ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹೆಚ್ಚು ಜನರನ್ನು ಸೇರಿಸಿಕೊಂಡು ರೋಟರಿಯವರು ಸಹಾಯ ಮಾಡಲು ಮುಂದೆ ಬರಬೇಕು: ಡಾ. ಹರ್ಷವರ್ಧನ್
Posted On:
21 APR 2020 4:04PM by PIB Bengaluru
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹೆಚ್ಚು ಜನರನ್ನು ಸೇರಿಸಿಕೊಂಡು ರೋಟರಿಯವರು ಸಹಾಯ ಮಾಡಲು ಮುಂದೆ ಬರಬೇಕು:
ಡಾ. ಹರ್ಷವರ್ಧನ್
ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಡಾ. ಹರ್ಷವರ್ಧನ್
ಕೆಲವು ಬೇಜವಾಬ್ದಾರಿ ಮತ್ತು ಸ್ವ-ಹಿತಾಸಕ್ತಿ ಹೊಂದಿರುವವರು ಹರಡುತ್ತಿರುವ ಸುಳ್ಳು ಹಾಗೂ ವದಂತಿಗಳನ್ನು ನಂಬದಂತೆ ಡಾ. ಹರ್ಷವರ್ಧನ್ ಮನವಿ
“ಕೋವಿಡ್-19 ವಿರುದ್ಧದ ನಮ್ಮ ಹೋರಾಟಕ್ಕೆ ಹೆಚ್ಚಿನ ಕೊಡುಗೆ ನೀಡಿರುವ ರೋಟರಿಯನ್ ಗಳನ್ನು ನಾನು ಗೌರವಿಸುತ್ತೇನೆ, ಪಿಎಂ ಕೇರ್ಸ್ ನಿಧಿಗೆ ಕೊಡುಗೆ ನೀಡಿರುವುದು, ಆಸ್ಪತ್ರೆಗಳಿಗೆ ಉಪಕರಣಗಳು, ಸ್ಯಾನಿಟೈಸರ್, ಆಹಾರ, ಪಿಪಿಇ ಕಿಟ್ ಮತ್ತು ಎನ್95 ಮಾಸ್ಕ್ ಗಳು ಇತ್ಯಾದಿ ಕೊಡುಗೆ ನೀಡಿರುವುದು ಶ್ಲಾಘನೀಯ” ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು, ದೇಶಾದ್ಯಂತ ಇರುವ ರೋಟರಿಯನ್ ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಸಂದರ್ಭದಲ್ಲಿ ಹೀಗೆ ಹೇಳಿದರು. ಕೋವಿಡ್-19 ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಇನ್ನೂ ಹೆಚ್ಚು ಆಸಕ್ತಿಯುಳ್ಳ ಜನಗಳನ್ನು ಸೇರಿಸಿಕೊಂಡು ಹೆಚ್ಚಿನ ಮಟ್ಟದಲ್ಲಿ ನೆರವು ಪಡೆಯುವ ಉದ್ದೇಶದಿಂದ ಇದನ್ನು ಆಯೋಜಿಸಲಾಗಿತ್ತು. “27 ವರ್ಷಗಳ ಹಿಂದೆ ನಾನು ಸಾರ್ವಜನಿಕ ಜೀವಕ್ಕೆ ಪಾದಾರ್ಪಣೆ ಮಾಡಿದ ದಿನದಿಂದ ದೇಶದಲ್ಲಿ ರೋಟರಿಯನ್ ಗಳು ದೆಹಲಿ ಮತ್ತು ಭಾರತದಲ್ಲಿ ಪೋಲಿಯೋ ನಿರ್ಮೂಲನೆಗೆ ಸೇವೆ ಸಲ್ಲಿಸಿರುವುದನ್ನು ನೋಡಿದ್ದೇನೆ. ಇದೀಗ ಮತ್ತೊಮ್ಮೆ ರೋಟರಿಯನ್ ಗಳು ಕೋವಿಡ್-19 ಪರಿಣಾಮಗಳನ್ನು ಮತ್ತು ಸವಾಲುಗಳನ್ನು ಎದುರಿಸಲು ಭಾರತ ಸರ್ಕಾರಕ್ಕೆ ತಮ್ಮ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ’’ ಎಂದರು. ನಾವೆಲ್ಲರೂ ಜಗತ್ತಿನ 215 ರಾಷ್ಟ್ರಗಳಲ್ಲಿ ವ್ಯಾಪಿಸಿರುವ ಕೋವಿಡ್-19ಅನ್ನು ಮಣಿಸಲು ಎಲ್ಲರೂ ಒಗ್ಗೂಡಿ ಹೋರಾಡುತ್ತಿದ್ದೇವೆ ಎಂದು ಹೇಳಿದರು.
ಪಿಎಂ ಕೇರ್ಸ್ ನಿಧಿಗೆ 26 ಕೋಟಿ ರೂ. ನೆರವು ನೀಡಿರುವ ರೋಟರಿಯನ್ ಗಳಿಗೆ ಡಾ. ಹರ್ಷವರ್ಧನ್ ಅವರು ಧನ್ಯವಾದಗಳನ್ನು ತಿಳಿಸಿದರು. ಅಲ್ಲದೆ ರೋಟರಿಯನ್ ಗಳು ಸುಮಾರು 75 ಕೋಟಿ ರೂ.ಗಳ ಮೌಲ್ಯದ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಈ ರೀತಿಯ ಮಾನವೀಯ ನೆರವು ಶ್ಲಾಘನೀಯ.
“ಚೀನಾ ಕೊರೊನಾ ಸೋಂಕಿನ ಬಗ್ಗೆ ಜಗತ್ತಿಗೆ ವಿಷಯ ಬಹಿರಂಗಪಡಿಸಿದ ನಂತರ ಇಡೀ ವಿಶ್ವದಲ್ಲಿಯೇ ಮೊದಲು ಪ್ರತಿಕ್ರಿಯಿಸಿದ್ದು ಭಾರತ, ಮರು ದಿನವೇ ಭಾರತ ಪರಿಸ್ಥಿತಿಯ ಮೇಲೆ ನಿಗಾ ಇಡಲು ಕ್ರಮ ಕೈಗೊಂಡಿತು ಮತ್ತು ಮೊದಲ ಜಂಟಿ ಮೇಲ್ವಿಚಾರಣಾ ಸಭೆಯನ್ನೂ ಸಹ ನಡೆಸಿತು. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನನ್ನ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನೂ ಸಹ ರಚಿಸಿ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ನೀಡಿದರು. ಇದು ದೇಶಾದ್ಯಂತ ಮಾರಕ ಸೋಂಕಿನ ವಿರುದ್ಧ ಭಾರೀ ಉತ್ಸಾಹದೊಂದಿಗೆ ಯುದ್ಧ ನಡೆಸಲು ವೇದಿಕೆಯನ್ನು ಸೃಷ್ಟಿಸಿತು” ಎಂದು ಹೇಳಿದರು.
“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಕಾರಾತ್ಮಕ ಮತ್ತು ಮೌಲ್ಯಯುತ ಟೀಕೆಗಳನ್ನು ಕೇಳುತ್ತಿರುವುದಕ್ಕೆ ನನಗೆ ತೃಪ್ತಿಯಾಗುತ್ತಿದೆ. ಸರ್ಕಾರದ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಜಾಗತಿಕ ನಾಯಕರೂ ಕೂಡ ಶ್ಲಾಘಿಸುತ್ತಿದ್ದಾರೆ” ಎಂದು ಅವರು ಹೇಳಿದರು.
“ಬಹುತೇಕ ರಾಷ್ಟ್ರಗಳು ಕೊರೊನಾ ಸೋಂಕಿಗೆ ಲಸಿಕೆ ಮತ್ತು ಔಷಧಗಳನ್ನು ಕಂಡುಹಿಡಿಯುವ ಕಾರ್ಯದಲ್ಲಿ ತೊಡಗಿವೆ. ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಅತ್ಯುತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ಇಡೀ ಜಗತ್ತೇ ಒಪ್ಪಿದೆ. ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವುದಕ್ಕೆ ದೀರ್ಘ ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ನಾವು ಪರಿಣಾಮಕಾರಿ ‘ಸಾಮಾಜಿಕ ಲಸಿಕೆ’ಗಳನ್ನು ಲಾಕ್ ಡೌನ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ತತ್ವಗಳ ರೂಪದಲ್ಲಿನ ಕ್ರಮಗಳನ್ನು ಅವಲಂಬಿಸಬೇಕಾಗುತ್ತದೆ” ಎಂದು ಹೇಳಿದರು.
“ಹಲವು ರಾಷ್ಟ್ರಗಳು ಅತ್ಯಂತ ಕಾಳಜಿಯಿಂದ ತುಂಬಾ ಅಗತ್ಯವಿರುವ ಲಸಿಕೆ ಮತ್ತು ಔಷಧಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಇದು ದೀರ್ಘ ಪಯಣದ ಕಾರ್ಯವಾಗಿದ್ದರೂ, ನಂತರ ಅದನ್ನು ಜಗತ್ತಿನ ಎಲ್ಲ ತೊಂದರೆಗೀಡಾಗಿರುವ ಜನರಿಗೆ ತಲುಪಿಸುವುದು ಕೂಡ ತಡವಾಗುತ್ತದೆ. ತನ್ನ ಉಸ್ತುವಾರಿಯಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ತ್ವರಿತ ರೀತಿಯಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಸುವ ಕೆಲವು ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಮತ್ತು ಹೊಸ ಆವಿಷ್ಕಾರಗಳ ಬಗ್ಗೆ ಕಾರ್ಯೋನ್ಮುಖವಾಗಿದೆ” ಎಂದು ಹೇಳಿದರು. “ಶ್ರೀ ಚಿತ್ರಾ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ(ಎಸ್ ಸಿ ಟಿಐಎಂಎಸ್ ಟಿ) ಅಭಿವೃದ್ಧಿಪಡಿಸಿರುವ ಅತಿ ಕಡಿಮೆ ವೆಚ್ಚದ ಪರೀಕ್ಷಾ ಕಿಟ್ ನಿಂದ ಕೇವಲ 2 ಗಂಟೆಗಳಲ್ಲಿ ಕೋವಿಡ್-19 ಸೋಂಕು ಖಚಿತಪಡಿಸಬಹುದು. ಈ ಪರೀಕ್ಷಾರ್ಥ ಕಿಟ್ ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆರ್ಥಿಕ ನೆರವು ನೀಡಿದೆ. ಅದಕ್ಕೆ ಚಿತ್ರಾ ಜೀನ್ ಲ್ಯಾಂಪ್-ಎನ್ ಕರೆಯಲಾಗುತ್ತಿದ್ದು, ಇದು ವಿಶೇಷವಾಗಿ ಸಾರ್ಸ್-ಸಿಒವಿ-2 ಎನ್- ವಂಶಿವಾಹಿಯನ್ನು ಪತ್ತೆಹಚ್ಚುತ್ತದೆ ಮತ್ತು ಎರಡು ವಿಭಾಗಗಳಲ್ಲಿ ಅದು ಸೋಂಕಿನ ಪರೀಕ್ಷೆ ನಡೆಸಲಿದ್ದು, ಅದು ಹರಡುವುದನ್ನೂ ಸಹ ಗುರುತಿಸಲಿದೆ” ಎಂದು ಹೇಳಿದರು.
ತಮ್ಮ ಸುತ್ತಮುತ್ತಲ ಅಪಾಯದ ಬಗ್ಗೆ ಕುತೂಹಲವನ್ನು ಉಲ್ಲೇಖಿಸಿ ಮಾತನಾಡಿದ ಡಾ. ಹರ್ಷವರ್ಧನ್ ಅವರು ‘ಆರೋಗ್ಯ ಸೇತು’ ಮೊಬೈಲ್ ಅಪ್ಲಿಕೇಶನ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ, ಅದನ್ನು 5 ಕೋಟಿಗೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಭಾರತ ಸರ್ಕಾರದ ಈ ಮೊಬೈಲ್ ಆಪ್, ಕೋವಿಡ್-19 ವಿರುದ್ಧದ ನಮ್ಮ ಹೋರಾಟದಲ್ಲಿ ಭಾರತದ ಜನತೆಯೊಂದಿಗೆ ಸೇರಿ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲಿದೆ. ಈ ಮೊಬೈಲ್ ಆಪ್, ಭಾರತ ಸರ್ಕಾರದ ಉಪಕ್ರಮವಾಗಿದ್ದು, ಕೋವಿಡ್-19 ನಿಯಂತ್ರಣ ಕುರಿತಂತೆ ಸೂಕ್ತ ಸಲಹೆಗಳು ಮತ್ತು ಉತ್ತಮ ಪದ್ಧತಿಗಳು ಹಾಗೂ ಅಪಾಯಗಳ ಬಗ್ಗೆ ಬಳಕೆದಾರರಿಗೆ ಮಾಹಿತಿಯನ್ನೂ ನೀಡಿ, ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವರು, “ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಈ ಪ್ರಸಕ್ತ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಅನಿರೀಕ್ಷಿತ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಆರೋಗ್ಯ ರಕ್ಷಣಾ ಸೇವೆಗಳ ಕುರಿತಂತೆ ವಿಸ್ತೃತವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಂತಹ ರೋಗಿಗಳಿಗೆ ಮನೆಗಳಿಗೇ ಔಷಧಗಳನ್ನು ಪೂರೈಸುವುದು, ಡಿಜಿಟಲ್ ಪ್ರಿಸ್ ಕ್ರಿಪ್ಶನ್ ಮತ್ತು ಟೆಲಿ ಕನ್ಸಲ್ ಟೇಷನ್ ಮತ್ತಿತರ ಸೇವೆಗಳನ್ನು ಒದಗಿಸಬಹುದಾಗಿದೆ. ಡಾ. ಹರ್ಷವರ್ಧನ್ ಅವರು, ರೋಟರಿಯನ್ ಗಳು ಕೆಲವು ಬೇಜವಾಬ್ದಾರಿಯುತ ಮತ್ತು ಸ್ವಂತ ಹಿತಾಸಕ್ತಿ ಹೊಂದಿರುವವರು ಸೃಷ್ಟಿಸುವ ಸುಳ್ಳು ಮತ್ತು ವದಂತಿಗಳಿಗೆ ನಂಬಬಾರದು ಎಂದು ಮನವಿ ಮಾಡಿದರು. ಪರಿಸ್ಥಿತಿಯಿಂದ ಹೊರಬರಲು ನಮ್ಮ ಸರ್ಕಾರ 543 ಕೋಟಿ ಎಸ್ಎಂಎಸ್ ಗಳನ್ನು ಕಳುಹಿಸಿದೆ ಮತ್ತು ಮೊಬೈಲ್ ಗಳಲ್ಲಿ ವಾಸ್ತವವಾಗಿ ಸಂಭಾಷಣೆ ಆರಂಭವಾಗುವ ಮುನ್ನ ಪ್ರಿ ರೆಕಾರ್ಡೆಡ್ ಕಾಲರ್ ಟ್ಯೂನ್ ಗಳನ್ನು ಪರಿಚಯಿಸಲಾಗಿದೆ” ಎಂದು ಹೇಳಿದ್ದಾರೆ.
“ರೋಟರಿಯನ್ ಗಳಿಂದ ಇನ್ನೂಂದು ಸುತ್ತಿನ ಕ್ರಿಯಾಶೀಲ ಸಹಕಾರ ಮತ್ತು ಕೊಡುಗೆಯನ್ನು ನಾವು ನಿಜವಾಗಿಯೂ ಎದುರು ನೋಡುತ್ತಿದ್ದೇವೆ ಎಂದ ಡಾ. ಹರ್ಷವರ್ಧನ್, ದೇಶದ ಹಿತಾಸಕ್ತಿಯಿಂದ ಫಲಿತಾಂಶ ಆಧಾರಿತವೆಂದು ಖಚಿತವಾಗಿ ಸಾಬೀತಾಗಲಿದೆ ಎಂದು ನಾನು ನಂಬಿದ್ದೇನೆ ಎಂದರು.
***
(Release ID: 1616901)
Visitor Counter : 275