ಕಾಯ್ದುಕೊಳ್ಳುವ ಜಿ – 20 ಕೃಷಿ ಸಚಿವರ ಘೋಷಣೆಯನ್ನು ಅಂಗೀಕರಿಸಲಾಗಿದೆ


 

ಆಹಾರ ಭದ್ರತೆ, ಸುರಕ್ಷತೆ ಮತ್ತು ಪೋಷಣೆಯ ಮೇಲೆ ಕೋವಿಡ್ – 19 ರ ಪರಿಣಾಮಗಳ ಕುರಿತು ಮಾತನಾಡಲು ಇಂದು ಆಯೋಜಿಸಲಾದ ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಜಿ- 20 ಕೃಷಿ ಮಂತ್ರಿಗಳ ಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭಾಗವಹಿಸಿದ್ದರು. ಲಾಕ್ ಡೌನ್ ಅವಧಿಯಲ್ಲಿ ಸಾಮಾಜಿಕ ಅಂತರವನ್ನು ಮತ್ತು ವೈಯುಕ್ತಿಕ ನೈರ್ಮಲ್ಯವನ್ನು ಕಾಯ್ದುಕೊಳ್ಳುವಿಕೆಯನ್ನು ಅನುಸರಿಸುವ ಷರತ್ತಿನೊಂದಿಗೆ ಎಲ್ಲ ಕೃಷಿ ಕೈಂಕರ್ಯಗಳಿಗೆ ವಿನಾಯ್ತಿ ನೀಡುವ ಮತ್ತು ಅವಶ್ಯಕ ಕೃಷಿ ಉತ್ಪನ್ನಗಳ ಪೂರೈಕೆ ಹಾಗೂ ಸರಬರಾಜು ಖಚಿತಪಡಿಸುವ ಭಾರತ ಸರ್ಕಾರದ ನಿರ್ಧಾರವನ್ನು ಶ್ರೀ ತೋಮರ್ ಹಂಚಿಕೊಂಡರು. ವಿವಿಧ ರೀತಿಯಲ್ಲಿ ಈ ಬಿಕ್ಕಟ್ಟನ್ನು ಮೆಟ್ಟಿ ನಿಲ್ಲಲು ಪ್ರಧಾನ ಮಂತ್ರಿ ಶ್ರೀ ನರೇದ್ರ ಮೋದಿಯವರು ಮುಂಚೂಣಿಯಲ್ಲಿದ್ದು ದೇಶವನ್ನು ಬೆಂಬಲಿಸುತ್ತಿದ್ದಾರೆ ಮತ್ತು ಕೃಷಿ ಹಿಂದೆ ಬೀಳುವುದಿಲ್ಲ, ನಮ್ಮ ನಾಗರಿಕರ ಅಗತ್ಯಗಳಿಗೆ ಅನುಗುಣವಾಗಿರುತ್ತದೆ ಎಂದು ಶ್ರೀ ತೋಮರ್ ಒತ್ತಿ ಹೇಳಿದರು

 

ಸೌದಿ ಪ್ರೆಸಿಡೆನ್ಸಿ ಜಿ – 20 ಕೃಷಿ ಸಚಿವರ ವಾಸ್ತವ ಸಭೆಯನ್ನು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಆಯೋಜಿಸಿತ್ತು. ಸಭೆಯಲ್ಲಿ ಕೃಷಿಕರ ಜೀವನೋಪಾಯ ಸೇರಿದಂತೆ ಆಹಾರ ಪೂರೈಕೆ ಸರಪಳಿ ಮುಮದುವರಿಯುವುವಿಕೆ  ಖಾತರಿಪಡಿಸುವ ಮಾರ್ಗಗಳು ಮತ್ತು ವಿಧಾನಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಎಲ್ಲ ಜಿ – 20 ಸದಸ್ಯ ರಾಷ್ಟ್ರಗಳ ಕೃಷಿ ಸಚಿವರು, ಅತಿಥಿ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಸಭೆಯಲ್ಲಿ ಭಾಗವಹಿಸಿದ್ದವು. ಜಿ – 20 ರಾಷ್ಟ್ರಗಳನ್ನು ಒಗ್ಗೂಡಿಸುವ ಸೌದಿ ಅರೇಬಿಯಾ ಉಪಕ್ರಮವನ್ನು  ಸಚಿವ ತೋಮರ್ ಸ್ವಾಗತಿಸಿದ್ದಾರೆ.

 

ಕೋವಿಡ್ – 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ  ಜಿ- 20 ರಾಷ್ಟ್ರಗಳು ಆಹಾರ ವ್ಯರ್ಥ ಮಾಡುವುದಕ್ಕೆ ತಡೆ, ಗಡಿಯುದ್ದಕ್ಕೂ ಆಹಾರ ಪೂರೈಕೆಯ ಮೌಲ್ಯಯುತ ಸರಪಳಿಯನ್ನು ನಿರಂತರ ಕಾಯ್ದುಕೊಳ್ಳುವ ವಿಷಯಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ ಹೊಂದುವ ಕುರಿತು ಅಂತಾರಾಷ್ಟ್ರೀಯ ಸಹಕಾರವನ್ನು ಹೊಂದಲು ಜಿ – 20 ನಿರ್ಧರಿಸಿದವು.  ಅಲ್ಲದೆ ಆಹಾರ ಭದ್ರತೆ ಮತ್ತು ಪೋಷಣೆ, ತಾವು ಅಳವಡಿಸಿಕೊಂಡ ಉತ್ತಮ ಅಭ್ಯಾಸಗಳನ್ನು ಮತ್ತು ಕಲಿತ ಪಾಠಗಳನ್ನು ಹಂಚಿಕೊಳ್ಳುವುದು, ಸಂಶೋಧನೆಗಳನ್ನು ಉತ್ತೇಜಿಸುವುದು, ಜವಾಬ್ದಾರಿಯುತ ಹೂಡಿಕೆ, ಕೃಷಿ ಮತ್ತು ಆಹಾರ ವ್ಯವಸ್ಥೆಗಳ ಸುಸ್ಥಿರತೆಯನ್ನು ಮತ್ತು ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಬಲ್ಲ ನಾವೀಣ್ಯತೆಗಳು ಮತ್ತು ಸುಧಾರಣೆಗಳಿಗಾಗಿ ಒಗ್ಗೂಡಿ ಕಾರ್ಯನಿರ್ವಹಿಸಲು ಅವು ನಿರ್ಧರಿಸಿವೆ. ಪ್ರಾಣಿಗಳಿಂದ ವ್ಯಕ್ತಿಗಳಿಗೆ ಹರಡುವ ಸಾಂಕ್ರಾಮಿಕ ರೋಗಗಳ (ಝೂನೊಸಿಸ್) ನಿಯಂತ್ರಣಕ್ಕಾಗಿ ಕಠಿಣ ಸುರಕ್ಷತಾ ಮತ್ತು ಆರೋಗ್ಯಕರ ಕ್ರಮಗಳ ಕುರಿತು ವೈಜ್ಞಾನಿಕ ಆಧಾರದ ಅಂತಾರಾಷ್ಟ್ರೀಯ ಮಾರ್ಗಸೂಚಿಗಳ ಅಭಿವೃದ್ಧಿಗೆ ಜಿ – 20 ರಾಷ್ಟ್ರಗಳು ಒಪ್ಪಿಕೊಂಡಿವೆ

***



(Release ID: 1617047) Visitor Counter : 306