ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಸೌರ ಪಿವಿ ಮಾಡ್ಯೂಲ್ ಮತ್ತು ಸೌರ ಪಿವಿ ಕೋಶಗಳ ಮಾದರಿಗಳು ಹಾಗೂ ಉತ್ಪಾದಕರ ಅನುಮೋದಿತ ಪಟ್ಟಿಗಳ ಅನುಷ್ಠಾನ ಜಾರಿಗೆ ಬರುವ ದಿನಾಂಕವನ್ನು ಎಂ ಎನ್ ಆರ್ ಇ, ಆರು ತಿಂಗಳವರೆಗೆ ಅಂದರೆ 30.09.2020 ರವರೆಗೆ ವಿಸ್ತರಿಸಿದೆ

Posted On: 21 APR 2020 2:30PM by PIB Bengaluru

ಸೌರ ಪಿವಿ ಮಾಡ್ಯೂಲ್ ಮತ್ತು ಸೌರ ಪಿವಿ ಕೋಶಗಳ ಮಾದರಿಗಳು ಹಾಗೂ ಉತ್ಪಾದಕರ ಅನುಮೋದಿತ ಪಟ್ಟಿಗಳ ಅನುಷ್ಠಾನ ಜಾರಿಗೆ ಬರುವ ದಿನಾಂಕವನ್ನು ಎಂ ಎನ್ ಆರ್ ಇ, ಆರು ತಿಂಗಳವರೆಗೆ ಅಂದರೆ 30.09.2020 ರವರೆಗೆ ವಿಸ್ತರಿಸಿದೆ

 

ಸೌರ ಪಿವಿ ಮಾಡ್ಯೂಲ್ ಮತ್ತು ಸೌರ ಪಿವಿ ಕೋಶಗಳ ಮಾದರಿಗಳು ಮತ್ತು ಉತ್ಪಾದಕರ ಅನುಮೋದಿತ ಪಟ್ಟಿಗಳ ಪರಿಣಾಮಕಾರಿ ಅನುಷ್ಠಾನದ ದಿನಾಂಕ ಹಿಂದೆ 31.03.2020 ಇದ್ದು ಕೋವಿಡ್ – 19 ರ ಹರಡುವಿಕೆಯಿಂದಾಗಿ ಅದನ್ನು 30 ಸೆಪ್ಟೆಂಬರ್ 2020 ರವರೆಗೆ ವಿಸ್ತರಿಸುವ ಕಚೇರಿ ಜ್ಞಾಪಕ ಪತ್ರವನ್ನು ಇತ್ತೀಚೆಗೆ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ ಎನ್ ಆರ್ ಇ) ಪ್ರಕಟಿಸಿದೆ.     

ದೇಶಕ್ಕೆ ಇಂಧನ ಸುರಕ್ಷತೆ ಒದಗಿಸುವ ಮತ್ತು ಸೌರಫಲಕಗಳ ವೋಲ್ಟೀಯ ಸೆಲ್ಸ್ ಗಳು ಹಾಗೂ ಮಾಡ್ಯೂಲ್ ಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ ಎನ್ ಆರ್ ಇ) ಸೌರಫಲಕಗಳ ವೋಲ್ಟೀಯ ಸೆಲ್ಸ್ ಗಳಿಗೆ ಮಾದರಿಗಳು ಮತ್ತು ಉತ್ಪಾದಕರ ಅನುಮೋದಿತ ಪಟ್ಟಿಗಳಿಗೆ ಸಂಬಂಧಿಸಿದ ಆದೇಶವನ್ನು 02.01.2019 ರಂದು ಹೊರಡಿಸಿದೆ. ಇದರಲ್ಲಿ ಎ ಎಲ್ ಎಂ ಎಂ ಪಟ್ಟಿ – 1 (ಸೌರಫಲಕಗಳ ವೋಲ್ಟೀಯ ಮಾದರಿಗಳುಮತ್ತು ಎ ಎಲ್ ಎಂ ಎಂ ಪಟ್ಟಿ – 2 (ಸೌರಫಲಕಗಳ ವೋಲ್ಟೀಯ ಸೆಲ್ಸ್ ಗಳು) ರಲ್ಲಿ ಬಿಐಎಸ್ ಮಾನದಂಡಗಳಿಗೆ ಅನುಸಾರ  ಸೌರಫಲಕಗಳ ವೋಲ್ಟೀಯ ಸೆಲ್ಸ್ ಗಳು ಹಾಗೂ ಮಾಡ್ಯೂಲ್ ಗಳ ಮಾದರಿಗಳು ಮತ್ತು ಉತ್ಪಾದಕರ ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಈ ಕಾರ್ಯವಿಧಾನವು ಪಟ್ಟಿ – 1 ಉಲ್ಲೇಖಿಸುವ ಮಾದರಿಗಳು ಮತ್ತು ಸೌರ ಪಿ ವಿ ಮಾದರಿಗಳ ಉತ್ಪಾದಕರನ್ನು ಹೊಂದಲು ಮತ್ತು ಪಟ್ಟಿ – 2  ಉಲ್ಲೇಖಿಸುವ ಮಾದರಿಗಳು ಮತ್ತು ಸೌರ ಪಿ ವಿ ಸೆಲ್ಸ್ ಉತ್ಪಾದಕರನ್ನು ಹೊಂದಲು ಪ್ರಸ್ತಾಪಿಸುತ್ತದೆ.

ಜಾರಿಗೆ ಬರುವ ದಿನಾಂಕದ ನಂತರ ಕೇಂದ್ರ ಸರ್ಕಾರದ ಸಾಮಾನ್ಯ ಬಿಡ್ಡಿಂಗ್ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ಸ್ವಾಮ್ಯದ/ಸರ್ಕಾರ ನೆರವು ಪಡೆದ/ಬಿಡ್ ಮಾಡಲಾದ ಎಲ್ಲ ಸೌರ ವಿದ್ಯುತ್ ಯೋಜನೆಗಳು ಅನುಮೋದನೆ ಪಡೆದ ಮತ್ತು ಎ ಎಲ್ ಎಂ ಎಂ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾದ ಉತ್ಪಾದಕರಿಂದ ಸೌರ ಪಿ ವಿ ಸೆಲ್ಸ್ ಮತ್ತು ಮಾಡ್ಯೂಲ್ ಗಳನ್ನು ಇಂತಹ ಯೋಜನೆಗಳಿಗಾಗಿ ಕಡ್ಡಾಯವಾಗಿ ಸಂಗ್ರಹಿಸಲಾಗುತ್ತದೆ ಎಂದು ಎ ಎಲ್ ಎಂ ಎಂ ಆದೇಶ ಹೇಳುತ್ತದೆ.  

ಎ ಎಲ್ ಎಂ ಎಂ ಪಟ್ಟಿಗಳು ಜಾರಿಗೆ ಬಂದ ನಂತರ ಸೌರ ಪಿ ವಿ ಸೆಲ್ಸ್ ಗಳು ಮತ್ತು ಮಾಡ್ಯೂಲ್ ಗಳನ್ನು ಎ ಎಲ್ ಎಂ ಎಂ ಪಟ್ಟಿಗಳಿಂದ ಮಾತ್ರ ಕಡ್ಡಾಯವಾಗಿ ಖರೀದಿಸುವಂತೆ ತಮ್ಮ ಟೆಂಡರ್ ನ ದಾಖಲೆಗಳಲ್ಲಿ ಕಲಂಗಳನ್ನು ಸೇರಿಸುವಂತೆ ನೇರವಾದ ಮತ್ತು ಸ್ಪಷ್ಟವಾದ ನಿರ್ದೇಶನಗಳನ್ನು ಸತತವಾಗಿ ಎಲ್ಲ ಕಾರ್ಯರೂಪಕ್ಕೆ ತರುವ ಸಂಸ್ಥೆಗಳಿಗೆ ಎಂ ಎನ್ ಆರ್ ಇ ನಿರ್ದೇಶನ ನೀಡುತ್ತಿದೆ.

ಸೋಲಾರ್ ಪಿ ವಿ ಸೆಲ್ಸ್ ಮತ್ತು ಮಾಡ್ಯೂಲ್ ಗಳ ಉತ್ಪಾದಕರು ನವೀಕರಿಸಬಹುದಾದ ಇಂಧನ ಉತ್ಪಾದಕರು, ಕಾರ್ಯರೂಪಕ್ಕೆ ತರುವ ಸಂಸ್ಥೆಗಳು ಮತ್ತು ಆರ್ ಇ ವಿದ್ಯುತ್ ಸಂಗ್ರಹಗಾರು ಮತ್ತು ಮುಖ್ಯವಾಗಿ ಆರ್ ಇ ವಲಯಕ್ಕೆ ಸಾಲ ನೀಡುವ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು, ಸೌರ ಪಿ ವಿ ಸೆಲ್ ಗಳು ಮತ್ತು ಮಾಡ್ಯೂಲ್ ಗಳಿಗಾಗಿ ಅನುಮೋದಿತ ಮಾದರಿಗಳು ಮತ್ತು ಉತ್ಪಾದಕರ ಪಟ್ಟಿ (ಎ ಎಲ್ ಎಂ ಎಂ) ಕುರಿತು ದಿನಾಂಕ 02.01.2019 ರಂದು ಜಾರಿಗೊಳಿಸಿದ ಆದೇಶದಂತೆ ತಮ್ಮ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ತಮ್ಮ ಎಲ್ಲ ಪಾಲುದಾರರಿಗೆ ಎಂ ಎನ್ ಆರ್ ಇ  ಪುನರುಚ್ಛರಿಸಿದೆ.

***


(Release ID: 1616862) Visitor Counter : 220