ಪಂಚಾಯತ್ ರಾಜ್ ಸಚಿವಾಲಯ

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು ಗ್ರಾಮ ಮತ್ತು ಜಿಲ್ಲಾಮಟ್ಟದ ಸ್ಥಳೀಯ ಆಡಳಿತಗಳ ಹಲವು ಕ್ರಮಗಳು

Posted On: 21 APR 2020 12:44PM by PIB Bengaluru

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು ಗ್ರಾಮ ಮತ್ತು ಜಿಲ್ಲಾಮಟ್ಟದ ಸ್ಥಳೀಯ ಆಡಳಿತಗಳ ಹಲವು ಕ್ರಮಗಳು

ಸ್ಥಳೀಯ ಜನರನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸುವುದು, ಗ್ರಾಮ ಅಥವಾ ನಗರವನ್ನು ಪ್ರವೇಶಿಸುವವರು ಮತ್ತು ಹೊರಗೆ ಹೋಗುವವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ತಪಾಸಣೆ ಠಾಣೆ ಸ್ಥಾಪಿಸುವುದು, ಸಾರ್ವಜನಿಕ ಸ್ಥಳಗಳ ನಿರಂತರವಾಗಿ ಸ್ಯಾನಿಟೈಜೇಷನ್ ಹಾಗೂ ಕ್ವಾರಂಟೈನ್‌ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಸಂಗ್ರಹ ಕೇಂದ್ರಗಳನ್ನು ನಿರಂತರವಾಗಿ ಪರಿಶೀಲಿಸುವುದು ಸ್ಥಳೀಯ ಆಡಳಿತಗಳ ಕಾರ್ಯವಾಗಿದೆ

 

ದೇಶದಲ್ಲಿ ಕೋವಿಡ್–19 ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು ಗ್ರಾಮ ಮತ್ತು ಜಿಲ್ಲಾಮಟ್ಟದ ಸ್ಥಳೀಯ ಆಡಳಿತಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೆಲವು ಕ್ರಮಗಳು ಅತ್ಯುತ್ತಮ ಉದಾಹರಣೆಯಾಗಿವೆ. ಅವುಗಳ ವಿವರ ಇಂತಿದೆ -

ಕರ್ನಾಟಕ: ಗ್ರಾಮಸ್ಥರನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರಾಮನಗರ ಜಿಲ್ಲೆಯ ಕನರಪುರ ತಾಲ್ಲೂಕಿನಲ್ಲಿ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿಯು ಆಶಾ ಕಾರ್ಯಾಕರ್ತರಿಗೆ ಥರ್ಮಲ್‌ ಸ್ಕ್ಯಾನರ್‌ಗಳನ್ನು ಒದಗಿಸಿದೆ.

   

ಪಂಜಾಬ್‌: ಪಂಜಾಬ್‌ನ ಪಠಾಣಕೋಟ್‌ ಜಿಲ್ಲೆಯ ಹರಾ ಗ್ರಾಮದ ಸರಪಂಚ ಎಲ್ಲರಿಗೂ ಈಗ ಸ್ಫೂರ್ತಿದಾಯಕವಾಗಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಕ್ಷತೆ ಕಾಪಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಕೋವಿಡ್‌–19 ತಡೆಗಟ್ಟುವ ಬಗ್ಗೆ ಖುದ್ದಾಗಿ ಸರಪಂಚ ಅವರೇ ಮನೆ ಬಾಗಿಲಿಗೆ ತೆರಳಿ ವಿವರ ನೀಡಿ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ. ಸ್ವತಃ ತಾವೇ ಮುಖಕ್ಕೆ ಮಾಸ್ಕ್‌ ಅನ್ನು ಹೊಲಿದುಕೊಂಡಿದ್ದಾರೆ. ಇತರ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಬಂದ್‌ ಮಾಡಿಸಿದ್ದಾರೆ. ಗ್ರಾಮಕ್ಕೆ ಪ್ರವೇಶಿಸುವ ಎಲ್ಲ ರಸ್ತೆಗಳಲ್ಲಿ ತಪಾಸಣೆ ಠಾಣೆಗಳನ್ನು ಸ್ಥಾಪಿಸಿದ್ದಾರೆ. ಸರಪಂಚ ಅವರ ಉಸ್ತುವಾರಿಯಲ್ಲಿ ಸರ್ಕಾರಿ ಶಾಲೆಯನ್ನು ಐಸೋಲೇಷನ್‌ ವಾರ್ಡ್‌ ಅನ್ನಾಗಿ ಪರಿವರ್ತಿಸಲಾಗಿದೆ.

ರಾಜಸ್ಥಾನ: ಗ್ರಾಮ ಪಂಚಾಯಿತಿ ಕೈಗೊಂಡಿರುವ ಕ್ರಮಗಳು– ನಾಗೌರ್‌ ಜಿಲ್ಲೆಯ ಜಯಲ್‌ನಲ್ಲಿ ಕೋವಿಡ್‌–19 ನಿಯಂತ್ರಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.

  • ನೈರ್ಮಲ್ಯೀಕರಣ: - ನಿಯಮಿತವಾಗಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮದಲ್ಲಿ ಸೋಡಿಯಂ ಹೈಪೊಕ್ಲೊರೈಟ್‌ ಸಿಂಪಡಿಸಲಾಗುತ್ತಿದೆ.
  • ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ.
  • ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ರೇಷನ್‌ ವಿತರಿಸುತ್ತಿದ್ದಾರೆ. ನಿರಾಶ್ರಿತರಿಗೆ ತಯಾರಿಸಿದ ಆಹಾರವನ್ನು ವಿತರಿಸಲಾಗುತ್ತಿದೆ.
  • ಪರಿಹಾರ ಕೇಂದ್ರಗಳಲ್ಲಿನ ವಸ್ತುಗಳನ್ನು ನಿಯಮಿತವಾಗಿ ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
  • ತಯಾರಿಸಿದ ಆಹಾರವನ್ನು ಒದಗಿಸಲು ಮತ್ತು ಇತರ ಆಹಾರದ ವಸ್ತುಗಳನ್ನು ಅಗತ್ಯ ಇರುವವರಿಗೆ ವಿತರಿಸುವಂತೆ ಜನರನ್ನು ಪ್ರೋತ್ಸಾಹಿಸಲಾಗಿದೆ.
  • ಸರ್ಕಾರದ ಸಲಹೆಯಂತೆ ಕ್ವಾರಂಟೈನ್‌ ಕೇಂದ್ರವನ್ನು (ಗ್ರಾಮ ಪಂಚಾಯಿತಿ ಶಾಲೆ) ಗ್ರಾಮ ಪಂಚಾಯಿತಿ ಸ್ಥಾಪಿಸಿದೆ.
  • ಸಾಮಾಜಿಕ ಸೇವೆಯ ಸಂಘಟನೆಗಳು ರೇಷನ್‌ ವಿತರಣೆ ಜತೆಯಲ್ಲಿ ಬಿಡಾಡಿ ಜಾನುವಾರುಗಳಿಗೆ ಮೇವು ವಿತರಿಸುತ್ತಿವೆ.
  • ಮನೆಯಲ್ಲಿ ಸುರಕ್ಷಿತವಾಗಿರುವಂತೆ ಜನರಿಗೆ ಸೂಚನೆಗಳನ್ನು ನೀಡಲಾಗಿದೆ. ಈ ಬಗ್ಗೆ ಪ್ರಚಾರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಹಿತಿ ಫಲಕ, ಲೌಡ್‌ ಸ್ಪೀಕರ್‌ಗಳು ಮತ್ತಿತರ ಮಾರ್ಗೋಪಾಯಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗಿದೆ.

Description: WhatsApp Image 2020-04-04 at 10.24.12 AM (1).jpeg  Description: WhatsApp Image 2020-04-04 at 10.19.57 AM.jpeg

Description: WhatsApp Image 2020-04-04 at 10.22.02 AM.jpeg  Description: WhatsApp Image 2020-04-04 at 10.21.01 AM.jpeg

ತೆಲಂಗಾಣ: ತೆಲಂಗಾಣದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಗ್ರಾಮದ ಸಂಗ್ರಹ ಕೇಂದ್ರಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಮೂಲಕ ಅಕ್ರಮಗಳು ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ. ಯಡಾದ್ರಿ ಮತ್ತು ಭೈನ್ಸಾ ಕಲೆಕ್ಟರ್‌ಗಳು ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಹಾರ ಧಾನ್ಯಗಳನ್ನು ಪಾರದರ್ಶಕವಾಗಿ ಮತ್ತು ಎಲ್ಲ ಲೆಕ್ಕಪತ್ರವೂ ಸಮರ್ಪಕವಾಗಿ ಇರುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ರೈತರಿಗೆ ಭರವಸೆ ನೀಡಿದರು.

  

ಹಿಮಾಚಲ ಪ್ರದೇಶ:

  • ದುನಿ ಪಂಚಾಯಿತಿಯ (ಕಿನ್ನೌರ್‌ ಜಿಲ್ಲೆ) ಮಹಿಳಾ ಮಂಡಳಗಳು ತಮ್ಮ ಸ್ವಂತ ವೆಚ್ಚದಲ್ಲಿ ಮುಖದ ಮಾಸ್ಕ್‌ಗಳನ್ನು ಹೊಲಿಯುತ್ತಿದ್ದಾರೆ. ಪ್ರತಿ ದಿನ 200ಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಸಿದ್ಧಪಡಿಸಿ ವಿಶೇಷವಾಗಿ ಬಡ ಕಾರ್ಮಿಕರು ಸೇರಿದಂತೆ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿತರಿಸುತ್ತಿದ್ದಾರೆ.
  • ಗೋಬಾಂಗ್‌ ಗ್ರಾಮ ಪಂಚಾಯಿತಿಯ ರೋಪಾ ವ್ಯಾಲಿ (ಕಿಣ್ಣೂರ್‌ ಜಿಲ್ಲೆ) ಎಲ್ಲ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಸಂಸ್ಥೆಗಳು, ಪಂಚಾಯಿತಿ ಪ್ರದೇಶಗಳನ್ನು ಸ್ಯಾನಿಟೈಜ್‌ ಮಾಡಿ ನೈರ್ಮಲ್ಯ ಕಾರ್ಯ ಕೈಗೊಂಡಿದೆ. ಸಾಮಾಜಿಕ ಅಂತರ ಕಾಪಾಡುವುದು ಮತ್ತು ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಂಚಾಯಿತಿ ಅರಿವು ಮೂಡಿಸಿದೆ.

Description: C:\Users\Pooja Sharma\AppData\Local\Microsoft\Windows\INetCache\Content.Word\Screenshot_2020-04-19-20-49-42-99.pngDescription: C:\Users\Pooja Sharma\Desktop\Duni.jpg

***



(Release ID: 1616857) Visitor Counter : 174