ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಪ್ರಸ್ತುತ ಕೊವಿಡ್‌-19ನಿಂದಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ಆರ್‌ ಇ ಯೋಜನೆಗಳನ್ನು ಮುಂದುವರಿಸಲು ವ್ಯತ್ಯಯವಾಗಿರುವುದರಿಂದ ಎಂಎನ್‌ಆರ್‌ಇ ಅನುದಾನದ ಅವಧಿ ವಿಸ್ತರಣೆ

Posted On: 21 APR 2020 3:11PM by PIB Bengaluru

ಪ್ರಸ್ತುತ ಕೊವಿಡ್‌-19ನಿಂದಾಗಿ ಜಾರಿಗೊಳಿಸಿರುವ ಲಾಕ್ಡೌನ್ನಿಂದಾಗಿ ಆರ್ ಯೋಜನೆಗಳನ್ನು ಮುಂದುವರಿಸಲು ವ್ಯತ್ಯಯವಾಗಿರುವುದರಿಂದ ಎಂಎನ್ಆರ್ ಅನುದಾನದ ಅವಧಿ ವಿಸ್ತರಣೆ

ಕೊವಿಡ್‌-19ನಿಂದ ಜಾರಿಗೊಳಿಸಿರುವ ಲಾಕ್ಡೌನ್ಅನ್ನು ಅನಿರೀಕ್ಷಿತ ಸಂದರ್ಭ ಎಂದು ಪರಿಗಣಿಸಬಹುದು

 

ಕೋವಿಡ್‌–19ನಿಂದ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ನವೀಕರಿಸಬಹುದಾದ ಇಂಧನಗಳ ಅನುಷ್ಠಾನದ ಸಂಸ್ಥೆಗಳ ಆರ್‌ಇ ಯೋಜನೆಗಳಿಗೆ ಅನುದಾನ ದೊರೆಯುವ ಅವಧಿ ವಿಸ್ತರಣೆಯಾಗಲಿದೆ ಎಂದು ನವೀಕರಣ ಮತ್ತು ಹೊಸ ಇಂಧನ ಸಚಿವಾಲಯ ತಿಳಿಸಿದೆ. ಲಾಕ್‌ಡೌನ್‌ ಮುಗಿದ ಬಳಿಕವೂ ಹೆಚ್ಚುವರಿಯಾಗಿ 30 ದಿನಗಳು ದೊರೆಯಲಿವೆ. 2020ರ ಏಪ್ರಿಲ್‌ 17ರಂದು ಜಾರಿಗೊಳಿಸಿದ ಆದೇಶದ ಅನ್ವಯ ವಿಸ್ತರಣೆ ಅವಧಿಯು ಲಾಕ್‌ಡೌನ್‌ ಮತ್ತು ನಂತರದ 30 ದಿನಗಳ ಬಳಿಕ ವಿಸ್ತರಣೆಯಾಗಲಿದೆ ಎಂದು ತಿಳಿಸಿದೆ. ವಿಸ್ತರಣೆ ಅವಧಿಯನ್ನು ಪರಿಶೀಲಿಸುವುದಿಲ್ಲ. ಲಾಕ್‌ಡೌನ್‌ನಿಂದ ವಿಸ್ತರಣೆಗೆ ಯಾವುದೇ ಸಾಕ್ಷ್ಯಗಳನ್ನು ಕೇಳುವುದಿಲ್ಲ.

ನವೀಕರಣ ಮತ್ತು ಹೊಸ ಇಂಧನ ಸಚಿವಾಲಯದ ಎಲ್ಲ ನವೀಕರಿಸಬಹುದಾದ ಇಂಧನಗಳ ಅನುಷ್ಠಾನ ಸಂಸ್ಥೆಗಳು ಕೋವಿಡ್‌–19ನಿಂದ ವಿಧಿಸಲಾಗಿರುವ ಲಾಕ್‌ಡೌನ್‌ ಅನ್ನು ಅನಿರೀಕ್ಷಿತ ಸಂದರ್ಭ ಎಂದು ಪರಿಗಣಿಸುತ್ತದೆ.

ಕೋವಿಡ್‌–19ನಿಂದ ವಿಧಿಸಲಾಗಿರುವ ಲಾಕ್‌ಡೌನ್‌ ಅನ್ನು ಅನಿರೀಕ್ಷಿತ ಸಂದರ್ಭವಾಗಿ ಪರಿಗಣಿಸಬೇಕು ಎಂದು ನವೀಕರಿಸಬಹುದಾದ ಇಂಧನ ಇಲಾಖೆಯ ಸೂಚನೆಯನ್ನು (ಇಂಧನ ಇಲಾಖೆಯ ವ್ಯಾಪ್ತಿಯ ಸಂಸ್ಥೆಗಳು/ ರಾಜ್ಯಗಳಲ್ಲಿನ ಇಂಧನ ಇಲಾಖೆಗಳು) ತಿಳಿಸಲಾಗಿದೆ.

ಆರ್‌ಇ ಡೆವಲಪರ್‌ಗಳು ಈ ಬಗ್ಗೆ ಸಚಿವಾಲಯಕ್ಕೆ ಮನವಿ ಸಲ್ಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ. ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ (ಕೊವಿಡ್-19 ಸಂದರ್ಭದಲ್ಲಿ) ಸಾಮಾನ್ಯ ಅವಧಿಯನ್ನು ವಿಸ್ತರಿಸುವ ಅವಕಾಶ ನೀಡಲಾಗಿದೆ. ಲಾಕ್‌ಡೌನ್‌ ಮುಗಿದ ಬಳಿಕವೂ ಹೆಚ್ಚುವರಿ ಅವಧಿಯ ಅಗತ್ಯವೂ ಇದೆ ಎಂದು ತಿಳಿಸಲಾಗಿದೆ.

ಎಂಎನ್‌ಆರ್‌ಇ ಈ ಮೊದಲು ಅಂದರೆ 2020ರ ಮಾರ್ಚ್‌ 20ರಂದು ಎಸ್‌ಇಸಿಐ, ಎನ್‌ಟಿಪಿಸಿ ಮತ್ತು ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಿಗೆ/ ಪ್ರಧಾನ ಕಾರ್ಯದರ್ಶಿಗಳಿಗೆ/ವಿದ್ಯುತ್‌ ಇಲಾಖೆ ಕಾರ್ಯದರ್ಶಿಗಳಿಗೆ/ಇಂಧನ/ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ನವೀಕರಿಸಬಹುದಾದ ಇಂಧನ ವಿಭಾಗಗಳಿಗೆ ನಿರ್ದೇಶನ ನೀಡಿತ್ತು. ಲಾಕ್‌ಡೌನ್‌ನಿಂದ ಆಗಿರುವ ವಿವಿಧ ರೀತಿಯ ವಿಳಂಬವನ್ನು ಅನಿರೀಕ್ಷಿತ ಸಂದರ್ಭ ಎಂದು ಪರಿಗಣಿಸಬೇಕು. ಹೀಗಾಗಿ, ಸಾಕ್ಷ್ಯಾಧಾರಗಳ ಅನ್ವಯ ಅಗತ್ಯ ಸಮಯವನ್ನು ವಿಸ್ತರಿಸಬೇಕು. ಈ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿದೆ.

***



(Release ID: 1616899) Visitor Counter : 214