ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ನಾಗರಿಕ ಸೇವಾ ದಿನದಂದು ಕೋವಿಡ್-19 ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ನಾಗರಿಕ ಸಿಬ್ಬಂದಿಯ ಕಾರ್ಯಕ್ಕೆ ಡಾ. ಜಿತೇಂದ್ರ ಸಿಂಗ್ ಶ್ಲಾಘನೆ

Posted On: 21 APR 2020 4:09PM by PIB Bengaluru

ನಾಗರಿಕ ಸೇವಾ ದಿನದಂದು ಕೋವಿಡ್-19 ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ನಾಗರಿಕ ಸಿಬ್ಬಂದಿಯ ಕಾರ್ಯಕ್ಕೆ ಡಾ. ಜಿತೇಂದ್ರ ಸಿಂಗ್ ಶ್ಲಾಘನೆ

 

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, ನಾಗರಿಕ ಸೇವಾ ದಿನ – 2020ರ ಅಂಗವಾಗಿ ಇಂದು 25 ರಾಜ್ಯಗಳು ಹಾಗೂ 5 ಕೇಂದ್ರಾಡಳಿತ ಪ್ರದೇಶಗಳೊಂದಿಗೆ ರಾಷ್ಟ್ರವ್ಯಾಪಿ ನಡೆದ ವಿಡಿಯೋ ಸಂವಾದದಲ್ಲಿ ಕೋವಿಡ್-19 ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ನಾಗರಿಕ ಸೇವಾ ಅಧಿಕಾರಿಗಳು ಸಲ್ಲಿಸುತ್ತಿರುವ ಅಮೂಲ್ಯ ಸೇವೆಗಳನ್ನು ಶ್ಲಾಘಿಸಿದರು. ಅವರ ಸೇವೆಗಳಿಗೆ ಯಾವುದೇ ರೀತಿಯ ಬೆಲೆಕಟ್ಟಲಾಗದು ಎಂದ ಅವರು, ನೈಸರ್ಗಿಕ ವಿಪತ್ತುಗಳ ವಿರುದ್ಧ ಸೇವೆ ಸಲ್ಲಿಸುವ 29 ಸಂಘಟನೆಗಳನ್ನು ಕರುಣಾ ವೇದಿಕೆಯ ಮೂಲಕ ಒಗ್ಗೂಡಿಸಿದ ಯಶಸ್ವಿ ಉದಾಹರಣೆಯನ್ನು ನೀಡಿದರು. ಡಾ. ಸಿಂಗ್ ಅವರು, ಕೋವಿಡ್-19 ವಿರುದ್ಧ ಸರ್ಕಾರದ ಪ್ರಯತ್ನಗಳಿಗೆ ಬೆಂಬಲವಾಗಿ ಎಲ್ಲ ನಾಗರಿಕ ಸೇವಾ ಅಧಿಕಾರಿಗಳು ತಮ್ಮ ಒಂದು ದಿನದ ವೇತನವನ್ನು ಪ್ರಧಾನಮಂತ್ರಿಗಳ ಕೇರ್ಸ್ ನಿಧಿಗೆ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು. ಜಿಲ್ಲಾ ಕಲೆಕ್ಟರ್ ಗಳು ಕೋವಿಡ್-19 ವಿರುದ್ಧದ ಹೋರಾಟದ ನೇತೃತ್ವವನ್ನು ವಹಿಸಿದ್ದಾರೆ ಎಂದ ಅವರು, ಭಾರತದಲ್ಲಿ ಸಾಂಕ್ರಾಮಿಕ ನಿಯಂತ್ರಣ ಹೊಣೆ ನಾಗರಿಕ ಸೇವಾ ಅಧಿಕಾರಿಗಳ ಹೆಗಲ ಮೇಲಿದೆ ಎಂದರು.

https://ci5.googleusercontent.com/proxy/fZN0fEAGs6Znn0tz3GWI_WOUvq7COEsi_ASDjZyRd3ARRcHHWi768niThE62mYytD077H91YmJecofW-mEDbyzx1frqcR4Xi9vWOnrwJeLqO-mj-0KG-=s0-d-e1-ft#https://static.pib.gov.in/WriteReadData/userfiles/image/image001SLAC.jpg

ಡಾ. ಜಿತೇಂದ್ರ ಸಿಂಗ್ ಅವರು, ಮೋದಿ ಸರ್ಕಾರದ ಧ್ಯೇಯ “ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ” ಎಂಬುದಾಗಿದೆ, ಕಳೆದ ಆರು ವರ್ಷಗಳಿಂದೀಚೆಗೆ ನಾಗರಿಕ ಸೇವೆಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲಾಗಿದೆ, ಪುನರ್ ರಚಿಸಲಾಗಿದೆ ಮತ್ತು ಸರ್ಕಾರಿ ಸಂಸ್ಥೆಗಳ ಗಾತ್ರವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲಾಗಿದೆ, ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ತಡವಾಗಿ ಪ್ರವೇಶಿಸುವವರ ನೇಮಕಾತಿ ಸುಧಾರಣೆಗಳು, ಇ-ಸೇವೆಗಳು ಸೇರಿದಂತೆ ಸಾರ್ವಜನಿಕ ಸೇವಾ ವಿತರಣೆಯಲ್ಲಿ ಸುಧಾರಣೆಗಳನ್ನು ತರಲಾಗಿದೆ ಮತ್ತು ನಾಗರಿಕರನ್ನು ಕೇಂದ್ರವಾಗಿಟ್ಟುಕೊಂಡು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಉತ್ತಮ ಆಡಳಿತ ಸೂಚ್ಯಂಕ ಮತ್ತು ರಾಷ್ಟ್ರೀಯ ಇ-ಸೇವೆಗಳ ವಿತರಣಾ ಮೌಲ್ಯಮಾಪನ 2019 ಪ್ರಕಟಣೆ ಮಾಡಿರುವುದು ಭಾರತೀಯ ನಾಗರಿಕ ಸೇವೆಗಳನ್ನು ಜಾಗತಿಕ ಉತ್ತಮ ಪದ್ಧತಿಗಳ ಮಾನದಂಡಕ್ಕೆ ಅನುಗುಣವಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಭಾರತದ ಆಡಳಿತ ಪದ್ಧತಿ ಸಾಂವಿಧಾನಿಕ ಮೌಲ್ಯಗಳು ಮತ್ತು ಜೇಷ್ಠತೆಯನ್ನು ಉತ್ತೇಜಿಸುತ್ತಿದ್ದು, ಅದು ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ.

2019ರ ಸೆಪ್ಟೆಂಬರ್ ನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರ್ಯಾಯ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗಳನ್ನು ತರಲಾಯಿತು ಎಂದ ಡಾ. ಜಿತೇಂದ್ರ ಸಿಂಗ್, ಇದರಿಂದ ಕುಂದುಕೊರತೆಗಳ ಪರಿಹಾರ ವ್ಯವಸ್ಥೆಯಲ್ಲಿ ಗುಣಮಟ್ಟ ಸುಧಾರಣೆಯಾಗಿದೆ ಮತ್ತು ಕುಂದುಕೊರತೆಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬ ತಗ್ಗಿದೆ ಎಂದರು. ಈ ನಿಟ್ಟಿನಲ್ಲಿ ಕೋವಿಡ್-19ಗೆ ಸಂಬಂಧಿಸಿದ ರಾಷ್ಟ್ರೀಯ ನಿಗಾ ಕುಂದುಕೊರತೆ ವ್ಯವಸ್ಥೆ (https://www.darpg.gov.in )ಯಲ್ಲಿ 2020ರ ಏಪ್ರಿಲ್ 1 ರಿಂದ 20ರ ವರೆಗೆ ಕೇವಲ 20 ದಿನಗಳ ಅವಧಿಯಲ್ಲಿ 25,000 ಕುಂದುಕೊರತೆಗಳನ್ನು ವಿಲೇವಾರಿ ಮಾಡಲಾಗಿದೆ, ಪ್ರತಿಯೊಂದು ಕುಂದುಕೊರತೆಗೂ ಸರಾಸರಿ ಪಡೆದುಕೊಂಡಿರುವ ಸಮಯ 1.57 ದಿನಗಳು. ಇದು ಸಂತಸದ ಬೆಳವಣಿಗೆ ಎಂದು ಅವರು ಹೇಳಿದರು.

ಪ್ರತಿ ವರ್ಷ ನಡೆಯುತ್ತಿದ್ದ ನಾಗರಿಕ ಸೇವಾ ದಿನವನ್ನು ಈ ವರ್ಷ 2020ರ ಏಪ್ರಿಲ್ 21ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಮತ್ತು ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. 2019-2020ನೇ ಸಾಲಿನ ಸಾರ್ವಜನಿಕ ಆಡಳಿತ ಕುರಿತ ಪ್ರಧಾನಮಂತ್ರಿಗಳ ಜೇಷ್ಠತಾ ಪ್ರಶಸ್ತಿಗಳನ್ನು 2020ರ ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ಜನ್ಮದಿನದಂದು ವಿತರಿಸಲಾಗುವುದು.

https://ci6.googleusercontent.com/proxy/uNAVC1jQlq2aT8lIiJ8e3dIGGAImwaqyYzm_22b8SdhPLXLH8YVYfRUThVOn31cMNWoEEAPUZ6XoiCgfiUYPXP4z1VGfyfDf6PHO88M-gw55DgKD5RcC=s0-d-e1-ft#https://static.pib.gov.in/WriteReadData/userfiles/image/image002O2KN.jpg

ಕೋವಿಡ್-19 ಎದುರಿಸಲು ಈ ತಿಂಗಳ 8 ರಂದು ಆರಂಭಿಸಲಾದ ಡಿಒಪಿಟಿಯ ಇ-ಕಲಿಕಾ ವೇದಿಕೆ(https://igot.gov.in) ಅದರಡಿ ಈವರೆಗೆ 1,44,736 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ, ಆ ಪೈಕಿ 96,268 ಅಭ್ಯರ್ಥಿಗಳು ಕೋರ್ಸ್ ಪೂರ್ಣಗೊಳಿಸಿದ್ದಾರೆ ಎಂದು ಡಾ. ಜಿತೇಂದ್ರ ಸಿಂಗ್ ತೃಪ್ತಿ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ನಾನಾ ಸಚಿವಾಲಯಗಳಲ್ಲಿರುವ ನಾಗರಿಕ ಸೇವಾ ಅಧಿಕಾರಿಗಳು ಕೋವಿಡ್-19 ಪರಿಹಾರ ಕಾರ್ಯಗಳಿಗಾಗಿ ಪಿಎಂ ಕೇರ್ಸ್ ನಿಧಿಗೆ ತಮ್ಮ ಒಂದು ದಿನದ ವೇತನ ಹಾಗೂ ಸಿಎಸ್ಆರ್ ಕೊಡುಗೆಗಳ ಮೂಲಕ 4227 ಕೋಟಿ ರೂ.ಗೂ ಅಧಿಕ ಹಣವನ್ನು ದೇಣಿಗೆಯಾಗಿ ನೀಡಿರುವುದನ್ನು ಇಲ್ಲಿ ಉಲ್ಲೇಖಿಸುವುದು ಅತ್ಯಂತ ಅಗತ್ಯವಾಗಿದೆ.

***



(Release ID: 1616840) Visitor Counter : 282